ಸಿನಿಮಾ ಅಭಿನಯವೋ, ಶುಕ್ರ ಗ್ರಹವೋ…

Team Udayavani, Oct 8, 2016, 4:40 AM IST

ಶುಕ್ರಗ್ರಹಕ್ಕೆ ತನ್ನದೇ ಆದ ವಿಶಿಷ್ಠ ಗುಣಧರ್ಮಗಳಿವೆ. ಜೀವನ ಸಂಬಂಧವಾದ ಅನೇಕ ಭೋಗಗಳನ್ನು ಶುಕ್ರಗ್ರಹ ಒದಗಿಸಲು ಸಹಾಯ ಮಾಡುತ್ತದೆ. ಆದರೆ ಭೋಗ ಎನ್ನುವುದನ್ನು ಅನೈತಿಕ ಅರ್ಥ ನಿಕ್ಷೇಪದಲ್ಲಿ ಸ್ವೀಕರಿಸಬಾರದು. ತನ್ನ ಉನ್ನತವಾದ ಕಾಂತಿಯನ್ನು ಅದು ಚಂದ್ರನ ಸೂರ್ಯನ ಅಥವಾ ಕುಜನ ಕಾರಣಕ್ಕಾಗಿ ಕಳಕೊಂಡಿದ್ದರೆ ಅನೈತಿಕವಾದ ದಾರಿಗೆ ಶುಕ್ರ ಒಬ್ಬ ವ್ಯಕ್ತಿಯನ್ನು ಹೊರಳಿಸಲು ಕಾರಣನಾಗುತ್ತಾನೆ. ಹೀಗಾಗಿ ಶ್ರೀರಾಚಂದ್ರನು ಸೀತಾದೇವಿಯೊಂದಿಗೆ ಪಡೆದ ಭೋಗಕ್ಕೆ ಅರ್ಥ ಬೇರೆ. ಇಂದ್ರನ ಅಮರಾವತಿಯಲ್ಲಿ ರಂಭೆ ಊರ್ವಶಿ ಆದಿಯಾಗಿ ಸುರಗಣಿಕೆಯರೊಂದಿಗಿನ ಭೋಗವೇ ಬೇರೆ. ಹದಿನಾರು ಸಾವಿರ ಪತ್ನಿಯರೊಂದಿಗಿನ ಶ್ರೀಕೃಷ್ಣನ ಭೋಗವೇ ಬೇರೆ. ಹೀಗಾಗಿ ಶುಕ್ರನು ಅನುಗ್ರಹಿಸುವ ವಿಧಾನ ಯಾವುದು? ಎನ್ನುವುದು ಒಬ್ಬ ವ್ಯಕ್ತಿಯ ಜಾತಕದ ಶುಕ್ರನ ಶಕ್ತಿ ಹಾಗೂ ಮಿತಿಯ ಮೇಲೆ ನಿರ್ಧರಿತವಾಗುತ್ತದೆ. ಜಾಗತಿಕ ರಂಗದ ಭಾರತೀಯ ಚಲನಚಿತ್ರದ ಅಷ್ಟೇ ಏಕೆ ನಮ್ಮ ಕನ್ನಡ ಚಿತ್ರರಂಗದ ಮಹಾನ್‌ ನಟರನ್ನು ಪರಿಗಣಿಸುವುದಾದರೆ ಶುಕ್ರಗ್ರಹದ ಸನ್ನಡತೆ ಅವರುಗಳ ಯಶಸ್ಸಿನ ಮೆಟ್ಟಿಲುಗಳನ್ನು ನಿರ್ಮಿಸಿದ್ದು ಸ್ಪಷ್ಟವಾಗಿದೆ.

