ಸಾಧಕ ಬಾಧಕಗಳ ನಡುವೆ ಕೋಳಿ ಸಾಕಾಣಿಕೆ ಯೋಜನೆ

ಕುಕ್ಕುಟ ಮಹಾಮಂಡಳದ ಪ್ರಸ್ತಾವ ಜಾರಿಗೆ ಯತ್ನ

Team Udayavani, Jan 5, 2021, 6:13 AM IST

ಸಾಧಕ ಬಾಧಕಗಳ ನಡುವೆ ಕೋಳಿ ಸಾಕಾಣಿಕೆ ಯೋಜನೆ

ಉಡುಪಿ: ಕೋಳಿ ಸಾಕಣೆ ಕುರಿತಾಗಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳವು ಪ್ರಸ್ತಾವಿಸಿದ ಅಂಶಗಳನ್ನು ಒರೆಗೆ ಹಚ್ಚಿ ನೋಡಬೇಕಾದ ಸ್ಥಿತಿ ಇದೀಗ ಅಗತ್ಯವಿದೆ. ಪ್ರತಿ ಜಿಲ್ಲೆಯ ಒಂದು ಅಥವಾ ಎರಡು ಗ್ರಾಮ ಗಳಲ್ಲಿ ಸಣ್ಣ ಬಡ ಫ‌ಲಾನುಭವಿಗಳು ಅನುಷ್ಠಾನಿಸಬಹುದಾದ ಕೋಳಿ ಸಾಕಣೆ ಯೋಜನೆ ಇದಾಗಿದೆ.

ಪ್ರಸ್ತಾವದಲ್ಲೇನಿದೆ?
ಇದರಂತೆ ಜಿಲ್ಲೆಯ ಒಂದೆರಡು ಗ್ರಾಮಗಳಲ್ಲಿ ಮಾತ್ರ ಯೋಜನೆ ಅನುಷ್ಠಾನಿಸಬೇಕು. ಪ್ರತಿ ಗ್ರಾಮವೆಂದರೆ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ 22 ಬಿಪಿಎಲ್‌ ಕಾರ್ಡುದಾರರು ಫ‌ಲಾನುಭವಿಗಳಾಗಬಹುದು. ಇದರಲ್ಲಿ 20 ಮಂದಿ ಸಾಮಾನ್ಯರು, ಇಬ್ಬರು ಪರಿಶಿಷ್ಟ ಜಾತಿಯವರು. ಒಟ್ಟು ಘಟಕ ವೆಚ್ಚ 52,000 ರೂ. ಇದರಲ್ಲಿ 22,500 ರೂ. ಮೊತ್ತದ ಗೂಡು, 20 ಕೋಳಿಗಳಿಗೆ ತಲಾ 360 ರೂ.ನಂತೆ 7,200 ರೂ., ಕೋಳಿ ಆಹಾರ (ಲೇಯರ್‌ ಮ್ಯಾಷ್‌) 42 ಕೆ.ಜಿ.ಯಷ್ಟು 52 ವಾರದವರೆಗೆ ಪೂರೈಕೆಗೆ ಒಂದು ಕೋಳಿಗೆ ಒಂದು ಕೆ.ಜಿ.ಗೆ 25 ರೂ.ನಂತೆ 21,000 ರೂ., ಔಷಧೋಪಚಾರ ಮತ್ತು ಲಸಿಕೆಗೆ 1,300 ರೂ. ಎಂದು ನಿಗದಿಪಡಿಸಲಾಗಿದೆ. ಸಾಮಾನ್ಯ ಫ‌ಲಾನುಭವಿಗಳಿಗೆ 26,000 ರೂ. ಸಬ್ಸಿಡಿ ದೊರಕಿದರೆ, ಪರಿಶಿಷ್ಟ ಜಾತಿ ಯವರಿಗೆ ಶೇ.90 ಸಬ್ಸಿಡಿ ದೊರಕುತ್ತದೆ.

ಕೋಳಿ ಮೊಟ್ಟೆ ಇಡಲು ಆರಂಭಿ ಸುವುದು 22ನೇ ವಾರದಿಂದ. ಇಂತಹ 20 ಕೋಳಿಗಳನ್ನು ನೀಡಲಾಗುತ್ತದೆ. ಇದು 72ನೇ ವಾರದವರೆಗೆ ಮೊಟ್ಟೆ ಇಡುತ್ತದೆ. ಒಂದು ಕೋಳಿ 270ರಿಂದ 310 ಮೊಟ್ಟೆಗಳನ್ನು ಇಡಬಹುದು. ಮೊಟ್ಟೆಗಳನ್ನು ಮಾರಿ ಸೊÌàದ್ಯೋಗ ಕೈಗೊಳ್ಳಬಹುದು ಎಂಬ ಪರಿಕಲ್ಪನೆ ಇದೆ.

