ಮಾರುಕಟ್ಟೆ ಧಾರಣೆಯಲ್ಲಿ ಯಥಾಸ್ಥಿತಿ

Team Udayavani, Jan 12, 2020, 4:37 AM IST

11

ಕಳೆದ ವಾರ ಅಲ್ಪ ಏರಿಕೆ ಕಂಡಿದ್ದ ಹೊಸ ಅಡಿಕೆ ಬೆಲೆಯಲ್ಲಿ ಈ ವಾರ ಅದೇ ಧಾರಣೆ ಮುಂದುವರೆದಿದೆೆ. ಆದರೆ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸೂಚನೆ ಸಿಕ್ಕಿದೆ. ಹೊಸ ಅಡಿಕೆ 250 ರೂ.ಗೆ ಹಾಗೂ ಹಳೆಯ ಅಡಿಕೆ (ಸಿಂಗಲ್‌ ಚೋಲ್‌) 260-298 ರೂ. ತನಕ ಖರೀದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಪಠೊರಾ 200-210 ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 90-110 ರೂ., ಕರಿಕೋಟು 80- 100 ರೂ. ಧಾರಣೆ ಪಡೆಯುತ್ತಿವೆ.

ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸಿನ ಧಾರಣೆಯಲ್ಲಿ ಯಾವುದೇ ಏರಿಕೆ ಕಾಣದೆ ಯಥಾಸ್ಥಿತಿ ಇದೆ. ಕೆ.ಜಿ.ಗೆ 320 ರೂ. ತನಕ ಖರೀದಿಯಾಗಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರೆದಿದೆ.

ರಬ್ಬರ್‌ ಅಲ್ಪ ಇಳಿಕೆ
ರಬ್ಬರ್‌ ಧಾರಣೆಯಲ್ಲಿ ಈ ವಾರ ಅಲ್ಪ ಏರಿಕೆಯಾಗಿದೆ. ಕಳೆದ ವಾರ 130 ರೂ.ನಿಂದ 128 ರೂ.ಗೆ ಇಳಿಎಕಯಾಗಿತ್ತು. ಈ ವಾರ ಮತ್ತೆ 130 ರೂ.ಗೆ ಖರೀದಿಯಾಗಿದೆ. ಕರಾವಳಿ ಭಾಗದ ಬೆಳೆಗಾರರ ಪ್ರಮುಖ ವಾಣಿಜ್ಯ ಬೆಳೆ ಎಣಿಸಿಕೊಂಡಿರುವ ರಬ್ಬರ್‌ ಕೆಲವು ಸಮಯದ ಹಿಂದೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ರಬ್ಬರ್‌ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಆದರೆ ಕೆಲವು ವಾರಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿತ್ತು. ಆರ್‌ಎಸ್‌ಎಸ್‌ 4- 130 ರೂ., ಆರ್‌ಎಸ್‌ಎಸ್‌ 5 – 123 ರೂ.ಗೆ ಖರೀದಿಯಾಗಿದೆ.

ಕೊಕ್ಕೋ ಯಥಾಸ್ಥಿತಿ
ಈ ವಾರ ಕೊಕ್ಕೋ ದರವು 50ರಿಂದ 53 ರೂಪಾಯಿಯ ತನಕ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಅದು ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಹಲವಾರು ಕಡೆಗಳಲ್ಲಿ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ.

ತೆಂಗು ಧಾರಣೆ
ಈ ವಾರ ತೆಂಗಿನಕಾಯಿ ಧಾರಣೆಯಲ್ಲಿ ಯಥಾಸ್ಥಿತಿ ಇದೆ. ತೆಂಗಿನಕಾಯಿ ಸಣ್ಣ ಗಾತ್ರ (ಕೆ. ಜಿ.ಗೆ) 20-24 ರೂ., ತೆಂಗಿನಕಾಯಿ ಮಧ್ಯಮ ಗಾತ್ರ (ಕೆ.ಜಿ.ಗೆ) 25-29 ರೂ., ತೆಂಗಿನಕಾಯಿ ದೊಡ್ಡ ಗಾತ್ರ (ಕೆ.ಜಿ.ಗೆ) 30-33 ರೂ.ಗೆ ಖರೀದಿಯಾಗಿದೆ.

– ರಾಜೇಶ್‌

ಟಾಪ್ ನ್ಯೂಸ್

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.