ಜ್ಞಾನದ ನಿರಾಕರಣೆಯಿಂದ ಜೀವ ವಿಜ್ಞಾನಕ್ಕೆ ನಷ್ಟ


Team Udayavani, Sep 10, 2019, 5:53 AM IST

y-43

ಉಡುಪಿಯ ಕಾಲೇಜೊಂದು ಇತ್ತೀಚೆಗೆ ಪರಿಸರ ಮತ್ತು ವನ್ಯಜೀವಿಗಳ ಕುರಿತು ಪ್ರಸಿದ್ಧ ವನ್ಯಜೀವಿ ಸಂಶೋಧಕರು ಮತ್ತು ವನ್ಯಜೀವಿ ಜೀವಶಾಸ್ತ್ರಜ್ಞರಿಂದ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಸಂಪನ್ಮೂಲ ವ್ಯಕಿಯಾಗಿ ನನಗೂ ಆಹ್ವಾನವಿತ್ತು. ಸಂವಾದದ ಅಂತಿಮ ಸುತ್ತಿನಲ್ಲಿ ವನ್ಯಜೀವಿ ಸಂಶೋಧಕರೂ, ಜೀವಶಾಸ್ತ್ರಜ್ಞರೂ ಉರಗ ಜೀವಿಗಳ ಕುರಿತು ನನ್ನೊಂದಿಗೆ ನಡೆಸಿದ ಸಂವಾದದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ರೀತಿಯಿಂದ, ವೈಜ್ಞಾನಿಕ ಸಂಶೋಧನೆಯ ಮೇಲೆ ಸಣ್ಣ ಅನುಮಾನದ ಎಳೆಯೊಂದು ಮೂಡಿತು. ಅಂದು ವೇದಿಕೆಯಲ್ಲಿದ್ದ ವನ್ಯಜೀವಿ ಸಂಶೋಧಕರಲ್ಲೊಬ್ಬರು ಹಿಂದೊಮ್ಮೆ, ಹಾವುಗಳನ್ನು ಹಿಡಿದು ಬೇರೆಡೆಗೆ ಬಿಡುವುದಕ್ಕಿಂತ ಸಾಯಿಸುವುದು ಉತ್ತಮ ಎಂದು ಪತ್ರಿಕಾ ಹೇಳಿಕೆಯನ್ನು ನೀಡಿದ್ದರು. ಮೂಲ ನೆಲೆ ಕಳೆದುಕೊಂಡ ಹಾವುಗಳು ಬೇರೆಲ್ಲೂ ಬದುಕುವುದಿಲ್ಲ ಎಂಬುದು ಅವರ ಮಾತಿನ ಅರ್ಥವಾಗಿತ್ತು.

ಅದೊಂದು ಆಧಾರ ರಹಿತ ಹೇಳಿಕೆಯಾದುದರಿಂದ ಸಂವಾದದ ಕೊನೆಯಲ್ಲಿ ಆ ಬಗ್ಗೆ ಪ್ರಶ್ನೆಯನ್ನೆತ್ತಿದೆ. ವನ್ಯಜೀವಿ ಸಂಶೋಧಕರು ಅದನ್ನು ಒಪ್ಪಿಕೊಂಡರು ಮತ್ತು ಚಿರತೆಯ ಉದಾಹರಣೆಯನ್ನು ನೀಡುವುದರ ಮೂಲಕ ಸರ್ಮಥಿಸಿದರು. ಆದರೆ ಜೀವಜಾಲದ ವಿಕಾಸ ಪ್ರಕ್ರಿಯೆಯಲ್ಲಿ ಚಿರತೆ ಮತ್ತು ಹಾವುಗಳ ಜೀವನ ಕ್ರಮಕ್ಕೆ ಅಜಗಜಾಂತರವಿದೆ. ಆದ್ದರಿಂದ ಈ ಸಂಶೋಧಕರ ಉದಾಹರಣೆ ಸಮರ್ಪಕವಾಗಿರಲಿಲ್ಲ. ಆದರೆ ನನ್ನ ಪ್ರಶ್ನೆಗುತ್ತರಿಸಲು ಹೊರಟ ಇನ್ನೋರ್ವ ವನ್ಯಜೀವಿ ಶಾಸ್ತ್ರಜ್ಞರೂ ಸಂಶೋಧಕರ ನಿಲುವನ್ನೇ ಸಮರ್ಥಿಸಿಕೊಂಡರು. ಖೇದಕರವೆಂದರೆ ತಮ್ಮ ಸಮರ್ಥನೆಗೆ ಅವರು ಬಳಸಿದ್ದು ಸ್ವಾನುಭವದ ಆಧಾರವನ್ನಲ್ಲ, ಬದಲಿಗೆ ಇನ್ನಿಬ್ಬರು ಉರಗತಜ್ಞರ ಹೆಸರುಗಳನ್ನು ಉಲ್ಲೇಖೀಸಿ ಮಾತನಾಡಿದರು.

