“ಅನಂತ’ ಕಲಾ ಕುಸುರಿ

ಹೊಯ್ಸಳರ ಅಪರೂಪದ ವಾಸ್ತುಶಿಲ್ಪ ಕೊಡುಗೆ

Team Udayavani, Sep 14, 2019, 5:20 AM IST

e-10

ಅನಂತ ಪದ್ಮನಾಭ ಮತ್ತು ಕಾಶಿ ವಿಶ್ವೇಶ್ವರ ದೇಗುಲ, ಹೊಸ ಬೂದನೂರು

ಹೊಯ್ಸಳ ರಾಜ ಮನೆತನವೆಂದರೆ ನಮಗೆ ನೆನಪಾಗುವುದೇ ಭವ್ಯವಾದ ದೇಗುಲಗಳು. ಅದರಲ್ಲೂ ಅವರ ಕಾಲದಲ್ಲಿ ಕಟ್ಟಲಾದ ಅನಂತ ಪದ್ಮನಾಭ ದೇಗುಲಗಳದ್ದು ಅಪರೂಪದ ಸೌಂದರ್ಯ. ಮಂಡ್ಯದ ಸಮೀಪವಿರುವ ಹೊಸ ಬೂದನೂರಿನ ಅನಂತ ಪದ್ಮನಾಭ ದೇವಾಲಯ ಕೂಡ ವಿರಳ ಸೌಂದರ್ಯದ ಕಲಾಸಾಕ್ಷಿ.

ಎತ್ತರದ ಜಗತಿಯ ಮೇಲಿನ ದೇಗುಲವು ಗರ್ಭಗುಡಿ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿದೆ. 13ನೇ ಶತಮಾನದ ಕಾಲಘಟ್ಟಕ್ಕೆ ಸೇರುವ ಈ ದೇಗುಲಕ್ಕೆ ಕ್ಕೆಹೊಯ್ಸಳ ದೊರೆ ಮೂರನೇ ನರಸಿಂಹನು 1276ರಲ್ಲಿ ದತ್ತಿ ನೀಡಿದ ಉಲ್ಲೇಖವಿದೆ. ಗರ್ಭಗುಡಿಯಲ್ಲಿ ಪೀಠದ ಮೇಲೆ ಸ್ಥಾನಿಕ ಭಂಗಿಯಲ್ಲಿರುವ 5 ಅಡಿ ಎತ್ತರದ ಸುಂದರ ಅನಂತ ಪದ್ಮನಾಭನ ಮೂರ್ತಿ ನಿಜಕ್ಕೂ ಮನೋಹರ ಪ್ರತಿಮೆ. ಮೂರ್ತಿಯು ಪದ್ಮ, ಚಕ್ರ, ಗದಾ ಮತ್ತು ಶಂಖಧಾರಿಯಾಗಿದ್ದು, ಪ್ರಭಾವಳಿಯಲ್ಲಿ ಸುಂದರ ದಶಾವತಾರದ ಕೆತ್ತನೆ ಇದೆ. ಎಡಬಲದಲ್ಲಿ ಶ್ರೀದೇವಿ- ಭೂದೇವಿಯರ ಕೆತ್ತನೆ ಇದೆ.

ನವರಂಗದಲ್ಲಿ ತಿರುಗಣೆಯಿಂದ ಮಾಡಿದ ಸುಂದರ ನಾಲ್ಕು ಕಂಬಗಳಿದ್ದು, ವಿತಾನದಲ್ಲಿ ಕಮಲದ ಮೊಗ್ಗಿನ ರಚನೆ ಇದೆ. ಹೊರ ಭಿತ್ತಿಯಲ್ಲಿ ಯಾವುದೇ ಅಲಂಕಾರಿಕ ಶಿಲ್ಪಗಳ ಕೆತ್ತನೆಗಳಿಲ್ಲ. ಸುಂದರ ದ್ರಾವಿಡ ಶೈಲಿಯ ಶಿಖರವಿದೆ. ಮುಖಮಂಟಪದಲ್ಲೂ ತಿರುಗಣೆಯ ಕಂಬ ಇದ್ದು ಬಾಗಿಲುವಾಡ ಸರಳವಾಗಿದೆ. ಇಡೀ ದೇಗುಲ, ಸರಳ- ಸುಂದರ. ಅನಂತ ಪದ್ಮನಾಭ ವ್ರತದಂದು ಇಲ್ಲಿ ವಿಶೇಷ ಪೂಜೆ ನೆರವೇರುತ್ತದೆ.

