ಮುನಿಸು ತರವೇ ಮಳೆಯೆ? 


Team Udayavani, Aug 17, 2018, 6:00 AM IST

c-22.jpg

ಹೊಸ ಅಂಕಣ…
ಅಬ್ಟಾ ! ಏನು ಮಳೆ! ಹೀಗೆ ಮಳೆ ಬಂದರೆ ಏನೂ ಉಳಿಯಲಿಕ್ಕಿಲ್ಲ. ಕೃಷಿ ಸರ್ವನಾಶ ಖಂಡಿತ. ಬರುವ ವರ್ಷ ಊಟ ಮಾಡಲಿಕ್ಕೆ ಇಲ್ಲ’ ಇದು ಕರಾವಳಿ ಹಾಗೂ ಮಲೆನಾಡ ರೈತರ ಒಕ್ಕೊರಲ ಮಾತು. ಹೌದು, ಇದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಮಳೆ ರೈತರ ಮೇಲೆ ಮುನಿಸಿಕೊಂಡಿದೆ. ಮೇ ತಿಂಗಳಿನಲ್ಲಿ ಆರಂಭವಾದ ಮಳೆ ವಿಶ್ರಾಂತಿ ಪಡೆದುಕೊಂಡಿಲ್ಲ. ಒನಕೆ ಗಾತ್ರದ ಧಾರೆಯ ಮಳೆ ಒಂದೇ ಸವನೆ ಸುರಿಯುತ್ತಿದೆ. ಮುಂಗಾರಿನ ಅಭಿಷೇಕಕ್ಕೆ ಅಂಗಳ, ತೋಟ, ಗದ್ದೆ, ಬಯಲು ಇಡೀ ಊರಿಗೆ ಊರೇ ಮುಳುಗಿದೆ. “ಮಳೆಯಿದ್ದರೇ ಇಳೆ; ಮಳೆಯಿಂದಲೇ ಬೆಳೆ’ ಎಂದು ಮಳೆಯ ಮಹಿಮೆಯ ಬಗ್ಗೆ ಹೇಳುತ್ತಾರೆ. ಆದರೆ ಯಾವುದೂ ಅತಿಯಾಗಬಾರದು. “ಅತಿಯಾದರೆ ಅಮೃತವೂ ವಿಷ’ ಎಂಬಂತೆ ಹದತಪ್ಪಿ ಸುರಿದ ಮಳೆ ಬದುಕಿನ ಹದವನ್ನೂ ತಪ್ಪಿಸಿದೆ. ಪ್ರಕೃತಿ ವಿಕೋಪ ರೈತನನ್ನು ಸುಖದಿಂದ ಇರಲು ಬಿಡುವುದಿಲ್ಲ. ವರುಣನ ಆರ್ಭಟಕ್ಕೆ ಕೃಷಿಕ ಹೈರಾಣಾಗಿ¨ªಾನೆ.     ಕರಾವಳಿ, ಮಲೆನಾಡಿನ ರೈತರ ಪ್ರಧಾನ ಬೆಳೆ ಅಡಿಕೆ. ಮಕ್ಕಳ ವಿದ್ಯಾಭ್ಯಾಸ, ಮುಂಜಿ, ಮದುವೆ ಎಲ್ಲದಕ್ಕೂ ಅವರು ನಂಬಿರುವುದು ಅಡಿಕೆಯನ್ನೇ. ಅಡಿಕೆ ಅವರ ಜೀವನಾಡಿ. ಮಳೆಗಾಲದಲ್ಲಿ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸದೆ ಇದ್ದರೆ ಕೊಳೆರೋಗ ಬಂದು ಅಡಿಕೆಯೆಲ್ಲ ಉದುರಿ ಮರದ ಬುಡದಲ್ಲಿರುತ್ತದೆ. ಜೋರು ಮಳೆ ಬರುವ ಸಮಯದಲ್ಲಿ ತೋಟಕ್ಕೆ ಔಷಧಿ ಸಿಂಪಡಿಸುವುದು ಕಷ್ಟ. ಅದೊಂದು ದೊಡ್ಡ ಯಜ್ಞ ಮಾಡಿದಂತೆ. ಈ ಸಮಯದಲ್ಲಿ ಮರದಲ್ಲಿ ಹಾವಸೆ ಬೆಳೆದು ಮರಕ್ಕೆ ಹತ್ತಲಾಗುವುದಿಲ್ಲ. ಔಷಧಿ ಸಿಂಪಡಿಸಬೇಕಾದರೆ ಮರ ಮಾತ್ರವಲ್ಲ ಗೊನೆಯೂ ಒಣಗಿ ಸಿಕ್ಕಬೇಕು. ಅಂದು ಸಿದ್ಧಪಡಿಸಿದ ಔಷಧಿಯನ್ನು ಅಂದೇ ಬಿಟ್ಟು ಮುಗಿಸಬೇಕು. ಉಳಿದರೆ ಅದು ಹುಳಿ ಬಂದು ಹಾಳಾಗುತ್ತದೆ. ನಾಳೆಗೆ ಮತ್ತೆ ಹೊಸತಾಗಿ ತಯಾರಿಸಬೇಕು. ಔಷಧಿ ಸಿಂಪಡಿಸಿದ ಮೇಲೆಯೂ ಒಂದೆರಡು ಗಂಟೆ ಮಳೆ ಬರಬಾರದು. ಬಂದರೆ ಬಿಟ್ಟ ಔಷಧಿಯೆಲ್ಲ ತೊಳೆದು ಹೋಗುತ್ತದೆ. ಮಳೆ ಬಿಟ್ಟು ಸಿಗುವ ಹೊತ್ತನ್ನು ರೈತರು ಕಾಯಬೇಕು. ಔಷಧಿ ಸಿಂಪಡಣೆ ಒಬ್ಬನಿಂದ ಆಗುವ ಕೆಲಸ ಅಲ್ಲ. ಪಂಪ್‌ನಿಂದ ಗಾಳಿ ಹಾಕಲು ಒಬ್ಬ, ಡ್ರಮ್‌ನಲ್ಲಿ ಮಾಡಿಟ್ಟ ಮದ್ದು ಹೊರಲು ಇನ್ನೊಬ್ಬ, ಮರ ಏರಿ ಔಷಧಿ ಬಿಡಲು ಮತ್ತೂಬ್ಬ ಬೇಕಾಗುತ್ತದೆ. ಮರ ಏರಲು ಎಲ್ಲರಿಗೂ ಆಗುವುದಿಲ್ಲ. ಮರ ಹತ್ತುವವನು ಅದರಲ್ಲಿ ವಿಶೇಷ ಪರಿಣತಿ ಪಡೆದಿರಬೇಕು. ಸಾಮಾನ್ಯವಾಗಿ ಅವನು ಆ ಕೆಲಸ ಮಾತ್ರ ಮಾಡುತ್ತಾನೆ. ಅವನಿಗೆ ಸಂಬಳವೂ ಸಾವಿರಕ್ಕಿಂತ ಮೇಲೆ ಇರುತ್ತದೆ. 