ಜನವಸತಿಗಳಿಗೆ ನುಗ್ಗಿ, ನುಸುಳಿ ಭಯಾತಂಕ ಸೃಷ್ಟಿಸುತ್ತಿದ್ದ ಸುಮಾರು ಇಪ್ಪತ್ತೈದು ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದದ್ದಿದೆ. ಅವುಗಳನ್ನು ಕೊಂಡೊಯ್ದು ಎಲ್ಲೋ ಒಂದು ಕಡೆ ಎಸೆದು ಬಂದರೆ ಕೆಲಸವಾಯಿತು ಎಂದುಕೊಂಡಿಲ್ಲ. ಹಿಡಿದ ಪ್ರತಿ ಹಾವಿನ ಕುರಿತೂ ಕಾಳಜಿವಹಿಸಿ, ಮುಂದೆ ಅದಕ್ಕೆ ಎಂಥ ನೆಲೆಯ ಅಗತ್ಯವಿದೆ ಎಂಬುದನ್ನೂ, ಅದನ್ನು ಹಿಡಿದ ಪರಿಸರ ಗ್ರಹಿಕೆಯಿಂದಲೇ ಮನಗಂಡು ಸೂಕ್ತ ಪ್ರದೇಶಗಳಲ್ಲಿ ಬಿಡುಗಡೆಗೊಳಿಸುತ್ತ ಬರುತ್ತಿರುವವನು.

ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸಲ್ಪಟ್ಟ ಹಾವೊಂದರ ಹಲವಾರು ಗಂಟೆಗಳವರೆಗಿನ ನಡವಳಿಕೆಗಳು ಹೇಗಿರುತ್ತವೆ? ಹೊಸ ಪ್ರದೇಶವೊಂದರಲ್ಲಿ ಅದು ತನ್ನ ಬದುಕನ್ನು ಮರಳಿ ಕಟ್ಟಿಕೊಳ್ಳಲು ಯಾವ ರೀತಿಯ ಅರಿವನ್ನು ಪ್ರದರ್ಶಿಸುತ್ತದೆ? ಆ ಬಳಿಕ ಬಿಡುಗಡೆಗೊಂಡ ಹಾವುಗಳ ಸುತ್ತಮುತ್ತಲಿನ ಪ್ರದೇಶದ ಜನಜೀವನದಲ್ಲಿ ನಡೆಯುವ ಬದಲಾವಣೆಗಳೇನು ಎಂಬುದನ್ನೆಲ್ಲ ಹಾವುಗಳ ಕಳೆಬರಗಳು ತುಂಬಿದ ಲ್ಯಾಬಿನೊಳಗೋ, ವಿಶ್ವವಿದ್ಯಾಲಯದೊಳಗೋ ಕುಳಿತು ಅಧ್ಯಯನ ಮಾಡದೆ, ಅದಮ್ಯ ಆಸಕ್ತಿಯಿಂದ ಹಾವುಗಳ ಹಿಂದೆ ಬಿದ್ದು, ಯಾವುದೇ ವೈಜ್ಞಾನಿಕ ಸಲಕರಣೆಗಳ ಸಹಾಯವಿಲ್ಲದೆ ಛಾಯಾಚಿತ್ರ, ವೀಡಿಯೋ ದೃಶ್ಯಾವಳಿ ಮತ್ತು ಬರಹದ ಮೂಲಕವೇ ದಾಖಲಿಸಿಕೊಳ್ಳುತ್ತ, ನಡುನಡುವೆ ವಿಷಪೂರಿತ ಹಾವುಗಳಿಂದ ಹದಿಮೂರು ಬಾರಿ ಕಡಿಸಿಕೊಂಡು, ಮಾರಾಣಾಂತಿಕ ಸ್ಥಿತಿಗೆ ತಲುಪಿದ್ದರೂ, ಅವೆಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ, ಅಂಥ ಜ್ಞಾನಾನುಭವವನ್ನು ಸಮಾಜದೊಂದಿಗೆ ಹಂಚಿಕೊಳ್ಳುತ್ತ, ಉರಗಗಳ ಬಗೆಗಿನ ಮೌಡ್ಯತೆಗಳನ್ನು ಹೋಗಲಾಡಿಸುತ್ತ ಬಂದವನು.