ಆದರೆ ಇದೇ ಶುಕ್ರಗ್ರಹದ ಒಂದು ಹಂತದ ಶಕ್ತಿ ಅನೇಕ ಕಲಾದರನ್ನು ಮೇಲೇಢರಿಸಿದ್ದ ಹೌದಾದರೂ ಶುಕ್ರಗ್ರಹದ ದುರ್ಬಲ ಹಂತದ ಘಟ್ಟದಲ್ಲಿ ಇದೇ ಕಲಾದರು ವೈಫ‌ಲ್ಯಗಳನ್ನು ಮೈಮ,ಏಲೆ ಎಳೆದುಕೊಂಡು ಪರದಾಡಿದ ರೀತಿಯೂ ಸ್ಪಷ್ಟವಾಗಿದೆ. ಬಹುಮುಖ್ಯವಾ  ಶುಕ್ರನಿಗೆ ಕುಜಗ್ರಹದೊಂದಿಗಿನ ಅಸಹಜವಾದ ಸಂಬಂಧಗಳು ಮುಖ್ಯವಾಗಿ ಒಬ್ಬ ಯಶಸ್ವೀ ಕಲಾದನೋ ಕಲಾದೆಯಮನ್ನೋ ಅವನತಿಗೆ ತಳ್ಳಬಹುದಾಗಿದೆ. ಕೆಳ ಹಂತದಿಂದ ಯಶಸ್ಸಿನ ಶೀಖರ ಏರುವುದರಲ್ಲಿ ಂಸೆ ಇಲ್ಲ. ಯಶಸ್ಸಿನ ಶಿಖರದಿಂದ ಅಪಯಶಸ್ಸಿನ ಪಾತಾಳವನ್ನು ತಲುಪುವುದು ದುರದೃಷ್ಟಕರ. ಮುಯಖ್ಯವಾಗಿ ಈ ಎಲ್ಲಾ ರೀತಿಯ ಅನುಭವಗಳನ್ನು ಪಡೆದ ಯಶಸ್ವೀ ಕಲಾದರ ದೊಡ್ಡ ಪಟ್ಟಿ ನೀಡಬಹುದು. 

ಮುಖ್ಯವಾಗಿ ಶುಕ್ರ ಎಂದರೆ ದೈವೀ ಶಕ್ತಿ. ದುರ್ಗಾ ಲಕ್ಷ್ಮಿ  ಸರಸ್ವತಿಗೆ ದ್ಯೋತಕವಾದ ಗ್ರಹ. ಶುಕ್ರ ರಾಕ್ಷಸರ ಧರ್ಮಗುರು ಪುರೋಹಿತ ಶುಕ್ರಾಚಾರ್ಯರನ್ನು ಪ್ರತಿನಿಧಿಸುತ್ತಾನೆ. ಸಂಜೀವಿನಿ ವಿದ್ಯೆಯ ಪಿತಾಮಹ ಈ ಶುಕ್ರಾಚಾರ್ಯ. ರಾಕ್ಷಸರನ್ನು ಕ್ರೌರ್ಯ ಕಳೆಸಿ ಸನ್ಮಾರ್ಗಕ್ಕೆ ಹಚ್ಚುವುದೇ ಶುಕ್ರನ ಕೆಲಸವಾಗಿತ್ತು. ಇಂಥ ಅಪರೂಪದ ಸಂಜೀನಿ ವಿದ್ಯೆಗಾಗಿ ಸಹಜವಾಗೇ ಅಮೃತತ್ವದಿಂದ ಶಕ್ತವಾಗಿರುವ ದೇವತೆಗಳು ಬೃಹಸ್ಪತಿಯ ಮಗ ಕಚನನ್ನು ಶುಕ್ರಾಚಾರ್ಯರ ಬಳಿ ಕಳಿಸುತ್ತಾರೆ. ತದನಂತರ ಕಚದೇವಯಾನಿ ಕತೆ ಎಲ್ಲರಿಗೂ ತಿಳಿದದ್ದೇ. ಸಂಜೀವಿನಿ ದಕ್ಕದೇ ಹೋಗಲೆಂಬ ಶಾಪಕ್ಕೆ ಕಚ ಗುರಿಯಾಗುತ್ತಾನೆ. 

