ಜೀವಸಾರವನ್ನು ಬಳಸುವ ಬಗೆ

Team Udayavani, Aug 19, 2019, 5:00 AM IST

mannu1

ಸಸ್ಯಗಳು ಘನರೂಪದ ಗೊಬ್ಬರಕ್ಕಿಂತಲೂ ದ್ರವರೂಪದ ಗೊಬ್ಬರಗಳಿಗೆ ತ್ವರಿತವಾಗಿ ಸ್ಪಂದಿಸುತ್ತವೆ. ಇಂಥ ಗೊಬ್ಬರವನ್ನು ನಿಯಮಿತವಾಗಿ ಪೂರೈಸುವುದು ದುಬಾರಿ ಖರ್ಚಲ್ಲ. ಮುಖ್ಯವಾಗಿ ಇದು ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಪೂರಕ. ಹನಿ ನೀರಾವರಿ ವಿಧಾನದ ಮೂಲಕವೂ ನೀಡಬಹುದು. ಇದರಿಂದ ಗಿಡಗಳ ಬೆಳವಣಿಗೆ, ಹೂ, ಕಾಯಿ ಬಿಡುವ ಪ್ರಮಾಣ, ಗಾತ್ರ ಅತ್ಯುತ್ತಮವಾಗಿರುತ್ತದೆ. ಇವೆಲ್ಲದರ ಜೊತೆಗೆ ಕೀಟ- ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ತೋಟದ ವಿಸ್ತೀರ್ಣಕ್ಕೆ ತಕ್ಕಂತೆ ಜೀವಸಾರ ಅಥವಾ ಬಯೋಡೈಜೆಸ್ಟರ್‌ ಗಾತ್ರವನ್ನೂ ನಿರ್ಮಿಸಿಕೊಳ್ಳಬಹುದು. ತೋಟದಲ್ಲಿಯೇ ತುಸು ಎತ್ತರ ಇರುವ ಜಾಗದಲ್ಲಿ ಇದನ್ನು ನಿರ್ಮಿಸುವುದು ಸೂಕ್ತ. ಇದರಿಂದ ಜೀವಸಾರ ಹಾಯಿಸುವಿಕೆಯೂ ಸರಾಗವಾಗಿರುತ್ತದೆ. ಎರಡು ಎಕರೆ ತೋಟವಿದ್ದರೆ 8 ಅಡಿ ಅಗಲ, ನಾಲ್ಕು ಅಡಿ, ಉದ್ದ, ಮೂರಡಿ ಆಳ ಇರುವ ತೊಟ್ಟಿ ನಿರ್ಮಿಸಿಕೊಂಡರೂ ಸಾಕು. ಮಾರುಕಟ್ಟೆಯಲ್ಲಿ ಸಿದ್ಧ ಮಾದರಿ ಬಯೋಡೈಜೆಸ್ಟರ್‌ ತೊಟ್ಟಿಗಳು ಸಿಗುತ್ತಿವೆ. ಕೃಷಿಕರಿಗೆ ಯಾವುದು ಅನುಕೂಲ ಎನ್ನಿಸುತ್ತದೆಯೋ ಅದರ ಬಳಕೆ ಮಾಡಬಹುದು.

ತೊಟ್ಟಿಗೆ ಹಾನಿಕಾರಕವಲ್ಲದ ಯಾವುದೇ ಸಸ್ಯಗಳನ್ನಾದರೂ ಹಾಕಬಹುದು. ಲಕ್ಕಿ ಸೊಪ್ಪು, ಹೊಂಗೆ ಸೊಪ್ಪು, ಬೇವಿನ ಸೊಪ್ಪು, ಯಾವುದೇ ಥರದ ಹಿಂಡಿಗಳು, ರಾಸುಗಳ ಸೆಗಣಿ, ಆಡು- ಕುರಿಗಳ ಹಿಕ್ಕೆ, ಗಂಜಲ, ಮೀನಿನ ಗೊಬ್ಬರ ಹಾಕಿ ನೀರು ಹಾಯಿಸಬೇಕು. ಇವೆಲ್ಲ ಸಂಪೂರ್ಣವಾಗಿ ಕೊಳೆಯಲು 40ರಿಂದ 45 ದಿನ ಸಾಕು. ಈ ಅವಧಿಯಲ್ಲಿ ಆಗಾಗ ದೊಡ್ಡ ಕೋಲಿನಿಂದ ತೊಟ್ಟಿಯ ನೀರನ್ನು ಕದಡುತ್ತಿರಬೇಕು.
ತೊಟ್ಟಿಯ ತಳದಲ್ಲಿ ಜಾಲರಿ ಇರುವ ರಂಧ್ರ ನಿರ್ಮಿಸಿದ್ದರೆ ಅದರ ಮೂಲಕ ಕಸ ಕಡ್ಡಿಯಿಲ್ಲದ ಸಾರವನ್ನು ಹೊರಬಿಡಬಹುದು. ಬೆಳೆಗಳಿಗೆ ಜೀವಸಾರವನ್ನು ನೇರವಾಗಿ ಹಾಯಿಸಬಾರದು. ಒಂದು ಲೀಟರ್‌ ಜೀವಸಾರಕ್ಕೆ 9 ಅಥವಾ 10 ಲೀಟರ್‌ ಪ್ರಮಾಣದಲ್ಲಿ ನೀರು ಬೆರೆಸಬೇಕು. ಇದನ್ನು ಚೆನ್ನಾಗಿ ಕದಡಿ, ಅಗತ್ಯವಿದ್ದರೆ ಮತ್ತೂಮ್ಮೆ ಸೋಸಿ, ಹನಿ ನೀರಾವರಿ ವ್ಯವಸ್ಥೆ ಮುಖಾಂತರ ಬೆಳೆಗಳಿಗೆ ನೀಡಬಹುದು. ಜೀವಸಾರ ಪೂರ್ಣವಾಗಿ ಬಳಸಿಕೊಂಡ ನಂತರ ತೊಟ್ಟಿಯ ತಳದಲ್ಲಿ ಉಳಿಯುವ ಕಸವನ್ನು ಕಾಂಪೋಸ್ಟ್ ಗುಂಡಿ ಅಥವಾ ಎರೆಗೊಬ್ಬರದ ತೊಟ್ಟಿಗೆ ಹಾಕಬಹುದು.

– ಕುಮಾರ ರೈತ

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.