    ಎಡೆಬಿಡದೆ ಮಳೆ ಸುರಿದರೆ ಅಡಿಕೆ ಬೆಳೆಗಾರರ ಪರಿಸ್ಥಿತಿ ಶೋಚನೀಯ. ನಮ್ಮದೇ ಉದಾಹರಣೆ ತೆಗೆದುಕೊಂಡರೆ ನಾವು ಅಡಿಕೆ ತೋಟಕ್ಕೆ ಮದ್ದು ಬಿಡಲು ಹೊರಡುವುದು ತಿಂಗಳ ಮೇಲಾಯಿತು. ಮಳೆ ಬಿಡುವುದೇ ಇಲ್ಲ. ಕೊಳೆರೋಗ ಬಂದು ಎಳೆಅಡಿಕೆ ಹರಡಿದಂತೆ ಬಿದ್ದಿದೆ. ಮರ ಬೋಳಾಗಿದೆ. ಗಂಡ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. “ಹೀಗಾದರೆ ಮುಂದೆ ತೋಟದ ಕೆಲಸ ಹೇಗೆ ಮಾಡಿಸುವುದು? ಕೂಲಿಯವರಿಗೆ ಸಂಬಳ ಎಲ್ಲಿಂದ ಕೊಡು ವುದು?’ ಎಂದು ಕೇಳುತ್ತಾರೆ. ಮೊನ್ನೆ ಸ್ವಲ್ಪ ಮಳೆ ಬಿಟ್ಟಿತ್ತು. ಔಷಧಿ ಸಿಂಪಡಣೆ ಮಾಡುವವನು ಬಂದ. ಒಂದು ಕೊಡ ಮದ್ದು ಮುಗಿದಿದೆಯೋ ಇಲ್ಲವೋ ಕತ್ತಲು ಕಟ್ಟಿ ಮಳೆ ಬರಲು ಶುರುವಾಯ್ತು. “ಇನ್ನು ಇದು ಇಂದು ಆಗುವ ಕೆಲಸವಲ್ಲ. ನಾಳೆ ಬರುತ್ತೇನೆ. ನನಗೆ ಅರ್ಜೆಂಟ್‌ 2000 ರೂಪಾಯಿ ಬೇಕಿತ್ತು’ ಎಂದ. ಕೊಡದಿದ್ದರೆ ನಾಳೆ ಅವನು ಬರಬೇಕಲ್ಲ ಎಂದು ಕೊಟ್ಟೆವು. ಮಾಡಿದ ಒಂದು ಡ್ರಮ್‌ ಮದ್ದು ನೀರಲ್ಲಿ ಇಟ್ಟ ಹೋಮದ ಹಾಗೆ ಆಯಿತು. ಸಾಲದ್ದಕ್ಕೆ ದುಡ್ಡು ಪಡಕೊಂಡು ಹೋದವನು ತಿರುಗಿ ಬರಲಿಲ್ಲ. ಕೇಳಿದರೆ ತಲೆನೋವು, ಹೆಂಡತಿಗೆ ಹುಷಾರಿಲ್ಲ, ಪೇಟೆಯಲ್ಲಿ ಕೆಲಸ- ಹೀಗೆ ದಿನಕ್ಕೊಂದು ಕಾರಣ. ಮಳೆಯ ಕಾರಣ ಹೇಗೂ ಇದ್ದೇ ಇದೆಯಲ್ಲ. ಅಂತೂ ಈ ವರ್ಷ ನಮಗೆ ಇಂದಿನವರೆಗೆ ಔಷಧಿ ಬಿಡಲು ಸಾಧ್ಯವಾಗಿಲ್ಲ. ಇದು ಎಲ್ಲ ಅಡಿಕೆ ಕೃಷಿಕರ ವ್ಯಥೆ.