ಇಂಥ ಸ್ವಾನುಭವದ ನೆಲೆಯಲ್ಲಿ ವನ್ಯಜೀವಿ ಜೀವಶಾಸ್ತ್ರಜ್ಞರ ತಪ್ಪು ಹೇಳಿಕೆಗೆ ಕೆಲವು ಉದಾಹರಣೆಗಳ ಮೂಲಕ ಉತ್ತರಿಸುವುದಾದರೆ, ನನ್ನ ವಠಾರದಲ್ಲೂ, ಇನ್ನಿತರ ಜನವಸತಿಗಳಲ್ಲೂ ನಡೆದ ಕೆಲವಾರು ಘಟನೆಗಳು, ನಾವು ಮತ್ತು ವನ್ಯಜೀವಿ ಶಾಸ್ತ್ರಜ್ಞರು ತಿಳಿದಿರುವಷ್ಟು ಹಾವುಗಳನ್ನು ಪ್ರಕೃತಿಯು ದುರ್ಬಲವಾಗಿ ಸೃಷ್ಟಿಸಿಲ್ಲ ಎಂಬುದು ಸಾಬೀತಾಗುತ್ತದೆ. ಕೆಲವು ಕಾಲದ ಹಿಂದೆ ವಿಂಟೆಕರ್ ಬೋವಾ ಎಂಬ ನಿರುಪದ್ರವಿ ಹಾವೊಂದು ಆಕಸ್ಮತ್ತಾಗಿ ಒಂದು ರಾತ್ರಿ ತಪ್ಪಿಸಿಕೊಂಡಿತು. ಆದರೆ ಏಳು ತಿಂಗಳ ನಂತರ ಸುಮಾರು ಇನ್ನೂರು ಮೀಟರ್‌ ದೂರದ ಮನೆಯೊಂದರ ಅಂಗಳದಲ್ಲಿ ಅದು ಮರಳಿ ಸಿಕ್ಕಿತು. ಖುಷಿಯ ಸಂಗತಿಯೇನೆಂದರೆ, ಅದು ತಪ್ಪಿಸಿಕೊಂಡಾಗ ಇದ್ದುದಕ್ಕಿಂತಲೂ ದುಪ್ಪಟ್ಟು ದಷ್ಟಪುಷ್ಟವಾಗಿತ್ತು. ಅಲ್ಲದೇ ಅದೇ ವಠಾರದಲ್ಲಿ ಇನ್ನೂ ಕೆಲವು ವಿಂಟೆಕರ್ ಬೋವಾಗಳು ಈ ಹಿಂದೆ ದೊರೆತಿದ್ದುವು. ಆದರೂ ಅದೇ ಹಾವು ಮರಳಿ ಲಭಿಸಿದ್ದು ಎಂಬುದಕ್ಕೆ ಸಾಕ್ಷಿಯಾದುದು, ಇತರ ವಿಂಟೆಕರ್ ಬೋವಾಗಳಿಗಿಂತಲೂ ಈ ಹಾವಿನ ಬಾಲದ ತುದಿಯು ಹೆಚ್ಚು ಮೊಂಡಾಗಿ, ಕೆಲವು ವಿಶಿಷ್ಟ ಕಲೆಗಳಿಂದ ಕೂಡಿದ್ದುದು.

ಇಲಿ, ಹೆಗ್ಗಣ ಮತ್ತು ಹಲ್ಲಿಗಳ ಸಮಸ್ಯೆ ನಿವಾರಿಸಲು ಹತ್ತಾರು ವಿಷರಹಿತ ಕೇರೆಹಾವು, ಟ್ರಿಂಕೆಟ್ ಹಾವು ಮತ್ತು ತೋಳಹಾವುಗಳು ಈಗಲೂ ಕೆಲವು ವಠಾರದ ಸುತ್ತಮುತ್ತ ಆರೋಗ್ಯವಂತವಾಗಿ ಬದುಕುತ್ತಿವೆ. ಹಾಗಾಗಿ ಕೆಲವು ವರ್ಷಗಳಿಂದ ಅಲ್ಲಿ ಮೂಷಿಕಜಂತುಗಳ ತೊಂದರೆಯೂ ಗಣನೀಯವಾಗಿ ಹತೋಟಿಗೆ ಬಂದಿರುವುದನ್ನೂ ಗಮನಿಸಿರುವುದುಂಟು. ನಿಸರ್ಗವು ತಾನು ಸೃಷ್ಟಿಸಿದ ಜೀವಿಯೊಂದು ಎಂತಹ ವಿಷಮ ಪರಿಸ್ಥಿತಿಯನ್ನೂ ಎದುರಿಸಿ ಬದುಕಬಲ್ಲಂತಹ ಹುಟ್ಟರಿವು ಅನ್ನು ನೀಡಿರುತ್ತದೆ. ಆಕಸ್ಮತ್ತಾಗಿ ಅಪರಿಚಿತ ಪ್ರದೇಶಕ್ಕೆ ವರ್ಗಾವಣೆಗೊಂಡ ಹಾವೊಂದು ಕೆಲವು ದಿನಗಳ ಕಾಲ ಅತಂತ್ರತೆಯಿಂದ ಅಲೆದಾಡಬಹುದು.

