ಹಸಿಬಿಸಿ ಸಂಜೆಗೆ ಸವಿಯಿರಿ ಸಂಡಿಗೆ

Team Udayavani, Mar 13, 2019, 12:30 AM IST

x-5.jpg

ಚಳಿಗಾಲ ಮುಗಿದು ಬೇಸಿಗೆ ಕಣ್ಬಿಟ್ಟಿದೆ. ಬಿಸಿಲು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲನ್ನು ಬಳಸಿಕೊಂಡೇ, ಮುಂಬರುವ ಮಳೆಗಾಲದ ತಯಾರಿ ಕೂಡ ಶುರುವಾಗಿದೆ. ಜಡಿ ಮಳೆ ಸುರಿಯುವಾಗ ಸವಿಯಲು ಬೇಕಾದ ಹಪ್ಪಳ, ಸಂಡಿಗೆ, ಕುರುಕಲು ತಿನಿಸುಗಳನ್ನು ತಯಾರಿಸಲು ಇದುವೇ ಸಕಾಲ. ಈ ಬೇಸಿಗೆಯಲ್ಲಿ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಸಂಡಿಗೆಗಳ ರೆಸಿಪಿ ಇಲ್ಲಿದೆ.  

1. ರಾಗಿ ಸಂಡಿಗೆ
ಬೇಕಾಗುವ ಸಾಮಗ್ರಿ:
ರಾಗಿ ಹಿಟ್ಟು- 1/2 ಕಪ್‌, ಮಜ್ಜಿಗೆ- 1/2 ಕಪ್‌, ನೀರು- ಎರಡೂವರೆ ಕಪ್‌, ಉಪ್ಪು- 1ಚಮಚ, ಹಸಿಮೆಣಸು- 2, ಜೀರಿಗೆ- 1/2ಚಮಚ, ಇಂಗು- ಸ್ವಲ್ಪ, ಬಿಳಿ ಎಳ್ಳು- 1ಚಮಚ.

ಮಾಡುವ ವಿಧಾನ: ರಾಗಿಯ ಹಿಟ್ಟಿಗೆ, ಮಜ್ಜಿಗೆ ಮತ್ತು ಸ್ವಲ್ಪ ನೀರು ಸೇರಿಸಿ ಗಂಟಿಲ್ಲದಂತೆ ಕಲಸಿಟ್ಟುಕೊಳ್ಳಿ. ಹಸಿ ಮೆಣಸು, ಉಪ್ಪು, ಜೀರಿಗೆ ಮತ್ತು ಇಂಗು ಸೇರಿಸಿ ತರಿತರಿಯಾಗಿ ರುಬ್ಬಿ.  ಈಗ ಬಾಣಲೆಗೆ 2 ಲೋಟ ನೀರು ಹಾಕಿ ಕುದಿಯಲು ಇಡಿ. ನೀರು ಕುದಿಯುತ್ತಿರುವಂತೆ ಉಪ್ಪು, ಜೀರಿಗೆಯ ಮಿಶ್ರಣ ಹಾಕಿ. ನಂತರ ಕಲಸಿದ ರಾಗಿಯ ಹಿಟ್ಟನ್ನು ಕೂಡಿಸಿ, ಚೆನ್ನಾಗಿ ಮಗುಚಿ. ಮಗುಚುತ್ತಿರುವಂತೆ ರಾಗಿ ಕುದ್ದು ದಪ್ಪ ಆಗುತ್ತದೆ. ಈಗ ಬಿಳಿ ಎಳ್ಳು ಸೇರಿಸಿ. ಈ ಸಂಡಿಗೆಯ ಹಿಟ್ಟನ್ನು ಒಂದು ಚಮಚದ ಅಳತೆಯಲ್ಲಿ ಬಟ್ಟೆ ಅಥವಾ ಪ್ಲಾಸ್ಟಿಕ್‌ ಶೀಟ್‌ ಮೇಲೆ ಹಾಕುತ್ತಾ ಹೋಗಿ. ಎರಡು ಮೂರು ದಿನ ಬಿಸಿಲಿಗೆ ಒಣಗಲಿ. ನಂತರ ತೆಗೆದು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ, ಬೇಕಾದಾಗ ಎಣ್ಣೆಯಲ್ಲಿ ಕರಿದು ಸವಿಯಿರಿ. 