    ತೆಂಗು ಬೆಳೆಯುವವರ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆಯ ಹೊಡೆತಕ್ಕೆ ಎಳೆಯ ತೆಂಗಿನಕಾಯಿ ಉದುರುತ್ತಿದೆ. ಅದಕ್ಕಿಂತ ದೊಡ್ಡ ವಿಷಯ ಸುಳಿ ಕೊಳೆತು ಮರವೇ ಸಾಯುವುದು. ತೆಂಗಿನ ಮರದ ಈ ಸುಳಿ ಕೊಳೆಯುವ ರೋಗ ಕ್ಯಾನ್ಸರ್‌ನಂತೆ. ಆರಂಭದಲ್ಲಿ ಗೊತ್ತಾಗುವುದಿಲ್ಲ. ರೋಗ ಉಲ್ಬಣಿಸಿ ಸುಳಿ ಕೊಳೆತ ವಾಸನೆ ಮೂಗಿಗೆ ಅಡರಿದ ಮೇಲೆಯೇ ಅರಿವಿಗೆ ಬರುವುದು. ಉಪ್ಪು ಮತ್ತು ಮರಳಿನ ಮಿಶ್ರಣವನ್ನು ರೋಗಬಂದ ಸುಳಿಗೆ ಕಟ್ಟುವುದು ಇದಕ್ಕಿರುವ ಮದ್ದು. ಆದರೆ, ಈ ಹಂತದಲ್ಲಿ ಔಷಧಿ ಪ್ರಯೋಜನಕ್ಕೆ ಬರುವುದಿಲ್ಲ. ನಮ್ಮ ತೋಟದಲ್ಲಿ ಹೀಗೆ ಸತ್ತ ತೆಂಗಿನಮರಗಳ ಸಂಖ್ಯೆ ಈಗಲೇ ಇಪ್ಪತ್ತು ದಾಟಿದೆ. ಉಪಬೆಳೆಗಳಾದ ರಬ್ಬರ್‌, ಬಾಳೆ, ಕೊಕ್ಕೋವೂ ಕೈಕೊಟ್ಟಿದೆ. ಜೋರು ಮಳೆಗೆ ರಬ್ಬರ್‌ ಮರದಿಂದ ಹಾಲು ತೆಗೆಯಲು ಆಗುವುದಿಲ್ಲ. ತೋಟದಲ್ಲಿ ನೀರು ಹರಿದು ಮಣ್ಣಿನ ಸವಕಳಿಯಿಂದ ಗೊನೆ ಹೊತ್ತ ಬಾಳೆಗಿಡ ಬುಡ ಸಮೇತ ಮಗುಚಿ ಬೀಳುತ್ತಿದೆ. “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತೆ ಗೊನೆಬಿಟ್ಟರೂ ಬಾಳೆಹಣ್ಣು ತಿನ್ನಲು ಸಿಗದಂತಾಗಿದೆ. ಸಾಲದ್ದಕ್ಕೆ ಬಾಳೆಗೆ ಎಲೆ ಸುರುಳಿ ರೋಗ ಬೇರೆ. ಕೊಕ್ಕೋ ಹಣ್ಣಾಗುವ ಮೊದಲೇ ಕಪ್ಪಾಗುತ್ತಿದೆ. ಬುಡದಲ್ಲಿ ನೀರು ನಿಂತು ತರಕಾರಿ ಗಿಡ ಕೊಳೆತಿದೆ. ಮಣ್ಣಲ್ಲಿ ಊರಿದ ತರಕಾರಿ ಬೀಜವೂ ಮೊಳಕೆ ಒಡೆಯದೆ ಕರಗಿದೆ. ಬೆಳೆಗಳಿಗೆ ಹಾಕಿದ ಗೊಬ್ಬರ ಮಳೆನೀರಲ್ಲಿ ಹರಿದು ಹೋಗುತ್ತಿದೆ. ಗ¨ªೆಯಲ್ಲಿ ಪೈರು ನಗುನಗುತ್ತಿರಬೇಕಾದ ಈ ದಿನಗಳಲ್ಲಿ ನೆರೆ ನೀರಿಗೆ ನೇಜಿ ಬಹುತೇಕ ಕೊಚ್ಚಿಹೋಗಿದೆ ಇಲ್ಲವೇ ಮುಳುಗಿದೆ. 

