ಹೊಸ ಫ್ಯಾಶನ್‌: ಇನ್‌ವರ್ಟೆಡ್‌ ಜೀನ್ಸ್‌

Team Udayavani, Aug 17, 2018, 6:00 AM IST

c-25.jpg

ಸೊಂಟದ ಬಳಿ ಬರುವ ಜೇಬು ಮತ್ತು ಬೆಲ್ಟ್ ಪಾಕೆಟ್‌ಗಳು ಇನ್‌ವರ್ಟೆಡ್‌ ಜೀನ್ಸ್‌ ಪ್ಯಾಂಟುಗಳಲ್ಲಿ ಕಾಲಿನ ಬಳಿ ಇವೆ.

ಹೊಸ ಬಗೆಯ ಫ್ಯಾಷನ್ನೊಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಜೀನ್ಸ್‌ ಪ್ಯಾಂಟನ್ನು ಉಲ್ಟಾ ಮಾಡಿ ಹಿಡಿದರೆ ಕಾಣುತ್ತದಲ್ಲ ; ಅದೇ ಥರಾ ಇರುತ್ತೆ ಈ ಹೊಸ ಫ್ಯಾಶನ್‌ ದಿರಿಸು. ಇದರ ಹೆಸರು ಇನ್‌ವರ್ಟೆಡ್‌ ಜೀನ್ಸ್‌ !

ದಾರಿಯಲ್ಲಿ ಹೋಗುವಾಗ ಯಾರಾದರೂ ಪ್ಯಾಂಟನ್ನು ಉಲ್ಟಾಪಲ್ಟಾ ತೊಟ್ಟುಕೊಂಡು ನಡೆಯುತ್ತಿದ್ದರೆ ಅಪ್ಪಿತಪ್ಪಿಯೂ ಅವರ ಬಳಿ ತೆರಳಿ, “”ನೀವು ಪ್ಯಾಂಟನ್ನು ಉಲ್ಟಾ ತೊಟ್ಟುಕೊಂಡಿದ್ದೀರಾ?” ಅಂತ ಹೇಳದಿರಿ. ಯಾಕೆಂದರೆ, ಇದು ಲೇಟೆಸ್ಟ್‌ ಫ್ಯಾಷನ್‌. ಈಗ ಉಲ್ಟಾಪಲ್ಟಾ ಫ್ಯಾಷನ್‌ ಶೈಲಿ ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಅದರ ಹೆಸರು ಇನ್‌ವರ್ಟೆಡ್‌ ಜೀನ್ಸ್‌ .

ಉಲ್ಟಾಪಲ್ಟಾ ಜೀನ್ಸ್‌
ಇನ್‌ವರ್ಟೆಡ್‌ ಜೀನ್ಸ್‌ ಎಂಬ ಹೆಸರನ್ನು ಹೊತ್ತಿರುವ ಈ ಜೀನ್ಸ್‌ ಹೇಗೆ ವಿನ್ಯಾಸಗೊಳಿಸಲ್ಪಟ್ಟಿದೆ ಗೊತ್ತಾ? ಬಟ್ಟೆ ಒಗೆಯುವಾಗ ಒಳಗನ್ನು ಹೊರಗು ಮಾಡಿ ಒಗೆಯುತ್ತಾರಲ್ಲ , ಹಾಗಂತೂ ಈ ಜೀನ್ಸ್‌ ಇಲ್ಲ. ಮತ್ಯಾವ ಲೆಕ್ಕದಲ್ಲಿ ಇದು ಇನ್‌ವರ್ಟೆಡ್‌ ಜೀನ್ಸ್‌ ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಉತ್ತರ ಬಹಳ ಸಿಂಪಲ್‌. ಪ್ಯಾಂಟನ್ನು ಇದ್ದ ಹಾಗೆಯೇ ತಲೆ ಕೆಳಗು, ಕಾಲು ಮೇಲೆ ಮಾಡಿ. ಈಗ ಯಾವ ವಿನ್ಯಾಸ ಕಾಣುತ್ತದೆಯೋ ಅದೇ ವಿನ್ಯಾಸವನ್ನು ಇನ್‌ವರ್ಟೆಡ್‌ ಜೀನ್ಸ್‌ ಮೇಲೆ ಮೂಡಿಸಲಾಗಿದೆ. ಅದನ್ನು ಮಿಕ್ಕೆಲ್ಲಾ ಪ್ಯಾಂಟುಗಳಂತೆಯೇ ಧರಿಸಬೇಕು. ಆದರೆ, ವಿನ್ಯಾಸ ಮಾತ್ರ ತಲೆ ಕೆಳಗೆ, ಕಾಲು ಮೇಲೆ ಮಾಡಿದ ಪ್ಯಾಂಟಿನ ಥರ ಇರುತ್ತೆ.

