ರಸ್ತೆ ಮೇಲೆ ವಿಮಾ ಸುರಕ್ಷೆ!

ರೋಡ್‌ ಟ್ರಿಪ್‌ಗೂ ವಿಮೆ ಬಂತು!

Team Udayavani, Dec 9, 2019, 6:07 AM IST

raste-mele

ಇಂದು ವಿಮಾ ಕ್ಷೇತ್ರ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಅದಕ್ಕೊಂದು ಹೊಸ ಸೇರ್ಪಡೆ ರೋಡ್‌ ಟ್ರಿಪ್‌ ವಿಮೆ. ಪ್ರವಾಸದ ಸಂದರ್ಭಗಳ ಅನಿಶ್ಚಿತತೆ, ಅವಘಡಗಳ ನಷ್ಟವನ್ನು ಭರಿಸುವ ವಿಮೆ ಇದು.

ಟ್ರಿಪ್‌ ಹೋಗುವುದೆಂದರೆ ಎಲ್ಲರಿಗೂ ಇಷ್ಟವೇ? ಕಾರು ಇಲ್ಲವೇ ಬೈಕ್‌ನಲ್ಲಿ ಸಂಚರಿಸುತ್ತಾ ನಮಗೆ ಇಷ್ಟವೆನಿಸಿದ ಕಡೆ ನಿಲ್ಲಿಸಿಕೊಂಡು ಅಲ್ಲಿನ ಸಂಪ್ರದಾಯ, ಸಂಸ್ಕೃತಿ ತಿಳಿದುಕೊಳ್ಳಬಹುದು. ಇಲ್ಲವೇ ಸಾರ್ವಜನಿಕ ಸಾರಿಗೆಗಳಲ್ಲೂ ಪ್ರವಾಸ ಹೋಗುವವರಿಗೇನೂ ಕಡಿಮೆಯಿಲ್ಲ. ತಾವು ಹೋಗುತ್ತಿರುವ ಟ್ರಿಪ್‌ಗೂ ವಿಮೆ ಮಾಡಿಸಬಹುದು ಎನ್ನುವ ಸಂಗತಿ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಮಾರ್ಗಮಧ್ಯೆ ಜರುಗುವ ಅಡೆತಡೆ ಹಾಗೂ ಆಕಸ್ಮಿಕ ಅವಘಡಗಳು, ವಸ್ತುಗಳನ್ನೇನಾದರೂ ಕಳೆದುಕೊಂಡಲ್ಲಿ ಈ ವಿಮೆ ರಕ್ಷಣೆ ಒದಗಿಸುತ್ತದೆ. ಇದರಿಂದ, ಪ್ರವಾಸದ ಸಂದರ್ಭದಲ್ಲಿ ಜರುಗುವ ಸಂಭವನೀಯ ಆರ್ಥಿಕ ನಷ್ಟದಿಂದ ಪಾರಾಗಬಹುದು.

ವಾಹನ ವಿಮೆ: ರೋಡ್‌ ಟ್ರಿಪ್‌ ವಿಮೆ ಮಾಡಿಸಿದ್ದರೆ ಒಂದು ವೇಳೆ ನಿಮ್ಮ ವಾಹನ ಅಪಘಾತಕ್ಕೀಡಾದರೆ ಅಥವಾ ಯಾವುದೇ ಹಾನಿಯಾದರೆ ಪರಿಹಾರ ಸಿಗುತ್ತದೆ. ಇದು ಸಾಮಾನ್ಯ ವಿಮೆ ಪಾಲಿಸಿಯಲ್ಲೂ ಪರಿಹಾರ ಸಿಗುತ್ತದೆ. ಆದರೆ, ರೋಡ್‌ ಟ್ರಿಪ್‌ ವಿಮೆ ವಿಶೇಷವಾಗಿ ಪ್ರವಾಸದ ಸಂದರ್ಭಕ್ಕೆಂದೇ ರೂಪಿತವಾದ ವಿಮೆಯಾಗಿರುತ್ತದೆ. ವೆಹಿಕಲ್‌ ಇನ್ಷೊರೆನ್ಸ್‌ನಲ್ಲಿ ಇಲ್ಲದ ಸವಲತ್ತುಗಳು ಇದರಲ್ಲಿ ಇರುತ್ತವೆ. ಪಾಲಿಸಿದಾರ ಮತ್ತು ಪ್ರವಾಸ ಹೊರಡುವ ವಾಹನದ ಸುರಕ್ಷತೆಗೆ 27×7 ಸಪೋರ್ಟ್‌ ನೀಡಲಾಗುತ್ತದೆ.