ಬಾಧಕಗಳೇನು?
ಮಹಾಮಂಡಳಿಯವರು ಯೋಜನೆ ರೂಪಿಸುವಾಗ ಒಂದು ಮೊಟ್ಟೆಗೆ 7 ರೂ. ಸಿಗುತ್ತದೆ ಎಂದು ತೋರಿಸಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 6.50 ರೂ.ಗೆ ಗ್ರಾಹಕರಿಗೆ ದೊರಕುತ್ತದೆ. ಕ್ರಿಸ್ಮಸ್‌ನಂತಹ ಹಬ್ಬದ ವೇಳೆಯೂ ಗ್ರಾಹಕರಿಗೆ 7 ರೂ.ನಲ್ಲಿ ಸಿಕ್ಕಿತ್ತು. ಆದರೆ ಇದೇ ಬೆಲೆ ಮೊಟ್ಟೆ ಉತ್ಪಾದಕನಿಗೆ ಸಿಗುವುದಿಲ್ಲ. ಪ್ರಸ್ತಾವದಲ್ಲಿ 310 ಮೊಟ್ಟೆಗಳ ಇಳುವರಿಯನ್ನು ಪರಿ ಗಣಿಸಲಾಗಿದ್ದರೆ, ಎಲ್ಲ ಕೋಳಿಗಳು ಇಷ್ಟು ಇಳುವರಿಗಳನ್ನು ಕೊಡುವು ದಿಲ್ಲ. ಕೋಳಿಗಳು ದಿನವೂ ಮೊಟ್ಟೆ ಇಡುವುದಿಲ್ಲ. ಫ‌ಲಾನುಭವಿಗಳನ್ನು ಗುರುತಿಸಿದ ಬಳಿಕ ಬ್ಯಾಂಕ್‌ನವರು ಸಾಲ ಕೊಡಲು ಮುಂದಾಗಬೇಕು. ಮಾರುಕಟ್ಟೆಗೆ ಮೊಟ್ಟೆಗಳನ್ನು ಮಾರಲು ಅನುಕೂಲವಾಗುವಂತೆ ಪಟ್ಟಣಕ್ಕೆ ಹತ್ತಿರವಿರುವ ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಬೇಕೆಂದು ಸೂಚಿಸಲಾಗಿದೆ. ಈ ಎಲ್ಲ ಷರತ್ತುಗಳ ನಡುವೆ ಯೋಜನೆ ಯಶಸ್ವಿ ಯಾಗಬಹುದೆ? ಎಂದು ಕಾದು ನೋಡಬೇಕಾಗಿದೆ.

ಯೋಜನೆ ಜಾರಿಗೆ ಯತ್ನ
ಕುಕ್ಕುಟ ಮಹಾಮಂಡಳದ ಯೋಜನೆ ಈಗಷ್ಟೇ ಬಂದಿದೆ. ಯೋಜನೆಯನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಿಸಬಹುದು ಎಂದು ಚಿಂತನೆ ನಡೆಸಲಾಗುತ್ತಿದೆ. ನಗರ ಸಮೀಪದ ಒಂದೇ ಗ್ರಾಮದಲ್ಲಿ 22 ಬಿಪಿಎಲ್‌ ಕಾರ್ಡುದಾರ ಫ‌ಲಾನುಭವಿಗಳು ಸಿಗಬೇಕು. ಇದಕ್ಕೆ ಬ್ಯಾಂಕ್‌ನವರು ಸಾಲ ನೀಡಲು ಮುಂದಾಗಬೇಕು. ಫ‌ಲಾನುಭವಿಗಳಿಗೆ ಇದು ಲಾಭ ದಾ ಯ ಕ ಆಗಬೇಕಾಗಿದೆ. ಯೋಜನೆಯನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದೇವೆ. ಇದು ಪ್ರಾಥಮಿಕ ಹಂತದಲ್ಲಿದೆ.
– ಡಾ|ಹರೀಶ್‌ ತಮನ್ಕರ್‌, ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ, ಉಡುಪಿ ಜಿಲ್ಲೆ

ಟಾಪ್ ನ್ಯೂಸ್

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.