ಉಡುಪಿ ಜಿಲ್ಲಾ ಇವಿಎಂಗಳಿಗೆ ಶಾಶ್ವತ ಸ್ಟ್ರಾಂಗ್‌ ರೂಮ್‌

2.65 ಕೋ.ರೂ. ವೆಚ್ಚದ ಯೋಜನೆ, ಚುನಾವಣ ಆಯೋಗದಿಂದ ಅನುದಾನ

Team Udayavani, Jun 25, 2019, 10:04 AM IST

ಉಡುಪಿ: ಜಿಲ್ಲೆಯಲ್ಲಿ ಚುನಾವಣೆಗೆ ಬಳಸುವ ಮತಯಂತ್ರ ಗಳಿಗಾಗಿ ಶಾಶ್ವತ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಮ್‌) ಸದ್ಯವೇ ಉಡುಪಿಯಲ್ಲಿ ಲಭ್ಯ ವಾಗಲಿದೆ. ಚುನಾವಣಾ ಆಯೋಗದ ನಿರ್ದೇ ಶನದಂತೆ ಮಣಿಪಾಲ ರಜತಾದ್ರಿಯಲ್ಲಿ ಇರುವ ಜಿಲ್ಲಾಧಿಕಾರಿ ಕಚೇರಿ ಆವ ರಣದಲ್ಲಿ “ಪರ್ಮನೆಂಟ್‌ ಸ್ಟ್ರಾಂಗ್‌ ರೂಮ್‌’ ನಿರ್ಮಾಣ 2.65 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿದೆ.

ಇವಿಎಂಗಳಿಗೆ ಇಕ್ಕಟ್ಟಿತ್ತು
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ಗಳಿಗೆ ಸಂಬಂಧಿಸಿ 4,700ರಷ್ಟು ಮತ ಯಂತ್ರಗಳು, ವಿವಿ ಪ್ಯಾಟ್‌ಗಳಿವೆ. ಆದರೆ ಇವುಗಳಿಗೆ ಭದ್ರ ಸ್ಥಳಾವಕಾಶದ ಕೊರತೆ ಕಾಡುತ್ತಿತ್ತು. ಮುಖ್ಯವಾಗಿ ಚುನಾವಣೆಯ ಪೂರ್ವದಲ್ಲಿ ನಡೆ ಯುವ ಎಫ್ಎಲ್‌ಸಿ (ಫ‌ಸ್ಟ್‌ ಲೆವೆಲ್‌ ಚೆಕ್ಕಿಂಗ್‌), ಅಭ್ಯರ್ಥಿಗಳ ಪರಿಶೀಲನೆ ಮೊದಲಾದ ಮಹತ್ವದ ಪ್ರಕ್ರಿಯೆ ನಡೆಸಲು ಇಕ್ಕಟ್ಟಾಗುತ್ತಿತ್ತು. ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಭ್ಯ ಇತರ ಜಾಗ ಬಳಸಬೇಕಾಗಿತ್ತು. ಹೀಗಾಗಿ ಭದ್ರತೆ ತ್ರಾಸದಾಯಕವಾಗಿತ್ತು.