ಕಾಲಲ್ಲಿ ಜೇಬು ಮತ್ತು ಬೆಲ್ಟ್ ಪಾಕೆಟ್ಸ್‌
ಸೊಂಟದ ಬಳಿ ಬರುವ ಜೇಬು ಮತ್ತು ಬೆಲ್ಟ್ ಪಾಕೆಟ್‌ಗಳು ಇನ್‌ವರ್ಟೆಡ್‌ ಜೀನ್ಸ್‌ ಪ್ಯಾಂಟುಗಳಲ್ಲಿ ಕಾಲಿನ ಬಳಿ ಇವೆ. ಬೆಲ್ಟ್ ಪಾಕೆಟ್‌ಗಳನ್ನು ಬಳಸಲಾಗದಿದ್ದರೂ, ಜೇಬನ್ನು ಬಳಸಬಹುದು. ಅನೇಕರು ಈ ಜೀನ್ಸ್‌ ಅನ್ನು ಆಕ್ಷೇಪಿಸಲು ಕಾರಣ, ಜೇಬುಗಳನ್ನು ಕಾಲ ಬಳಿ ಇಟ್ಟಿರೋದು. ಪ್ಯಾಂಟುಗಳಲ್ಲಿನ ಜೇಬುಗಳನ್ನು ಬಳಸಲು ಕಷ್ಟವಾಗುವುದಾದರೂ, ಡೆನಿಮ್‌ ಶಾರ್ಟುಗಳಲ್ಲಿ ಜೇಬು ಚೆಂದ ಕಾಣುತ್ತದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ. ಜೇಬು ನೋಡಲು ಉಲ್ಟಾಪಲ್ಟಾ ಆಗಿ ಕಂಡರೂ ಆ ಜೇಬನ್ನು ಸಹಜವಾಗಿಯೇ ಬಳಸಬಹುದು.

ಐಡಿಯಾ ಬಂದಿದ್ದು ಹೀಗೆ…
ಇಂಥದ್ದೊಂದು ವಿನೂತನ, ವಿಲಕ್ಷಣ ಐಡಿಯಾ ಸುಮ್ಮನೆಯೇ ಹುಟ್ಟಿದ್ದಲ್ಲ. ಅದರ ಹಿಂದೆಯೂ ಒಂದು ಕತೆ ಇದೆ. ಇನ್‌ವರ್ಟೆಡ್‌ ಜೀನ್ಸ್‌ಗೆ ಪ್ರೇರಣೆಯಾಗಿದ್ದು ಹಾಲಿವುಡ್‌ನ‌ “ಸ್ಟ್ರೇಂಜರ್‌ ಥಿಂಗ್ಸ್‌’ ಧಾರಾವಾಹಿ ಸರಣಿ. ಅದು ಮಕ್ಕಳ ಸಾಹಸಮಯ ಕಥಾನಕ ಹೊಂದಿದೆ. ಅದರಲ್ಲಿ ನಾಲ್ವರು ಮಕ್ಕಳು ತಲೆಕೆಳಗಾದ ವಿಚಿತ್ರ ಪ್ರಪಂಚದೊಳಕ್ಕೆ ಹೋಗುವ ಸನ್ನಿವೇಶವಿದೆ. ವಿಶ್ವಾದ್ಯಂತ ಅಪಾರ ಹಿರಿಯ, ಕಿರಿಯ ಅಭಿಮಾನಿಗಳನ್ನು ಸಂಪಾದಿಸಿರುವ ಈ ಜನಪ್ರಿಯ ಧಾರಾವಾಹಿಯ ಒಂದು ಸಣ್ಣ ಎಳೆಯಿಂದ ಸ್ಫೂರ್ತಿ ಪಡೆದು ತಯಾರಾಗಿದ್ದು ಈ ಇನ್‌ವರ್ಟೆಡ್‌ ಜೀನ್ಸ್‌ .

ಪ್ಯಾಂಟಿಗೊಂದು ಹೆಸರು
ಇನ್‌ವರ್ಟೆಡ್‌ ಜೀನ್ಸ್‌ ಅನ್ನು ತಯಾರಿಸಿರುವುದು ಅಮೆರಿಕದ “ಸಿಐಇ’ ಎನ್ನುವ ಕಂಪೆನಿ. ಹದಿಹರೆಯದವರು ಸಮಾಜದ ಕಟ್ಟಳೆಗಳನ್ನು ಮುರಿಯುವ ಮನಃಸ್ಥಿತಿ ಉಳ್ಳವರಾಗಿರುತ್ತಾರೆ. ಮಿಕ್ಕೆಲ್ಲರಿಗಿಂತ ತಾವು ವಿಶೇಷವಾಗಿ ಕಾಣಬಯಸುತ್ತಾರೆ. ಹೀಗಾಗಿಯೇ ಉಡುಗೆಯ ವಿಷಯದಲ್ಲೂ ಅವರು ಹೊಸತನ ಬಯಸುತ್ತಾರೆ.  ಆದರೆ, ಈ ಟ್ರೆಂಡನ್ನು ಅವರು ಹೇಗೆ ಸ್ವೀಕರಿಸುವರು ಎಂದು ತಿಳಿಯಲು ವಸ್ತ್ರವಿನ್ಯಾಸಕರು ಕಾತರರಾಗಿದ್ದಾರೆ. ಸಿಐಇ ಕಂಪೆನಿ ಐದು ಬಗೆಗಳಲ್ಲಿ ಜೀನ್ಸ್‌ ಉಡುಪುಗಳನ್ನು ಬಿಡುಗಡೆ ಮಾಡಿದ್ದು , “ಸ್ಟ್ರೇಂಜರ್‌ ಥಿಂಗ್ಸ್‌’ನ ಪ್ರಮುಖ ಪಾತ್ರಗಳಾದ ನ್ಯಾನ್ಸಿ ವಿಲ್‌, ಮೈಕ್‌, ಎಲ್‌ ಮತ್ತು ಲೂಕಸ್‌ ಹೆಸರುಗಳನ್ನು ಇಡಲಾಗಿದೆ. ಮುಂದೆ ಇತರೆ ವಸ್ತ್ರ ತಯಾರಕ ಕಂಪೆನಿಗಳೂ ಈ ಶೈಲಿಯ ಪ್ಯಾಂಟುಗಳನ್ನು ಮಾರುಕಟ್ಟೆಗೆ ಬಿಟ್ಟರೆ ಆಶ್ಚರ್ಯವೇನಿಲ್ಲ.

ಟಾಪ್ ನ್ಯೂಸ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.