ನೈಸರ್ಗಿಕ ನೈಟ್‌ ಕ್ರೀಮ್‌ಗಳು


Team Udayavani, Jan 11, 2019, 12:30 AM IST

q-14.jpg

ರಾತ್ರಿ ಮಲಗುವಾಗ ನೈಸರ್ಗಿಕ ನೈಟ್‌ ಕ್ರೀಮ್‌ಗಳನ್ನು ಮುಖಕ್ಕೆ ಲೇಪಿಸಿ ಮಲಗಿದರೆ ಚಳಿಗಾಲದಲ್ಲಿ ಮುಖ ಮೃದುವಾಗಿ ಕಾಂತಿ ವರ್ಧಿಸುತ್ತದೆ. ಅಂತೆಯೇ ಕಲೆ ನಿವಾರಕ, ನೆರಿಗೆ ನಿವಾರಕ, ಶ್ವೇತ ವರ್ಣದ ತ್ವಚೆಗಾಗಿ ಹೀಗೆ ಹತ್ತುಹಲವು ಬಗೆಯ ನೈಟ್‌ ಕ್ರೀಮ್‌ಗಳನ್ನು ಮನೆಯಲ್ಲಿಯೇ ತಯಾರಿಸಬಹುದು.

ಕಾಂತಿವರ್ಧಕ ಸೇಬಿನ ನೈಟ್‌ ಕ್ರೀಮ್‌
ಚರ್ಮವನ್ನು ಮೃದು, ಸ್ನಿಗ್ಧ ಹಾಗೂ ಕಾಂತಿಯುತವಾಗಿಡಲು ಸೇಬುಹಣ್ಣಿನಲ್ಲಿರುವ ವಿಟಮಿನ್‌ “ಎ’, “ಬಿ’ ಹಾಗೂ “ಸಿ’ ಜೀವಧಾತುಗಳು ಸಹಾಯಕ.

ಸಾಮಗ್ರಿ: 2 ಸೇಬುಹಣ್ಣು, 20 ಚಮಚ ಗುಲಾಬಿ ಜಲ, 6 ಚಮಚ ಆಲಿವ್‌ ತೈಲ.

ವಿಧಾನ: ಸೇಬುಹಣ್ಣುಗಳನ್ನು ಸಣ್ಣಗೆ ಹೆಚ್ಚಿ , ಆಲಿವ್‌ ತೈಲದೊಂದಿಗೆ ಬ್ಲೆಂಡರ್‌ನಲ್ಲಿ ಬೆರೆಸಿ, ನಯವಾದ ಪೇಸ್ಟ್‌ ತಯಾರಿಸಬೇಕು. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಅಥವಾ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬೇಕು. ಕೊನೆಯಲ್ಲಿ ತೇವಾಂಶ ಆರಿದ ಬಳಿಕ, ಗುಲಾಬಿ ಜಲ ಬೆರೆಸಬೇಕು. ಇದನ್ನು ಬಾಟಲಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿಟ್ಟು ನಿತ್ಯ ರಾತ್ರಿ ಮುಖ ತೊಳೆದ ಬಳಿಕ ಮುಖಕ್ಕೆ ಲೇಪಿಸಿ ಮಲಗಿದರೆ ಬೆಳಗ್ಗೆ ಏಳುವಾಗ ಮುಖ ಶುಭ್ರ ಹಾಗೂ ತಾಜಾ ಆಗಿರುತ್ತದೆ. ಚಳಿಗಾಲದಲ್ಲಿಯೂ ನಿತ್ಯ ರಾತ್ರಿ ಈ ಕ್ರೀಮ್‌ ಬಳಕೆ ಹಿತಕರ.

ಕಲೆನಿವಾರಕ ನೈಟ್‌ ಕ್ರೀಮ್‌
ಸಾಮಗ್ರಿ:
10 ಬಾದಾಮಿ, ಅರ್ಧ ಕಪ್‌ ದಪ್ಪ ಮೊಸರು, 1 ಚಮಚ ಚಂದನದ ಪುಡಿ, 6 ಹನಿಗಳಷ್ಟು ನಿಂಬೆರಸ, 6 ಕೇಸರಿ ದಳಗಳು.

