ಪರ್ಫೆಕ್ಟ್ ಪ್ರೊಫೆಷನ್;‌ ಎಸ್‌ಐ ಆಗಬೇಕಿದ್ದವನು ಎಸ್‌ಡಿಎ ಆಗಿದ್ದೇನೆ!

Team Udayavani, Aug 4, 2020, 11:33 AM IST

ಪರ್ಫೆಕ್ಟ್ ಪ್ರೊಫೆಷನ್;‌ ಎಸ್‌ಐ ಆಗಬೇಕಿದ್ದವನು ಎಸ್‌ಡಿಎ ಆಗಿದ್ದೇನೆ!

ಸಾಂದರ್ಭಿಕ ಚಿತ್ರ ಬಳಸಲಾಗಿದೆ

ಚಿಕ್ಕಂದಿನಲ್ಲಿ ನನಗಿದ್ದುದು ಒಂದೇ ಆಸೆ. ಅದು, ಪೊಲೀಸ್‌ ಇನ್ಸ್ ಪೆಕ್ಟರ್‌ ಆಗಬೇಕು ಅನ್ನುವುದು. ಇಂಥದೊಂದು ಆಸೆ ಜೊತೆಯಾಗಲು ಬಾಲ್ಯದಲ್ಲಿ ನಾನು ನೋಡಿದ ಸಿನಿಮಾಗಳೇ ಕಾರಣ. ಅದರಲ್ಲೆಲ್ಲ, ಕೇಡಿಗರ ಡೆನ್‌ಗೆ ನುಗ್ಗುತ್ತಿದ್ದ ಇನ್ಸ್ ಪೆಕ್ಟರ್‌ ವೇಷದ ನಾಯಕ, ಕೇಡಿಗಳನ್ನು ಹಿಗ್ಗಾಮುಗ್ಗಾ ಚಚ್ಚುತ್ತಿದ್ದುದು, ಕೇಡಿಗಳ ಕಾರ್‌ ಅನ್ನು ಪೊಲೀಸ್‌ ಎಂಬ ನಾಮಫ‌ಲಕ ಹೊಂದಿದ್ದ ಬೈಕ್‌ ಅಥವಾ ಜೀಪ್‌ ನಲ್ಲಿ ಹಿಂಬಾಲಿಸುತ್ತಿದ್ದುದನ್ನು ನಾನು ಕಣ್ಣೆವೆ ಮಿಟುಕಿಸದೆ ನೋಡುತ್ತಿದ್ದೆ. ಭವಿಷ್ಯದಲ್ಲಿ ನಾನೂ ಇನ್ಸ್ ಪೆಕ್ಟರ್‌ ಆಗಬೇಕು, ಸಿನಿಮಾದ ಹೀರೋ ರೀತಿಯಲ್ಲೇ ಕೇಡಿಗಳನ್ನು ಮಟ್ಟ ಹಾಕಬೇಕು ಎಂದೆಲ್ಲಾ ಕನಸು ಕಂಡಿದ್ದೆ.

ಅದ್ಸರಿ. ಇನ್ಸ್ ಪೆಕ್ಟರ್‌ ಆಗುವುದು ಹೇಗೆ? ಈ ಸಂಬಂಧವಾಗಿ, ಆ ದಿನಗಳಲ್ಲಿ ನಮಗಿದ್ದ ಅಂದಾಜೇ ಬೇರೆ ಇತ್ತು. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಮುಗಿಸಿ, ಪೊಲೀಸ್‌ ಕಟಿಂಗ್‌ ಮಾಡಿಸಿಕೊಂಡು, ಚೆನ್ನಾಗಿ ಡ್ರಿಲ್‌ ಮಾಡುವುದನ್ನು ಕಲಿತು, ಪೊಲೀಸ್‌ ಇಲಾಖೆ ನಡೆಸುವ ರನ್ನಿಂಗ್‌ ರೇಸ್‌ನಲ್ಲಿ ನಾಲ್ಕು ಕಿಲೋಮೀಟರ್‌ ಓಡಿಬಿಟ್ಟರೆ, ಪೊಲೀಸ್‌ ಕೆಲಸ ಸಿಕ್ಕೇ ಸಿಗುತ್ತದೆ. 10 ವರ್ಷ ಪೊಲೀಸ್‌ ಆಗಿ ದುಡಿದರೆ, ನಂತರ ಎಎಸ್‌ಐ ಹುದ್ದೆಗೆ ಪ್ರಮೋಷನ್‌ ಪಡೆಯಬಹುದು. ಆನಂತರ ಮತ್ತೆ ಐದು ವರ್ಷ ಅದೇ ಹುದ್ದೆಯಲ್ಲಿ ಮುಂದುವರಿದು, ಆ ಸಮಯದಲ್ಲೇ ಇಲಾಖಾ ಪರೀಕ್ಷೆಗಳಲ್ಲಿ ಪಾಸ್‌ ಆಗಿಬಿಟ್ಟರೆ, ಇನ್ಸ್ ಪೆಕ್ಟರ್‌ ಹುದ್ದೆ ಸಿಕ್ಕೇ ಸಿಗುತ್ತದೆ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ಮುಂದೆ ಆಗಿದ್ದೇ ಬೇರೆ.

