ಏನಿದು ಬಾಲಿವುಡ್ ನಟಿ ಮನಿಷಾ ಕೊಯಿರಾಲ ಎರಡನೇ ಜನ್ಮದ ರಹಸ್ಯ?

ಕ್ಯಾನ್ಸರ್ ಜೊತೆ ಹೋರಾಡಿ ಬಂದ ಬಾಲಿವುಡ್ ನಟಿಯ ಬದಲಾದ ಮನಸ್ಥಿತಿ!

Team Udayavani, Dec 2, 2019, 6:23 PM IST

ಮುಂಬಯಿ: ಬಾಲಿವುಡ್ ನಟಿ ಮನಿಷಾ ಕೊಯಿರಾಲ ಅವರು ಮಹಾಮಾರಿ ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ ಹೊಸ ಬದುಕನ್ನು ಪಡೆದಕೊಂಡಿರುವುದು ನಮಗೆಲ್ಲಾ ಗೊತ್ತೇ ಇದೆ. ಇದೀಗ ಈ ನಟಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಎರಡು ವಿಭಿನ್ನ ಸನ್ನಿವೇಶಗಳ ಚಿತ್ರಗಳನ್ನು ಜೋಡಿಸಿರುವ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಮತ್ತು ಆ ಪೋಸ್ಟ್ ಗೆ ತುಂಬಾ ಪಾಸಿಟಿವ್ ಶೀರ್ಷಿಕೆಯೊಂದನ್ನೂ ಸಹ ನೀಡಿದ್ದಾರೆ. ಇದು ಸದ್ಯಕ್ಕೆ ಟ್ವಿಟ್ಟರ್ ಲೋಕದ ಗಮನವನ್ನು ಸೆಳೆಯುತ್ತಿದೆ.

‘ನನಗೆ ಎರಡನೇ ಜೀವನ ಸಿಗುತ್ತಿರುವುದಕ್ಕೆ ನಾನು ಬದುಕಿಗೆ ಸದಾ ಋಣಿಯಾಗಿರುತ್ತೇನೆ. ಶುಭೋದಯ ಗೆಳೆಯರೇ. ಸಂತೋಷ ಮತ್ತು ಆರೋಗ್ಯಕರವಾಗಿ ಬದುಕಲು ಸಾಧ್ಯವಾಗಿರುವ ಇದೊಂದು ವಿಸ್ಮಯಕರ ಜೀವನವೇ ಸರಿ’ ಎಂದು ಬರೆದುಕೊಂಡಿದ್ದಾರೆ.

ಮತ್ತು ತಾನು ಜೊತೆಯಾಗಿ ಪೋಸ್ಟ್ ಮಾಡಿರುವ ಎರಡು ಫೊಟೋಗಳಲ್ಲಿ ಒಂದರಲ್ಲಿ ಮನಿಷಾ ಅವರು ಆಮ್ಲಜನಕದ ನಳಿಕೆಯನ್ನು ಸಿಕ್ಕಿಸಿಕೊಂಡು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಫೊಟೋ ಇದ್ದರೆ ಇನ್ನೊಂದು ಫೊಟೋದಲ್ಲಿ ಅವರು ಸುತ್ತ ಹಿಮಾವೃತ ಬೆಟ್ಟದ ತುದಿಯೊಂದರಲ್ಲಿ ನಿಂತಿದ್ದಾರೆ.

ಮನಿಷಾ ಕೊಯಿರಾಲಾ ಅವರಲ್ಲಿ ಅಂಡಾಶಯದ ಕ್ಯಾನ್ಸರ್ ಸಮಸ್ಯೆ 2012ರಲ್ಲಿ ಪತ್ತೆಯಾಗಿತ್ತು. ಇದಕ್ಕೆ ಅಮೆರಿಕಾದಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡ ಬಳಿಕ ಮನಿಷಾ ಅವರು ಗುಣಮುಖರಾಗಿದ್ದರು. ಕ್ಯಾನ್ಸರ್ ನೊಂದಿಗಿನ ತನ್ನ ಹೋರಾಟದ ಅನುಭವಗಳನ್ನು ‘ಹೀಲ್ಡ್: ಹೌ ಕ್ಯಾನ್ಸರ್ ಗೇವ್ ಮಿ ಎ ನ್ಯೂ ಲೈಫ್ (ಗುಣಮುಖಿ: ಕ್ಯಾನ್ಸರ್ ನಿಂದ ಹೊಸ ಜೀವನ) ಎಂಬ ಪುಸ್ತಕವನ್ನು ಬರೆಯುತ್ತಿದ್ದಾರೆ.

ಇನ್ನು ಕ್ಯಾನ್ಸರ್ ಗೆದ್ದ ಬಳಿಕ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿರುವ ಮನಿಷಾ ಕೊಯಿರಾಲ ಅವರು ಸಂಜು ಚಿತ್ರದಲ್ಲಿ ನಟಿಸಿದ್ದರು. ಮಾತ್ರವಲ್ಲದೇ ನೆಟ್ ಫ್ಲಿಕ್ಸ್ ನ ಲಸ್ಟ್ ಸ್ಟೋರೀಸ್, ಡಿಯರ್ ಮಾಯಾ ಮತ್ತು ಪ್ರಸ್ಥಾನಂ ವೆಬ್ ಸಿರೀಸ್ ಗಳಲ್ಲೂ ನಟಿಸಿದ್ದಾರೆ.

ಒಟ್ಟಿನಲ್ಲಿ ಅಸಂಖ್ಯ ಕ್ಯಾನ್ಸರ್ ಪೀಡಿತರಿಗೆ ಸ್ಪೂರ್ತಿಯಾಗಬೇಕೆಂಬ ನಿಟ್ಟಿನಲ್ಲಿ ಮನಿಷಾ ಕೊಯಿರಾಲ ಈ ಮಹಾಮಾರಿಯೊಂದಿಗಿನ ತನ್ನ ಹೋರಾಟದ ಅನುಭವಗಳನ್ನು ಪಾಸಿಟಿವ್ ರೀತಿಯಲ್ಲಿ ಹಂಚಿಕೊಳ್ಳುತ್ತಿರುವುದು ಪ್ರಶಂಸನೀಯ.

ಕ್ಯಾನ್ಸರ್ ನೊಂದಿಗೆ ಹೋರಾಡಿ ಗೆದ್ದು ಬಂದು ಎರಡನೇ ಬದುಕನ್ನು ಸ್ಪೂರ್ತಿಯುತವಾಗಿ ಬದುಕುತ್ತಿರುವ ಮನಿಷಾ ಅವರಿಗೆ ಈಗ ಸಿಕ್ಕಿರುವುದು ಎರಡನೇ ಜನ್ಮವೇ ಸರಿ!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