ಅಸಡ್ಡೆ ಮಾಡಿ ಅಪಾಯ ಮೈಮೇಲೆ ಎಳೆದುಕೊಂಡರು!


Team Udayavani, Mar 24, 2020, 5:05 AM IST

ಅಸಡ್ಡೆ ಮಾಡಿ ಅಪಾಯ ಮೈಮೇಲೆ ಎಳೆದುಕೊಂಡರು!

ಆರಂಭಿಕ ಸಮಯದಲ್ಲಿ ಕೋವಿಡ್-19 ಅಪಾಯವನ್ನು ಹಗುರವಾಗಿ ಪರಿಗಣಿಸಿದ ಇಟಲಿ, ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾ ಈಗ ಪಶ್ಚಾತ್ತಾಪ ಪಡುತ್ತಿವೆ. ಮುಖ್ಯವಾಗಿ ಲಾಕ್‌ ಡೌನ್‌ಗಳ‌ನ್ನು ಹಗುರವಾಗಿ ಪರಿಗಣಿಸಿದ ಸಾರ್ವಜನಿಕರು, ಹಾಗೂ ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅಲ್ಲಗಳೆಯುತ್ತಲೇ ಬಂದ ರಾಜಕಾರಣಿಗಳಿಂದಾಗಿ ಆ ರಾಷ್ಟ್ರಗಳೀಗ ತತ್ತರಿಸಿಹೋಗಿವೆ. ಭಾರತೀಯರು ಈಗ
ಈ ರಾಷ್ಟ್ರಗಳ ಜನ ತೋರಿಸಿದ್ದಂಥದ್ದೇ ಅಸಡ್ಡೆಯನ್ನು ತೋರಿಸಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ವೈದ್ಯರಲ್ಲೂ ಇರಲಿಲ್ಲ ಸಹಮತ
ಗಮನಾರ್ಹ ಸಂಗತಿಯೆಂದರೆ ಇಟಲಿಯ ವೈದ್ಯರಲ್ಲೂ ಕೋವಿಡ್-19 ಹರಡುವಿಕೆ, ಅಪಾಯದ ಬಗ್ಗೆ ಒಮ್ಮತವಿರಲಿಲ್ಲ. ಇದು ಸೀಸನಲ್‌ ಫ್ಲೂ ಇದ್ದಂತೆ, ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ, ವಾತಾವರಣದ ಬದಲಾವಣೆಯೊಂದಿಗೆ ಕೋವಿಡ್-19 ಕೂಡ ಹೊರಟುಹೋಗುತ್ತದೆ ಎಂದು ಒಂದು ಗುಂಪು ವಾದಿಸುತ್ತಲೇ ಬಂದಿತು. ದುರಂತವೆಂದರೆ, ಚೀನಾದ ಉದಾಹರಣೆಯನ್ನು ಕೊಡುತ್ತಾ ಇನ್ನೊಂದು ಗುಂಪು ‘ಈಗಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಅಪಾಯ ನಿಶ್ಚಿತ’ ಎಂದೇ ಎಚ್ಚರಿಸುತ್ತಾ ಬಂದಿತಾದರೂ ಅವರ ಮಾತನ್ನು ಮೊದಲು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ ಎನ್ನುತ್ತಾರೆ ಇಟಲಿಯ ಹಿರಿಯ ಪತ್ರಕರ್ತ ನಿಹಾಯ್ಲ… ಕಾಂಟಿ.

