ಮಂಗಳೂರು ಧರ್ಮ ಪ್ರಾಂತ ಜೂ.13ರಿಂದ ಪ್ರಾರ್ಥನೆಗಳು ಪುನರಾರಂಭ

Team Udayavani, Jun 11, 2020, 7:45 AM IST

ಮಂಗಳೂರು ಧರ್ಮ ಪ್ರಾಂತ ಜೂ.13ರಿಂದ ಪ್ರಾರ್ಥನೆಗಳು ಪುನರಾರಂಭ

ಮಂಗಳೂರು: ಚರ್ಚ್‌ಗಳಲ್ಲಿ ಪ್ರಾರ್ಥನೆಗಳನ್ನು ಪುನರಾರಂಭಿಸಲು ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಧರ್ಮ ಪ್ರಾಂತದ ಚರ್ಚ್‌ಗಳಲ್ಲಿ ಜೂ. 13ರಿಂದ ಪ್ರಾರ್ಥನೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಈ ಕುರಿತಂತೆ ಮಾರ್ಗ ಸೂಚಿಗಳನ್ನು ರಚಿಸಲಾಗಿದೆ.

ಮುಂಜಾಗೃತ ಕ್ರಮವಾಗಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕರ್ನಾಟಕ ಪ್ರಾದೇಶಿಕ ಕೆಥೋಲಿಕ್‌ ಬಿಷಪರ ಪರಿಷತ್ತು ಕೆಲವೊಂದು ನಿರ್ದೇಶನಗಳನ್ನು ರೂಪೀಕರಿಸಿದೆ ಎಂದು ಬಿಷಪ್‌ ರೈ|ರೆ|ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ತಿಳಿಸಿದ್ದಾರೆ.

ಚರ್ಚ್‌ಗಳಲ್ಲಿ ಬಲಿ ಪೂಜೆಗಳನ್ನು ಪುನರಾರಂಭಿಸಬಹುದಾಗಿದ್ದು, ಈ ಸಂದರ್ಭ ಭಕ್ತರ‌ ಸುರಕ್ಷತೆಗೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚ್‌ನ ಧರ್ಮ ಗುರುಗಳು ಜವಾಬ್ದಾರಿ ವಹಿಸಿಕೊಳ್ಳಬೇಕು.

ಮಾರ್ಗಸೂಚಿಗಳು
– 10 ವರ್ಷ ದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರು ಚರ್ಚ್‌/ಆರಾಧನಾಲಯಗಳಲ್ಲಿ ಭಾಗ
ವಹಿಸದಿರುವುದು ಉತ್ತಮ.
– ಕೊರೊನಾ ಸೋಂಕು ಕಾರಣದಿಂದ ಕಂಟೈನ್ಮೆಂಟ್‌ ಪ್ರದೇಶದ ಜನರು ಪಾಲ್ಗೊಳ್ಳುವಂತಿಲ್ಲ.
-ಸಂಕೀರ್ಣ ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಹೋಂಕ್ವಾರಂಟೈನ್‌ನಲ್ಲಿ ಇರುವವರು ಭಾಗವಹಿಸುವಂತಿಲ್ಲ.

ಚರ್ಚ್‌ ತೆರೆಯಲು ಮಾರ್ಗಸೂಚಿ
– ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಸ್ಯಾನಿಟೈಸೇಶನ್‌ ಬಗ್ಗೆ ಮಾಹಿತಿ ನೀಡಲು ಸ್ವಯಂ ಸೇವಕರ ನೇಮಕ ಮಾಡುವುದು.
– ಚರ್ಚ್‌ನ ಒಳಗೆ ಮತ್ತು ಭಕ್ತರು ಸ್ಪರ್ಶಿಸಬಹುದಾದ ಎಲ್ಲ ತಾಣಗಳನ್ನು ಕಾಲ ಕಾಲಕ್ಕೆ ಸ್ಯಾನಿಟೈಸೇಶನ್‌ ಮಾಡಿ ಸ್ವತ್ಛತೆಯನ್ನು ಕಾಪಾಡಬೇಕು.
– ಸಾಮಾಜಿಕ ಅಂತರ (ಕನಿಷ್ಠ 6 ಅಡಿ) ಮತ್ತಿತರ ಸುರಕ್ಷತೆ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸುವುದು.
– ಎಲ್ಲ ಭಕ್ತರು ಒಂದೇ ದ್ವಾರದ ಮೂಲಕ ಒಳಗೆ ಪ್ರವೇಶಿಸುವುದು.

ಬಲಿ ಪೂಜೆಗೆ ಮಾರ್ಗ ಸೂಚಿಗಳು
– ಬಲಿ ಪೂಜೆಗಳನ್ನು 45 ನಿಮಿಷದೊಳಗೆ ಮುಕ್ತಾಯಗೊಳಿಸಬೇಕು.
– ಬಲಿ ಪೂಜೆ ಆರಂಭಿಸುವ ಮೊದಲು ಧರ್ಮಗುರುಗಳು ಕೈಗಳನ್ನು ತೊಳೆದು ಸ್ವತ್ಛಗೊಳಿಸುವುದು.
– ಪರಮ ಪ್ರಸಾದವನ್ನು ಕೈಯಲ್ಲಿ ಮಾತ್ರ ಸ್ವೀಕರಿಸುವುದು.

ಟಾಪ್ ನ್ಯೂಸ್

A meteorite fell on farmland; Heat is coming out of the hole

Meteorite; ಕೃಷಿಭೂಮಿಗೆ ಬಿದ್ದ ಉಲ್ಕಾಶಿಲೆ; ಗುಂಡಿಯಿಂದ ಹೊರಬರುತ್ತಿದೆ ಶಾಖ

ambarish

Rebel star ಅಂಬರೀಶ್‌ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್

Shortage of players: Aussies coach, head of selection committee fielded against Namibia

AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಮಳೆಗಾಲದ ಸಂಭಾವ್ಯ ಸವಾಲು ಎದುರಿಸಲು ಮೆಸ್ಕಾಂ ಇಲಾಖೆ ಸಜ್ಜು

ಮಳೆಗಾಲದ ಸಂಭಾವ್ಯ ಸವಾಲು ಎದುರಿಸಲು ಮೆಸ್ಕಾಂ ಇಲಾಖೆ ಸಜ್ಜು

26

Mangaluru: ಕಾಲೇಜು ವಿದ್ಯಾರ್ಥಿನಿ ನಾಪತ್ತೆ

24

Surathkal: ಗುತ್ತಿಗೆ ಕಾರ್ಮಿಕ ಬಿದ್ದು ಸಾವು

23-

Mangaluru: ರೈಲು ನಿಲ್ದಾಣದ ಬಳಿ ವೈದ್ಯರ ಮೊಬೈಲ್‌ ಕಸಿದು ಪರಾರಿ 

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

A meteorite fell on farmland; Heat is coming out of the hole

Meteorite; ಕೃಷಿಭೂಮಿಗೆ ಬಿದ್ದ ಉಲ್ಕಾಶಿಲೆ; ಗುಂಡಿಯಿಂದ ಹೊರಬರುತ್ತಿದೆ ಶಾಖ

ambarish

Rebel star ಅಂಬರೀಶ್‌ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್

Shortage of players: Aussies coach, head of selection committee fielded against Namibia

AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.