ಮೈತ್ರಿಯಿಂದ ಲಾಭ ಆಗಿದ್ದು ಗೌಡರ ಕುಟುಂಬಕ್ಕೆ ಮಾತ್ರ


Team Udayavani, Mar 13, 2019, 12:30 AM IST

manju.jpg

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿಯಿಂದ ಜೆಡಿಎಸ್‌ ಗೆ ಮಾತ್ರ ಲಾಭವಾಗಲಿದೆ. ಮೈತ್ರಿ ಧರ್ಮವೆಂದರೆ ಇಬ್ಬರೂ ಪಾಲನೆ ಮಾಡಬೇಕು. ಆದರೆ, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಗೊಳಿಸಲು ಜೆಡಿಎಸ್‌ ವ್ಯವಸ್ಥಿತ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಎ. ಮಂಜು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್‌ ಹಾಗೂ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಕೇವಲ ಜೆಡಿಎಸ್‌ ಕುಟುಂಬಕ್ಕೆ ಮಾತ್ರ ಲಾಭವಾಗಲಿದೆ. ಜೆಡಿಎಸ್‌ ಕಾರ್ಯಕರ್ತರಿಗೂ ಇದರಿಂದ ಲಾಭವಿಲ್ಲ. ಮೊಮ್ಮ ಕ್ಕಳನ್ನು ದಡ ಸೇರಿಸಲು ದೇವೇಗೌಡರು ಈ ಪ್ರಯತ್ನ ಮಾಡು ತ್ತಿದ್ದಾರೆ ಎಂದು ಟೀಕಿಸಿದರು.

ತುಮಕೂರು, ಮೈಸೂರು ಕ್ಷೇತ್ರಗಳನ್ನು ಬಿಟ್ಟು ಕೊಡಿ ಎಂದು ಕೇಳುವುದು ಮೈತ್ರಿ ಧರ್ಮವಲ್ಲ. ನಾವು ಜೆಡಿಎಸ್‌ ಜೊತೆಗೆ ಫ್ರೆಂಡ್ಲಿ ಫೈಟ್‌ ಅಲ್ಲ, ನೇರವಾಗಿಯೇ ಪೈಪೋಟಿ ನಡೆಸಲು ಕೇಳುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕು ಎಂಬ ಭಾವನೆ ಇಲ್ಲ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡಬೇಕು. ಜನರ ವಿರುದ್ದ ಯಾರೂ ನಡೆಯಲು ಸಾಧ್ಯವಿಲ್ಲ. ನಮಗೂ ಚುನಾವಣೆ ರಾಜಕೀಯ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ. ದೇವೇಗೌಡರು 1991ರಲ್ಲಿ ಚುನಾವಣೆ ಯಲ್ಲಿ ಸೋತಾಗ ರಾಜಕೀಯ ವಾಗಿ ಪುನರ್ಜನ್ಮ ಪಡೆಯಲು ನಾವೂ ಸಾಕಷ್ಟು ಕೆಲಸ ಮಾಡಿದ್ದೆವು. ನಾವು ಆಗ ಸಹಾಯ ಮಾಡಿದ್ದನ್ನು ದೇವೇಗೌಡರು ಸ್ಮರಿಸಿ,ನಮಗೆ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಬೇಕು. ಅವರ ಮೊಮ್ಮಕ್ಕಳಿಗೆ ಇನ್ನೂ ವಯಸ್ಸಿದೆ. ಮುಂದೆ ಗೆಲ್ಲಿಸಿಕೊಳ್ಳಬಹುದು ಎಂದು ದೇವೇಗೌಡರಿಗೆ ಮನವಿ ಮಾಡಿದರು.

ರಾಮಕೃಷ್ಣ ಹೆಗಡೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ದೇವೇಗೌಡರು ರಾಚಯ್ಯರನ್ನು ಎತ್ತಿ ಕಟ್ಟಿದ್ದರು. ದಲಿತರ ಮತಗಳನ್ನು ಹಂಚಿಕೊಂಡರೆ ನಮಗೇ ಲಾಭ ಎಂದು ಲೆಕ್ಕ ಹಾಕಿದ್ದರು. ಉಪ ಚುನಾವಣೆಯಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳುತ್ತಾರೆ. ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಾರೆ. ಈಗ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲು ಒಳ್ಳೆಯ ಸಮಯ. ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಆಗ್ರಹಿಸಿದರು. ಎಲ್ಲವನ್ನೂ ಹೇಳಿ, ರಾಜಕೀಯವಾಗಿ ಅರಗಿಸಿಕೊಳ್ಳುವುದು ದೇವೇಗೌಡರಿಗೆ ಮಾತ್ರ ಗೊತ್ತು ಎಂದು ಹೇಳಿದರು.

ಕುಮಾರಸ್ವಾಮಿದು ಬರೇ ನಾಟಕ
ದಿ. ಅಂಬರೀಶ್‌ ಅವರಿಂದ ಜೆಡಿಎಸ್‌ ಕುಟುಂಬಕ್ಕೆ ಹೆಚ್ಚಿನ ಲಾಭವಾಗಿದೆ. ಅಂಬರೀಶ್‌ ಅವರಿಂದ ಲಾಭ ಪಡೆದುಕೊಂಡು ಈಗ ಅವರ ಪತ್ನಿಗೆ ಬೈಯ್ಯುವುದು ಸರಿಯಲ್ಲ. ಸುಮಲತಾ ಬಗ್ಗೆ ಮಾತನಾಡಿರುವುದಕ್ಕೆ ಎಲ್ಲರೂ ಕ್ಷಮೆ ಕೇಳುತ್ತಿದ್ದಾರೆ. ಆದರೆ, ಬೈದವರು ಮಾತ್ರ ಕ್ಷಮೆ ಕೇಳುತ್ತಿಲ್ಲ. ಸಿದ್ದರಾಜು ಪತ್ನಿ ಹಾಗೂ ಜಯರಾಂ ಪತ್ನಿಗೆ ಜೆಡಿಎಸ್‌ನವರೇ ಟಿಕೆಟ್‌ ನೀಡಿದ್ದರು. ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದು ಕೇವಲ ನಾಟಕ. ಸಾವಿನಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಎ.ಮಂಜು ಆರೋಪಿಸಿದರು.

ಟಾಪ್ ನ್ಯೂಸ್

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

9-davangere

Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

8-doddanagudde

ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

raichur

Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.