ಮಾರ್ಗ ಮಧ್ಯೆ ವಾಹನದ ಟೈರ್‌ ಪಂಕ್ಚರ್‌ ಆದರೆ, ಅಥವಾ ಇನ್ಯಾವುದೋ ಕಾರಣಕ್ಕೆ ಕೆಟ್ಟು ನಿಂತರೆ ಇನ್ಷೊರೆನ್ಸ್‌ ಸಹಾಯವಾಣಿಗೆ ಕರೆ ಮಾಡಿದರೆ ಸಹಾಯಕರು ಧಾವಿಸುತ್ತಾರೆ. ವಾಹನ ಕಳವು ಮತ್ತು ಬಿಡಿಭಾಗಗಳಿಗೆ ಹಾನಿ ಸಂಭವಿಸಿದರೂ ಪರಿಹಾರ ದೊರೆಯಲಿದೆ. ಅಲ್ಲದೇ ಪ್ರಯಾಣದ ಸಂದರ್ಭದಲ್ಲಿ ಲ್ಯಾಪ್‌ಟಾಪ್‌, ಸೆಲ್‌ಫೋನ್‌, ವ್ಯಾಲೆಟ್‌ ಮತ್ತಿತರ ವಸ್ತುಗಳು ಕಳುವಾದರೂ ಆದರ ನಷ್ಟವನ್ನು ವಿಮಾ ಸಂಸ್ಥೆ ಭರಿಸಲಿದೆ. ನಮ್ಮ ವೆಹಿಕಲ್‌ ಇನ್ಸುರೆನ್ಸ್‌ ಒದಗಿಸುವ ಸವಲತ್ತುಗಳನ್ನು ಒಂದು ಬಾರಿ ಪರಿಶೀಲಿಸಿ, ತಮಗೆ ಬೇಕಾದ ಸೌಲಭ್ಯಗಳು ಅದರಲ್ಲಿ ಇಲ್ಲದೇ ಹೋದ ಪಕ್ಷದಲ್ಲಿ ಟ್ರಾವೆಲ್‌ ಇನ್ಷೊರೆನ್ಸ್‌ ಮೊರೆ ಹೋಗಬಹುದು.

ಮನೆಗೆ ತಾತ್ಕಾಲಿಕ ವಿಮೆ: ಪ್ರವಾಸದ ಸಂದರ್ಭದಲ್ಲಿ ಮನೆಯ ಭದ್ರತೆಯ ಕುರಿತಾಗಿ ಆತಂಕವಿರುವುದು ಸಹಜ. ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಇದ್ದರಂತೂ ಆತಂಕ ಇದ್ದೇ ಇರುತ್ತದೆ. ರೋಡ್‌ ಟ್ರಿಪ್‌ ವಿಮೆಯಲ್ಲಿ ಅದಕ್ಕೂ ಪರಿಹಾರವಿದೆ. ಭದ್ರತಾ ಸಾಧನವನ್ನು ಅಳವಡಿಸಿ ನಿಶ್ಚಿಂತೆಯಿಂದ ಪ್ರಯಾಣಿಸಬಹುದು. ಪಾಲಿಸಿದಾರ ಇಚ್ಛಿಸಿದಲ್ಲಿ, ತಾನು ಪ್ರವಾಸಕ್ಕೆ ತೆರಳುವಷ್ಟೇ ದಿನಗಳ ಅವಧಿಯವರೆಗೆ ವಿಮೆ ಮಾಡಿಸಬಹುದಾಗಿದೆ. ಕನಿಷ್ಠ ಒಂದು ದಿನದ ಅವಧಿಗೂ ವಿಮೆ ಮಾಡಿಸುವ ಸೌಲಭ್ಯ ಲಭ್ಯವಿದೆ.

