ಅವಘಡ ಕಾರ್ಯಾಚರಣೆಗೆ ದಳ ಸನ್ನದ್ಧ


Team Udayavani, Mar 20, 2020, 4:01 PM IST

ಅವಘಡ ಕಾರ್ಯಾಚರಣೆಗೆ ದಳ ಸನ್ನದ್ಧ

ಚಿಕ್ಕನಾಯಕನಹಳ್ಳಿ: ಬೇಸಿಗೆ ಆರಂಭವಾಗಿದ್ದು, ಕಳೆದ 80 ದಿನಗಳಲ್ಲಿ ತಾಲೂಕಿನಲ್ಲಿ ಸುಮಾರು 121 ಬೆಂಕಿ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಸಮಯಕ್ಕೆ ಸರಿಯಾಗಿ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಜತೆಗೆ ಅಗ್ನಿ ಶ್ಯಾಮಕ ದಳ ಹಿಂದಿಗಿಂತಲೂ ಹೆಚ್ಚು ಸದೃಢವಾಗಿದ್ದು, ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿದೆ.

ಕಳೆದ ವರ್ಷ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ತೋಟ, ಹೊಲ, ಕಾಡು ಪ್ರದೇಶ ಗಳಲ್ಲಿ ಹುಲ್ಲು, ಗಿಡಗಂಟೆಗಳು ಹಾಗೂ ಬೇಲಿಗಳು ಹೆಚ್ಚಾಗಿ ಬೆಳೆದ್ದು, ಬಿಸಿಲಿಗೆ ಒಣಗಿವೆ. ಸ್ವಲ್ಪ ಬೆಂಕಿ ತಾಕಿ ದರೂ ಸುಟ್ಟು ಭಸ್ಮವಾಗುತ್ತವೆ. ತೋಟ, ಹೊಲಗಳಿಗೆ ಬೆಂಕಿ ಬಿದ್ದಿರುವ ದೂರು ಹೆಚ್ಚಾಗಿ ಬರುತ್ತಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ 15 ರಿಂದ 20 ಪ್ರಕರಣಗಳು ಇದುವರೆಗೆ ದಾಖಲಾಗಿದೆ ಎಂದು ತಿಳಿದು ಬಂದಿದೆ.

ವಿದ್ಯುತ್‌ ತಂತಿಗಳಿಂದ ಅವಘಡ: ವಿದ್ಯುತ್‌ ತಂತಿ ಶಾರ್ಟ್‌ಗಳಿಂದ ಹೆಚ್ಚಾಗಿ ಬೆಂಕಿ ಅವ ಘಡಗಳು ನಡೆಯುತ್ತಿದೆ.  ಟೀಸಿಗಳ ಒವರ್‌ ಲೋಡ್‌, ತಂತಿಗಳ ಸ್ಪರ್ಷ ದಿಂದ ಒಣಗಿದ ಹುಲ್ಲಿನ ಮೇಲೆ ಬೆಂಕಿ ಕಿಡಿ ಬಿದ್ದು, ಬೆಂಕಿ ಪಸರಿಸುತ್ತಿದೆ. ವಿದ್ಯುತ್‌ ಇಲಾಖ ಮುಂಜಾಗ್ರತೆ ಕ್ರಮ ಅನುಸರಿಸಬೇಕಾಗಿದೆ ಎಂದು ಜನರು ಆಗ್ರಹಿಸಿದ್ದಾರೆ.

ಸಾರ್ವಜನಿಕರಿಗೆ ಕಿವಿಮಾತು: ರೈತರು ತಮ್ಮ ತೋಟಗಳಲ್ಲಿ ಒಣಗಿರುವ ಹುಲ್ಲು, ಹೆಚ್ಚಾಗಿ ಬೆಳೆದಿರುವ ಬೇಲಿ ಸಂಪೂರ್ಣವಾಗಿ ಕಿತ್ತು ಹಾಕಬೇಕು. ಟೀಸಿ, ವಿದ್ಯುತ್‌ ತಂತಿಗಳ ಕೆಳ ಭಾಗದಲ್ಲಿ ತೆಂಗಿನ ಗರಿ, ಹುಲ್ಲು ಇರದಂತೆ ನೋಡಿಕೊಳ್ಳಬೇಕು. ಅನಾವಶಕ ವಾಗಿ ತೋಟಗಳಲ್ಲಿ ಬೆಂಕಿ ಹಚ್ಚಬಾರದು. ಬೀಡಿ ಸಿಗರೇಟ್‌ ಸೇದಿದಾಗ ಸಂಪೂರ್ಣ ಆರಿಸ ಬೇಕು ಎಂಬ ಸಲಹೆಗಳನ್ನು ಆಗ್ನಿ ಶಾಮಕ ದಳದ ಅಧಿಕಾರಿಗಳು ನೀಡಿದ್ದಾರೆ.

 ಸದೃಢವಾಗಿದೆ ದಳ: ಆಗ್ನಿಶಾಮಕ ದಳದಲ್ಲಿ ಬೆಂಕಿ ನಂದಿಸಲು 2 ವಾಹನ, 12 ಸಿಬ್ಬಂದಿ ಹಾಗೂ ಹೆಚ್ಚುವರಿ 7 ಜನ ಹೋಮ್‌ಗಾರ್ಡ್ಸ್‌ಸಿಬ್ಬಂದಿ ಇದ್ದಾರೆ. ದಿನದ 24 ಗಂಟೆ ಸೇವೆ ಸಲ್ಲಿಸಲು ಆಗ್ನಿಶಾಮಕ ದಳ ಸಿದ್ಧವಿದೆ. ಕರೆ ಬಂದ ಕ್ಷಣದಿಂದಲೇ ಬೆಂಕಿ ಅವಘಡ ಸ್ಥಳಕ್ಕೆ ಹೋಗಿ ಬಹುತೇಕ ಕಡೆ ಆಪಾರ ನಷ್ಟ ತಡೆದಿದ್ದಾರೆ. ಪ್ರತಿ ತಿಂಗಳು ಶಾಲೆ ಮಕ್ಕಳು, ಜಾತ್ರೆ, ಜನಸಾಂದ್ರತೆ ಪ್ರದೇಶದಲ್ಲಿ ಆಗ್ನಿ ಆವಘಡ ಬಗ್ಗೆ ಮಾಹಿತಿ ಹಾಗೂ ಅಣಕು ಪ್ರದರ್ಶನ ನೀಡಿ, ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೋಟಗಳಲ್ಲಿ ಒಣ ಹುಲ್ಲು, ಬೇಲಿ ಇರದಂತೆ ನೋಡಿಕೊಳ್ಳಿ. ದ್ವೇಷಕ್ಕೆ ಬೆಂಕಿ ಹಚ್ಚಬೇಡಿ.ದಿನದ 24 ಗಂಟೆ ಅಗ್ನಿಶಾಮಕ ವಾಹನ ಸೇವೆಗೆ ಸಿದ್ಧವಿದೆ. ಜ್ಞಾನಮೂರ್ತಿ, ಆಗ್ನಿಶಾಮಕ ಠಾಣಾಧಿಕಾರಿ

 

 -ಚೇತನ್‌

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.