ಯೂತ್‌ ಒಲಿಂಪಿಕ್ಸ್‌: ಜೂಡೋ: ಭಾರತಕ್ಕೆ ಮೊದಲ ಬೆಳ್ಳಿ

Team Udayavani, Oct 9, 2018, 11:57 AM IST

tababi-devi.jpg

ಬ್ಯೂನಸ್‌ ಐರೆಸ್‌ (ಆರ್ಜೆಂಟೀನಾ): ಯೂತ್‌ ಒಲಿಂಪಿಕ್ಸ್‌ ಗೇಮ್ಸ್‌ನ ಜೂಡೋ ಸ್ಪರ್ಧೆಯಲ್ಲಿ ಭಾರತ ಮೊದಲ ಪದಕ ಜಯಿಸಿದೆ. ಒಲಿಂಪಿಕ್ಸ್‌ ಮಟ್ಟದಲ್ಲಿ ದೇಶಕ್ಕೆ ಮೊದಲ ಪದಕ ತಂದಿತ್ತ ಸಾಧಕಿಯಾಗಿ ಮೂಡಿಬಂದವರು 16ರ ಹರೆಯದ ತಂಗ್‌ಜಮ್‌ ತಬಾಬಿದೇವಿ.

ಜೂಡೋ ಸ್ಪರ್ಧೆಯಲ್ಲಿ ತಂಗ್‌ಜಮ್‌ ತಬಾಬಿದೇವಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಒಲಿಂಪಿಕ್ಸ್‌ ಮಟ್ಟದಲ್ಲಿ ಪ್ರಪ್ರಥಮ ಜೂಡೋ ಪದಕ ತಂದಿತ್ತಿದ್ದಾರೆ. ವನಿತೆಯರ 44 ಕೆಜಿ ವಿಭಾಗದ ಸ್ಪರ್ಧೆಯ ಫೈನಲ್‌ ಪಂದ್ಯದಲ್ಲಿ ತಬಾಬಿದೇವಿ ವೆನೆಜುವೆಲ್ಲಾದ ಮರಿಯಾ ಗಿಮಿನೆಜ್‌ ವಿರುದ್ಧ 0-11 ಅಂಕಗಳಿಂದ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ಇಲ್ಲಿಯವರೆಗೆ ಒಲಿಂಪಿಕ್ಸ್‌ನ ಹಿರಿಯರ ಅಥವಾ ಯೂತ್‌ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಪದಕ ಗೆದ್ದಿರಲಿಲ್ಲ.
 
16  ವರ್ಷದ ತಬಾಬಿದೇವಿ ಸೆಮಿಫೈನಲ್‌ನಲ್ಲಿ ಕ್ರೊವೇಶಿಯಾದ ಅನಾವಿಕ್ಟೋರಿಜಾ ಪುಲ್ಜಿಜ್‌ ವಿರುದ್ಧ 10-0 ಅಂಕಗಳಿದ ಗೆಲುವು ದಾಖಲಿಸಿ ಫೈನಲ್‌ ಪ್ರವೇಶಿಸಿದ್ದರು. ಈ ಮೂಲಕ ಭಾರತ ಯೂತ್‌ ಒಲಿಂಪಿಕ್ಸ್‌ನ ಆರಂಭಿಕ ದಿನ 2 ಬೆಳ್ಳಿ ಪದಕ ಜಯಿಸಿತು.

ಶೂಟಿಂಗ್‌: ಮಾನೆಗೆ ಬೆಳ್ಳಿ
ಆರಂಭಿಕ ದಿನ ಭಾರತದ ಶೂಟರ್‌ ತುಷಾರ್‌ ಮಾನೆ ಬೆಳ್ಳಿ ಪದಕ ಜಯಿಸಿದ್ದರು. ಪುರುಷರ 10 ಮೀ. ಏರ್‌ ರೈಫ‌ಲ್‌ ವಿಭಾಗದಲ್ಲಿ ತುಷಾರ್‌ ಒಟ್ಟು 247.5 ಅಂಕಗಳನ್ನು ಸಂಪಾದಿಸುವ ಮೂಲಕ ಈ ಸಾಧನೆಗೈದರು. ರಶ್ಯದ ಗ್ರಿಗೊರಿ ಸ್ಯಾಮ್‌ ಕೋವ್‌ 249.2 ಅಂಕಗಳೊಂದಿಗೆ ಚಿನ್ನ, ಸರ್ಬಿಯದ ಅಲೆಕ್ಸಾ ಮಿಟ್ರೊವಿಕ್‌ 227. 9 ಅಂಕ ಪಡೆದು ಕಂಚಿನ ಪದಕ ಜಯಿಸಿದರು. ಅರ್ಹತಾ ಸುತ್ತಿನಲ್ಲಿ 623.7 ಅಂಕ ಪಡೆದ ತುಷಾರ್‌ 3ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು.