ಸಾಹಸ ಕ್ರೀಡೆ: ಚಾರಣ ಮತ್ತಿತರ ಸಾಹಸ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಜರುಗುವ ಅವಘಡಗಳಿಗೂ ರೋಡ್‌ ಟ್ರಿಪ್‌ ವಿಮೆ ಪರಿಹಾರ ಒದಗಿಸಲಿದೆ. ಆದರೆ, ವಿಮೆ ಇಂತಿಷ್ಟು ವ್ಯಾಪ್ತಿಯ ಪ್ರದೇಶದಲ್ಲಿ ಮಾತ್ರ ಕಾರ್ಯಾಚರಿಸುವಂತಿದ್ದರೆ ಅದನ್ನು ಗ್ರಾಹಕ ಗಮನಿಸಬೇಕಾಗುತ್ತದೆ. ಟ್ರಿಪ್‌ಗೆ ತೆರಳುವ ಮುನ್ನ ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು, ತುರ್ತು ಪರಿಹಾರ ಕಿಟ್‌, ವಿಮೆ ಕಂಪನಿಯೊಂದಿಗೆ ಸಂಪರ್ಕವಿಟ್ಟುಕೊಳ್ಳುವುದನ್ನು ಮರೆಯಬೇಡಿ. ಹ್ಯಾಪಿ ಜರ್ನಿ….

ಮಾರ್ಗ ಮಧ್ಯ ಸಹಾಯಕರು: ಜಾಲಿರೈಡ್‌ನ‌ಲ್ಲಿ ನಿಮ್ಮ ವಾಹನ ಕೆಟ್ಟು ನಿಂತರೆ ಭಯಪಡಬೇಕಿಲ್ಲ. ದೇಶಾದ್ಯಂತ 7000 ಸ್ಥಳಗಳಲ್ಲಿ 27×7 ನಂತೆ ಕಾರ್ಯ ನಿರ್ವಹಿಸಲು ರಸ್ತೆ ಮಾರ್ಗ ಸಹಾಯಕರು ಲಭ್ಯವಿರುತ್ತಾರೆ. ಬಜಾಜ್‌ ಫಿನ್‌ಸರ್ವ್‌, ಭಾರತಿ ಐಎಕ್ಸ್‌ಎ, ಇಪ್ಕೊ ಟೋಕಿಯೊ ಎಚ್‌ಡಿಎಫ್ಸಿ ಎರ್ಗೊ ಟ್ರಾವೆಲ್‌ ಇನ್ಷೊರನ್ಸ್‌ಗಳಲ್ಲಿ ಕೆಲವು.

