ಮಹಿಳಾ ಟಿ20 ಫೈನಲ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ
ಮಹಿಳಾ ಮಣಿಗಳೇ ಆಲ್ ದಿ ಬೆಸ್ಟ್… ಮಹಿಳಾ ದಿನಕ್ಕೆ ದೇಶಕ್ಕೆ ನೀಡಿ ವಿಶ್ವಕಪ್ ಗಿಫ್ಟ್
Team Udayavani, Mar 8, 2020, 12:02 PM IST
ಮೆಲ್ಬರ್ನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಭಾರತಕ್ಕೆ ಇದು ಮೊದಲ ಫೈನಲ್, ಜತೆಗೆ ಅಜೇಯ ಓಟ. ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯವನ್ನೇ ಉರುಳಿಸಿದ ಪರಾಕ್ರಮ. ಇದೇ ಸ್ಫೂರ್ತಿಯಲ್ಲಿ ಫೈನಲ್ನಲ್ಲೂ ಆಸ್ಟ್ರೇಲಿಯವನ್ನು ಸೋಲಿಸಬಲ್ಲೆ ಎಂಬ ವಿಶ್ವಾಸ ಮನೆಮಾಡಿಕೊಂಡಿದ್ದರೆ ಅದು ಸಹಜ. ಆದರೆ ಫೈನಲ್ ಎನ್ನುವುದು ‘ಡಿಫರೆಂಟ್ ಬಾಲ್’ ಗೇಮ್. ಹೀಗಾಗಿ ಒತ್ತಡ ಭಾರತದ ಮೇಲಷ್ಟೇ ಅಲ್ಲ, ಆಸೀಸ್ ಮೇಲೂ ಇದೆ.
1983ರ ಪ್ರುಡೆನ್ಶಿಯಲ್ ವಿಶ್ವಕಪ್ನಲ್ಲಿ ಕಪಿಲ್ ಪಡೆ ತನ್ನ ಆರಂಭಿಕ ಪಂದ್ಯದಲ್ಲೇ ಹಿಂದಿನೆರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸನ್ನು ಮಣಿಸಿ, ಬಳಿಕ ಫೈನಲ್ನಲ್ಲೂ ಕೆರಿಬಿಯನ್ನರನ್ನು ಕೆಡವಿ ಇತಿಹಾಸ ನಿರ್ಮಿಸಿದ್ದನ್ನು ಈ ಸಂದರ್ಭದಲ್ಲೊಮ್ಮೆ ನೆನಪಿಸಿಕೊಂಡರೆ ವಿಶ್ವಕಪ್ ಮಹಿಮೆ ಏನೆಂಬುದು ಅರಿವಾಗುತ್ತದೆ.
ತಂಡಗಳು:
ಭಾರತೀಯ ಮಹಿಳಾ ತಂಡ: ಶೆಫಾಲಿ ಶರ್ಮಾ, ಸ್ಮೃತಿ ಮಂಧನ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಮಿಮಾ ರೋಡ್ರಿಗಸ್, ಹರ್ಮನ್ ಪ್ರೀತ್ ಕೌರ್ (ನಾಯಕಿ), ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ಶಿಖಾ ಪಾಂಡೆ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್.
ಆಸೀಸ್ ಮಹಿಳಾ ತಂಡ:
ಬೆತ್ ಮೂನಿ, ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಮೆಗ್ ಲ್ಯಾನಿಂಗ್ (ನಾಯಕಿ), ಆ್ಯಶ್ಲಿ ಗಾರ್ಡನರ್, ರಶೆಲ್ ಹೇನ್ಸ್, ಜೆಸ್ ಜೊನಾಸೆನ್, ನಿಕೋಲಾ ಕ್ಯಾರಿ, ಡೆಲಿಸ್ಸಾ ಕಿಮ್ಮಿನ್ಸ್, ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೊಲಿನಾಕ್ಸ್, ಮೆಗಾನ್ ಶಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಶ್ವ ಅಥ್ಲೆಟಿಕ್ಸ್ ದಿನ;ದೇಶದ ಕ್ರೀಡಾಪಟುಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಗೌರವ
RCB ವಿರುದ್ಧ ನಾನು ಆಡಿದ್ದರೆ…: ಬಿಸಿಸಿಐ ನಿರ್ಧಾರದ ವಿರುದ್ಧ ಪಂತ್ ಅಸಮಾಧಾನ
PBKS vs RR: ಎರಡನೇ ತವರಲ್ಲಿ ಪ್ಲೇ ಆಫ್ಗೆ ಕಾದಿದೆ ರಾಜಸ್ಥಾನ್ ರಾಯಲ್ಸ್
Head Coach: ಫ್ಲೆಮಿಂಗ್ ಮೇಲೆ ಬಿಸಿಸಿಐ ಒಲವು?
T20 World Cup: ಭಾರತ ಉಪಾಂತ್ಯಕ್ಕೇರಿದರೆ ಗಯಾನದಲ್ಲಿ ಪಂದ್ಯ