ಇದು ಲಡಾಖಿ ಕನ್ನಡ!

2400 ಕಿ.ಮೀ. ದೂರಕ್ಕೆ ಭಾಷೆ ಜಿಗಿದ ಕತೆ

Team Udayavani, Dec 28, 2019, 6:12 AM IST

idu-ladaki

ಕರ್ನಾಟಕವು ಬೌದ್ಧರಿಗೆ ಆಸರೆ ನೀಡಿದ್ದಕ್ಕೆ ಮತ್ತು ಹೆಚ್ಚಾಗಿ ಕನ್ನಡಿಗ ಪ್ರವಾಸಿಗರು ಬರುವುದನ್ನು ಕಂಡು, ಲಡಾಖಿಗಳು ಕನ್ನಡವನ್ನು ಬಳಸಿ, ಕೃತಜ್ಞತೆ ತೋರುತ್ತಾರೆ…

ದೇಶದ ನೆತ್ತಿಯಲ್ಲಿರುವ ಲಡಾಖ್‌ಗೂ, ನಮ್ಮ ಕರ್ನಾಟಕಕ್ಕೂ ಏನಿಲ್ಲವೆಂದರೂ, 2400 ಕಿ.ಮೀ.ಗಳ ಅಂತರ. ಲಡಾಖ್‌ ಅನ್ನು ಮುಟ್ಟುವ ಹೊತ್ತಿಗೆ, ಕನ್ನಡಿಗ ಪ್ರವಾಸಿಗರು ಹತ್ತಾರು ರಾಜ್ಯಗಳನ್ನು ದಾಟುತ್ತಾರೆ. ಸುಮಾರು 50ಕ್ಕೂ ಅಧಿಕ ಭಾಷಾ ಸಂಸ್ಕೃತಿಗಳನ್ನು ದಾಟಿ, ಲಡಾಖ್‌ ಅನ್ನು ಮುಟ್ಟುತ್ತಾರೆ. ಅಚ್ಚರಿಯೆಂದರೆ, ಟಿಬೆಟಿಯನ್‌ ಮತ್ತು ಲಡಾಖಿ ಭಾಷೆ ಹೊಂದಿರುವ ಲಡಾಖ್‌ನಲ್ಲಿ ಕನ್ನಡದ ಕಂಪೂ ಹಬ್ಬಿದೆ. “ನಾನು ಕನ್ನಡಿಗ’ ಎಂದರೆ, “ನಮಸ್ತೇ ಬನ್ನಿ…’ ಎಂದು ಲಡಾಖಿ, ಅಚ್ಚಕನ್ನಡದಲ್ಲಿ ಸ್ವಾಗತಿಸುತ್ತಾನೆ!

ಹೌದು, ಲಡಾಖ್‌ ನಮ್ಮಿಂದ ಎಷ್ಟೇ ದೂರವಿದ್ದರೂ, ಅಲ್ಲೊಂದು ಪುಟ್ಟ ಕನ್ನಡ ಲೋಕವುಂಟು. ಅಲ್ಲಿ ಆಯಾ ಊರಿನ ಹೆಸರಿನಿಂದ ಕರೆಯಲ್ಪಡುವ ಅನೇಕ ಮಾನೆಸ್ಟರಿಗಳಿವೆ. ಡಿಸ್ಕಿತ್‌ ಮಾನೆಸ್ಟರಿ ಪ್ರವೇಶ ದ್ವಾರದಲ್ಲಿ, ಪ್ರವೇಶ ಟಿಕೆಟ್‌ ಪಡೆಯುವಾಗ, ಟಿಕೆಟ್‌ ನೀಡುತ್ತಿದ್ದ ಬೌದ್ಧನೊಬ್ಬ, “ನಮಸ್ಕಾರ… ನಿಮ್ಮದು ಎಷ್ಟು ಬೈಕುಗಳುಂಟು? ಎಷ್ಟು ಟಿಕೆಟ್‌ ಬೇಕು?’ ಎಂದು ಕೇಳಿದಾಗ, ನಮಗೆ ಅಚ್ಚರಿಯಾಗಿತ್ತು. ಕಣ್ಣರಳಿಸಿ, “ಓಹ್‌! ನಿಮಗೆ ಕನ್ನಡ ಬರುತ್ತಾ?’ ಎಂದು ಕೇಳಿದ್ದೆವು. ಅವರು ನಮ್ಮ ಬೈಕ್‌ನ “ಕೆ.ಎ. ರಿಜಿಸ್ಟರ್‌’ ನಂಬರ್‌ ಗಮನಿಸಿ, ಕನ್ನಡದಲ್ಲಿ ಮಾತಾಡಿದ್ದರು.

