ಗ್ರಾಮಕ್ಕೆ ನುಗ್ಗಿದ ಮಳೆ ನೀರು: 150 ಮನೆಗೂ ನೀರಿನಲ್ಲಿ ಜಲಾವೃತ

Team Udayavani, Oct 7, 2019, 4:42 PM IST

ಕುಷ್ಟಗಿ: ತಾಲೂಕಿನ ನಿಡಶೇಷಿ ವ್ಯಾಪ್ತಿಯಲ್ಲಿ ಸುರಿದ ಧಾರಕಾರ ಮಳೆಗೆ ನಾಲೆಯ ನೀರು ನಿಡಶೇಷಿ ಗ್ರಾಮಕ್ಕೆ ನುಗ್ಗಿದ್ದರಿಂದ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಗ್ರಾಮದ ಹೊರವಲಯದಲ್ಲಿ ನಾಲೆಗೆ ಕಿರು ಸೇತುವೆ ಪೈಪ್ ಅಳವಡಿಸಲಾಗಿತ್ತು. ಧಾರಕಾರ ಮಳೆಯಿಂದ ಪೈಪಿನ ಗಾತ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ನೀರು ಗ್ರಾಮದೊಳಗೆ ನುಗ್ಗಿದೆ.

ಏಕಾ ಏಕಿ ನೆರೆ ನೀರು ಬಂದ ಕಾರಣ ಈ ಭಾಗದ ಜನರು ಭಯಭೀತರಾದರು. ಇದೀಗ ತೋಟಗಾರಿಕಾ ಇಲಾಖೆಯ ಫಾರ್ಮ್ ಆವರಣದ ಗೋಡೆ ಒಡೆದು ನೀರು ಬೇರೆ ಕಡೆ ಹರಿದು ಹೋಗುವ ವ್ಯವಸ್ಥೆ ಮಾಡಿರುವುದರಿಂದ ಗ್ರಾಮದೊಳಗೆ ನೀರು ನುಗ್ಗುವ ಪ್ರಮಾಣ ಕಡಿಮೆಯಾಗಿದೆ.

ಘಟನಾ ಸ್ಥಳಕ್ಕೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