    “ಮುಂದೆ ಬರುವುದು ಹಬ್ಬಗಳ ಸಾಲು. ವಿಪರೀತ ಮಳೆ ಹೂವು, ಹಣ್ಣನ್ನು ನಾಶ ಮಾಡಿದೆ. ಮಳೆಯೊಡನೆ ಬರುವ ಗಾಳಿಯಿಂದ ಬಾಳೆ ಧರಾಶಾಯಿಯಾದದ್ದು ಮಾತ್ರವಲ್ಲ ಬಾಳೆಲೆ ಸಣ್ಣ ಸಣ್ಣ ತುಂಡುಗಳಾಗಿ ಹರಿದು ಹೋಗಿದೆ. ಈ ಸಾರಿ ಹಬ್ಬಕ್ಕೆ ಬಾಳೆಎಲೆ, ಹಣ್ಣು-ಹೂವುಗಳನ್ನು ಪೇಟೆಯಿಂದಲೇ ತರಬೇಕಷ್ಟೆ. ರೈತಳಾದ ನನಗೆ ಇದು ಅವಮಾನ ಅನ್ನಿಸುತ್ತದೆ. ಆದರೆ, ವಿಧಿಯಿಲ್ಲ’ ಎನ್ನುತ್ತಾಳೆ ನನ್ನ ಗೆಳತಿ ಮುಲ್ಕಿ ಸಮೀಪದ ರಾಧಿಕಾ ಕಾಮತ್‌.

