Channagiri; ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಚನ್ನಗಿರಿಯಲ್ಲಿ ಬಿಗಿ ಬಂದೋಬಸ್ತ್


Team Udayavani, May 25, 2024, 11:33 AM IST

Channagiri; ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಚನ್ನಗಿರಿಯಲ್ಲಿ ಬಿಗಿ ಬಂದೋಬಸ್ತ್

ದಾವಣಗೆರೆ: ಮಟ್ಕಾ ನಡೆಸುವ ಅನುಮಾನದ ಮೇಲೆ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಪಟ್ಟಣದಲ್ಲಿ ನೀರವ ಮೌನ ಆವರಿಸಿದೆ.

ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಪೊಲೀಸರೇ ಲಾಕಪ್ ಡೆತ್ ಮಾಡಿದ್ದಾರೆಂದು ಆರೋಪಿಸಿ ಐದು ನೂರಕ್ಕೂ ಹೆಚ್ಚು ಜನ ಏಕಾಏಕಿ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ, ಠಾಣೆಯ ಕಿಟಕಿ ಬಾಗಿಲು, ಪೊಲೀಸರ ಬಸ್, ಜೀಪ್ ಸೇರಿದಂತೆ ಇನ್ನಿತರ ವಾಹನಗಳನ್ನು ಉರುಳಿಸಿ ಧ್ವಂಸಗೊಳಿಸಿದ್ದರು. ಇದನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.

ಗಲಭೆಯಲ್ಲಿ 11 ಪೊಲೀಸರಿಗೆ ಗಾಯವಾಗಿದ್ದು, ಏಳು ಪೊಲೀಸ್ ವಾಹನಗಳಿಗೆ ಕಲ್ಲ ತೂರಿ ಹಾನಿಗೊಳಿಸಲಾಗಿದೆ. ಗಲಭೆಯಲ್ಲಿ ಗಾಯಗೊಂಡ ಪೊಲೀಸರಿಗೆ ಚಿಕಿತ್ಸೆ ನೀಡಲಾಗಿದೆ.

ಪಟ್ಟಣದಲ್ಲಿ ಮೀಸಲು ಪಡೆ ಪೊಲೀಸ್ ಸೇರಿದಂತೆ ಹೆಚ್ಚುವರಿ ಪೊಲೀಸ್ ಪಡೆ ಪಹರೆ ಹಾಕಿದ್ದು, ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಏನಾಗಿತ್ತು?

ಮಟ್ಕಾ ಜೂಜಾಟದ ಅನುಮಾನದ ಮೇಲೆ ವಿಚಾರಣೆ ನಡೆಸಲು ಪಟ್ಟಣದ ಟಿಪ್ಪುನಗರದ ನಿವಾಸಿ ಕಾರ್ಪೆಂಟರ್ ಆದಿಲ್ (32)ನನ್ನು  ಪೊಲೀಸರು ಠಾಣೆಗೆ  ಕರೆತಂದಿದ್ದರು. ಈ ಸಂದರ್ಭದಲ್ಲಿ ಆತ ಕಡಿಮೆ ರಕ್ತದೊತ್ತಡದಿಂದ ಕುಸಿದು ಬಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದುರೂ ಆತ ಬದುಕುಳಿಯಲಿಲ್ಲ.  ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರು ಠಾಣೆಯ ಮುಂದೆ ಶವ ಇಟ್ಟು, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಆದಿಲ್‌ನನ್ನು ಪೊಲೀಸರೇ ಹೊಡೆದು ಲಾಕಪ್ ಡೆತ್ ಮಾಡಿದ್ದಾರಂತೆ ಎಂಬ ಸುದ್ದಿ ಮಿಂಚಿನಂತೆ ಹಬ್ಬಿ, 500ಕ್ಕೂ ಹೆಚ್ಚು ಜನರು ಠಾಣೆಗೆ ನುಗ್ಗಿ ಕಿಟಕಿ ಗಾಜು, ಪೊಲೀಸ್ ವಾಹನಗಳಿಗೆ ಕಲ್ಲು ತೂರಿ ಧ್ವಂಸಗೊಳಿಸಿದ್ದರು.

ಠಾಣೆಯಲ್ಲಿ ಆರೇಳು ನಿಮಿಷವೂ ಇರಲಿಲ್ಲ- ಎಸ್ಪಿ

ನಿನ್ನೆ ಪೊಲೀಸ್ ಆದಿಲ್ ಎಂಬ ವ್ಯಕ್ತಿಯನ್ನು ಕರೆತರಲಾಗಿತ್ತು. ಠಾಣೆಗೆ ಕರೆತರುತ್ತಿದ್ದಂತೆ ಆತ ಕುಸಿದು ಬಿದ್ದ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಆರರಿಂದ ಏಳು ನಿಮಿಷ ಕೂಡ ಇರಲಿಲ್ಲ. ಮೃತನ ಕಡೆಯವರು ಲಾಕಪ್ ಡೆತ್ ಎಂದು ಹೇಳುತ್ತಿದ್ದಾರೆ, ನಮ್ಮಲ್ಲಿ ಸಿಸಿ ಕ್ಯಾಮರಾ ಇದೆ. ಎಲ್ಲ ಪರಿಶೀಲನೆ ಮಾಡಲಾಗುತ್ತಿದೆ. ಪ್ರಾಮಾಣಿಕ ತನಿಖೆ ಮಾಡುತ್ತೇವೆ. ಮೃತನ ತಂದೆ ಈ ಕುರಿತು ದೂರು ಕೊಟ್ಟಿದ್ಸಾರೆ ತನಿಖೆ ಆಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂರು ಪ್ರಕರಣ ದಾಖಲಾಗಿದೆ. ಏಳು ಪೊಲೀಸ್ ವಾಹನ ಹಾಗೂ ಹನ್ನೊಂದು ಜನ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ನಿಷೇಧಾಜ್ಞೆ ಜಾರಿಗೊಳಿಸಿಲ್ಲ ಎಂದು ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.

ನ್ಯಾಯಾಧೀಶರ ಸಮ್ಮುಖದಲ್ಲೇ ಮರಣೋತ್ತರ ಪರೀಕ್ಷೆ: ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಈಗಾಗಲೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಂಭೀರ ಪ್ರಕರಣ ಇದಾಗಿರುವದರಿಂದ ನ್ಯಾಯಾಧೀಶರ ಸಮ್ಮುಖದಲ್ಲಿ ಶವ ಪರೀಕ್ಷೆ ಮಾಡಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

ಟಾಪ್ ನ್ಯೂಸ್

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

KARADI (2)

Jagalur ; ರೈತನ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಮೂರು ಕರಡಿಗಳು

Shamanuru Shivashankarappa

Road ಅಲ್ಲಿ ಹೋಗುವವರು ಕಂಪ್ಲೆಂಟ್ ಕೊಟ್ಟರೆ ಅರೆಸ್ಟಾ?: ಬಿಎಸ್ ವೈ ಪರ ಶಾಮನೂರು

mp renukacharya

ಬಿಎಸ್ ವೈ ವಿರುದ್ದದ ಷಡ್ಯಂತ್ರದ ಹಿಂದೆ ಪ್ರಭಾವಿ ಸಚಿವರಿದ್ದಾರೆ: ರೇಣುಕಾಚಾರ್ಯ

17

Priyanka Jarakiholi: ಸಮಸ್ಯೆ ಇರುವ ಮಾತ್ರಕ್ಕೆ ಪ್ರತ್ಯೇಕ ರಾಜ್ಯ ಪ್ರಸ್ತಾವ ಸಲ್ಲ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.