ಕೆಲವೇ ದಿನಗಳ ಅಂತರದಲ್ಲಿ ಅದು ಸೂಕ್ತ ಪ್ರದೇಶವೊಂದನ್ನು ಆಯ್ದುಕೊಂಡು ಅಲ್ಲಿನ ಜೀವರಾಶಿಗಳೊಂದಿಗೆ ಒಂದು ತೆರನಾದ ಒಪ್ಪಂದ, ಸಾಮರಸ್ಯವನ್ನು ಬೆಳೆಸಿಕೊಂಡು ಬದುಕಬಹುದು ಅಥವಾ ಕೆಲವು ಹಾವುಗಳು ಅಲ್ಲಿನ ಭಕ್ಷಕ ಜೀವಿಗಳಿಗೆ ಆಹಾರವಾಗಿ ಆ ಪರಿಸರ ಸಮತೋಲನ ಕಾರ್ಯದಲ್ಲಿ ಹೊಸ ಚೈತನ್ಯ ಸೃಷ್ಟಿಸುವಲ್ಲಿಯೂ ಕಾರಣವಾಗಬಹುದು. ಇಂಥ ಅರಿವನ್ನು ಪಡೆಯದೆ, ಹಾವುಗಳು ದೀರ್ಘ‌ ಉಪವಾಸಿಗಳೆಂದೂ ತಿಳಿಯದೆ ಏಕಾಏಕಿ, ಬಿಟ್ಟ ಹಾವುಗಳೆಲ್ಲ ಹೊಟ್ಟೆಗಿಲ್ಲದೆ ಸಾಯುತ್ತವೆ ಎಂದು ಹೇಳಿಕೆ ನೀಡುವುದು ಸಮಂಜಸವಲ್ಲ.

ಸುಮಾರು ಮೂರೂವರೆ ದಶಕಗಳಿಂದ ಉರಗಜೀವಿಗಳೊಂದಿಗೂ, ಅವಕ್ಕೆ ಸಂಬಂಧಿಸಿದ ಜನಜೀವನದೊಂದಿಗೂ ರಾತ್ರಿಹಗಲು ಒಡನಾಡುತ್ತ ಬಂದುದರಿಂದ ತಿಳಿದ ಒಂದು ವಿಷಾದಕರ ಸಂಗತಿಯೆಂದರೆ, ಎಷ್ಟೆಷ್ಟೋ ಬುದ್ಧಿಜೀವಿಗಳಿರಬಹುದು ಅಥವಾ ಮೊನ್ನೆ ಮೊನ್ನೆಯಷ್ಟೇ ವಿಜ್ಞಾನಯುಗಕ್ಕೆ ಕಾಲಿಟ್ಟು ವೈಜ್ಞಾನಿಕತೆಯನ್ನೇ ಉಸಿರಾಡುತ್ತ ಬೆಳೆದವರೇ ಇರಬಹುದು, ಅಂಥವರಲ್ಲಿ ಬಹುತೇಕರಿಗೆ ಪ್ರಕೃತಿಯ ಜೀವಜಾಲ ವ್ಯವಸ್ಥೆಯಲ್ಲಿ ಅಮೂಲ್ಯ ಪಾತ್ರವನ್ನು ನಿರ್ವಹಿಸುತ್ತ, ಹುಟ್ಟಿ ಸಾಯುವವರೆಗೆ ತಮ್ಮ ಸಹವರ್ತಿಗಳಾಗಿಯೇ ಬದುಕುತ್ತಿರುವ ಹಾವುಗಳಂಥ ಸಾಮಾನ್ಯ ಜೀವಿಗಳ ಕುರಿತು ಸಮರ್ಪಕ ಜ್ಞಾನ ಇಲ್ಲದಿರುವುದು ಒಂದೆಡೆಯಾದರೆ ನೈಜ ಸಾಧಕರ ಜ್ಞಾನವನ್ನು ಒಪ್ಪದೇ ಇರುವಂಥ ಮನಸ್ಥಿತಿಯೂ ಆಘಾತ ತರಿಸುತ್ತದೆ.

