ಕೋವಿಡ್ 19 ಎಫೆಕ್ಟ್: ಕಲ್ಲಂಗಡಿ, ಹೂವು-ದ್ರಾಕ್ಷಿ ಹಾಳು

Team Udayavani, Mar 28, 2020, 12:35 PM IST

ಕೋವಿಡ್ 19 ಎಫೆಕ್ಟ್: ಕಲ್ಲಂಗಡಿ, ಹೂವು-ದ್ರಾಕ್ಷಿ ಹಾಳು

ಕಲಬುರಗಿ: ಕಳೆದ ವರ್ಷ ನೀರಿಲ್ಲದಿದ್ದಕ್ಕೆ ಕಂಗಾಲಾಗಿದ್ದ ರೈತ ಈ ವರ್ಷ ಇದ್ದ ನೀರಿನ ವ್ಯವಸ್ಥೆ ನಡುವೆ ಬೆಳೆಯಲಾದ ದ್ರಾಕ್ಷಿ, ಹೂವು ಹಾಗೂ ಕಲ್ಲಂಗಡಿ ಸೇರಿ ಇತರ ತೋಟಗಾರಿಕಾ ಬೆಳೆಗಳಿಗೆ ಮಾರುಕಟ್ಟೆ ಇರದ ಹಿನ್ನೆಲೆಯಲ್ಲಿ ರಸ್ತೆಗೆ ಚೆಲ್ಲುವಂತಾಗಿದೆ. ಇದಕ್ಕೆ ಕಾರಣ ಕೋವಿಡ್ 19 ವಾಗಿದೆ.

ಹೂವು ಬಂದ ನಂತರ ವಾರದೊಳಗೆ ಕಡಿದು ಮಾರುಕಟ್ಟೆಗೆ ತಲುಪಿಸಬೇಕು. ಅದೇ ರೀತಿ ಕಲ್ಲಂಗಡಿ ಹಾಗೂ ದ್ರಾಕ್ಷಿ ಸಹ ಕಟಾವು ಮಾಡಿ ವಾರದೊಳಗೆ ಮಾರುಕಟ್ಟೆಗೆ ತಲುಪಿಸಬೇಕು. ಆದರೆ ಕೋವಿಡ್ 19 ದಿಂದ ಪ್ರಮುಖವಾಗಿ ಈ ಮೂರು ಬೆಳೆಗಳ ಮಾರುಕಟ್ಟೆಯೇ ಬಂದಾದಂತಾಗಿದೆ.

ಕಲ್ಲಂಗಡಿ ಹಣ್ಣು ತೆಗೆದುಕೊಂಡು ಹೋಗುವಂತೆ ಹೇಳಿದರೂ ಮಧ್ಯವರ್ತಿಗಳು ಬರುತ್ತಿಲ್ಲ. ವರ್ಷ ಪ್ರತಿ 8ರಿಂದ 12 ರೂ. ಕೆಜಿಗೆ ಮಾರಾಟವಾಗುತ್ತಿದ್ದ ಕಲ್ಲಂಗಡಿ ಈಗ ಕೇವಲ 3 ರೂ. ಕೆಜಿ ಮಾರಾಟವಾಗುತ್ತಿದೆ. ಅದೂ ಸಹ ವ್ಯಾಪಾರಿಗಳಿಗೆ ಮನವಿ ಮಾಡಿದಾಗ ತೆಗೆದುಕೊಂಡು ಹೋಗುತ್ತಿದ್ದಾರೆ. 3 ರೂ.ಗೆ ಮಾರಾಟವಾದರೆ ಒಂದು ಎಕರೆಗೆ ಖರ್ಚು ಮಾಡಲಾಗಿರುವ ಒಂದು ಲಕ್ಷ ರೂ ಬಾರದೇ ಉಲ್ಟಾ ಕೇವಲ 50 ಸಾವಿರ ರೂ. ಬರುವುದೇ ದೊಡ್ಡ ಸಾಹಸ ಎನ್ನುವಂತಿದೆ.