ಶುಕ್ರಗ್ರಹಕ್ಕೆ ಗೆಳೆಯರು ಮತ್ತು ವಿರೋಧಿಗಳು
ಮುಖ್ಯವಾಗಿ ಶನೈಶ್ಚರ ಹಾಗೂ ಬುಧಗ್ರಹಗಳು ಶುಕ್ರಗ್ರಹದ ಗೆಳೆಯರಾಗಿದ್ದಾರೆ. ಈ ಗ್ರಹಗಳ ಸಂಗಾತಿತನ ಯುಕ್ತವಾಗಿ ದೊರಕಿದಾಗ ರಾಜಯೋಗದ ಪ್ರಾಪ್ತಿಯನ್ನು ಶುಕ್ರಗ್ರಹ ಒದಗಿಸುತ್ತಾನೆ. ಅದೇ ಸೂರ್ಯ ಹಾಗೂ ಚಂದ್ರರರು ಪರಮ ಶತೃಗಳಾಗಿದ್ದಾರೆ. ಗುರು ಹಾಗೂ ಮಂಗಳರು ತಟಸ್ಥರಾಗಿದ್ದರೂ ಕುಜನ ಸಂಪರ್ಕ ಘಾತಕ ರೀತಿಯಲ್ಲಿ ಒದಗಿದಾಗ ಕ್ರೌರ್ಯ ಅನೈತಿಕ ಮನೋಸ್ಥಿತಿ ಲವಲವಿಕೆ ಕಳೆದುಕೊಂಡ ಮನೋಸ್ಥಿತಿ ಅಪಯಶಸ್ಸು ಅಪಕೀರ್ತಿಗಳು ಒದಗಿಬರುತ್ತವೆ. ಆದರೆ ಈ ವಿಚಾರದಲ್ಲಿ ಅವಸರದ ನಿರ್ಣಯ ಸಲ್ಲ. ಕುಜಶುಕ್ರರು ಅಪರೂಪದ ಮಧುರ ವೈವಾಹಿಕ ಜೀವನದ ಸಾಫ‌ಲ್ಯತೆಯನ್ನು ಒದಗಿಸಿದ ಅನೇಕ ಉದಾಹರಣೆಗಲಿವೆ. ಮಹಾರಾಷ್ಟ್ರ ಗಾಂಧಿ ಹಾಗೂ ಕಸ್ತೂರ ಬಾ ನಡುವಣ ದಾಂಪತ್ಯದಲ್ಲಿ ಸಾಫ‌ಲ್ಯತೆ ಇತ್ತು. ಹಿಟ್ಲರನ ಜೀವನದಲ್ಲಿ ಕುಜಶುಕ್ರರು ಜೀವನದ ಮೌಲ್ಯದ ವಿಚಾರದಲ್ಲಿ ಅವನನ್ನು ಕೆಳಹಂತಕ್ಕಿಳಿಸಿದ ಉದಾಹರಣೆಯೂ ಇದೆ. ದೇವಾನಂದ್‌ ಅವರು ಭಾರತೀಯ ಚಲನಚಿತ್ರರಂಗ ಕಂಡ ಅಪರೂಪದ ಯಶಸ್ವೀ ನಟ. ಅವರ ಜಾತಕದ ಶುಕ್ರಗ್ರಹ ಅವರನ್ನು  ಚಲನಚಿತ್ರರಂಗದ ಯಶಸ್ವೀ ನಟನನ್ನಾಗಿ ರೂಪಿಸಿತ್ತು. ಆದರೆ ಸೂರ್ಯನಬ ಉಪಸ್ಥಿತಿಯಿಂದಾಗಿ ಶತೃ ಬಾಧೆಗೊಳಗಾಗಿದ್ದು ದೇವಾನಂದ್‌ ರನ್ನು ಅವರ ಜೀವನದಲ್ಲಿ ಬಂದುಹೋದ ಗೆಳತಿಯರ ವಿಷಯದಲ್ಲಿ ಪರದಾಡಿಸಿದ್ದು ಇದೆ. ಇದನ್ನು ಸ್ವತಃ ದೇವಾನಂದರೇ ತಮ್ಮ ಆತ್ಮಚರಿತ್ರೆಯ ಪುಟಗಳಲ್ಲಿ ಶ್ರುತಪಡಿಸಿದ್ದಾರೆ. 

ಶುಕ್ರಕುಜರ ಬಲೆಯಲ್ಲಿ ಮೀನಾಕುಮಾರಿ ಮತ್ತು ಸಂಜಯ್‌ ದತ್‌
ವಾಸ್ತವ ಯಾವಾಗಲೂ ಜಟಿಲ ಅಂತೆಯೇ ಆಶ್ಚರ್ಯಕಾರಕ. ಕತೆಗಳಿಗಿಂತ ಬದುಕು ಹೆಚ್ಚು ರೋಚಕ. ಚಲನಚಿತ್ರರಂಗದಲ್ಲಿ ಮೀನಾಕುಮಾರಿ ಹಾಗೂ ಸಂಜಯ್‌ ದತ್ತರನ್ನೇ ಗಮನಿಸಿ ಅಭಿನೇತ್ರಿಯಾಗಿ ಮೀನಾಕುಮಾರಿ ಜಾಗತಿಕ ಮಟ್ಟದ ಅಪರೂಪದ ಪ್ರತಿಭೆ. ಅನುಮಾನವೇ ಇಲ್ಲ. ಮಹಾನ್‌ ತಾರಾ ದಂಪತಿಗಳಾದ ಸುನಿಲ್‌ದತ್‌ ಹಾಗೂ ನರ್ಗಿಸ್‌ದತ್‌ ಅವರ ಪುತ್ರ ಈಗಲೂ ಬಾಕ್ಸಾಫೀಸಿನ ದೃಷ್ಟಿಯಿಂದ ಅದಮ್ಯ ಚೇತನ. ಆದರೆ ಯಶಸ್ಸು ಮತ್ತು 
ಪ್ರತಿಭೆಗಳಿಂದಲೇ ಮಾನಸಿಕ ಶಾಂತಿ ಲಭಿಸದೆಂಬುದಕ್ಕೆ ನಮ್ಮ ಕಣ್ಣಮುಂದೆಯೇ ಹರಳುಗಟ್ಟಿರುವ ಇವರಿಗಳ ಜೀವನದ ಏರಿಳಿತಗಳನ್ನು ಗಮನಿಸಿದರೆ ಚಲನಚಿತ್ರರಂಗದಲ್ಲಿ ಶುಕ್ರನ ಪಾತ್ರ ಪೂರ್ತಿ ಸಾಬೀತು. ನಮ್ಮ ಕನ್ನಡ ಚಿತ್ರರಂಗದ ನಟಿಯೊಬ್ಬಳ ಜೀವನದ ಯಶಸ್ಸು ಹತಾಶೆಗಳಿಗೆ ಶುಕ್ರ ಕಾರಣನಾಗಿದ್ದಾನೆ.. ಚಂದ್ರ ಖಳನಾಯಕನಾಗಿದ್ದಾನೆ. 