ವಿಧಾನ: ಮೊದಲು ಬಾದಾಮಿಯನ್ನು ರಾತ್ರಿ ನೆನೆಸಿ, ಮರುದಿನ ಬೆಳಿಗ್ಗೆ ಸಿಪ್ಪೆ ತೆಗೆದು, ಕತ್ತರಿಸಿ, ಮಿಕ್ಸರ್‌ನಲ್ಲಿ ಪೇಸ್ಟ್‌ ತಯಾರಿಸಬೇಕು. ಬಾದಾಮಿಯ ನಯವಾದ ಪೇಸ್ಟ್‌ಗೆ ಮೊಸರು, ಅರಸಿನ, ಚಂದನ, ನಿಂಬೆರಸ ಹಾಗೂ ಕೇಸರಿದಳ ಬೆರೆಸಿ ಬ್ಲೆಂಡರ್‌ನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಒಂದು ಬಾಟಲಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿಟ್ಟರೆ, ಒಂದು ವಾರದವರೆಗೆ ಬಳಸಲು ಯೋಗ್ಯ. ಕಲೆನಿವಾರಕ, ಶ್ವೇತವರ್ಣಕಾರಕ ನೈಟ್‌ ಕ್ರೀಮ್‌ ಇದು.

ಒಣ ಚರ್ಮ ನಿವಾರಕ ಹಾಲಿನ ಕೆನೆಯ ನೈಟ್‌ಕ್ರೀಮ್‌
ಸಾಮಗ್ರಿ:
ತಾಜಾ ಹಾಲಿನ ಕೆನೆ 5 ಚಮಚ, ಗುಲಾಬಿ ಜಲ 1 ಚಮಚ, ಆಲಿವ್‌ ತೈಲ 1 ಚಮಚ, ಗ್ಲಿಸರಿನ್‌ 1 ಚಮಚ.

ವಿಧಾನ: ಬ್ಲೆಂಡರ್‌ ಅಥವಾ ಮಿಕ್ಸರ್‌ನಲ್ಲಿ ಮೇಲಿನ ಎಲ್ಲ ಸಾಮಗ್ರಿಗಳನ್ನು ಬೆರೆಸಿ ಮಿಶ್ರಣ ತಯಾರಿಸಬೇಕು. ಚೆನ್ನಾಗಿ ವಿಪ್‌ ಮಾಡಿದ ಬಳಿಕ ಈ ಕ್ರೀಮನ್ನು  ಬಾಟಲಲ್ಲಿ ಸಂಗ್ರಹಿಸಬೇಕು. ತಾಜಾ ಆಗಿಯೂ ಬಳಸಬಹುದು, ಫ್ರಿಜ್‌ನಲ್ಲಿಟ್ಟೂ ಬಳಸಬಹುದು. ಚಳಿಗಾಲದಲ್ಲಿ  ಒಣ ಚರ್ಮದವರಿಗೆ ಈ ನೈಟ್‌ಕ್ರೀಮ್‌ ಬಲು ಪರಿಣಾಮಕಾರಿ.

ಚರ್ಮ ಶೋಧಕ ನೈಟ್‌ಕ್ರೀಮ್‌
ಧೂಳು, ಮಣ್ಣುದೂಷಿತ ಹವಾಮಾನ ಇತ್ಯಾದಿಗಳಿಂದ ಚರ್ಮಕ್ಕೆ ಉಂಟಾದ ಹಾನಿಯನ್ನು  ನಿವಾರಿಸಿ ಚರ್ಮವನ್ನು ಡಿ-ಟಾಕ್ಸಿಫೈ ಮಾಡಲು ಈ ನೈಟ್‌ಕ್ರೀಮ್‌ ಹಿತಕರ.

ಸಾಮಗ್ರಿ: 5 ಚಮಚ ಜೇನುಮೇಣದ ತುರಿ, 5 ಚಮಚ ಬಾದಾಮಿ ತೈಲ, 1 ಚಮಚ ಗ್ರೀನ್‌ ಟೀ ಡಿಕಾಕ್ಷನ್‌, 5 ಚಮಚ ಗುಲಾಬಿ ಜಲ, 5 ಚಮಚ ಕುಮಾರೀ (ಎಲೋವೆರಾ) ರಸ.