ಅದೇ ರೀತಿ ಹೂವು ಮಾರುಕಟ್ಟೆಯೂ ಸಂಪೂರ್ಣ ಬಿದ್ದಿದೆ. ಬೆಳೆ ಬಂದ ವಾರದೊಳಗೆ ಕಡಿದು ಮಾರಾಟವಾಗಬೇಕಿದ್ದ ಹೂವಿನ ಬಳ್ಳಿಯನ್ನೇ ಕಡಿದು ರಸ್ತೆಗೆ ಚೆಲ್ಲಲಾಗುತ್ತಿದೆ. ಇನ್ನೂ ದ್ರಾಕ್ಷಿ ವರ್ಷಪೂರ್ತಿ ಮಗುವಿನ ಹಾಗೆ ಸಂರಕ್ಷಿಸಿಕೊಂಡು ಬರಲಾಗುತ್ತದೆ. ದ್ರಾಕ್ಷಿ ಈಗ ಎಲ್ಲೆಡೆ ಕಟಾವು ಆಗುತ್ತಿದೆ. ಆದರೆ ಕಟಾವು ಮಾಡಿದ ದ್ರಾಕ್ಷಿ ಮಾರುಕಟ್ಟೆಗೆ ಪೂರೈಕೆ ಮಾಡಲಾಗುತ್ತಿಲ್ಲ. ಮಧ್ಯವರ್ತಿಗಳ್ಯಾರು ಖರೀದಿಮಾಡಲು ಮುಂದೆ ಬರ್ತಾ ಇಲ್ಲ. ಒಣಗಿಸಿ ಒಣ ದ್ರಾಕ್ಷಿ ಮಾಡಬೇಕೆಂದರೆ ಸೂಕ್ತ ಶೆಡ್‌ ಇಲ್ಲ. ಹೀಗಾಗಿ ದ್ರಾಕ್ಷಿ ರೈತನಿಗೆ ಹುಳಿಯಾಗಿ ಮಾರ್ಪಪಟ್ಟಿದೆ. ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲು ಸರ್ಕಾರ ಮನಸ್ಸು ಮಾಡಬೇಕೆಂಬುದು ರೈತರ ಆಗ್ರಹವಾಗಿದೆ.

ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭತ್ತ, ದ್ರಾಕ್ಷಿ, ಜೋಳ, ಬಾಳೆ ಸೇರಿದಂತೆ ನಾನಾ ಬೆಳೆಗಳು ಕಟಾವಿಗೆ ಬಂದಿದ್ದು, ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರೈತರ ಬೆಳೆಗಳ ಕಟಾವು ಸೇರಿದಂತೆ ಅವುಗಳನ್ನು ಮಾರುಕಟ್ಟೆಗೆ ತಲುಪಿಸುವ ನಿಟ್ಟಿನಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. –ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ಹೊರ ಬೋರ್‌ವೆಲ್‌ ಹಾಕಿಸಿ ಇದೇ ಮೊದಲ ಬಾರಿಗೆ ಒಂದು ಎಕರೆಯಲ್ಲಿ ಬೀಜ, ಗೊಬ್ಬರ ಹಾಗೂ ಹನಿ ನೀರಾವರಿಗೆಂದು ಲಕ್ಷ ರೂ ಅಧಿಕ ಖರ್ಚು ಮಾಡಲಾಗಿದೆ. ಆದರೆ ಕೋವಿಡ್ 19 ದಿಂದ ಮಾರುಕಟ್ಟೆಯೇ ಇಲ್ಲದಿರುವುದರಿಂದ ಕಲ್ಲಂಗಡಿ ಬೀದಿಗೆ ಚೆಲ್ಲುವಂತಾಗಿದೆ. ಕೆಜಿಗೆ 10-12ರೂ. ಮಾರಾಟವಾಗುತ್ತಿದ್ದ ಕಲ್ಲಂಗಡಿ ಕೆಜಿಗೆ 3 ರೂ. ಸಹ ಕೇಳ್ತಾ ಇಲ್ಲ. ಹೀಗಾಗಿ ಮಾಡಲಾದ ಸಾಲಕ್ಕೆ ಯಾರು ದಿಕ್ಕು ಎನ್ನುವಂತಾಗಿದೆ.  –ಶಿವಾನಂದ ಜೋಗದ, ಭೈರಾಮಡಗಿ ರೈತ

-ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಆಗ್ರ ಸ್ಥಾನ

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

accident

Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು

Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ

Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Belthangady ವಿದ್ಯುತ್‌ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

Belthangady ವಿದ್ಯುತ್‌ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

Snake; ನೀರಿಲ್ಲದ ಬಾವಿಗೆ ಬಿದ್ದ ನಾಗರಹಾವಿನ ರಕ್ಷಣೆ

Snake; ನೀರಿಲ್ಲದ ಬಾವಿಗೆ ಬಿದ್ದ ನಾಗರಹಾವಿನ ರಕ್ಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಆಗ್ರ ಸ್ಥಾನ

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

accident

Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು

Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ

Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.