ಸೆಮಿಫೈನಲ್‌ ಕದನ:ಕಿವೀಸ್‌ ಬಿಗಿ ದಾಳಿ; ಸಂಕಷ್ಟದಲ್ಲಿ ಕೊಹ್ಲಿ ಪಡೆ

ಕೊಹ್ಲಿ ಪಡೆಗೆ 240 ರನ್‌ ಗುರಿ ನೀಡಿದ ಕಿವೀಸ್‌

Team Udayavani, Jul 10, 2019, 3:38 PM IST

ಮ್ಯಾಂಚೆಸ್ಟರ್‌: ಮಳೆಯಿಂದ ತೀವ್ರ ಅಡಚಣೆಯಾಗಿ ಇಂದು ಬುಧವಾರ ಮುಂದುವರಿಯುತ್ತಿರುವ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲಾಂಡ್‌ ತಂಡ ಭಾರತ ತಂಡಕ್ಕೆ ಗೆಲ್ಲಲು 240 ರನ್‌ಗಳ ಗುರಿ ಮುಂದಿಟ್ಟಿದೆ.

ಭಾರಿ ಮಳೆಯ ಕಾರಣ ಮುಖಾಮುಖಿ ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಲ್ಪಟ್ಟಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುತ್ತಿದ್ದ ನ್ಯೂಜಿಲ್ಯಾಂಡ್‌ 46.1 ಓವರ್‌ ಗಳಲ್ಲಿ 5 ವಿಕೆಟಿಗೆ 211 ರನ್‌ ಮಾಡಿತ್ತು. ಬುಧವಾರ ಇದೇ ಹಂತದಿಂದ ಪಂದ್ಯ ಮುಂದುವರಿದು ಉಳಿದ 3.5 ಓವರ್‌ಗಳಲ್ಲಿ ಕಿವೀಸ್‌ ಇನ್ನೂ 3 ವಿಕೆಟ್‌ ಕಳೆದುಕೊಂಡು 28 ರನ್‌ಗಳನ್ನು ಹೆಚ್ಚುವರಿಯಾಗಿ ಕಲೆ ಹಾಕಿತು. ಭಾರತಕ್ಕೆ ಗೆಲ್ಲಲು 240 ರನ್‌ಗಳ ಗುರಿಯನ್ನು ಮುಂದಿಟ್ಟಿತು.

ಭಾರತಕ್ಕೆ ಆರಂಭಿಕ ಭಾರೀ ಅಘಾತ

ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಅಘಾತ ನೀಡುವಲ್ಲಿ ಕಿವೀಸ್‌ ವೇಗಿ ಹೆನ್ರಿ ಯಶಸ್ವಿಯಾದರು. 1 ರನ್‌ಗಳಿಸಿದ್ದ ರೋಹಿತ್‌ ಶರ್ಮಾ ವಿಕೇಟ್‌ ಕೀಪರ್‌ ಲ್ಯಾಥಮ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಬೆನ್ನಲ್ಲೆ 1 ರನ್‌ ಗಳಿಸಿದ್ದ ನಾಯಕ ಕೊಹ್ಲಿ ಅವರು ಬೌಲ್ಟ್ ಎಸೆತದಲ್ಲಿ ಎಲ್‌ಬಿಡಬ್‌ಲ್ಯೂ ಗೆ ಔಟಾಗಿ ತೀವ್ರ ನಿರಾಶರಾದರು. ಕಿಕ್ಕಿರಿದು ಸೇರಿದ್ದ ಭಾರೀ ಸಂಖ್ಯೆಯ ಭಾರತೀಯ ಅಭಿಮಾನಿಗಳು ನಿರಾಶರಾದರು.

ತಂಡ 5 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ 1 ರನ್‌ಗಳಿಸಿದ್ದ ರಾಹುಲ್‌ ಅವರು ಕ್ಯಾಚಿತ್ತು ನಿರ್ಗಮಿಸಿದರು. ವಿಕೇಟ್‌ ಕೀಪರ್‌ ಲ್ಯಾಥಮ್‌ ಅದ್ಭುತ ಕ್ಯಾಚ್‌ ಪಡೆದರು. ಹೆನ್ರಿ 2 ಪ್ರಮುಖ ವಿಕೆಟ್‌ಗಳನ್ನು ಪಡೆದರು.

25 ಎಸೆತಗಳಲ್ಲಿ 6 ರನ್‌ಗಳಿಸಿ ತಾಳ್ಮೆಯ ಆಟವಾಡುತ್ತಿದ್ದ ದಿನೇಶ್‌ ಕಾರ್ತಿಕ್‌ ಅವರು ನಿಶಾನ್‌ ಎಸೆದ ಚೆಂಡನ್ನು ಹೆನ್ರಿ ಕೈಗಿತ್ತು ನಿರ್ಗಮಿಸಿದರು.

ತಂಡ 12 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 35 ರನ್‌ಗಳಿಸಿದೆ. ರಿಷಭ್‌ ಪಂತ್‌ 18 ರನ್‌ಗಳಿಸಿದ್ದು, ಜೊತೆಯಲ್ಲಿ ಹಾರ್ದಿಕ್‌ ಪಾಂಡ್ಯಾ ಅವರು ಕ್ರೀಸ್‌ನಲ್ಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