ಗುರಿ ಮುಟ್ಟಿಸುವ ಏಕಾಗ್ರತೆಯ ದೋಣಿ

Team Udayavani, Dec 14, 2019, 6:06 AM IST

guri-mutti

ಒಮ್ಮೆ ದ್ರೋಣಾಚಾರ್ಯರು ಧನುರ್ವಿದ್ಯೆ ಹೇಳಿಕೊಡುತ್ತಿದ್ದರು. ಮರದ ಮೇಲೆ ಕುಳಿತಿದ್ದ ಭಾಸ ಪಕ್ಷಿಯನ್ನು (ಹದ್ದು) ತೋರಿಸಿ, “ನಾ ಹೇಳಿದ ಕೂಡಲೇ ಬಾಣ ಬಿಟ್ಟು, ಅದರ ತಲೆಯನ್ನು ತುಂಡರಿಸಬೇಕು’ ಎಂದು ಶಿಷ್ಯರಿಗೆ ಸೂಚಿಸಿದರು. ಮೊದಲು ಯುಧಿಷ್ಠಿರನ ಸರದಿ. ಬಿಲ್ಲನ್ನು ಹೆದೆಯೇರಿಸಿ ನಿಂತನು. ಆಗ ದ್ರೋಣರು, “ಮರದ ತುದಿಯ­ಲ್ಲಿರುವ ಪಕ್ಷಿಯನ್ನು ನೋಡುತ್ತಿದ್ದೀಯ­ಲ್ಲವೆ?’ ಎಂದು ಕೇಳಿದರು. “ನೋಡು­ತ್ತಿದ್ದೇನೆ, ಗುರುಗಳೇ’ ಎಂದನಾತ. ಮರುಕ್ಷಣದಲ್ಲಿಯೇ ದ್ರೋಣರ ಪ್ರಶ್ನೆ, “ಈ ವೃಕ್ಷವನ್ನೂ ನನ್ನನ್ನೂ ನೋಡುತ್ತಿರುವೆಯಲ್ಲವೆ?’. ಅದಕ್ಕೆ ಯುಧಿಷ್ಠಿರ, “ಈ ಮರವನ್ನೂ, ತಮ್ಮನ್ನೂ, ನನ್ನ ಸಹೋದರರನ್ನೂ, ಭಾಸಪಕ್ಷಿಯನ್ನೂ ನೋಡುತ್ತಿದ್ದೇನೆ’ ಎಂದನು.

ದ್ರೋಣರಿಗೆ ಕೋಪ ಉಕ್ಕಿ, ಯುದಿಷ್ಠಿರನನ್ನು ಪಕ್ಕದಲ್ಲಿ ನಿಲ್ಲಲು ಸೂಚಿಸಿದರು. ಆ ಬಳಿಕ ದುರ್ಯೋಧನ ಮೊದಲಾದವರ ಸರದಿ. “ಎಲ್ಲವನ್ನೂ ನೋಡುತ್ತಿದ್ದೇನೆ’ ಎಂಬುದೇ ಪ್ರತಿಯೊಬ್ಬರ ಉತ್ತರ! ಭೀಮಾದಿಗಳ ಉತ್ತರವೂ ಅದೇ ಆಗಿತ್ತು. ಆಮೇಲೆ ಅರ್ಜುನನ ಸರದಿ. ದ್ರೋಣರ ಅದೇ ಪ್ರಶ್ನೆಗೆ ಮಧ್ಯಮ ಪಾಂಡವ ಹೀಗೆ ಹೇಳಿದ: “ನಾನು ಭಾಸಪಕ್ಷಿಯನ್ನು ಮಾತ್ರ ನೋಡುತ್ತಿದ್ದೇನೆ. ಮರವಾಗಲಿ, ತಾವಾಗಲಿ, ನನಗೆ ಕಾಣುತ್ತಿಲ್ಲ’! ಆಗ ದ್ರೋಣರ ಪ್ರಶ್ನೆ, “ನೀನು ಪಕ್ಷಿಯನ್ನು ನೋಡುತ್ತಿರುವೆ ತಾನೆ?’. “ಪಕ್ಷಿಯ ತಲೆಯನ್ನು ಮಾತ್ರ ಕಾಣುತ್ತಿದ್ದೇನೆ.

ಪಕ್ಷಿಯ ಶರೀರವನ್ನಲ್ಲ (ಶಿರಃ ಪಶ್ಯಾಮಿ ಭಾಸಸ್ಯ, ನ ಗಾತ್ರಮ್‌)’ ಎಂದ, ಅರ್ಜುನ. ದ್ರೋಣರಿಗೆ ರೋಮಾಂಚನ­­ವಾಯಿತು… “ಬಿಡು ಬಾಣ’ ಎಂದರು. ಕ್ಷಣಾರ್ಧದಲ್ಲೇ ಪಕ್ಷಿಯ ತಲೆ, ನೆಲಕ್ಕುರುಳಿತು. ದ್ರೋಣರಿಗೆ ಪರಮಾನಂದ­ವಾಯಿತು. ಮುಂದೆ ಅರ್ಜುನನು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುತ್ತಲೇ ಹೋದ.ಯಾವುದೇ ಕೆಲಸವನ್ನು ಚೆನ್ನಾಗಿ ಮಾಡಲೂ ಏಕಾಗ್ರತೆ ಬೇಕು. ಗುರಿಯತ್ತಲೇ ಮನಸ್ಸಿರಬೇಕು. ಮನಸ್ಸು ಅತ್ತಿತ್ತ ಹರಿಯುತ್ತಿದ್ದರೆ, ಏಕಾಗ್ರತೆ ಸಾಧ್ಯವಾಗದು. ಕೊನೆಯ ಮಾತು: ತನ್ನಪಾಡಿಗಿದ್ದ ಒಂದು ಪಕ್ಷಿಯನ್ನು ಕೊಲ್ಲಿಸಿಬಿಟ್ಟರಲ್ಲಾ, ಎಂದು ಕೊರಗಬೇಡಿ. ಶಿಲ್ಪಿಯೊಬ್ಬನಿಂದ ಮಾಡಿಸಲಾಗಿದ್ದ ಕೃತ್ರಿಮ ಪಕ್ಷಿ ಅದು!

* ಡಾ|| ಕೆ.ಎಸ್‌. ಕಣ್ಣನ್‌, ಅಧ್ಯಾತ್ಮ ಚಿಂತಕರು, ಅಧ್ಯಾತ್ಮ ಯೋಗ ವಿಜ್ಞಾನ ಮಂದಿರಂ

ಟಾಪ್ ನ್ಯೂಸ್

1-aaa

Pen drive case; ಇಂದೇ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಮುಂದೆ ಶರಣು?

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

canada

Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

jairam ramesh

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqewq

RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ

1-aaa

Pen drive case; ಇಂದೇ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಮುಂದೆ ಶರಣು?

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.