ಶಸ್ತ್ರಧಾರಿಗಳಿಂದ ಭದ್ರತೆ
ಇವಿಎಂ ಮತ್ತು ವಿವಿ ಪ್ಯಾಟ್‌ಗಳಿಗೆ ಪ್ರತಿ ದಿನವೂ 24 ಗಂಟೆ ನಿರಂತರ ಭದ್ರತೆ ಒದಗಿಸಬೇಕಿದೆ. ನಾಲ್ಕು ಅಥವಾ ಅದ ಕ್ಕಿಂತ ಹೆಚ್ಚು ಮಂದಿ ಕಾವಲಿರುತ್ತಾರೆ.
ಇಬ್ಬರು ಇನ್‌ಚಾರ್ಜ್‌ ಅಧಿಕಾರಿಗಳಿರುತ್ತಾರೆ. ಚುನಾವಣೆ ಫ‌ಲಿತಾಂಶ ಹೊರ ಬಂದು 45 ದಿನಗಳ ಕಾಲ ಇವಿಎಂಗಳಲ್ಲಿ ದತ್ತಾಂಶಗಳನ್ನು ಕಾಯ್ದುಕೊಳ್ಳ ಲಾಗುತ್ತದೆ. ಯಾರಾದರೂ ಫ‌ಲಿ ತಾಂಶದ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೆ, ಮರು ಎಣಿಕೆ ಸಂದರ್ಭ ಬಂದರೆ ಇದರ ಅಗತ್ಯ ಬೀಳುತ್ತದೆ. 45 ದಿನಗಳ ಅನಂತರ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಂದ ವರದಿ ಪಡೆದು ದತ್ತಾಂಶ ಅಳಿಸಲಾಗುತ್ತದೆ. ಆದರೆ ಭದ್ರತೆ ಮುಂದುವರಿಯುತ್ತದೆ. ಈ
ಕಟ್ಟಡ ಕೂಡ ಕಚೇರಿಯನ್ನು ಹೊಂದಿರುತ್ತದೆಯಾದರೂ ಜಿಲ್ಲಾ ಚುನಾವಣಾ ಕಚೇರಿ ಈಗ ಇರುವ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಇರುತ್ತದೆ.

ಡಿಸೆಂಬರ್‌ನಲ್ಲಿ ಪೂರ್ಣ
ಸುಮಾರು 10,000 ಅಡಿಯ (ನೆಲ ಅಂತಸ್ತು) ಕಟ್ಟಡ ನಿರ್ಮಾಣ ನಡೆಯುತ್ತಿದ್ದು, ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಮರಳಿನ ಕೊರತೆ ಯಿಂದಾಗಿ ವಿಳಂಬವಾಯಿತು ಎನ್ನುತ್ತಾರೆ ಕಟ್ಟಡ ನಿರ್ಮಿಸುತ್ತಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳು.

ಏನೇನಿರುತ್ತದೆ?
*ಎಫ್ಎಲ್‌ಸಿ ರೂಮ್‌
*ವೇರ್‌ ಹೌಸ್‌
*ಪೊಲೀಸ್‌ ಕಂಟ್ರೋಲ್‌  ರೂಮ್‌
*ಕಚೇರಿ
*ಶೌಚಾಲಯಗಳು

ಎಂಟು ಜಿಲ್ಲೆಗಳಿಗೆ ಮಂಜೂರು
ಇವಿಎಂಗಳನ್ನು ಸದ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರಿಸಲಾಗುತ್ತಿತ್ತು. ಆದರೆ ಸಮರ್ಪಕ ಜಾಗದ ಸಮಸ್ಯೆ ಇತ್ತು. ಈಗ ಗೋಡೌನ್‌ ರೀತಿಯಲ್ಲಿ ಸುರಕ್ಷಿತ, ಸುವ್ಯವಸ್ಥಿತ ಕಟ್ಟಡ ನಿರ್ಮಾಣವಾಗುತ್ತಿದೆ. ಉಡುಪಿ, ಕೋಲಾರ ಸೇರಿದಂತೆ ಏಳೆಂಟು ಜಿಲ್ಲೆಗಳು ಇಂತಹ ಸ್ಟ್ರಾಂಗ್‌ ರೂಮ್‌ಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆ ಜಿಲ್ಲೆಗಳಿಗೆ ಮಂಜೂರಾಗಿದೆ. ಮುಂದಿನ ಹಂತದಲ್ಲಿ ಇತರ ಜಿಲ್ಲೆಗಳಿಗೂ ಶಾಶ್ವತ ಸ್ಟ್ರಾಂಗ್‌ ರೂಂ ಮಂಜೂರಾಗಬಹುದು.
– ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿ, ಉಡುಪಿ

ಸಂತೋಷ್‌ ಬೊಳ್ಳೆಟ್ಟು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