ನೈಜತೆಯ ಆಯಾಮದಲ್ಲಿ ಸೀಲಿಂಗ್‌ 3ಡಿ ಆರ್ಟ್‌


Team Udayavani, Jan 25, 2020, 4:28 AM IST

jan-14

ದೂರದ ಆಕಾಶ ಮನೆಯಂಗಳದಲ್ಲಿ ಬಂದು ಅಲ್ಲೊಂದು ಧೂಮಕೇತು ಅಪ್ಪಳಿಸುವ ಭರ. ಆ ನಡುವೆ ದುಂಡನೆಯ ಚಂದಿರನ ಬೆಳಕಿನ ಸ್ಪರ್ಶ. ಮನೆಯೆಲ್ಲ ಬೆಳಗಿದಂತೆ ನಕ್ಷತ್ರ ಪುಂಜಗಳು ಮನೆಯ ವೈಭವವನ್ನು ಹೆಚ್ಚಿಸಿದ್ದು, ಮನಸ್ಸಿಗೇನೋ ಹೊಸತನ.

ಮನಸ್ಸು ಸದಾ ಚೆನ್ನಾಗಿರಬೇಕಾದರೆ ಮನೆಯ ವಾತಾವರಣ ಹಸನಾಗಿರಬೇಕಂತೆ. ಮನೆಮಂದಿ ನಗುಮೊಗದಿಂದಿದ್ದರೂ ನಮ್ಮ ಆಸರೆಯ ಸೂರಾಗಿರುವ ಮನೆ ಮಾತ್ರ ಹಳೇ ಸೂರು ಬದಲಾಗದಿದ್ದರೆ ನಾವಿನ್ನು ಟ್ರೆಂಡಿಗೆ ಅಪ್‌ಡೇಟ್‌ ಆಗಿಲ್ಲವೆಂದರ್ಥ. ಇಂದು ಮನೆಯ ವಾತಾವರಣ ಚೆನ್ನಾಗಿಸಲು ಹಲವಾರು ತಂತ್ರಜ್ಞಾನಗಳು ಹುಟ್ಟಿಕೊಂಡಿವೆ. ವಾಲ್‌ ಡಿಸೈನ್‌, ಫ್ಲೋರ್‌ ಡೆಕೊರೇಶನ್‌ನಂತೆ ಸೀಲಿಂಗ್‌ 3ಡಿ ಆರ್ಟ್‌ ಮನೆಯ ವಿನ್ಯಾಸಕ್ಕೆ ವಿಭಿನ್ನ ಆಯಾಮ ನೀಡುವ ನೆಲೆಯಲ್ಲಿ ಉಪಯುಕ್ತವಾಗಿದೆ.

ಏನಿದು 3ಡಿ ಸೀಲಿಂಗ್‌ ಡಿಸೈನ್‌
ಒಂದು ಕಲ್ಪನಾತೀತ ಲೋಕವನ್ನು ನಮ್ಮ ಮನೆಯಲ್ಲಿಯೇ ಸೃಷ್ಟಿಸಲು ಸಾಧ್ಯವಿರುವಿಕೆಯನ್ನು 3ಡಿ ಸೀಲಿಂಗ್‌ ಡಿಸೈನ್‌ ಎನ್ನಬಹುದು. ಬಹಳ ಹಿಂದೆ ಮನೆಯ ಇಂಟೀರಿಯರ್‌ ಅನ್ನು ಭಿತ್ತಿ ಚಿತ್ರದ ಮಾದರಿಯಲ್ಲಿಯೋ ಇಲ್ಲವೇ ಮುಕ್ತ ಗಾಳಿ ಬೆಳಕು ಬರುವಂತೆ ವಿನ್ಯಾಸ ಮಾಡುತ್ತಿದ್ದರಂತೆ. ಆದರೆ ಈ ರೀತಿಯ ಮನೆಗಳು ಇಂದು ಸಿನೆಮಾಗಳಲ್ಲಿ ಮಾತ್ರ ಕಾಣಸಿಗುತ್ತವೆ. ಇಂತಹ ಹಳೆಯ ವಿನ್ಯಾಸವನ್ನೇ ಮಾದರಿಯಾಗಿಟ್ಟುಕೊಂಡು ಸೀಲಿಂಗ್‌ 3ಡಿ ಆರ್ಟ್‌ ಬಂದಿದೆ.

