Udayavni Special

ತರಾಸು ಜಯಂತಿ ಸರ್ಕಾರಿ ಆಚರಣೆಯಾಗಲಿ

Team Udayavani, Apr 22, 2021, 6:59 PM IST

22-23

ಚಿತ್ರದುರ್ಗ: ಸಾಹಿತ್ಯದ ಮೂಲಕ ದುರ್ಗದ ಇತಿಹಾಸವನ್ನು ನಾಡಿನೆಲ್ಲೆಡೆ ಪಸರಿಸಿದ ತರಾಸು ಜನ್ಮ ದಿನಾಚರಣೆಯನ್ನು ಸರ್ಕಾರಿ ಜಯಂತಿಯಾಗಿ ಆಚರಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ ಕೆ. ನಾಗರಾಜ್‌ ಒತ್ತಾಯಿಸಿದರು.

ಸಾಹಿತಿ ತರಾಸು ಅವರ 101ನೇ ಜಯಂತಿ ಅಂಗವಾಗಿ ನಗರದ ಶ್ರೀಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದ ಆವರಣದಲ್ಲಿರುವ ತರಾಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಐತಿಹಾಸಿಕ ಚಿತ್ರದುರ್ಗ ನಗರ ದೇವತೆಗಳಾದ ಏಕನಾಥೇಶ್ವರಿ, ಉಚ್ಚಂಗೆಲ್ಲಮ್ಮ, ಬರಗೇರಮ್ಮ, ತಿಪ್ಪಿನಘಟ್ಟಮ್ಮನವರ ಆಶೀರ್ವಾದ ತರಾಸುರವರ ಮೇಲಿದ್ದುದರಿಂದ ದುರ್ಗಾಸ್ತಮಾನದಂತಹ ಐತಿಹಾಸಿಕ ಕಾದಂಬರಿ ಬರೆದು ಮುಗಿಸಿದರು. ರಾಜ್ಯ ಸರ್ಕಾರ ಎಲ್ಲರ ಜಯಂತಿಗಳನ್ನು ಆಚರಿಸುತ್ತಿದೆ. ಅದೇ ರೀತಿ ತರಾಸು ಅವರಂತಹ ಮಹಾನ್‌ ಸಾಹಿತಿಯ ಜಯಂತಿಯನ್ನೂ ಆಚರಿಸಬೇಕೆಂದರು.

ಡಾ| ರಾಮಚಂದ್ರ ನಾಯಕ ಮಾತನಾಡಿ, ಐತಿಹಾಸಿಕ ಚಿತ್ರದುರ್ಗದಲ್ಲಿ ರಾಜವೀರ ಮದಕರಿ ನಾಯಕನ ಪ್ರತಿಮೆ ನಿರ್ಮಾಣವಾಗಬೇಕೆಂಬುದು ತರಾಸುರವರ ಕನಸಾಗಿತ್ತು. ಅವರ ಆಸೆಯಂತೆ ಪ್ರತಿಮೆ ನಗರದಲ್ಲಿ ರಾರಾಜಿಸುತ್ತಿದೆ. ಶ್ರೀಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯ ಮುಂದೆ ಕಂಚಿನ ಪ್ರತಿಮೆ ನಿರ್ಮಾಣವಾಗಲಿ. ತರಾಸುರವರ ಪುಸ್ತಕಗಳು ಗ್ರಂಥಾಲಯದಲ್ಲಿ ಎಲ್ಲರಿಗೂ ಓದಲು ಸಿಗುವಂತಾಗಬೇಕೆಂದು ಮನವಿ ಮಾಡಿದರು.

ಶ್ರೀಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದ ಅ ಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಬಾರಿ ತರಾಸುರವರ 101ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಚಿತ್ರದುರ್ಗದ ಇತಿಹಾಸವನ್ನು ಬೆಳಕಿಗೆ ತಂದ ಶ್ರೇಷ್ಠ ಸಾಹಿತಿ ತರಾಸುರವರ ಪುಸ್ತಕಗಳನ್ನು ವಿಶೇಷವಾಗಿ ವಿದ್ಯಾರ್ಥಿಗಳು ಓದಿದಾಗ ಇತಿಹಾಸದ ಜ್ಞಾನ ಮೂಡುತ್ತದೆ. ಮುಂದಿನ ದಿನಗಳಲ್ಲಿ ಈ ಪ್ರತಿಮೆಗೆ ಹೊಸ ರೂಪ ಕೊಡಲಾಗುವುದೆಂದು ತಿಳಿಸಿದರು.

