ಬ್ಲಾಕ್‌ ಚೈನ್‌ ತಂತ್ರಜ್ಞಾನ ಬಳಸಿ: ಡಾ| ಸಂಜೀವ

Team Udayavani, Nov 6, 2020, 7:11 PM IST

ಬ್ಲಾಕ್‌ ಚೈನ್‌ ತಂತ್ರಜ್ಞಾನ ಬಳಸಿ: ಡಾ| ಸಂಜೀವ

ಕಲಬುರಗಿ: ಪ್ರಸ್ತುತ ದಿನಗಳಲ್ಲಿ ಬ್ಲಾಕ್‌ ಚೈನ್‌ ತಂತ್ರಜ್ಞಾನ ಬಳಸಿಕೊಂಡು ಪ್ರತಿಯೊಬ್ಬರು ಬ್ಯಾಂಕಿನ ಸೇವೆ ಉಪಯೋಗಿಸದೆಯೇ ತಮ್ಮ ಹಣವನ್ನು ಇನ್ನೊಬ್ಬರಿಗೆ ಸರಳವಾಗಿ ವರ್ಗಾಯಿಸಿಕೊಳ್ಳುವುದು ಹಾಗೂ ಜಮೆ ಮಾಡಿಕೊಳ್ಳುವಂತಹ ಕಾರ್ಯಗಳನ್ನು ಸುಲಲಿತವಾಗಿ ಇಂಟರ್‌ನೆಟ್‌ ಮೂಲಕ ಮಾಡಬಹುದಾಗಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಶ್ರೇಣಿ ಕೈಗಾರಿಕೆ ಮುಖ್ಯ ಕಾರ್ಯದರ್ಶಿ ಡಾ| ಸಂಜೀವ ಲಹೇಕ್‌ ಹೇಳಿದರು.

ಇಲ್ಲಿನ ಪಿ.ಡಿ.ಎ. ಇಂಜಿನಿಯರಿಂಗ್‌ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾ ವಿಭಾಗದಲ್ಲಿ ನಡೆಯುತ್ತಿರುವ ಎಐಸಿಟಿ ಅಟಲ್‌ ಪಠ್ಯ ಮತ್ತು ಕಲಿಕಾ ಅಕಾಡೆಮಿ ಪ್ರಾಯೋಜಿಸಿದ್ದ ಐದು ದಿನಗಳ ಆನ್‌ಲೈನ್‌ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸದ್ಯ ಬ್ಲಾಕ್‌ ಚೈನ್‌ ಟೆಕ್ನಾಲಜಿಯನ್ನು ಬಹಳ ಜನರು ಸದುಪಯೋಗ ಪಡೆದುಕೊಳ್ಳುತ್ತಿದ್ದು, ಇಂದಿನ ಶೈಕ್ಷಣಿಕ ಅಭ್ಯಾಸ ಕ್ರಮದಲ್ಲಿ ಈ ತಂತ್ರಜ್ಞಾನ ಅಳವಡಿಕೊಂಡು ವಿದ್ಯಾರ್ಥಿಗಳಿಗೆಪ್ರಸ್ತುತ ಜಗತ್ತಿನಲ್ಲಿ ಕಾರ್ಯನಿರ್ವಹಿಸುವ ಗುಣಮಟ್ಟ ಕೊಡಬೇಕಾಗಿದೆ. ಎಐಸಿಟಿ ಅಟಲ್‌ ಪಠ್ಯ ಮತ್ತು ಕಲಿಕಾ ಅಕಾಡೆಮಿಯು ದೇಶಾದ್ಯಂತ ಇಂಜಿನಿಯರಿಂಗ್‌ ಕಾಲೇಜಿನ ಶಿಕ್ಷಕರಿಗೆ ಉನ್ನತ ಮಟ್ಟದ ಹಾಗೂ ಪ್ರಸ್ತುತ ಜಗತ್ತಿನ ತಂತ್ರಜ್ಞಾನದ ತಿಳಿವಳಿಕೆ ನೀಡುವ ಗುರಿಯನ್ನಿಟ್ಟುಕೊಂಡು ತನ್ನ ಕಾರ್ಯ ನಿರ್ವಹಿಸುತ್ತಿದೆ, ಇದರಡಿಯಲ್ಲಿ ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಅನುಮತಿ ದೊರೆತಿದೆ. ಅಲ್ಲದೇ ಇಂಜಿನಿಯರಿಂಗ್‌ ಕಾಲೇಜಿನ ಶಿಕ್ಷರಿಗಾಗಿ ಬ್ಲಾಕ್‌ ಚೈನ್‌ ಟೆಕ್ನಾಲಜಿ ಬಗ್ಗೆ ಐದು ದಿನಗಳ ಉಪನ್ಯಾಸ ಮಾಲಿಕೆ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಸಿ. ಬಿಲಗುಂದಿ ಉಪನ್ಯಾಸ ಮಾಲಿಕೆ ಉದ್ಘಾಟಿಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸಂಸ್ಥೆ ಶ್ರಮಹಿಸುವುದಲ್ಲದೇ ಬೇಕಾಗುವ ಎಲ್ಲಾ ರೀತಿಯ ಅನೂಕೂಲತೆ ಕಲ್ಪಿಸಲಾಗುವುದು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ಎಸ್‌. ಹೆಬ್ಟಾಳ ಮಾತನಾಡಿ, ಪಿಡಿಎ ಕಾಲೇಜಿನ ಇನ್ನು ಹಲವಾರು ವಿಭಾಗಗಳಿಗೆ ಇದೇ ರೀತಿಯ ಉಪನ್ಯಾಸ ಮಾಲಿಕೆಗೆ ಅನುಮತಿ ದೊರೆತಿದೆ ಎಂದು ಹೇಳಿದರು. ಅಲ್ಲದೇ ಅಟಲ್‌ ರ್‍ಯಾಂಕಿಂಗ್‌ ನಲ್ಲಿ ಕಾಲೇಜು ತನ್ನ ಸ್ಥಾನ ಗಿಟ್ಟಿಸಿಕೊಂಡಿದ್ದನ್ನು ಸ್ಮರಿಸಿಕೊಂಡರು.

ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮತ್ತು ಉಪನ್ಯಾನ ಮಾಲಿಕೆ ಸಂಯೋಜಕಿಯಾದ ಡಾ| ಭಾರತಿ ಹರಸೂರ ಮಾತನಾಡಿದರು.ಕಾರ್ಯಕ್ರಮದ ಸಂಚಾಲಕ ಅಶೋಕ ಆರ್‌. ಪಾಟೀಲ ಅವರು ಬ್ಲಾಕ್‌ ಚೈನ್‌ ಟೆಕ್ನಾಲಜಿ ಕುರಿತು ಮಾಹಿತಿ ನೀಡಿದರು. ಸಂಚಾಲಕ ಡಾ| ನಾಗೇಶ ಸಾಲಿಮಠ ವಂದಿಸಿದರು. ಪ್ರೊ| ರಶ್ಮೀ ತಳ್ಳಳ್ಳಿ , ಎಸ್‌. ಸುಮಾ ನಿರೂಪಿಸಿದರು.

ಟಾಪ್ ನ್ಯೂಸ್

13

Accused Arrest: ಶಾಲಾ ಆವರಣದಲ್ಲಿ ಕೊಲೆ ಪ್ರಕರಣ; ಆರೋಪಿ ಬಂಧನ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವೇಶ ನಿಷೇಧ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Veerashaiva-Lingayat separate religion recognition protest back to fore: Eshwar Khandre

ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

4-chincholi

Chincholi ತಾಲೂಕಿನಾದ್ಯಂತ ಧಾರಾಕಾರ ಮಳೆ, ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

13

Accused Arrest: ಶಾಲಾ ಆವರಣದಲ್ಲಿ ಕೊಲೆ ಪ್ರಕರಣ; ಆರೋಪಿ ಬಂಧನ

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

12

Online ಗೇಮ್‌ ಚಟಕ್ಕೆ ಬಿಎಸ್‌ಸಿ ಮೊದಲ ವರ್ಷದ ವಿದ್ಯಾರ್ಥಿನಿ ಬಲಿ

11-

Yadagiri: ಬಾಲ್ಯ ವಿವಾಹ ವಿರುದ್ಧ ಹೋರಾಡೋಣ: ಶಾಸಕ ಕಂದಕೂರು ಕರೆ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವೇಶ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.