ಇದನ್ನು ವಿಶೇಷ ತಂತ್ರಜ್ಞಾನಗಳನ್ನು ಬಳಸಿ ಸಿದ್ಧಪಡಿಸಲಾಗುತ್ತದೆ. ಬಳಿಕ ಸ್ಟಿಕ್ಕರ್‌ ರೂಪದಲ್ಲಿದ್ದು, ನಾವೆನಿಸಿದ ಸ್ಥಳಕ್ಕೆ ಸುಲಭವಾಗಿ ಡಿಸೈನ್‌ ಮಾಡಲೂ ಇದು ಉಪಯುಕ್ತವಾಗಿದೆ. ಸಾಮಾನ್ಯವಾಗಿ ಸಿಂಥೆಟಿಕ್‌ ಪೇಪರ್‌, ಪಲಿವಿನಿಯೋಲ್‌ ಕ್ಲೋರೈಡ್‌, ಪಾಲಿಸ್ಟಾರ್‌ ಮತ್ತು ಕಾನ್ವಾಸ್‌ ಮಾದರಿಯನ್ನು ಬಳಸಲಾಗುತ್ತಿದ್ದು, 3ಡಿ ಟಚಿಂಗ್‌ ನೀಡುವುದರಿಂದ ನಿಮ್ಮ ಕಣ್ಮನ ಸೂರೆಗೊಳಿಸುವಲ್ಲಿ ಯಾವುದೇ ಅನುಮಾನವಿಲ್ಲ.

ಏನೆಲ್ಲ ಡಿಸೈನ್‌?
ಆಧುನಿಕ ಯುಗದಲ್ಲಿ ನಮಗೆ ಸರಿಯಾಗಿ ಪ್ರಕೃತಿಯ ಅಂದವನ್ನು ಸವಿಯುವ ಭಾಗ್ಯವಿಲ್ಲವೆನ್ನಬಹುದು. ಹಾಗಿದ್ದರೂ ಬೇಸರಗೊಳ್ಳದೆ ಮನೆಯಲ್ಲಿಯೇ ಕೃತಕ ಪ್ರಕೃತಿಯನ್ನು ಸೃಷ್ಟಿಸಲು ಇರುವ ಅವಕಾಶವನ್ನು ಬಳಸಿಕೊಳ್ಳಬೇಕು. ಸಾಮಾನ್ಯವಾಗಿ ಸಮುದ್ರದ ಅಲೆಗಳು, ಜಲಪಾತ, ಎತ್ತರದ ಬಿಲ್ಡಿಂಗ್‌ ಪಕ್ಕದಲ್ಲಿ ಪುಟ್ಟ ಆಕಾಶ, ಬೆಳದಿಂಗಳ ಬೆಳಕಿನಲ್ಲಿ ಶಶಿ ಮತ್ತು ನಕ್ಷತ್ರ ಪುಂಜಗಳು, ಸಾಗರದ ಅಲೆಗಳು, ಜಲಚರಜೀವಿಗಳ ಚಲನವಲನಗಳು, ಮಂಜಿನ ಹನಿಗಳು, ಹಿಮ ರಾಶಿ ಹೀಗೆ ಸಾಲು ಸಾಲು ಪ್ರಕೃತಿಯ ಡಿಸೈನ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕವಿದೆ ಎನ್ನಬಹುದು.

ಎಲ್ಲೆಲ್ಲಿ ಬಳಸಬಹುದು ?
ಇದಕ್ಕೆ ಒಂದು ನಿರ್ದಿಷ್ಟವಾದ ಕಲರ್‌ ಎಂದು ತಿಳಿಸಲು ಸಾಧ್ಯವಿಲ್ಲದಿದ್ದರೂ ಮನಸ್ಸಿಗೆ ಹಿಡಿಸಿದ ಬಣ್ಣವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಆದರೂ ಬಹುತೇಕರು ನೀಲಿ, ಕೇಸರಿ, ಆಕಾಶಬಣ್ಣ, ಹಸುರು, ನೇರಳೆ, ಕೆಂಪು ಮತ್ತು ಕಪ್ಪು ಬಣ್ಣಕ್ಕೆ ಆದ್ಯತೆ ನೀಡುತ್ತಿದ್ದು, ಇಂದಿನ ಟ್ರೆಂಡ್‌ ಎನ್ನಬಹುದು. ನಿಮಗಿಷ್ಟವೆನಿಸಿದ ಜಾಗಕ್ಕೆ ಇದನ್ನು ಅಂಚಿಸಬಹುದು ಆದರೆ ಕೆಲವು ಅಗತ್ಯ ಸೌಕರ್ಯಗಳು ಬೇಕಾಗುತ್ತದೆ. ಕಾರಿಡಾರ್‌, ಎಂಟ್ರೆನ್ಸ್‌, ಹಾಲ್‌ ಮತ್ತು ಬಾತ್‌ ರೂಮ್‌ನಲ್ಲಿ ನಿಮ್ಮ ಮೂಡ್‌ಗೆ ಅನುಗುಣವಾಗಿ ಸ್ಟಿಕ್ಕರ್‌ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

– ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.