ಭರ್ತಿಯಾಗುವತ್ತ ಇಡುಕ್ಕಿ ಅಣೆಕಟ್ಟು

Team Udayavani, Jul 26, 2018, 6:10 AM IST

idukki-dam.jpg

ಪ್ರಸಕ್ತ ದಿನಕ್ಕೆ ಸುಮಾರು 2 ಕೋಟಿ ಕ್ಯೂಬಿಕ್‌ ಮೀಟರ್‌ ನೀರು ಅಣೆಕಟ್ಟಿಗೆ ಹರಿದುಬರುತ್ತಿದೆ. ಅಂದರೆ ವಿದ್ಯುತ್‌ ಉತ್ಪಾದನೆ ಬಳಿಕವೂ 1 ಕೋಟಿ ಕ್ಯೂಬಿಕ್‌ ಮೀಟರ್‌ ನೀರನ್ನು ಅಣೆಕಟ್ಟಿನಲ್ಲಿ ಸಂಗ್ರಹಿಸಬೇಕಾಗುತ್ತದೆ. ನಿನ್ನೆ ಕೇವಲ 88 ಲಕ್ಷ ಯೂನಿಟ್‌ ವಿದ್ಯುತ್‌ ಅನ್ನು ಉತ್ಪಾದಿಸಲಾಗಿತ್ತು. ಜನರೇಟರ್‌ಗಳನ್ನು ನಿರಂತರ ಚಾಲೂಗೊಳಿಸಿದಲ್ಲಿ ಅವು ಹಾಳಾಗುವ ಸಾಧ್ಯತೆಯಿದೆ. ಅಣೆಕಟ್ಟಿನ ಬಾಗಿಲುಗಳನ್ನು ತೆರೆಯುವ ಕುರಿತು ಅಣೆಕಟ್ಟು ಸುರಕ್ಷಾ ಘಟಕದ ಸಭೆಯೊಂದನ್ನು ಕರೆಯಲಾಗಿದೆ.

ಚಿರುತ್ತೂಣಿ: ಇಡುಕ್ಕಿ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುವುದು ಮುಂದುವರಿದಿದ್ದು ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗುವ ಸಾಧ್ಯತೆಯಿದೆ.

ಪ್ರಸಕ್ತ ಅಣೆಕಟ್ಟು ತನ್ನ ಸಾಮರ್ಥ್ಯದ ಶೇ. 81.15ರಷ್ಟು ಭರ್ತಿಯಾಗಿದ್ದು ಮಳೆ ಹೀಗಿಯೇ ಮುಂದುವರಿದಲ್ಲಿ ಅಣೆಕಟ್ಟು 18 ದಿನಗಳೊಳಗೆ ತನ್ನ ಪೂರ್ಣ ಪ್ರಮಾಣವನ್ನು ತಲಪಲಿದೆ.ಮೂಲಮಠಂ ವಿದ್ಯುದಾಗಾರದಲ್ಲಿ ವಿದ್ಯುತ್‌ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದ್ದರೂ ಜಲಾಶಯಕ್ಕೆ ಹರಿದುಬರುತ್ತಿರುವ ನೀರು ಕಡಿಮೆ ಯಾಗಿಲ್ಲವಾದ ಕಾರಣ ಬಾಗಿಲುಗಳನ್ನು ತೆರೆಯಬೇಕಾಗಬಹುದು. ಮಂಗಳವಾರ ನೀರಿನ ಪ್ರಮಾಣ 2,386.54 ಅಡಿಗೆ ತಲಪಿದ್ದು ಇದು ಅಣೆಕಟ್ಟಿನ ಗರಿಷ್ಠ ಸಾಮರ್ಥ್ಯವಾದ 2,403 ಅಡಿಗಳಿಗೆ ಕೇವಲ 17 ಅಡಿ ಮಾತ್ರ ಕಡಿಮೆ. ಅಣೆಕಟ್ಟಿನ ನೀರು ಪ್ರತಿದಿನ ಸರಾಸರಿ ಒಂದು ಅಡಿಯಂತೆ ಹೆಚ್ಚುತ್ತಿದೆ. ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಸುಮಾರು 8 ಸೆಂ.ಮೀ. ಮಳೆ ಸುರಿದಿದೆ. ಅಣೆಕಟ್ಟು 40 ಅಡಿ ಉದ್ದ ಹಾಗೂ 60 ಅಡಿ ಅಗಲದ ಐದು ಬಾಗಿಲುಗಳನ್ನು ಹೊಂದಿದೆ.

ಸಾಮಾನ್ಯವಾಗಿ ಅಣೆಕಟ್ಟು ಗರಿಷ್ಠ ಸಾಮರ್ಥ್ಯವನ್ನು ತಲಪಿದ ಬಳಿಕ ನೀರಿನ ಬಲವಾದ ಹರಿವನ್ನು ನಿಯಂತ್ರಿಸು ವುದಕ್ಕಾಗಿ ಬಾಗಿಲುಗಳನ್ನು ಕೇವಲ ಕೆಲವು ಅಂಗುಲಗಳಷ್ಟು ತೆರೆಯಲಾಗುತ್ತದೆ. ಈ ಹಿಂದೆ ಕೇವಲ ಎರಡು ಬಾರಿ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗಿತ್ತು ಮತ್ತು ಎರಡೂ ಬಾರಿ ಅದು ಅಕ್ಟೋಬರ್‌ ತಿಂಗಳಿನಲ್ಲಾಗಿತ್ತು. 1992ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗಿತ್ತು.

ಜುಲೈಯಲ್ಲಿ ಉಪುತ್ತಾರದಿಂದ ಕುಲ ಮಾವು ತನಕ ವ್ಯಾಪಿಸಿರುವ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಪ್ರಸಕ್ತ ಮೂಲಮಠಂ ವಿದ್ಯುದಾಗಾರ ಹರಿದು ಬರುತ್ತಿರುವ ಅಗಾಧ ನೀರಿನ ಪ್ರಮಾಣಕ್ಕೆ ಅನುಗುಣವಾಗಿ  ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿಲ್ಲ. ವಿದ್ಯುದಾಗಾರದಲ್ಲಿ ಆರು ಜನರೇಟರ್‌ಗಳಿದ್ದು   ಈ  ಪೈಕಿ ಒಂದೂ ಕೆಲಸ ಮಾಡುತ್ತಿಲ್ಲ. ಉಳಿದ ಐದು ಜನರೇಟರ್‌ಗಳು ದಿನದ 24 ತಾಸುಗಳ ಕಾಲ ಕಾರ್ಯಾಚರಿಸಿದರೆ ಸುಮಾರು 2.4 ಕೋಟಿ ಯೂನಿಟ್‌ ವಿದ್ಯುತ್‌ ಉತ್ಪಾದಿಸಬಹುದಾಗಿದೆ. ಇದಕ್ಕೆ 1.02 ಕೋಟಿ ಕ್ಯೂಬಿಕ್‌ ಮೀಟರ್‌ ಸಾಕಾಗುತ್ತದೆ.

ಟಾಪ್ ನ್ಯೂಸ್

BJP notice to Union Minister Sinha who did not come to campaign and did not vote

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

BJP notice to Union Minister Sinha who did not come to campaign and did not vote

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.