ಆ ಬೌದ್ಧ ವ್ಯಕ್ತಿ ಕೆಲ ಕಾಲ ಬೈಲುಕುಪ್ಪೆಯಲ್ಲಿ ಇದ್ದರಂತೆ. ಕರ್ನಾಟಕದವರು ಯಾರೇ ಸಿಕ್ಕರೂ, ಕನ್ನಡದಲ್ಲಿ ಮಾತಾಡುವುದು ಇವರಿಗೆ ಖುಷಿಯ ಸಂಗತಿ. ಬುದ್ಧನ ಎತ್ತರದ ಬೃಹತ್‌ ಪ್ರತಿಮೆ, ಮಾನೆಸ್ಟರಿ ನೋಡಿ, ಶಾಪಿಂಗ್‌ಗೆ ಅಂತ ಒಂದು ಚಿಕ್ಕ ಅಂಗಡಿಗೆ ಹೋದೆವು. ಅಲ್ಲೂ ಕನ್ನಡದ ಫ‌ಲಕಗಳು! ಮುಂಡಗೋಡು, ಬೈಲುಕುಪ್ಪೆ ವಾಸಿಗಳು, ಪ್ರವಾಸದ ಋತುವಿನಲ್ಲಿ ಅಲ್ಲಿಗೆ ಹೋಗಿ, ವ್ಯಾಪಾರದಲ್ಲಿ ತೊಡಗುತ್ತಾರೆ. ಹಾಗೆ ಹೋಗುವಾಗ, ತಮ್ಮೊಂದಿಗೆ ಕನ್ನಡವನ್ನೂ ಕೊಂಡೊಯ್ಯುತ್ತಾರೆ. ಅಲ್ಲಿರುವ ಮಾನೆಸ್ಟರಿಯ ದೊಡ್ಡ ಫ‌ಲಕದಲ್ಲೂ ಕನ್ನಡದ ಸಾಲುಗಳಿವೆ.

ಬೈಲುಕುಪ್ಪೆ, ಮುಂಡಗೋಡಿನಲ್ಲಿ ಟಿಬೆಟಿಯನ್‌ ನಿರಾಶ್ರಿತರ ಬೃಹತ್‌ ಕ್ಯಾಂಪ್‌ಗ್ಳಿವೆ. ಕರ್ನಾಟಕವು ಬೌದ್ಧರಿಗೆ ಆಸರೆ ನೀಡಿದ್ದಕ್ಕೆ ಮತ್ತು ಹೆಚ್ಚಾಗಿ ಕನ್ನಡಿಗ ಪ್ರವಾಸಿಗರು ಬರುವುದನ್ನು ಕಂಡು, ಲಡಾಖಿಗಳು ಕನ್ನಡವನ್ನು ಬಳಸಿ, ಕೃತಜ್ಞತೆ ತೋರುತ್ತಾರೆ. ಇನ್ನು ರಜೆಯ ದಿನಗಳಲ್ಲಿ ಮೈಸೂರಿನಲ್ಲಿ ಓದುವ ಬೌದ್ಧ ವಿದ್ಯಾರ್ಥಿಗಳು, ಫ‌ುಟ್ಬಾಲ್‌ ತಂಡವನ್ನು ಕಟ್ಟಿಕೊಂಡು, ಇಲ್ಲಿಗೆ ಆಡಲು ಬರುತ್ತಾರೆ. ಪ್ರತಿವರ್ಷವೂ ಲಡಾಖಿಗಳ ಮೇಲೆ ಇವರು ಪಂದ್ಯ ಕಟ್ಟುತ್ತಾರೆ. ಈ ಹೊತ್ತಲ್ಲೂ ಸಹಜವಾಗಿ ಭಾಷಾ ವಿನಿಮಯವಾಗುತ್ತದೆ.

* ಪುಟ್ಟ ಹೊನ್ನೇಗೌಡ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.