ತತ್ತರಿಸಿದ ಜರ್ಮನಿ
ಜಗತ್ತಿನಲ್ಲೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಹೊಂದಿರುವ ಹೆಗ್ಗಳಿಕೆ ಗಳಿಸಿದೆ ಜರ್ಮನಿ. ಆದರೆ ಕೋವಿಡ್-19 ವೈರಸ್‌, ಜರ್ಮನ್‌ ಆರೋಗ್ಯ ವಲಯದ ದೌರ್ಬಲ್ಯಗಳನ್ನು ಬೆತ್ತಲಾಗಿಸುತ್ತಿದೆ. 26500ಕ್ಕೂ ಅಧಿಕ ಜನ ಸೋಂಕಿತರಾಗಿದ್ದರೆ, 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅನೇಕ ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿವೆ. ದುರಂತವೆಂದರೆ, ಇಟಲಿಯಂತೆ ಜರ್ಮನಿಯಲ್ಲೂ ಕೂಡ ಫೆಬ್ರವರಿ ಅಂತ್ಯದವರೆಗೂ ಕೋವಿಡ್-19 ವೈರಸ್‌ ಕುರಿತು ಸಾರ್ವಜನಿಕರು ನಿರ್ವಿಘ್ನವಾಗಿಯೇ ಇದ್ದರು. ಸಂಜೆ-ಪಬಳಲ್ಲಿ, ರೆಸ್ಟೋರೆಂಟ್ ಳಲ್ಲಿ ಸಾರ್ವಜನಿಕರಿಗೆ ಹೋಗಲು ಅವಕಾಶ ನೀಡಲಾಗಿತ್ತು. ಜರ್ಮನಿಯಲ್ಲಿ ಮದ್ಯಪ್ರಿಯರ ಸಂಖ್ಯೆ ಅಧಿಕವಿರುವ ಕಾರಣ, ಪಬಳಂತೂ ಫೆಬ್ರವರಿ ಅಂತ್ಯದವರೆಗೂ ತೆರೆದೇ ಇದ್ದವು. ಈಗ ಖುದ್ದು ಜರ್ಮನಿಯ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರೇ ಸ್ವ-ದಿಗ್ಬಂಧನಕ್ಕೆ ಹೋಗಿದ್ದಾರೆ. ಇತ್ತೀಚೆಗೆ ಅವರಿಗೆ ನ್ಯುಮೋನಿಯಾಕ್ಕೆ ಚಿಕಿತ್ಸೆ ನೀಡಿದ್ದ ವೈದ್ಯನಿಗೆ ಕೋವಿಡ್-19 ಇರುವುದು ದೃಢಪಟ್ಟಿರುವುದರಿಂದ, ಮುನ್ನೆಚ್ಚರಿಕೆಯಾಗಿ ಮರ್ಕೆಲ್‌ ಈ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಕಾಣಿಸಿಕೊಳ್ಳುವುದನ್ನೂ ಜರ್ಮನಿ ಈಗ ನಿಷೇಧಿಸಿದೆಯಾದರೂ, ಇಷ್ಟು ದಿನದಲ್ಲಿ ರೋಗ ತೀವ್ರವಾಗಿ ಹರಡಿಬಿಟ್ಟಿರಬಹುದು ಎಂದು
ವೈದ್ಯರು ಹೇಳುತ್ತಿದ್ದಾರೆ.

