ತ್ರಿವಳಿ ಗಾಯಕರ ತ್ರಿವಿಕ್ರಮ ಸಾಧನೆ


Team Udayavani, Apr 26, 2019, 5:00 AM IST

6

ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಇತ್ತೀಚೆಗೆ ತ್ರಿವಳಿ ಗಾಯಕ‌ರಾದ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ವಿ| ಸುಧೀರ್‌ ರಾವ್‌ ಕೊಡವೂರು ಹಾಗೂ ಕೃಷ್ಣ ಆಚಾರ್ಯ ಪಾಣೆಮಂಗಳೂರು ಇವರ ಗಾಯನದ 400ನೇ ಸಂಗೀತ ಕಾರ್ಯಕ್ರಮ ಪ್ರಸ್ತುತಿಗೊಂಡಿತು.

ಕಾರ್ಯಕ್ರಮದ ಪ್ರಥಮ ಆವರ್ತದಲ್ಲಿ ಮೂವರೂ ಗಾಯಕರು ಪತ್ಯೇಕವಾಗಿ ವಿಘ್ನ ವಿನಾಶಕ ವಿಘ್ನೇಶನನ್ನು ವಿಭಿನ್ನ ಶೈಲಿಯಲ್ಲಿ ಸ್ತುತಿಸಿದ ರೀತಿ ಅನನ್ಯವಾಗಿತ್ತು. ಅದರಲ್ಲೂ ಸುಧೀರ್‌ರಾವ್‌ ಪದ್ಯದ ನಡುವೆ ಜತಿಸ್ವರವನ್ನು ಆಳವಡಿಸಿ, ತಬಲಾ ಹಾಗೂ ಮೃದಂಗವಾದಕರಿಗೆ ಜುಗಲ್‌ಬಂದಿ ಅವಕಾಶ ಒದಗಿಸಿದ್ದು ಸಂಗೀತ ಕಾರ್ಯಕ್ರಮಕ್ಕೆ ವಿಶೇಷ ಜೀವಕಳೆಯನ್ನು ನೀಡಿತು. ಮುಂದೆ ಶ್ರೀಕೃಷ್ಣನ ಕುರಿತಾಗಿ ಭಕ್ತಿ – ಭಾವಪೂರ್ಣವಾಗಿ ಗಾಯಕರ ಕಂಠದಿಂದ ಹೊರ ಹೊಮ್ಮಿದ ಮೂರು ದಾಸರ ಪದಗಳು ಶ್ರೋತೃಗಳ ಮನಗೆದ್ದಿತು. ಈ ಮಾಲಿಕೆಯಲ್ಲಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಇವರ “ಪಿಳ್ಳಂಗೋವಿಯ ಚೆಲ್ವ ಕೃಷ್ಣನ’ ಹಾಡು ವಿದ್ಯಾಭೂಷಣರನ್ನು ನೆನಪಿಸಿದರೂ ತನ್ನದೆ ಶೈಲಿಯನ್ನು ಆಳವಡಿಸಿಕೊಂಡು ಗಾಯಕರು ಹಾಡನ್ನು ವಿಭಿನ್ನವಾಗಿ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಹೆಚ್ಚಿನೆಲ್ಲಾ ಹಾಡುಗಳು ನಾಡಿನ ದಾಸವರೇಣ್ಯರ ಕೃತಿಗಳಾಗಿದ್ದರೂ ಒಂದೇ ಹಾಡನ್ನು ಒಬ್ಬರಾದ ಮೇಲೆ ಇನ್ನೊಬ್ಬರು,ಕೆಲವೊಮ್ಮೆ ಇಬ್ಬರೂ ಸೇರಿ, ಮಗದೊಮ್ಮೆ ಮೂವರೂ ಏಕಕಂಠದಿಂದ ಮಂದ್ರ ಸ್ಥಾಯಿಯಿಂದ ಉಚ್ಚಸ್ಥಾಯಿಗೆ, ಮಂದಗತಿಯಿಂದ ತೀವ್ರಗತಿಗೆ ತಾಳ ವೈವಿಧ್ಯತೆಯೊಂದಿಗೆ ಹಾಡುತ್ತಾ ಕೇಳುಗರಿಗೆ ವಿಶಿಷ್ಟ ಅನುಭವ ನೀಡಿದರು. ಇವರಿಗೆ ಸಮರ್ಥ ಹಿಮ್ಮೇಳದೊಂದಿಗೆ ಸಹಕರಿಸಿದ ಬಾಲಚಂದ್ರ ಭಾಗವತ್‌ (ಮೃದಂಗ) , ತಬಲಾ, ಮಾಂತ್ರಿಕ ವಿ| ಮಾಧವ ಆಚಾರ್‌, ಶರ್ಮಿಳಾ ಕೆ. ರಾವ್‌ (ವಯಲಿನ್‌), ಶರತ್‌ ಹಳೆಯಂಗಡಿ (ಗಿಟಾರ್‌) ಇವರು ಅಭಿನಂದನಾರ್ಹರು. ಅದರಲ್ಲೂ ಗಿಟಾರ್‌ ವಾದಕರು ತಮ್ಮ ಕೌಶಲ್ಯದಿಂದ ಸಾಂಪ್ರದಾಯಿಕ ಭಕ್ತಿಗೀತೆಗಳಿಗೆ ಫ್ಯೂಷನ್‌ ಸಂಗೀತದ ಮೆರುಗನ್ನು ನೀಡಿ ಶ್ರೋತೃಗಳ ಮೆಚ್ಚುಗೆ ಗಳಿಸಿದರು. ನಾವು ಊಟ ಮಾಡುವಾಗ ಏನು ಕೇಳುತ್ತೇವೋ/ನೋಡುತ್ತೇವೋ ಅದಕ್ಕನುಗುಣವಾಗಿ ನಾವು ತಿಂದ ಆಹಾರ ಪಚನವಾಗಿ ಸಾತ್ವಿಕ/ರಾಜಸ/ತಾಮಸ ರಕ್ತವಾಗಿ ಪರಿವರ್ತಿತವಾಗುತ್ತದೆ ಎಂದು ನಮ್ಮ ಶಾಸ್ತ್ರ-ಪುರಾಣಗಳು ಸಾರುತ್ತವೆ. ಇದನ್ನು ವಿಜ್ಞಾನವೂ ಪುಷ್ಟೀಕರಿಸುತ್ತದೆ. ಆದ್ದರಿಂದ ಊಟದ ಸಮಯದಲ್ಲಿ ಭಕ್ತಿಗೀತೆ ಕೇಳುವುದರಿಂದ ನಮ್ಮ ಆರೋಗ್ಯದ ಮೇಲೆ ಸಾತ್ವಿಕ ಪರಿಣಾಮ ಉಂಟಾಗುವ ಕಾರಣದಿಂದಾಗಿ ಊಟದ ಹೊತ್ತಿನ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ.

ಜನನಿ ಭಾಸ್ಕರ ಕೊಡವೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.