ಪುರುಷರ ಸ್ವಿಮ್ಮಿಂಗ್‌ನ 100 ಮೀ. ಬ್ಯಾಕ್‌ ಸ್ಟ್ರೋಕ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ರಾಷ್ಟ್ರೀಯ ಚಾಂಪಿಯನ್‌ ಶ್ರೀಹರಿ ನಟರಾಜನ್‌ 9ನೇ ಸ್ಥಾನ ಪಡೆದು ಫೈನಲ್‌ಗೇರಲು ವಿಫ‌ಲರಾದರು. ಅಗ್ರ 8 ಸ್ಪರ್ಧಿಗಳು ಮಾತ್ರ ಫೈನಲ್‌ ಪ್ರವೇಶಿಸುತ್ತಾರೆ. ಶ್ರೀಹರಿ 56 ನಿಮಿಷ 48 ಸೆಕೆಂಡ್‌ಗಳಲ್ಲಿ ಈಜಿ ಗುರಿ ತಲುಪಿದ್ದರು. 

ಮೆಹುಲಿ ಬೆಳ್ಳಿ ಸಾಧನೆ
ಸೋಮವಾರ ನಡೆದ ವನಿತೆಯರ 10 ಮೀ. ಏರ್‌ರೈಫ‌ಲ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಮೆಹುಲಿ ಘೋಷ್‌ ಬೆಳ್ಳಿ ಪದಕ ಗೆದ್ದರು.13 ಕ್ರೀಡೆಗಳಲ್ಲಿ 46 ಭಾರತೀಯ ಕ್ರೀಡಾಪಟುಗಳ ಸ್ಪರ್ಧಿಸತ್ತಿದ್ದು, ಇದೇ ಮೊದಲ ಬಾರಿಗೆ ಯೂತ್‌ ಒಲಿಂಪಿಕ್ಸ್‌ ಭಾರತ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2014ರಲ್ಲಿ ಚೀನದಲ್ಲಿ ನಡೆದ ಕೂಟದಲ್ಲಿ ಭಾರತ ಕೇವಲ 2 ಪದಕ ಗೆದ್ದಿತ್ತು. 2010ರ ಆರಂಭಿಕ ಯೂತ್‌ ಒಲಿಂಪಿಕ್ಸ್‌ ಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ 6 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿ ಸಿತ್ತು.  

ಟಾಪ್ ನ್ಯೂಸ್

ಪರಿಷತ್‌ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಪರಿಷತ್‌ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

PM Modi ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ: ಈಶ್ವರ ಖಂಡ್ರೆ

Eshwara Khandre ಪ್ರಧಾನಿ ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆSiddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

D. K. Shivakuma ಜೂ.1ರಿಂದ ಕಾಂಗ್ರೆಸ್‌ ಕುಟುಂಬ ಸದಸ್ಯತ್ವ ಅಭಿಯಾನ

D. K. Shivakuma ಜೂ.1ರಿಂದ ಕಾಂಗ್ರೆಸ್‌ ಕುಟುಂಬ ಸದಸ್ಯತ್ವ ಅಭಿಯಾನ

Hunsur ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕುರುಳಿದ ಲಾರಿ; ತಪ್ಪಿದ ಭಾರೀ ಅನಾಹುತ

Hunsur ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕುರುಳಿದ ಲಾರಿ; ತಪ್ಪಿದ ಭಾರೀ ಅನಾಹುತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaaaaa

Insults ; ಮತ್ತೆ ಆರ್ ಸಿಬಿ, ಕೊಹ್ಲಿಗೆ ಟಾಂಗ್ ನೀಡಿ ಆಕ್ರೋಶಕ್ಕೆ ಗುರಿಯಾದ ರಾಯುಡು

IPL 2024: full list of award winners and prize money

IPL 2024: ಯಾರಿಗೆ ಸಿಕ್ತು ಯಾವ ಅವಾರ್ಡ್?; ಕ್ಯಾಚ್ ಆಫ್ ದಿ ಸೀಸನ್ ವಿಡಿಯೋ ನೋಡಿ

1-wwqeqwewq

IPL 2024 ; ಕೊಹ್ಲಿ ಮುಡಿಗೆ ಆರೆಂಜ್ ಕ್ಯಾಪ್ :ಹರ್ಷಲ್ ಪರ್ಪಲ್ ಕ್ಯಾಪ್ ಹೊಸ ದಾಖಲೆ

1-wi

T20;ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ವಿಂಡೀಸ್‌

1-eng

T20;ಪಾಕಿಸ್ಥಾನವನ್ನು ಮಣಿಸಿದ ಇಂಗ್ಲೆಂಡ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

ಪರಿಷತ್‌ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಪರಿಷತ್‌ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

PM Modi ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ: ಈಶ್ವರ ಖಂಡ್ರೆ

Eshwara Khandre ಪ್ರಧಾನಿ ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆSiddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.