ಮಾಧ್ಯಮಗಳು ಸೃಷ್ಟಿಸಿದ ಗೊಂದಲ
ಇಟಲಿಯ ಟಿವಿ ಚಾನೆಲ್‌ಗ‌ಳಲ್ಲಿ, ಕೋವಿಡ್-19 ಅಪಾಯದ ಬಗ್ಗೆ ಆರಂಭದಿಂದ ಒಂದು ಸ್ಪಷ್ಟ ನಿಲುವು ವ್ಯಕ್ತವಾಗಲೇ ಇಲ್ಲ. ಸಾಮಾಜಿಕ ಶಾಸ್ತ್ರಜ್ಞ ವಿಕ್ಕರ್‌ ಟರಾಕೆಟ್‌ ಈ ವಿಷಯದಲ್ಲಿ ಹೇಳುವುದು ಹೀಗೆ- ‘ಜನವರಿ-ಫೆಬ್ರವರಿ ತಿಂಗಳಲ್ಲಿ ಪ್ಯಾನಲ್‌ ಚರ್ಚೆಗಳಲ್ಲಿ ವೈದ್ಯರು, ಸಾಂಕ್ರಾಮಿಕ ತಡೆ ಪರಿಣಿತರಿಗಿಂತ ಹೆಚ್ಚಾಗಿ, ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆಯೇ ಚರ್ಚೆಗಳನ್ನು ನಡೆಸಲಾಯಿತು. ಅಪಾಯ ಅಧಿಕವಿದೆ ಎಂದು ಪ್ರತಿಪಕ್ಷ ವಾದಿಸಿದರೆ, ಅದನ್ನು ಅಲ್ಲಗಳೆ ಯುವುದಕ್ಕೇ ಆರಂಭಿಕ ದಿನಗಳಲ್ಲಿ ಆಡಳಿತ ಪಕ್ಷ ಸಮಯ ವ್ಯಯಿಸಿತು. ಆರೋಗ್ಯ ಪರಿಣತರೂ ಪರಿಸ್ಥಿತಿ ಅರಿಯುವಲ್ಲಿ ಎಡವಿದರು. ಅದರಲ್ಲೂ ಆಡಳಿತಾರೂಢ ಪಕ್ಷವಂತೂ ಬಹಳ ಬೇಜವಾಬ್ದಾರಿ ಮೆರೆಯಿತು.

ಇಟಲಿ ನಾಯಕರ ಎಡವಟ್ಟು
ಫೆಬ್ರವರಿ 27ರಂದು, ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷದ ನಾಯಕ ನಿಕೋಲಾ ಜಿಂಗಾರೆಟ್ಟಿ, ಮಿಲಾನೆ ಭಾಷಣ ಮಾಡಲು ತೆರಳಿದರು. ಅದೂ ಮಿಲಾನ್ನಲ್ಲೇ ಅತಿಹೆಚ್ಚು ಸೋಂಕಿತ ಲೊಂಬಾರ್ಡಿ ಪ್ರದೇಶಕ್ಕೆ! ”ನಾವು ಭಯ ಪಡುವ ಅಗತ್ಯವೇ ಇಲ್ಲ. ನಮ್ಮ ಎಂದಿನ ಅಭ್ಯಾಸವನ್ನು ಮುಂದುವರಿಸೋಣ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಹೇಳಿದರು! ವಿದ್ಯಾರ್ಥಿಗಳ ಕೈ ಕುಲುಕಿದರು. ಈ ಬಗ್ಗೆ ಮಿಲಾನ್ನ ಸ್ಯಾಮ್‌ ರಫೇಲ್‌ ವಿವಿಯ ಸಾಮಾಜಿಕ ಮನಶಾಸ್ತ್ರಜ್ಞ ಗಿಸ್ಸೆಪ್ಪಿ ಪಂಟ್ಯಾಲೋ ಹೇಳುವುದು ಹೀಗೆ: ‘ನಮ್ಮ ಆರ್ಥಿಕತೆ ಕೋವಿಡ್-19ಗಿಂತಲೂ ಬಲಿಷ್ಠವಾಗಿದೆ ಎಂದರು ಜಿಂಗಾರೆಟ್ಟಿ. ಹೊರಗೆ ಅಡ್ಡಾಡಿದರೂ ಅಡ್ಡಿಯಿಲ್ಲ ಎಂದೂ ತಮಾಷೆ ಮಾಡಿದರು. ಈ ಭಾಷಣ ಮಾಡಿದ 9 ದಿನಗಳಲ್ಲೇ, ಖುದ್ದು ನಿಕೋಲಾ ಜಿಂಗಾರೆಟ್ಟಿಗೆ ಸೋಂಕು ತಗಲಿರುವುದು ಖಚಿತಪಟ್ಟಿದೆ! ಈ ವೇಳೆಯಲ್ಲಿ ಅವರು ಎಷ್ಟು ಜನರಿಗೆ ರೋಗ ಹರಡಿರಬಹುದೋ ತಿಳಿಯದು” ಎನ್ನುತ್ತಾರೆ.

