ನಾಳೆ ತೆರೆಯ ಮೇಲೆ ‘ಪೈಲ್ವಾನ್’ ಪಟ್ಟು ; ಕಿಚ್ಚನ ಅಭಿಮಾನಿಗಳದ್ದು ಏನ್ ಕ್ರೇಝ್ ಗುರೂ!

ವಿಶ್ವಾದ್ಯಂತ ಸಂಭ್ರಮಿಸುತ್ತಿದ್ದಾರೆ ಅಭಿನಯ ಚಕ್ರವರ್ತಿಯ ಅಭಿಮಾನಿಗಳು

Team Udayavani, Sep 11, 2019, 8:03 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕನ್ನಡ ಚಿತ್ರ ‘ಪೈಲ್ವಾನ್’ ಗುರುವಾರದಂದು ರಾಜ್ಯದಲ್ಲಿ ಒಟ್ಟು 422ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಪಂಚಭಾಷೆಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಈಗಾಗಲೇ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಟಾಲಿವುಡ್, ಕಾಲಿವುಡ್, ಮೋಲಿವುಡ್ ಮತ್ತು ಬಾಲಿವುಡ್ ಗಳಲ್ಲೂ ಭರ್ಜರಿ ಹವಾ ಸೃಷ್ಟಿಸಿದೆ.

ಇನ್ನು ಕಿಚ್ಚ ಸುದೀಪ್ ಅಭಿಮಾನಿಗಳಂತೂ ನಾಳೆಯ ದಿನಕ್ಕಾಗಿ ಕಾಯುತ್ತಿದ್ದಾರೆ. ಟ್ವಿಟ್ಟರ್ ಪುಟಗಳಲ್ಲಂತೂ #Pailwaan ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಮತ್ತು ಸ್ಯಾಂಡಲ್ ವುಡ್ ತಾರೆಯರೂ ಸೇರಿದಂತೆ ಹಲವರು ಪೈಲ್ವಾನ್ ಚಿತ್ರಕ್ಕೆ ಶುಭ ಕೋರುವ ಟ್ವೀಟ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.


ಇನ್ನು ಕಿಚ್ಚನ ಅಭಿಮಾನಿಗಳಂತೂ ಶುಭಾಶಯ ಕೋರುವುದರ ಜೊತೆಗೆ ಪೈಲ್ವಾನ್ ಚಿತ್ರದ ಪ್ರಥಮ ಪ್ರದರ್ಶನವನ್ನು ಸಂಭ್ರಮಿಸಲು ನಡೆಸಿರುವ ತಯಾರಿಯ ಫೊಟೋಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ವಿಶೇಷವೆಂದರೆ ಪೈಲ್ವಾನ್ ಚಿತ್ರದ ಕುರಿತು ಹಾಕಲಾಗುತ್ತಿರುವ ಬಹುತೇಕ ಎಲ್ಲಾ ಪೋಸ್ಟ್ ಗಳಿಗೆ ಸ್ವತಃ ಕಿಚ್ಚ ಸುದೀಪ್ ಅವರೇ ಮರುಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.ಇನ್ನು ಈ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ನಟಿಸುತ್ತಿರುವುದು ಇನ್ನೊಂದು ವಿಶೇಷ. ದೇಸೀ ಲುಕ್ ನಲ್ಲಿ ಮಿಂಚುತ್ತಿರುವ ಶೆಟ್ರ ಪಾತ್ರ ಈಗಾಗಲೇ ಚಿತ್ರರಸಿಕರ ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರ್ ಎನ್ನುವ ಹಿಂದಿ ಟ್ಟಿಟ್ಟರ್ ಮೂಲಕ ಸುನಿಲ್ ಶೆಟ್ಟಿ ಅವರಿಗೆ ಶುಭಾಶಯ ಕೋರಿರುವ ಟ್ವೀಟ್ ಒಂದು ಆಕರ್ಷಕವಾಗಿದೆ. ಬಲ್ವಾನ್ ನಿಂದ ಪ್ರಾರಂಭವಾದ ನಿಮ್ಮ ನಿನಿ ಪಯಣ ಪೈಲ್ವಾನ್ ವರೆಗೆ ಬಂದು ನಿಂತಿದೆ. ಭವಿಷ್ಯದಲ್ಲಿ ನಿಮಗೆ ಇನ್ನಷ್ಟು ಉತ್ತಮ ಅವಕಾಶಗಳು ಸಿಗುವಂತಾಗಲಿ ಎಂದು ಆ ಟ್ವೀಟ್ ನಲ್ಲಿ ಶುಭ ಕೋರಲಾಗಿದೆ.


ಕಳೆದ ವರ್ಷ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್. ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹವಾ ಎಬ್ಬಿಸಿತ್ತು. ಆ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಭರ್ಜರಿ ಓಪನಿಂಗ್ ಪಡೆದುಕೊಂಡು ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದೀಗ ಕನ್ನಡ ಚಿತ್ರರಂಗದ ಹಿರಿಮೆಯನ್ನು ಎತ್ತಿಹಿಡಿಯಲು ‘ಪೈಲ್ವಾನ್’ ಬರುತ್ತಿದ್ದಾನೆ. ಪೈಲ್ವಾನನ್ನು ಚಿತ್ರರಸಿಕರು ಹೇಗೆ ಬಿಗಿದಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಉತ್ತರ ಇನ್ನೇನು ಕೆಲವೇ ಗಂಟೆಗಳಲ್ಲಿ ದೊರೆಯಲಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