ಮದುವೆ ಫೋಟೋ ಶೂಟ್ ವೈರಲ್
Team Udayavani, Nov 2, 2019, 8:00 AM IST
ಮದುವೆಯ ಅನಂತರ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಈಗ ಫ್ಯಾಶನ್. ಆದರೆ ಅಮೆರಿಕದಲ್ಲಿ ಕಳೆದ ತಿಂಗಳು ದಾಂಪತ್ಯ ಜೀವನ ಪ್ರವೇಶ ಮಾಡಿದ್ದ ನವಜೋಡಿ ಹವಾಯಿ ದ್ವೀಪದಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಮುಂದಾಗಿತ್ತು. ಅದರಂತೆ ಸಿದ್ಧತೆಗಳೊಂದಿಗೆ ಅಲ್ಲಿಗೆ ತೆರಳಿತ್ತು.
ಮದುವೆಯ ದಿನದಂದು ಧರಿಸಿದ್ದ ದಿರಿಸುಗಳನ್ನೇ ಧರಿಸಿಕೊಂಡು ಯುವ ಜೋಡಿ ಫೋಟೋದ ಮುಂದೆ ಪೋಸ್ ನೀಡಲು ರೆಡಿಯಾಗಿತ್ತು. ಸಮುದ್ರ ಕಿನಾರೆಯಲ್ಲಿ ಅದೂ ಆಳೆತ್ತರಕ್ಕೆ ಅಲೆ ಛಿಮ್ಮುವ ಸ್ಥಳದಲ್ಲಿಯೇ ಚಿತ್ರೀಕರಣಕ್ಕೆ ಸ್ಥಳ ನಿಗದಿ ಮಾಡಿಕೊಂಡಿದ್ದರು. ಪದೇ ಪದೆ ಬರುವ ಅಲೆಗಳಿಂದಾಗಿ ಯುವ ಜೋಡಿ ತೊಯ್ದೇ ಹೋಯಿತು.
ಆದರೆ ನವ ದಂಪತಿ ಎದೆಗುಂದಲಿಲ್ಲ. ಅಲೆಗಳ ನಡುವೆಯೇ ಫೋಟೋಶೂಟ್ ನಡೆಸಿಯೇ ಬಿಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಅಪ್ಲೋಡ್ ಮಾಡಿದ್ದರು. ಅಲೆಗಳ ನಡುವೆ ನಡೆದ ಭಿನ್ನ ರೀತಿಯ ಫೋಟೋ ಶೂಟ್ ರೋಮಾಂಚನಕಾರಿಯಾಗಿದೆ ಎಂದು ದಂಪತಿ ಫಾಕ್ಸ್ ನ್ಯೂಸ್ಗೆ ಹೇಳಿಕೊಂಡಿದ್ದಾರೆ ಮತ್ತು ಆ ಫೋಟೋಗಳು ಭಾರೀ ವೈರಲ್ ಆಗಿವೆಯಂತೆ.