ಯೌವನದಲ್ಲಿಯೂ ಹೆತ್ತವರ ಕಾಳಜಿ ಬೇಕು!


Team Udayavani, Dec 28, 2018, 6:00 AM IST

839230866-612x612a1a.jpg

ಪೋಷಕರು ಎಂದರೆ ಮಕ್ಕಳ ಪಾಲನೆ-ಪೋಷಣೆ ಮಾಡುವ, ಒಂದು ಬೀಜವನ್ನು ಮೊಳಕೆಯೊಡೆಸಿ, ಗಿಡವಾಗಿಸಿ, ಫ‌ಲಕೊಡುವ ಮರವನ್ನಾಗಿಸುವ ಹೃದಯಗಳು. ಹಾಗಾದರೆ, ಅವರ ಕರ್ತವ್ಯಗಳು ಕೇವಲ ಬಾಲ್ಯದಲ್ಲಿರುತ್ತದೋ ಅಥವಾ ಯೌವನ ಮುಗಿದು ಪ್ರೌಢಘಟ್ಟದವರೆಗೂ ಸಾಗುತ್ತದೋ? ಹೌದು, ಪ್ರೌಢ ಘಟ್ಟದವರೆಗೂ ಸಾಗುತ್ತದೆ.

ಮಗುವೊಂದು ಹುಟ್ಟುವ ಮೊದಲೇ ಮನೆಯಲ್ಲಿ ಸಂಭ್ರಮ, ಸಡಗರ, ಹಬ್ಬದ ವಾತಾವರಣ ಸೃಷ್ಟಿಯಾಗಿರುತ್ತದೆ. ಅದು ಹೆಣ್ಣೋ ಅಥವಾ ಗಂಡೋ ಎಂದು ತಿಳಿಯುವ ಮುನ್ನವೇ ತಾಯಿಗೆ ಕರುಳಬಳ್ಳಿಯ ಸಂಬಂಧ ಬೆಸೆದಿರುತ್ತದೆ. ತಂದೆಗೆ ತೊಟ್ಟಿಲು ಹೇಗಿರಬೇಕು, ಏನೆಂದು ಹೆಸರಿಡುವುದು ಎಂಬ ಕಳಕಳಿ. ನಂತರ ಮಗುವಿನ ಚಲನವಲನ ನಗುವಿನೊಂದಿಗೇ ಇಬ್ಬರೂ ದಿನದ 24 ಗಂಟೆಗಳನ್ನೂ ಕಳೆಯುತ್ತಾರೆ. ಬೇರೆ ಯಾವ ಚಿಂತನೆಗಳಿಗೂ ಆಸ್ಪದವೇ ಇಲ್ಲ.

ಆರು ವರ್ಷ ತುಂಬುವಾಗ ತಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸುವುದು ಎಂದು ಹತ್ತಾರು ಕಡೆ ವಿಚಾರಿಸುತ್ತಾರೆ. ಶಾಲೆಗೆ ಹೋಗಿ ಬಂದ ಮಗುವಿಗೆ ಅಮ್ಮ ಊಟ ಮಾಡಿಸಿ ಹೋಮ್‌ವರ್ಕ್‌ ಮಾಡಿಸುತ್ತಾಳೆ. ಅಪ್ಪ, “ಟೀಚರ್‌ ಏನು ಪಾಠ ಮಾಡಿದರು? ನಿಂಗೆ ಎಷ್ಟು ಜನ ಸ್ನೇಹಿತರಾದರು? ಏನಾದ್ರೂ ಶಾಲೆಯಲ್ಲಿ ತೊಂದರೆ ಇದ್ದರೆ ಹೇಳು’ ಎಂದು ಪ್ರೀತಿಯಿಂದ ಕೂತು ಕೇಳುತ್ತಾರೆ. ಬಣ್ಣದ ಕ್ರೆಯಾನ್ಸ್‌ ತಂದುಕೊಟ್ಟು ಅವರಂತೆ ತಾವೂ ಮಕ್ಕಳಾಗಿ, ಭಾವನೆಗಳಿಗೆ, ಅವರ ಕನಸುಗಳಿಗೆ ಸ್ನೇಹಿತನಂತೆ ಬಣ್ಣ ಹಚ್ಚುತ್ತಾರೆ. ಆದರೆ, ಇವೆಲ್ಲ ಎಷ್ಟು ದಿನ? ಅನಿವಾರ್ಯತೆ ಎಲ್ಲಿಯವರೆಗೆ?