ಡಾ| ಮಂಜುನಾಥ್‌, ಜಯಣ್ಣ ಸೇರಿದಂತೆ ವಿದ್ಯಾರ್ಥಿಗಳು, ತರಾಸು ಅಭಿಮಾನಿಗಳು ಜಯಂತಿಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Now CoWIN portal will have Hindi and 14 regional languages by next week

ಕೋ-ವಿನ್ ಮುಂದಿನ ವಾರದಲ್ಲಿ ಹಿಂದಿ ಸೇರಿ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ : ಕೇಂದ್ರ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

fಗಹಜಹಗ್ದೆರತಗವಚಷ

ಸಸಿಹಿತ್ಲುವಿಗೆ 50 ಕೋಟಿ. ರೂ. ವಿಶೇಷ ಪ್ಯಾಕೇಜ್ ಘೋಷಿಸಿ : ಅಭಯಚಂದ್ರ

ರಾಜ್ಯದಲ್ಲಿಂದು 38603 ಕೋವಿಡ್ ಪಾಸಿಟಿವ್ ಪ್ರಕರಣ; 34635 ಮಂದಿ ಗುಣಮುಖ, 476 ಜನರು ಸಾವು

ರಾಜ್ಯದಲ್ಲಿಂದು 38603 ಕೋವಿಡ್ ಪಾಸಿಟಿವ್ ಪ್ರಕರಣ; 34635 ಮಂದಿ ಗುಣಮುಖ, 476 ಜನರು ಸಾವು

West Bengal: CBI court grants all four TMC leaders bail in Narada case

ನಾರದ ಸ್ಟಿಂಗ್ ಪ್ರಕರಣ : ಟಿಎಂಸಿ ಮುಖಂಡರಿಗೆ ಜಾಮೀನು ನೀಡಿದ ಸಿಬಿಐ ನ್ಯಾಯಾಲಯ

ಮಹಾಲಿಂಗಪುರ ಪಟ್ಟಣಕ್ಕೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್

ಮಹಾಲಿಂಗಪುರ ಪಟ್ಟಣಕ್ಕೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್

್ನಬವ್ದಸಅಸಷಚವ

ಬೋಟ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ : ಆರ್ ಅಶೋಕ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿರಿಯೂರು ರೈತ ಬೆಳೆದಿದ್ದ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

ಹಿರಿಯೂರು ರೈತ ಬೆಳೆದಿದ್ದ 60 ಚೀಲ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

16-20

ಪ್ರಾಣ ರಕ್ಷಣೆಗೆ ವೈದ್ಯರು ಶ್ರಮಿಸಿ

16-19

7 ಸಾವಿರ ಲೀಟರ್‌ ಆಕ್ಸಿಜನ್‌ ಪೂರೈಕೆಗೆ ಪ್ರಸ್ತಾವನೆ

cats

‘ಸಾಯೋರು ಎಲ್ಲಾದರೂ ಸಾಯಲಿ’ : ಶಾಸಕ ಚಂದ್ರಪ್ಪ

cats

ಸಂಕಷ್ಟದ ಸಮಯದಲ್ಲಿ ರಾಜಕಾರಣ ಸರಿಯಲ್ಲ : ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

MUST WATCH

udayavani youtube

ಮುಂಬೈಗೂ ತಟ್ಟಿದ ತೌಕ್ತೆ ಸೈಕ್ಲೋನ್‌ ಎಫೆಕ್ಟ್‌!

udayavani youtube

ಕಳೆದ 24ಗಂಟೆಗಳಲ್ಲಿ 2.81 ಲಕ್ಷ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆ

udayavani youtube

ಕಾಪು: ಟಗ್ ನಲ್ಲಿ ಸಿಲುಕಿದ್ದ ಎಲ್ಲಾ ಕಾರ್ಮಿಕರ ರಕ್ಷಣೆ; ನೌಕಾದಳದಿಂದ ಯಶಸ್ವಿ ಏರ್ ಲಿಫ್ಟ್

udayavani youtube

ಕೋಳಿ ಮೊಟ್ಟೆ ಕದ್ದ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು!

udayavani youtube

ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!

ಹೊಸ ಸೇರ್ಪಡೆ

Now CoWIN portal will have Hindi and 14 regional languages by next week

ಕೋ-ವಿನ್ ಮುಂದಿನ ವಾರದಲ್ಲಿ ಹಿಂದಿ ಸೇರಿ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ : ಕೇಂದ್ರ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

fಗಹಜಹಗ್ದೆರತಗವಚಷ

ಸಸಿಹಿತ್ಲುವಿಗೆ 50 ಕೋಟಿ. ರೂ. ವಿಶೇಷ ಪ್ಯಾಕೇಜ್ ಘೋಷಿಸಿ : ಅಭಯಚಂದ್ರ

ರಾಜ್ಯದಲ್ಲಿಂದು 38603 ಕೋವಿಡ್ ಪಾಸಿಟಿವ್ ಪ್ರಕರಣ; 34635 ಮಂದಿ ಗುಣಮುಖ, 476 ಜನರು ಸಾವು

ರಾಜ್ಯದಲ್ಲಿಂದು 38603 ಕೋವಿಡ್ ಪಾಸಿಟಿವ್ ಪ್ರಕರಣ; 34635 ಮಂದಿ ಗುಣಮುಖ, 476 ಜನರು ಸಾವು

West Bengal: CBI court grants all four TMC leaders bail in Narada case

ನಾರದ ಸ್ಟಿಂಗ್ ಪ್ರಕರಣ : ಟಿಎಂಸಿ ಮುಖಂಡರಿಗೆ ಜಾಮೀನು ನೀಡಿದ ಸಿಬಿಐ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.