     ಕೃಷಿಭೂಮಿಯ ಮೇಲೆ ಮಳೆಯ ಅನಾಹುತ ಒಂದೇ, ಎರಡೇ? ಫ‌ಸಲು ಕೊಡುವ ಮರ ಮುರಿದು ಬೀಳುವುದು, ಗುಡ್ಡ ಜರಿದು ತೋಟಕ್ಕೆ ಬೀಳುವುದು, ತೋಟವೇ ಸರೋವರವಾಗುವುದು… ಹೇಳಿದಷ್ಟೂ ಮುಗಿಯದ ಸಂಗತಿ. ಅರಣ್ಯ ಪ್ರದೇಶದಲ್ಲಿ ತೋಟ ಇರುವವರ ಕಷ್ಟ ಕೇಳುವುದೇ ಬೇಡ. ವಿದ್ಯುತ್‌ ತಂತಿ ಮೇಲೆ ಮರ ಇಲ್ಲವೇ ಕೊಂಬೆಗಳು ಮುರಿದು ಬಿದ್ದು ಕರೆಂಟು ವಾರಗಟ್ಟಲೆ ಇರುವುದಿಲ್ಲ. ಇಲ್ಲಿರುವ ಕೃಷಿಕರು ಕತ್ತಲೆಯಲ್ಲಿ ದಿನ ದೂಡಬೇಕಾಗುತ್ತದೆ.

    ಮಳೆ ಮತ್ತೆ ಹೊಯ್ಯುತ್ತಿದೆ. ಒಂದರ ಹಿಂದೆ ಇನ್ನೊಂದು. ಇನ್ನೊಂದರ ಹಿಂದೆ ಮಗದೊಂದು. ಮಳೆ ತನ್ನೊಳಗೆ ತಾನು ಯಾರು ಹೆಚ್ಚು ಸುರಿಯು ವುದು ಎಂದು ಸ್ಪರ್ಧೆ ಏರ್ಪಡಿಸಿದಂತೆ ತೋರುತ್ತದೆ. ಟೀವಿ ಸೀರಿಯಲ್‌ನಂತೆ ಸದ್ಯ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಲೋಕವನ್ನು ಪೊರೆಯ ಬೇಕಾದ ಮಳೆ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ. ಇದು ಮಳೆಯಲ್ಲ. ಜಲಪ್ರಳಯ. “ಮುನಿಸು ತರವೆ ಮಳೆಯೆ, ಹಿತವಾಗಿ ಸುರಿಯಲು ಬಾರದೇ?’ ಎಂದು ಮಳೆದೇವಗೆ ಈ ಹೊತ್ತಿನಲ್ಲಿ ಪ್ರಾರ್ಥನೆ ಮಾಡುವುದಲ್ಲದೆ ನಮಗೆ ಬೇರೆ ದಾರಿ ಉಳಿದಿಲ್ಲ.

ಸಹನಾ ಕಾಂತಬೈಲು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.