ಈ ಪ್ರೀತಿ, ಕಾಳಜಿಯ ಆಪ್ತತೆ ಅತ್ಯಂತ ಮುಖ್ಯವಾಗುವುದು ಯೌವ್ವನದಲ್ಲಿ. ಆಗ ಪ್ರತಿಯೊಬ್ಬ ಪೋಷಕನ ಪಾತ್ರವೂ ಶ್ರೇಷ್ಠವಾಗಿರುತ್ತದೆ. ಯಾಕೆ ಗೊತ್ತಾ? ಆಗ ಮಕ್ಕಳ ಮನಸ್ಸು ಹಸಿಮಣ್ಣಿನಂತಿರುತ್ತದೆ. ಅದಕ್ಕೆ ಹೆತ್ತವರು ಹದವಾಗಿ ಕಲಸಿ ಒಂದು ಒಳ್ಳೆಯ ರೂಪ ಕೊಡಬೇಕಾಗುತ್ತದೆ. ಅವರು ಹಕ್ಕಿಯಂತೆ ಹಾರಬಯಸುತ್ತಾರೆ. ಏನೋ ಒಂದು ಚಂಚಲತೆ, ತುಂಟತನ, ಏನನ್ನೋ ಗೆದ್ದಂತಹ ಉತ್ಸಾಹ. ವಿಪರ್ಯಾಸವೆಂದರೆ ಯೌವ್ವನದಲ್ಲಿ ಎಷ್ಟೋ ಮಕ್ಕಳು ಎಡವುದಕ್ಕಿಂತ ಈ ಸಮಯದಲ್ಲಿ ತಂದೆತಾಯಿಯರೇ ಹೆಚ್ಚು ಎಡವುತ್ತಾರೆ. ಹೆತ್ತವರು ಎಚ್ಚೆತ್ತುಕೊಳ್ಳಲೇಬೇಕು. ಮಕ್ಕಳಿಗೆ ಕೇವಲ ಆರ್ಥಿಕವಾಗಿ ನೆರವಾಗಬೇಡಿ. ಅವರ ಬೆಳವಣಿಗೆಯ ಹಾದಿಯಲ್ಲಿರುವ ಕಲ್ಲು-ಮುಳ್ಳುಗಳನ್ನು ಕಿತ್ತುಹಾಕಲು ಅವರೊಂದಿಗೆ ಕೈ ಜೋಡಿಸಿ. ಜಾಸ್ತಿ ಏನೂ ಮಾಡಬೇಕಾದ್ದಿಲ್ಲ. ಸುಗಮ ಮಾರ್ಗ ಕಲ್ಪಿಸಿ. ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ, ಶಾಲೆಗೆ ಹೋಗಿ ಬರುತ್ತಿದ್ದ ಮಗುವಿಗೆ ಹೇಗೆ ಬೇಕು-ಬೇಡದ್ದನ್ನು ವಿಚಾರಿಸುತ್ತಿದ್ದೀರೋ ಈಗಲೂ ಹಾಗೆಯೇ ಕಾಲೇಜಿನಿಂದ ಬಂದ‌ ಮಕ್ಕಳನ್ನು ವಿಚಾರಿಸಿ. ಅವರ ಆಸೆ-ಕನಸುಗಳನ್ನು ತಿಳಿದುಕೊಳ್ಳಿ. ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಅವರನ್ನು ಹುರಿದುಂಬಿಸಿ. ಮನೆಯಲ್ಲಿ ಯಾವಾಗಲೂ ಖುಷಿಯ, ಲವಲವಿಕೆಯ ವಾತಾವರಣ ಸೃಷ್ಟಿಸಿ.

ನಿಮ್ಮ ಜಗಳಗಳು ಮನಸ್ತಾಪಗಳು ಮಕ್ಕಳ ಮೇಲೆ ಪರಿಣಾಮ ಬೀರದಂತೆ ದೂರವಿಡಲು ಪ್ರಯತ್ನಿ. ಅದರ ಬದಲು ಅಂತಹ ಸಂದರ್ಭಗಳನ್ನು ಕೋಪಗೊಳ್ಳದೆ ನಿಭಾಯಿಸುವುದನ್ನು ಹೇಳಿಕೊಡಿ. ಗದರಬೇಡಿ, ಕೂತು ವಿಷಯಗಳನ್ನು ಸೂಕ್ಷ್ಮವಾಗಿ ಚರ್ಚಿಸಿ. ಸ್ನೇಹಿತನಂತೆ ನೀವೂ ಅವರನ್ನು ಗೇಲಿ ಮಾಡಿ. ಆ ವಯಸ್ಸಿನಲ್ಲಿ ಅವರಲ್ಲಿ ಮೂಡುವ ಭಾವನೆಗಳಿಗೆ ಸ್ಪಂದಿಸಿ, ಏನನ್ನಾದರೂ ನಿಮ್ಮ ಬಳಿ ಹೆದರಿಕೆ ಇಲ್ಲದೆ ಹಂಚಿಕೊಳ್ಳುವ ಸ್ವಾತಂತ್ರ್ಯ ಕೊಡಿ. ಎಂದಿಗೂ ಅವರನ್ನು ಒಬ್ಬಂಟಿಯಾಗಿ ಬೇರೊಂದು ಮಾರ್ಗ ಹುಡುಕಿ ಖನ್ನತೆಯನ್ನು ಹೆಚ್ಚಿಸಿಕೊಳ್ಳಲು ಬಿಡಬೇಡಿ.

– ಸ್ವಾತಿ
ದ್ವಿತೀಯ ಬಿ. ಎಸ್ಸಿ.
ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.