ನಾನೇನೋ ಡ್ರಿಲ್‌ ಮತ್ತು ರನ್ನಿಂಗ್‌ ರೇಸ್‌ನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದೆ. ಪೊಲೀಸ್‌ ನೇಮಕಾತಿಗೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಮಾಹಿತಿ ಪ್ರಕಟವಾದಾಗ, ಜಿಲ್ಲಾ ಕೇಂದ್ರಕ್ಕೂ ಹೋದೆ. ಆದರೆ, ನನ್ನ ಎತ್ತರ ನೋಡಿದ ಹಲವರು- “ಪೊಲೀಸ್‌ ಹುದ್ದೆಗೆ ಸೆಲೆಕ್ಟ್ ಆಗಬೇಕು ಅಂದರೆ, ಸ್ವಲ್ಪ ಜಾಸ್ತಿಯೇ ಉದ್ದ ಇರಬೇಕು. ನಿಮಗೆ ನಿಮ್ಮ ಹೈಟ್‌ ಕೈ ಕೊಡಬಹುದು’ ಅಂದರು. ಅಂಥದೇನೂ ಆಗಲಾರದು ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಅಷ್ಟೇ ಅಲ್ಲ, ಒಂದು ವೇಳೆ ಹೈಟ್‌ನ ವಿಷಯಕ್ಕೇ ನನಗೆ ಕಡಿಮೆ ಅಂಕಗಳು ಬಂದರೆ, ರನ್ನಿಂಗ್‌ ರೇಸ್‌ನಲ್ಲಿ ಜಾಸ್ತಿ ಅಂಕ ಪಡೆದು ಅದನ್ನು ಸರಿದೂಗಿಸಿಕೊಳ್ಳಬೇಕು ಎಂದೂ ನಿರ್ಧರಿಸಿದೆ.

ನಾವು ಅಂದುಕೊಂಡಂತೆಯೇ ಎಲ್ಲವೂ ಆಗುವುದಿಲ್ಲ ತಾನೇ? ನನ್ನ ವಿಷಯದಲ್ಲೂ ಹಾಗೇ ಆಯಿತು. ಅವತ್ತು ನನ್ನ ಎತ್ತರವೇ ನನಗೆ ಮುಳುವಾಯಿತು. ಪೊಲೀಸ್‌ ಹುದ್ದೆ ಸಿಗುವುದು ಸಾಧ್ಯವೇ ಇಲ್ಲ ಎಂದು ಅಲ್ಲಿದ್ದ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿಬಿಟ್ಟರು. ಡಿಗ್ರಿ ಮುಗಿಸಿ ಪರೀಕ್ಷೆ ಬರೆದು, ನೇರವಾಗಿ ಇನ್ಸ್ ಪೆಕ್ಟರ್‌ ಆಗಬಹುದು ಎಂದೂ ಹಲವರು ಹೇಳಿದರು. ಆದರೆ, ಇನ್ಸ್ ಪೆಕ್ಟರ್‌ ಆಗಬೇಕು ಅಂದರೂ ಹೈಟ್‌ ಇರಲೇಬೇಕು ಎಂಬ ಸಂಗತಿ ಕೂಡ ಆಗಲೇ ಅರಿವಿಗೆ ಬಂತು. ಮುಂದೆ ಮಾಡುವುದೇನು? ಹೊಟ್ಟೆಪಾಡು ನಡೆಯಲೇಬೇಕಲ್ಲವಾ? ಯಾವುದೋ ಒಂದು ನೌಕರಿ ಮಾಡಲೇಬೇಕಿತ್ತು.

ಆಗಲೇ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಕರೆದಿರುವ ಸಂಗತಿ ಕೂಡ ಗೊತ್ತಾಯಿತು. ಶ್ರದ್ಧೆಯಿಂದ ಪರೀಕ್ಷೆ ಬರೆದೆ. ಈ ಬಾರಿ ಅದೃಷ್ಟ ಕೈ ಕೊಡಲಿಲ್ಲ. ಎಸ್‌ಐ ಆಗದಿದ್ದರೆ ಏನಂತೆ, ಎಸ್‌ಡಿಎ ಆಗುವಲ್ಲಿ ಯಶಸ್ಸು ಪಡೆದೆ… ಈಗ ಯಾವುದೇ ಸಿನಿಮಾದಲ್ಲಿ ಇನ್ಸ್ ಪೆಕ್ಟರ್‌ ಪಾತ್ರಧಾರಿಯನ್ನು ನೋಡಿದರೂ ನಾನು ಕಂಡಿದ್ದ ಕನಸು ನೆನಪಾಗುತ್ತದೆ. ಅಂದುಕೊಂಡಂತೆ ಆಗಲಿಲ್ಲವಲ್ಲ ಅನ್ನಿಸಿ ಬೇಸರವೂ ಆಗುತ್ತದೆ.

ನಾಗೇಂದ್ರ ಅರಸ್‌, ಚಿತ್ರದುರ್ಗ

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.