ಕರಕುಶಲ ಕಲೆಗಳ ಪಾರಂಪರಿಕ ಜ್ಞಾನ ವೃದ್ಧಿಯಾಗಲಿ

ಚರಕ ಉತ್ಸವದಲ್ಲಿ ಕೊಡು-ಕೊಳ್ಳುವವರ ಸಮಾವೇಶ

Team Udayavani, Feb 8, 2021, 6:54 PM IST

8-33

ಸಾಗರ: ಭಾರತೀಯ ಕರಕುಶಲ ಕಲೆಗಳ ಪಾರಂಪರಿಕ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವ, ಪರಿಚಯಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಆಗಬೇಕು ಎಂದು ಜೈಪುರದ ಭಾರತೀಯ ಶಿಲ್ಪ ಸಂಸ್ಥಾನದ ನಿರ್ದೇಶಕಿ ದುಲಿಕಾ ಗುಪ್ತಾ ಹೇಳಿದರು.

ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘ, ಭೀಮನಕೋಣೆಯ ಕವಿಕಾವ್ಯ ಟ್ರಸ್ಟ್‌ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಹಮ್ಮಿಕೊಂಡ ಚರಕ ಉತ್ಸವದ ಅಂಗವಾಗಿ ಭಾನುವಾರ ನಡೆದ ಕೊಡು-ಕೊಳ್ಳುವವರ ಸಮಾವೇಶದಲ್ಲಿ ಅವರು ಮಾತನಾಡಿದರು. 1995ರಲ್ಲಿ ರಾಜಸ್ಥಾನ ಸರ್ಕಾರ ಭಾರತೀಯ ಶಿಲ್ಪ ಸಂಸ್ಥಾನವನ್ನು ಸ್ಥಾಪಿಸಿದೆ. 2007ರಿಂದ ಅಂಬುಜ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲಸ ಮಾಡಲಾಗುತ್ತಿದೆ. ಪಾರಂಪರಿಕ ಕರಕುಶಲ ಕಲೆಗಳನ್ನು ಮರ, ಕಲ್ಲು, ಲೋಹ, ಬಟ್ಟೆ, ಚರ್ಮ, ಕಾಗದ ಬಳಸಿ ಕಲಾತ್ಮಕ ವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿ 4 ವಿಭಾಗಗಳಿವೆ. ಭಾರತೀಯ ಕರಕುಶಲಕರ್ಮಿಗಳು ಶಿಕ್ಷಣ ನೀಡುತ್ತಾರೆ ಎಂದರು.

ದೇಸಿ ಚಿಂತಕ ಪ್ರಸನ್ನ ಮಾತನಾಡಿ, ಪವಿತ್ರ ವಸ್ತ್ರ ಎಂಬ ಹೈಬ್ರಿಡ್‌ ಖಾದಿಯ ಮೂಲಕ ನೈಸರ್ಗಿಕ ಬಣ್ಣಗಾರಿಕೆಯ ಸಂಶೋಧನೆ ನಡೆಯುತ್ತಿದೆ. ಉತ್ಪಾದನೆ ಮತ್ತು ಸಂಶೋಧನೆಗೆ ಆದ್ಯತೆ ನೀಡುತ್ತಿದ್ದು, ವಿವಿಧ ವಿವಿಗಳ ಜತೆ ಮಾತುಕತೆ ನಡೆಯುತ್ತಿದೆ. ಮಠಾ ಧೀಶರು, ಮಠಗಳು ಖಾದಿ ಬಳಸಿದರೆ ನೇಕಾರರು ಹಸಿವಿನಿಂದ ಬಳಲುವುದಿಲ್ಲ ಎಂದರು.

ಬೆಳಗಾವಿಯ ಗೋಪಿಕೃಷ್ಣ, ಜಪಾನಿನ ಯೋಕೋ ಮಾತನಾಡಿದರು. ಪ್ರಾರಂಭದಲ್ಲಿ ಅಕ್ಷತಾ ಮತ್ತು ತಂಡದವರು ಚರಕದ ಸಿದ್ಧ ಉಡುಪುಗಳನ್ನು ಧರಿಸಿ, ವಿನ್ಯಾಸಗಳ ಪ್ರದರ್ಶನ ನೀಡಿದರು. ಸಂಘದ ಅಧ್ಯಕ್ಷೆ ಗೌರಮ್ಮ, ದೇಸಿ ಸಂಸ್ಥೆಯ ಜೆ. ಕೃಷ್ಣ, ಎಂ.ವಿ. ಪ್ರತಿಭಾ ರಾಘವೇಂದ್ರ, ಎನ್‌. ರಮೇಶ, ಆನಂದ, ಮಹಾಲಕ್ಷ್ಮಿ, ಅಭಿಲಾಷ್‌, ರುದ್ರಯ್ಯ ಮುಂತಾದವರಿದ್ದರು. ಮಂಟೇಸ್ವಾಮಿ ಪದಗಳ ಮೂಲಕ ಶಿವಸ್ವಾಮಿ ಪ್ರಾರ್ಥಿಸಿದರು. ಪದ್ಮಶ್ರೀ ನಿರ್ವಹಿಸಿದರು.

ಓದಿ: ಕಂಗನಾ ರಾಣಾವತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು: ಪಾಟೀಲ್

ಟಾಪ್ ನ್ಯೂಸ್

ISREL

West Bank ಮೇಲೆ ಇಸ್ರೇಲ್ ದಾಳಿ; ವೈದ್ಯ ಸೇರಿ ಕನಿಷ್ಠ 7 ಮೃತ್ಯು

1-wwwwww

Instagram reel ಹುಚ್ಚಾಟ ; 100 ಅಡಿಯಿಂದ ನೀರಿಗೆ ಧುಮುಕಿದ ಯುವಕನ ಅಂತ್ಯ!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪದವೀಧರರ ಕ್ಷೇತ್ರದ ಮತದಾರರ ಧ್ವನಿಯಾಗಲು ಸ್ಪರ್ಧೆ : ರಘುಪತಿ ಭಟ್‌

ಪದವೀಧರರ ಕ್ಷೇತ್ರದ ಮತದಾರರ ಧ್ವನಿಯಾಗಲು ಸ್ಪರ್ಧೆ : ರಘುಪತಿ ಭಟ್‌

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

14-thirthahalli

Thirthahalli: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ISREL

West Bank ಮೇಲೆ ಇಸ್ರೇಲ್ ದಾಳಿ; ವೈದ್ಯ ಸೇರಿ ಕನಿಷ್ಠ 7 ಮೃತ್ಯು

1-wwwwww

Instagram reel ಹುಚ್ಚಾಟ ; 100 ಅಡಿಯಿಂದ ನೀರಿಗೆ ಧುಮುಕಿದ ಯುವಕನ ಅಂತ್ಯ!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.