ಇದೇ ವನ್ಯಜೀವಿ ಶಾಸ್ತ್ರಜ್ಞರು, ಹಾವುಗಳಿಗೆ ಸಂವೇದನಾಶೀಲ ಶಕ್ತಿಯೇ ಇಲ್ಲ ಎಂದರು. ಅಂದರೆ ಅವು ಮನುಷ್ಯನ ಅಥವಾ ಇತರ ಜೀವರಾಶಿಗಳ ಸ್ನೇಹ, ಕ್ರೋಧಗಳಂಥ ಭಾವ ಕಂಪನಗಳನ್ನು ಗ್ರಹಿಸಲಾರವು ಎಂಬುದು ಅವರ ವಾದ. ಆದರೆ ಹಾವುಗಳು ಮಾತ್ರವೇ ಅಲ್ಲ, ನಿಸರ್ಗದ ಸಮಸ್ತ ಜೀವರಾಶಿಗಳಿಗೂ ಅಂಥ ಸೂಕ್ಷ್ಮ ಸಂವೇದನೆಗಳಿವೆ. ಅದಿಲ್ಲದ ಯಾವ ಜೀವಿಯೂ ನಿಸರ್ಗದಲ್ಲಿ ಬದುಕಲಾರದು. ಮುಖ್ಯವಾಗಿ ಹಾವುಗಳು ಪ್ರಕೃತಿಯ ಬಾಹ್ಯ ಆಗುಹೋಗುಗಳನ್ನು ಮಾತ್ರವೇ ಅಲ್ಲದೇ ಮನುಷ್ಯರ, ಇತರ ಜೀವರಾಶಿಗಳ ಮನಸ್ಸಿನ ಸೂಕ್ಷ್ಮ ಭಾವಾವೇಶಗಳನ್ನು ಗ್ರಹಿಸುವ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಬುದ್ಧಿಮತ್ತೆಯನ್ನು ಹೊಂದಿವೆ ಎಂಬುದು ಅನುಭವದ ಸತ್ಯ. ಆದರೆ ಪ್ರತಿ ವಿಷಯವನ್ನೂ ವೈಜ್ಞಾನಿಕ ಕನ್ನಡಕದ ಮೂಲಕವೇ ನೋಡ ಬಯಸುವ ಮನಸ್ಸುಗಳಿಗೆ ನಿಸರ್ಗದ ಬಹುತೇಕ ಸೂಕ್ಷ್ಮ ಅಂಶಗಳು ಅರಿವಿಗೆ ಬರಲಾರವು.

ಭಾರತದಲ್ಲಿ ಸಾವಿರಾರು ಉರಗ ಸಂರಕ್ಷಕರೂ, ತಜ್ಞರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ತಮ್ಮ ಪ್ರಾಣವನ್ನು ಪಣವಾಗಿಟ್ಟು ಹಾವುಗಳನ್ನೂ ಅವುಗಳಿಗೆ ಸಂಬಂಧಿಸಿದ ಜೀವಜಾಲವನ್ನೂ ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅಂಥವರು ಡಾಕ್ಟರೇಟ್ ಪದವಿ ಪಡೆಯದಿದ್ದರೂ ಅವರ ಸಹಾಯ, ಸಹಕಾರದಿಂದಲೂ ವನ್ಯಜೀವಿ ವಿಜ್ಞಾನ ಬೆಳೆಯುತ್ತಿದೆ ಎಂಬುದು ಸತ್ಯ.

ಆದ್ದರಿಂದ ವೈಜ್ಞಾನಿಕರ ಹೇಳಿಕೆಗಳು ಅಂಥವರ ಪರಿಶ್ರಮವನ್ನೆಲ್ಲ, ನೀರಿನಲ್ಲಿಟ್ಟ ಹೋಮಕ್ಕೆ ಸಮ ಎಂಬಂತೆ ಬಿಂಬಿಸದಿರಲಿ ಹಾಗೂ ಯುವಪೀಳಿಗೆಯ ಮುಂದೆ ಉರಗಜೀವಿಗಳ ಬಗ್ಗೆ, ಅಧಿಕೃತವಾಗಿ ಮಾತನಾಡಲು ಹೊರಡುವ ಯಾರೇ ಆದರೂ ಸ್ವನುಭವದ ನೆಲೆಯಲ್ಲೇ ವ್ಯವಹರಿಸುವುದು ಅಗತ್ಯ. ಅಂಥ ನಿಲುವು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಬಲ್ಲದು.

– ಗುರುರಾಜ್‌ ಸನಿಲ್‌

ಟಾಪ್ ನ್ಯೂಸ್

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.