ವಿಧಾನ: ಮೊದಲು ಸಣ್ಣ ಬೌಲ್‌ನಲ್ಲಿ ಜೇನುಮೇಣದ ತುರಿಯನ್ನು ಬಿಸಿಮಾಡಿ ಕರಗಿಸಿ, ತದನಂತರ ಬಾದಾಮಿ ತೈಲ ಬೆರೆಸಬೇಕು. ಉರಿಯಿಂದ ಕೆಳಗಿಳಿಸಿದ ಬಳಿಕ ಈ ಮಿಶ್ರಣಕ್ಕೆ ಎಲೋವೆರಾ ರಸ ಬೆರೆಸಿ ಚೆನ್ನಾಗಿ ಕಲಕಬೇಕು. ಕೊನೆಯಲ್ಲಿ ಗ್ರೀನ್‌ ಟೀ ಡಿಕಾಕ್ಷನ್‌ ಹಾಗೂ ಗುಲಾಬಿ ಜಲ ಬೆರೆಸಿ ಮಿಶ್ರ ಮಾಡಬೇಕು. ಈ ಕ್ರೀಮ್‌ನ್ನು ಗ್ಲಾಸ್‌ ಬಾಟಲಲ್ಲಿ ಸಂಗ್ರಹಿಸಿ, ಫ್ರಿಜ್‌ನಲ್ಲಿಟ್ಟು ನಿತ್ಯ ರಾತ್ರಿ ಲೇಪಿಸಿದರೆ ಚರ್ಮ ಶುದ್ಧವಾಗಿ ಹೊಳಪು ಕಾಂತಿ ವರ್ಧಿಸುತ್ತದೆ.

ಗುಲಾಬಿ ದಳಗಳ ನೈಟ್‌ ಕ್ರೀಮ್‌
ಸಾಮಗ್ರಿ:
5 ಚಮಚ ತಾಜಾ ಗುಲಾಬಿ ದಳಗಳು, 5 ಚಮಚ ಹಾಲು, 1 ಚಮಚ ಆಲಿವ್‌ ತೈಲ ಅಥವಾ ಕೊಬ್ಬರಿ ಎಣ್ಣೆ.

ವಿಧಾನ: ಮೊದಲು ಹಾಲು ಮತ್ತು ಗುಲಾಬಿದಳಗಳನ್ನು ಮಿಕ್ಸರ್‌ನಲ್ಲಿ ಬೆರೆಸಿ ಚೆನ್ನಾಗಿ ತಿರುವಿ ನಯವಾದ ಪೇಸ್ಟ್‌ ತಯಾರಿಸಬೇಕು. ಈ ಮಿಶ್ರಣಕ್ಕೆ ಆಲಿವ್‌ತೈಲ ಅಥವಾ ಕೊಬ್ಬರಿ ಎಣ್ಣೆ ಬೆರೆಸಿ ಗಾಜಿನ ಬಾಟಲಲ್ಲಿ ಸಂಗ್ರಹಿಸಿ ಇಡಬೇಕು. ಇದನ್ನು ರಾತ್ರಿ ಲೇಪಿಸಿದರೆ ತ್ವಚೆ ಸ್ನಿಗ್ಧವಾಗುತ್ತದೆ. ಚಳಿಗಾಲದಲ್ಲಿ ತ್ವಚೆ ಒಡೆಯುವುದು, ಒಣಗುವುದು ಮತ್ತು ತಣ್ಣಗಿನ ಗಾಳಿಯ ಶೀತಲ ಪರಿಣಾಮವನ್ನು ನಿವಾರಣೆ ಮಾಡಲು ಈ ಕ್ರೀಮ್‌ ಉಪಯುಕ್ತವಾಗಿದೆ.

ಬೆಣ್ಣೆಹಣ್ಣಿನ ನೈಟ್‌ಕ್ರೀಮ್‌
ಸಾಮಗಿ:
5 ಚಮಚ ಅವಾಕಾಡೋ ಅಥವಾ ಬೆಣ್ಣೆಹಣ್ಣಿನ ತಿರುಳು, ಜೇನುತುಪ್ಪ 3 ಚಮಚ, ಗ್ಲಿಸರಿನ್‌ 2 ಚಮಚ.

