ಟಿಕ್ ಟಾಕ್ ನಿಂದ ಟಾಕೀಸ್ಗೆ ಹೊರಟ ಅಜ್ಜಿ
ಸ್ತ್ರೀ ಲೋಕ ಸಂಚಾರ
Team Udayavani, May 1, 2019, 6:20 AM IST
ಟಿಕ್ ಟಾಕ್ ಅನ್ನೋದೇ ಒಂದು ಯುವಸಾಗರ. ಆದರೆ, ಅಲ್ಲೊಬ್ಬಳು ಸ್ಟಾರ್ ಅಜ್ಜಿ ಇದ್ದಾಳೆ ಅನ್ನೋದು ನಿಮ್ಗೆ ಗೊತ್ತೇ? ಕೇರಳದ ಎರ್ನಾಕುಲಂನ 90 ವರ್ಷದ ಅಜ್ಜಿ ಮೇರಿ ಜೋಸೆಫ್, ಟಿಕ್ ಟಾಕ್ ವಿಡಿಯೋಗಳಿಂದ ಸೆಲೆಬ್ರಿಟಿಯಾಗಿ, ಸಿನಿಮಾಕ್ಕೂ ನುಗ್ಗಿಬಿಟ್ಟಳು.
ಈಕೆಯ ಟಿಕ್ಟಾಕ್ ಹುಚ್ಚಿನ ಹಿಂದೆ ಒಂದು ಕತೆ ಉಂಟು. ಕಳೆದ ಬಾರಿ ಭೀಕರ ನೆರೆ ಬಂದು ನಿರಾಶ್ರಿತ ಶಿಬಿರದಲ್ಲಿ ಉಳಿದುಕೊಳ್ಳಬೇಕಾಗಿ ಬಂದಾಗ ಅಲ್ಲಿ ಮಾಡಲು ಹೆಚ್ಚಿನ ಕೆಲಸವೇನೂ ಇರುತ್ತಿರಲಿಲ್ಲ. ಅಲ್ಲಿ ಮೊಮ್ಮಕ್ಕಳೆಲ್ಲಾ ತಮಗೆ ಟಿಕ್ ಟಾಕ್ನಲ್ಲಿ ಜಾಸ್ತಿ ಜನ ಫಾಲೋವರ್ಗಳಿಲ್ಲ ಎಂದು ಬೇಸರಿಸುತ್ತಿದ್ದನ್ನು ಅಜ್ಜಿ ಕೇಳಿಸಿಕೊಂಡಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿದ ಈಕೆ, ತಾನೇ ಟಿಕ್ ಟಾಕ್ ವಿಡಿಯೊ ಮಾಡಲು ಶುರು ಮಾಡಿದ್ದರು.
ಇಂದು ಲಕ್ಷಾಂತರ ಮಂದಿ ಈ ಅಜ್ಜಿಯ ವಿಡಿಯೋ ಲೈಕ್ ಮಾಡುತ್ತಾರೆಂದರೆ ಅವರ ಪ್ರಖ್ಯಾತಿ ಎಷ್ಟೆಂಬುದನ್ನು ಊಹಿಸಬಹುದು. ಅಂದ ಹಾಗೆ ಅಜ್ಜಿ ನಟಿಸುತ್ತಿರುವ “ಸುಂದರನ್ ಸುಭಾಶ್’ ಮಲಯಾಳಂ ಸಿನಿಮಾದಲ್ಲಿ, ಈಕೆಯ ಮೊಮ್ಮಗ ಜಿನ್ಸಿನ್ ಕೂಡಾ ಇದ್ದಾನೆ. ವಯಸ್ಸು ಎನ್ನುವುದು ಕೇವಲ ಸಂಖ್ಯೆ ಮಾತ್ರ ಎಂದೆನ್ನಿಸುವುದು ಇಂಥವರನ್ನು ನೋಡಿದಾಗಲೇ.