2. ರವೆ ಸಂಡಿಗೆ
ಬೇಕಾಗುವ ಸಾಮಗ್ರಿ: ಮೀಡಿಯಂ ರವೆ- 1/2 ಕಪ್‌, ಕೊತ್ತಂಬರಿ ಸೊಪ್ಪು- 1/4 ಕಪ್‌, ಕರಿಬೇವಿನಸೊಪ್ಪು- ಒಂದು ಹಿಡಿ, ಉಪ್ಪು- 1ಚಮಚ, ಹಸಿಮೆಣಸು- 3, ಇಂಗು- ಸ್ವಲ್ಪ, ಕಪ್ಪು ಎಳ್ಳು-3ಚಮಚ, ನೀರು- 4 ಲೋಟ

ಮಾಡುವ ವಿಧಾನ: ಹಸಿಮೆಣಸು, ಉಪ್ಪು, ಕೊತ್ತಂಬರಿಸೊಪ್ಪು, ಕರಿಬೇವಿನಸೊಪ್ಪು, ಜೀರಿಗೆ ಮತ್ತು ಇಂಗು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ದಪ್ಪ ತಳದ ಬಾಣಲೆಗೆ 3 ಲೋಟ ನೀರು ಹಾಕಿ ಕಾಯಿಸಿ. ಅದಕ್ಕೆ ರುಬ್ಬಿಟ್ಟ ಹಸಿಮೆಣಸಿನ ಪೇಸ್ಟ್‌ ಮತ್ತು ಎಳ್ಳು ಸೇರಿಸಿ. ಈಗ ಒಂದು ಲೋಟ ನೀರಿನಲ್ಲಿ ರವೆಯನ್ನು ಕಲಸಿ, ಕುದಿಯುತ್ತಿರುವ ನೀರಿಗೆ ಹಾಕಿ ಗಂಟಾಗದಂತೆ ತಿರುಗಿಸಿ. 10-20 ನಿಮಿಷಗಳಲ್ಲಿ ರವೆ ಬೆಂದು ಮಿಶ್ರಣ ದಪ್ಪವಾಗುತ್ತದೆ. ಈಗ ಒಂದು ಕಾಟನ್‌ ಬಟ್ಟೆಯ ಮೇಲೆ ಅಥವಾ ಪ್ಲಾಸ್ಟಿಕ್‌ ಶೀಟ್‌ ಮೇಲೆ ಹಿಟ್ಟನ್ನು ಸಂಡಿಗೆಯ ಆಕಾರದಲ್ಲಿ ಹಾಕಿ ಒಣಗಿಸಿ.  ಸಂಡಿಗೆ ಒಣಗಲು 2-3 ದಿನದ ಚುರುಕಾದ ಬಿಸಿಲು ಸಾಕು. 

3. ಅಕ್ಕಿ ಶ್ಯಾವಿಗೆ ಸಂಡಿಗೆ
ಬೇಕಾಗುವ ಸಾಮಗ್ರಿ:
ಅಕ್ಕಿ- 1 ಕಪ್‌, ನೀರು- 2 ಕಪ್‌, ಉಪ್ಪು- 1ಚಮಚ.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 2-3 ಗಂಟೆ ನೆನೆಸಿಡಿ. ನೆನೆದ ಅಕ್ಕಿಯನ್ನು ಸ್ವಲ್ಪ ನೀರಿನ ಜೊತೆ ಸೇರಿಸಿ ನಯವಾಗಿ ರುಬ್ಬಿ. ಈಗ ದಪ್ಪ ತಳದ ಬಾಣಲೆಗೆ ಎರಡು ಲೋಟ ನೀರು ಹಾಕಿ, ಕಾಯಿಸಿ. ಅದಕ್ಕೆ ರುಬ್ಬಿದ ಅಕ್ಕಿ ಮಿಶ್ರಣ ಸೇರಿಸಿ, ತಕ್ಷಣ ಮಗುಚಲು ಆರಂಭಿಸಿ. ಮಿಶ್ರಣ ಗಟ್ಟಿಯಾಗಿ ಮುದ್ದೆಯಂತಾದಾಗ, ಸ್ಟೌ ಆರಿಸಿ. ಬೆಂದ ಅಕ್ಕಿಹಿಟ್ಟನ್ನು ಶ್ಯಾವಿಗೆ ಮಣೆಯಲ್ಲಿ ಹಾಕಿ ಚಿಕ್ಕ ಶ್ಯಾವಿಗೆಯಂತೆ ಬಟ್ಟೆಯ ಅಥವಾ ಪ್ಲಾಸ್ಟಿಕ್‌ ಶೀಟ್‌ ಮೇಲೆ ಒತ್ತಿ. ಇದನ್ನು ಮೂರು ದಿನ ಬಿಸಿಲಲ್ಲಿ ಒಣಗಿಸಿ. ನಂತರ ಪ್ಲಾಸ್ಟಿಕ್‌ ಕವರ್‌ ಅಥವಾ ಡಬ್ಬಿಯಲ್ಲಿ ಹಾಕಿಡಿ. ತಿನ್ನಬೇಕು ಅನ್ನಿಸಿದಾಗ ಎಣ್ಣೆಯಲ್ಲಿ ಕರಿದು ಸವಿಯಿರಿ. 

 ಸುಮನ್‌ ದುಬೈ

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.