ರೆಸ್ಟಾರೆಂಟುಗಳ ಬೇಜವಾಬ್ದಾರಿ
ರೋಮ್ನ ಟೂಟ್ಸ್ ಎನ್ನುವ ಪ್ರಖ್ಯಾತ ರೆಸ್ಟೋರಾಂಟ್‌ ನಮ್ಮಲ್ಲಿ ‘ಕಾರ್ಬೊನಾವೈರಸ್‌’ ಖಾದ್ಯ ಸವಿಯಿರಿ ಎಂಬ ತರಲೆ ಶಿರೋನಾಮೆಯ ಜಾಹೀರಾತು ಪ್ರಕಟಿಸಿತು. ಅದೂ ಮಾರ್ಚ್‌ 1ರಂದು! ಅಚ್ಚರಿಯ ವಿಷಯವೆಂದರೆ ಪರಿಸ್ಥಿತಿ ತಮ್ಮ ದೇಶದಲ್ಲಿ ವಿಷಮಿಸಿದೆ ಎನ್ನುವ ಅರಿವಿದ್ದರೂ ಜನರು ರೆಸ್ಟೋರೆಂಟ್‌ ಬುಕ್‌ ಮಾಡಿದರು. ಕೊನೆಗೆ ಸ್ಥಳೀಯಾಡಳಿತ ಟೂಟ್‌ಸೆ ಎಚ್ಚರಿಕೆ ಕೊಟ್ಟು, ಬುಕಿಂಗ್‌ ಕ್ಯಾನ್ಸಲ್‌ ಮಾಡಿಸಿತು. ಅಂದು ಬುಕಿಂಗ್‌ ಮಾಡಿದ್ದ 150 ಜನರಲ್ಲಿ ಇಂದು 8ಜನರಿಗೆ ಸೋಂಕು ದೃಢಪಟ್ಟಿದೆ!

ಹಾದಿ ತಪ್ಪಿಸುವ ಜೋಕುಗಳು
ವೈರಸ್‌ ಹರಡುವಿಕೆ ಹೆಚ್ಚುತ್ತಿದ್ದಂತೆಯೇ ಅಮೆರಿಕದಲ್ಲಿ ಆ ಕುರಿತು ಜೋಕು, ವಿಡಿಯೋ ಮತ್ತು ಮೀಮಳು ಅಧಿಕವಾದವಂತೆ. “ಸಾವಿನ ಆತಂಕದಿಂದ ತಪ್ಪಿಸಿಕೊಳ್ಳಲು ನಾವು ಅದರ ಬಗ್ಗೆ ತಮಾಷೆ ಮಾಡುವುದು ಸಹಜ. ಆದರೆ ಇದರಿಂದ ಒಂದು ಅಪಾಯವೂ ಇದೆ. ಜೋಕುಗಳು ಆತಂಕವನ್ನು ತಗ್ಗಿಸುತ್ತವೆ. ನಿರಾತಂಕ ಮನಸ್ಸು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತದೆ. ನಮ್ಮ ದೇಶದಲ್ಲೂ ಇದೇ ಆಯಿತು” ಎನ್ನುತ್ತಾರೆ, ಅಮೆರಿಕದ ಮನಶಾಸ್ತ್ರಜ್ಞೆ ಎಲೆನಾ ಸ್ಯಾಂಟರೆಲ್ಲಿ.