ವಿಧಾನ: ಮೊದಲು ಅವಾಕಾಡೊ ಕಣ್ಣಿನ ತಿರುಳನ್ನು ಚೆನ್ನಾಗಿ ಮಸೆದು ಪೇಸ್ಟ್‌ ತಯಾರಿಸಬೇಕು. ಇದಕ್ಕೆ ಗ್ಲಿಸರಿನ್‌ ಬೆರೆಸಿ ಚೆನ್ನಾಗಿ ಕಲಕಬೇಕು. ತದನಂತರ ಜೇನು ಬೆರೆಸಿ ಮಿಶ್ರ ಮಾಡಬೇಕು. ಇದನ್ನು ಗಾಜಿನ ಡಬ್ಬದಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿಟ್ಟರೆ ನಿತ್ಯ ಬಳಕೆಗೆ ಯೋಗ್ಯ. ಈ ನೈಟ್‌ಕ್ರೀಮ್‌ ರಾತ್ರಿ ನಿತ್ಯ ಲೇಪಿಸುವುದರಿಂದ ಚರ್ಮಕ್ಕೆ ಪೋಷಕಾಂಶಗಳು ದೊರೆತು ಮೊಗ ಸ್ನಿಗ್ಧವಾಗಿ ಹೊಳೆಯುತ್ತದೆ. ಒಣ ಚರ್ಮದವರಿಗೆ, ಸಾಧಾರಣ ಚರ್ಮದವರಿಗೆ ಹಾಗೂ ಚಳಿಗಾಲದ ಸಮಯದಲ್ಲಿ ಈ ನೈಟ್‌ಕ್ರೀಮ್‌ ಹೆಚ್ಚು ಉಪಯುಕ್ತ.

ಬೆಣ್ಣೆ ಹಾಗೂ ಜೇನಿನ ನೈಟ್‌ಕ್ರೀಮ್‌
ಸಾಮಗ್ರಿ:
3 ಚಮಚ ತಾಜಾ ಬೆಣ್ಣೆ , 2 ಚಮಚ ಜೇನು, 8-10 ಕೇಸರಿ ದಳಗಳು.

ವಿಧಾನ: ಒಂದು ಸಣ್ಣ ಗಾಜಿನ ಬೌಲ್‌ನಲ್ಲಿ ಬೆಣ್ಣೆ, ಜೇನು ಹಾಗೂ ಕೇಸರಿದಳಗಳನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರ ಮಾಡಬೇಕು. 10 ನಿಮಿಷ ಚೆನ್ನಾಗಿ ಕಲಕಿದ ಬಳಿಕ ಇದನ್ನು ಕರಡಿಗೆಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿಡಬೇಕು. ನಿತ್ಯ ರಾತ್ರಿ ಲೇಪಿಸಿದರೆ ತ್ವಚೆ ಶ್ವೇತವರ್ಣ ಪಡೆದುಕೊಳ್ಳುತ್ತದೆ. ಇದು ತಯಾರಿಸಲೂ ಸುಲಭವಾಗಿರುವುದರಿಂದ ತಾಜಾ ಆಗಿ ನಿತ್ಯ ತಯಾರಿಸಿ ಲೇಪಿಸಲೂಬಹುದು. ಇದು ಒಣ ತ್ವಚೆಯವರಿಗೆ ಹಾಗೂ ಚಳಿಗಾಲಕ್ಕೆ ಬಹೂಪಯೋಗಿ ನೈಟ್‌ಕ್ರೀಮ್‌ ಆಗಿದೆ.
ಆಯಾ ಚರ್ಮಕ್ಕೆ ತಕ್ಕಂತೆ, ದಿನದ ಸಮಯದಲ್ಲಿ ಡೇ ಕ್ರೀಮ್‌ ಬಳಸುವಂತೆ, ರಾತ್ರಿ ನೈಟ್‌ಕ್ರೀಮ್‌ ಬಳಸಿದರೆ ಉತ್ತಮ ಸೌಂದರ್ಯವರ್ಧಕವಾಗಿದೆ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.