50 ಪೈಸೆಯ ರೈಲ್ವೇ ಇನ್ಷೊರೆನ್ಸ್‌: ಇಂದಿನ ಕಾಲದಲ್ಲಿ ಪೈಸೆಗೆ ಏನೂ ಸಿಕ್ಕುವುದಿಲ್ಲ. ಅದು ತನ್ನ ಬೆಲೆ ಕಳೆದುಕೊಂಡಿದೆ ಎಂಬ ಮಾತನ್ನು ನೀವು ಕೇಳಿರಬಹುದು. ಒಂದು ವೇಳೆ ಯಾರಾದರೂ “50 ಪೈಸೆಗೆ ಏನು ಬರುತ್ತೆ?’ ಎಂದು ಕೇಳಿದರೆ “ರೈಲ್ವೇಸ್‌ನ 10 ಲಕ್ಷ ಮೌಲ್ಯದ ವಿಮೆ ಬರುತ್ತೆ’ ಎನ್ನಬಹುದು. ಭಾರತೀಯ ರೈಲ್ವೇಸ್‌ ತನ್ನ ಪ್ರಯಾಣಿಕರಿಗೆ 10 ಲಕ್ಷ ರೂ. ಮೊತ್ತದ ವಿಮಾ ಸುರಕ್ಷೆಯನ್ನು ದಯಪಾಲಿಸುತ್ತಿದೆ. ಪ್ರಯಾಣಿಕ ಕೊಡಬೇಕಾಗಿರುವುದು 50 ಪೈಸೆ ಮಾತ್ರ!

ಐಆರ್‌ಸಿಟಿಸಿ ಜಾಲತಾಣ ಅಥವಾ ಮೊಬೈಲ್‌ ಆ್ಯಪ್‌ಗ್ಳ ಮೂಲಕ ಟಿಕೆಟ್‌ ಬುಕ್‌ ಮಾಡಿದವರಿಗೆ ಮಾತ್ರ ಈ ವಿಮಾ ಸೌಲಭ್ಯವಿದೆ. ಈ ಪಾಲಿಸಿ, ರೈಲು ಅಪಘಾತದಿಂದ ಉಂಟಾದ ಶಾಶ್ವತ ಅಂಗವೈಕಲ್ಯ(10 ಲಕ್ಷ), ಭಾಗಶಃ ಅಂಗವೈಕಲ್ಯ(7.5 ಲಕ್ಷ), ಆಸ್ಪತ್ರೆ ಖರ್ಚು(2 ಲಕ್ಷ), ಮೃತ್ಯು (10 ಲಕ್ಷ) ಇವಿಷ್ಟಕ್ಕೂ ಪರಿಹಾರ ಒದಗಿಸಲಿದೆ. ರೈಲ್ವೇ ಟಿಕೆಟ್‌ ಬುಕ್‌ ಮಾಡುವಾಗ “ಇನ್ಷೊರೆನ್ಸ್‌’ ಆಯ್ಕೆಯನ್ನು ಪ್ರಯಾಣಿಕ ಟಿಕ್‌ ಮಾಡಲು ಮರೆಯಬಾರದು.

ಕೆಎಸ್ಸಾರ್ಟಿಸಿ 1 ರೂ. ವಿಮೆ: ರಾಜ್ಯ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಕ ಕೊಳ್ಳುವ ಟಿಕೆಟ್‌, 1 ರೂ. ವಿಮೆಯ ಮೊತ್ತವನ್ನೂ ಒಳಗೊಂಡಿರುತ್ತದೆ. ಅಪಘಾತ ಮತ್ತಿತರ ಅವಘಡ ಜರುಗಿದ ಸಂದರ್ಭದಲ್ಲಿ ಪ್ರಯಾಣಿಕರಿಗೆ ವಿಮಾ ಸುರಕ್ಷೆಯನ್ನು ಒದಗಿಸಲಾಗುತ್ತದೆ. ಮೃತ್ಯು ಸಂಭವಿಸಿದರೆ ನ್ಯಾಯಾಲಯ ಘೋಷಿಸುವ ಪರಿಹಾರ ಮಾತ್ರವಲ್ಲದೆ, ಹೆಚ್ಚುವರಿಯಾಗಿ 3 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಗಾಯಾಳುಗಳಿಗೆ ಅಸ್ಪತ್ರೆ ಖರ್ಚು ಮತ್ತು ನ್ಯಾಯಾಲಯ ವಿಧಿಸುವ ಪರಿಹಾರವನ್ನು ಸಂಸ್ಥೆ ಭರಿಸಲಿದೆ.

* ನಿರಂಜನ್‌

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.