ಕಂಗಾಲಾದ ಕಾಂಗರೂ ನಾಡು
ಆಸ್ಟ್ರೇಲಿಯಾದಲ್ಲೂ ಸೋಂಕಿತರ ಸಂಖ್ಯೆಯೀಗ 1700 ದಾಟಿದೆ. ಸಮಸ್ಯೆಯೆಂದರೆ, ಅಲ್ಲಿ ಸಾವಿನ ಸಂಖ್ಯೆ ಕಡಿಮೆ ಇರುವುದರಿಂದ ಜನರಲ್ಲಿ ಈಗಲೂ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತಿಲ್ಲ. ಇದಕ್ಕೆ ಉದಾಹರಣೆಯೆಂದರೆ, 200ಕ್ಕೂ ಹೆಚ್ಚು ಜನ ಒಂದೆಡೆ ಸೇರಬಾರದು ಎಂದು 15 ದಿನದ ಹಿಂದೆಯೇ ಆಸ್ಟ್ರೇಲಿಯನ್‌ ಸರ್ಕಾರ ಆದೇಶಿಸಿದ್ದರೂ, ಜನರು ಕೇಳದಿರುವುದು. ಸರ್ಕಾರದ ಮಾತನ್ನು ಉಲ್ಲಂ ಸಿ ಜನರು ಶುಕ್ರವಾರ ಮತ್ತು ಶನಿವಾರ ನೂರಾರು ಸಂಖ್ಯೆಯಲ್ಲಿ ಬೀಚಳಿಗೆ ತೆರಳಿ ಸಂಭ್ರಮಿಸಿದ್ದಾರೆ. ಸಿಡ್ನಿಯ ಬಾಂಡಿ ಬೀಚ್ನಲ್ಲಿ ಏಳುನೂರಕ್ಕೂ ಅಧಿಕ ಜನ ನಿರ್ವಿಘ್ನವಾಗಿ ಮಿಂದೆದ್ದದ್ದನ್ನು ನೋಡಿ ಸಿಡ್ನಿ ಆಡಳಿತ ಸಿಡಿದೆದ್ದಿದೆ. ಭಾನುವಾರದಿಂದ ಬೀಚ್ಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ. ಅಲ್ಲದೇ ಬೀಚ್ಗೆ ತೆರಳಿದ್ದವರನ್ನು ಹುಡುಕಿ ಆರೋಗ್ಯ ತಪಾಸಣೆ ಮಾಡಲಾರಂಭಿಸಿದೆ.

ಬ್ರಿಟನ್‌ ಯುವಕರ ಬೇಜವಾಬ್ದಾರಿ
ಬ್ರಿಟನ್‌ ಅಂತೂ ಕೊರೊನಾ ಅಪಾಯದ ಸಂದರ್ಭದಲ್ಲಿ ತನ್ನ ದೇಶದ ಯುವಜನರ ವರ್ತನೆ ಕಂಡು ರೋಸಿ ಹೋಗಿದೆ . ಅಲ್ಲಿನ ವಿಶ್ವವಿದ್ಯಾಲಯಗಳು, ಕಾಲೇಜುಗಳನ್ನು ಮುಚ್ಚಿದ ನಂತರದಿಂದ ಯುವಜನತೆ ಈಗಲೂ ನಗರಗಳಲ್ಲಿ ಕೆಲವೆಡೆ ಓಪನ್‌ ಇರುವ ಪಬಳಿಗೆ ತೆರಳುತ್ತಿದೆ. ಪಾನಮತ್ತರಾಗಿ, ಕೈಕೈ ಹಿಡಿತು ರಸ್ತೆಯ ತುಂಬೆಲ್ಲಾ ಅಡ್ಡಾಡುವ ತನ್ನ ಯುವಜನರ ಬೇಜವಾಬ್ದಾರಿ ವರ್ತನೆಯನ್ನು ಗಾರ್ಡಿಯನ್‌, ಡೇಲಿಮೇಲ್‌, ಬಿಬಿಸಿಥ ಮಾಧ್ಯಮಗಳು ಛೀಮಾರಿಹಾಕುತ್ತಿವೆ. ಕಳೆದ ಗುರುವಾರ ಲಂಡನ್ನ ಪ್ರಖ್ಯಾತ ಪಬ್ಬೊಂದು ‘ಕೊರೊನಾ ಆರ್‌ ನೊ ಕರೊನಾ ಪಾರ್ಟಿ ಮಸ್ಟ… ಹ್ಯಾಪನ್‌’ ಎಂದು ಕರೆಕೊಟ್ಟಿತ್ತು!

ಟಾಪ್ ನ್ಯೂಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.