ಇಲ್ಲಿ ಇದೇ ಶೈಲಿಯಲ್ಲಿ ಕಾಶಿ ವಿಶ್ವೇಶ್ವರನ ದೇಗುಲವನ್ನೂ ನಿರ್ಮಿಸಲಾಗಿದೆ. ಇದರ ಗರ್ಭಗುಡಿಯ ಪಾಣಿಪೀಠದಲ್ಲಿ ಸುಂದರ ಶಿವಲಿಂಗವಿದೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ನಂದಿ ಮೋಡಿ ಮಾಡುತ್ತಾನೆ. ನಂದಿಯ ಘಂಟೆಸರ, ಗೆಜ್ಜೆ, ಕಾಲಿನ ಗೆಜ್ಜೆಗೆ ಕಲಾತ್ಮಕ ಸ್ಪರ್ಶವಿದೆ. ನವರಂಗದಲ್ಲಿ ಗಣಪತಿ ಮತ್ತು ಕಾರ್ತಿಕೇಯರ ಶಿಲ್ಪವಿದ್ದು, ನವಿಲಿನ ಮೇಲೆ ಕುಳಿತಂತೆ ಇರುವ ಕಾರ್ತಿಕೇಯನ ಶಿಲ್ಪ ಮನಮೋಹಕ. ವಿತಾನದಲ್ಲಿರುವ ಅಷ್ಟ ದಿಕ್ಪಾಲಕರ ಕೆತ್ತನೆ, ವಾದ್ಯಗಾರರ ದೃಶ್ಯದ ಕೆತ್ತನೆಯನ್ನು ಒಮ್ಮೆಯಾದರೂ ನೋಡಲೇಬೇಕು.

ಕಾಶಿ ವಿಶ್ವೇಶ್ವರನ ದೇಗುಲವು ಬಹುತೇಕ ಅನಂತ ಪದ್ಮನಾಭನ ದೇಗುಲ ಸ್ವರೂಪ ಹೋಲುತ್ತದೆ. ಮುಖಮಂಟಪದಲ್ಲಿ ಕಕ್ಷಾಸನವಿದ್ದು, ಹೊರಭಿತ್ತಿ ಅಲಂಕಾರರಹಿತವಾಗಿದೆ. ಸುಂದರ ದ್ರಾವಿಡ ಶೈಲಿಯ ಶಿಖರ ಹೊಂದಿದೆ. ಇಲ್ಲಿ ಕಾರ್ತೀಕ ಮಾಸದಲ್ಲಿ ಸೋಮವಾರ ಹಾಗೂ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ವಿನಾಶದ ಅಂಚಿನಲ್ಲಿದ್ದ ಈ ಎರಡೂ ದೇಗುಲಗಳನ್ನು ಧರ್ಮಸ್ಥಳದ ಮಂಜುನಾಥ ಟ್ರಸ್ಟ್‌ ಹಾಗೂ ಸ್ಥಳೀಯರ ಸಹಕಾರದೊಂದಿಗೆ ನವೀಕರಿಸಲಾಗಿದೆ.

ದರುಶನಕೆ ದಾರಿ…
ಮಂಡ್ಯದಿಂದ 7 ಕಿ.ಮೀ. ದೂರದಲ್ಲಿದೆ. ಬೆಂಗಳೂರು- ಮದ್ದೂರು- ಹೊಸಬೂದನೂರು ಕ್ರಾಸ್‌ನಿಂದ ಬಲಕ್ಕೆ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಹಾಗೂ ಮೈಸೂರು- ಮಂಡ್ಯ- ಹೊಸಬೂದನೂರು ಕ್ರಾಸ್‌ ಮೂಲಕ ಈ ದೇಗುಲವನ್ನು ತಲುಪಬಹುದು.

 - ಶ್ರೀನಿವಾಸ ಮೂರ್ತಿ ಎನ್‌.ಎಸ್‌.

ಟಾಪ್ ನ್ಯೂಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.