ಶುಕ್ರ ಗ್ರಹದ ಸಿದ್ಧಿಯನ್ನು ವೃದ್ಧಿಸುವುದು ಹೇಗೆ?
ಶುಕ್ರನ ಸಂಬಂಧವಾದ ಶಕ್ತಿ ದೇವತೆಗಳು ಶುಕ್ರಗ್ರಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ. ಪ್ರಧಾನವಾಗಿ ಶುಕ್ರನ ನಕ್ಷತ್ರಗಳಾದ ಭರಣಿ, ಪುಬ್ಟಾ ಹಾಗೂ ಪೂರ್ವಾಷಾಢ ನಕ್ಷತ್ರಗಳು ದುಷ್ಟಗ್ರಹಗಳಾದ ಕುಜ ಸೂರ್ಯ ಮತ್ತು ಚಂದ್ರರನ್ನು ಶುಕ್ರನ ಸಂಬಂಧವಾಗಿ ಹೇಗೆ ಎಷ್ಟು ಮೃದುಗೊಳಿಸಬಲ್ಲದು ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಸೂರ್ಯ ಹಾಗೂ ಕುಜರ ವಿಚಾರದಲ್ಲಿ ಇದು ಮುಖ್ಯವಾಗುತ್ತದೆ. ಚಂದ್ರನ ವಿಚಾರದಲ್ಲಿ ಸೂರ್ಯ ಚಂದ್ರನಿಂದ ಎಷ್ಟು ದೂರ ಎಂಬುದನ್ನು ಗ್ರಹಿಸಬೇಕಾಗುತ್ತದೆ. ಬೆಳ್ಳಿಯ ದೇವಿ ಪ್ರತಿಮೆ ಅವರೆಕಾಳು ಬಿಳಿವಸ್ತ್ರಗಳು ಶಾಸ್ತ್ರಬದ್ಧವಾಗಿ ಒಂದು ಸಂಪನ್ನವಾದ ಗುಂಪಾಗಿ ಶುಕ್ರನ ಶಕ್ತಿಯನ್ನು ವೃದ್ಧಿಸುತ್ತದೆ. ಬೇಕಾಬಿಟ್ಟಿ ವಜ್ರವನ್ನು ಧರಿಸುವುದು ಶುಕ್ರನ ಕ್ರೌರ್ಯವನ್ನು ವೃದ್ಧಿಸಬಹುದು. ಶುಕ್ರನ ಸಿದ್ಧಿಗೆ ಅನುಕೂಲವಾಗುವ ಹಾಗೆ ವಜ್ರದ ಬಳಕೆ ಆಗಬೇಕು. ಔದುಂಬರ ವೃಕ್ಷದ ಶಾಸ್ತ್ರರೀತ್ಯಾ ಪೂಜೆ ಶುಭವಾದುದು. ತುಪ್ಪದ ಅನ್ನದಿಂದ ಮಾಡಿದ ಭಕ್ಷ್ಯದಿಂದ ಶುಕ್ರನನ್ನು ಮಂತ್ರ ಸಾಂಗತ್ಯದಲ್ಲಿ ತೃಪ್ತಿ ಪಡಿಸಬೇಕು. ಬಿಳಿ ಕಮಲದ ಹೂಗಳು ಧವಳಾಶ್ವಗಳು ಶುಕ್ರನನ್ನು ಪುಷ್ಟಿಗೊಳಿಸುತ್ತದೆ.  

ಅನಂತ  ಶಾಸ್ತ್ರಿ 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

  • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

  • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...

  • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

  • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....