Udayavni Special

ಗಾನಪ್ರಿಯ ಗಣೇಶನನ್ನು ನೆನೆಯೋಣ ಎಲ್ಲ !


Team Udayavani, Sep 1, 2019, 9:03 PM IST

Music-Ganapa-726

ಗಣೇಶ ನಮ್ಮೊಳಗಿನ ಬೆಳಕು. ಆತ್ಮವಿಶ್ವಾಸದ ದೀಪಕ್ಕೆ ತೈಲದಂತೆ ಶಕ್ತಿ ತುಂಬುವುದೇ ಈ ಗಣೇಶ. ಅದಕ್ಕೇ ನಾವು ಏನನ್ನು ಆರಂಭಿಸುವುದಿದ್ದರೂ ಮೊದಲು ವಂದಿಸುವುದು ಗಣಪನಿಗೆ. ಅಂಥ ಗಣಪ ಗಾನಪ್ರಿಯ ಎಂದರೆ ಅಚ್ಚರಿಯೇನೂ ಇಲ್ಲ. ಅದರಲ್ಲೂ ಹಂಸಧ್ವನಿ ರಾಗದಿಂದ ಪೂಜಿತನಾಗುವವನು ಗಣೇಶನೆಂಬ ಮಾತಿದೆ.

ಗಣೇಶನಂತೂ ಗಾನಪ್ರಿಯ. ಸಂಗೀತಾರಾಧಕರ ಇಷ್ಟ ದೇವತೆಯೂ ಸಹ. ಸಂಗೀತಕ್ಕೂ ಗಜಾನನನಿಗೂ ಅದ್ಭುತ ಸಂಬಂಧ. ಅದು ಶಾಸ್ತ್ರೀಯ ಸಂಗೀತವಾಗಲೀ, ಸುಗಮ ಸಂಗೀತವಾಗಲೀ ಗಣಪತಿಯನ್ನು ನೆನೆಸಿಕೊಳ್ಳುವುದು ಇದ್ದೇ ಇರುತ್ತದೆ. ನಿಮಗೆ ನೆನಪಿರಬಹುದು. ಸುಮಾರು ಮೂವತ್ತು ವರ್ಷಗಳ ಹಿಂದೆ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ರತಿ ಆರ್ಕೆಸ್ಟ್ರಾ ಆರಂಭವಾಗುತ್ತಿದ್ದುದೇ ಸರ್ವಕಾಲಕ್ಕೂ ಜನಪ್ರಿಯವೆನಿಸುವ  ‘ಗಜಮುಖನೇ ಗಣಪತಿಯೇ ನಿನಗೆ ವಂದನೆ…’ ಎಂಬ ಗೀತೆಯಿಂದಲೇ.

ಆಗ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದವರದ್ದು ಬೇರೆ ಮಾತು. ಆದರೆ ಉಳಿದವರಿಗೆ ಸಂಗೀತ ಎಂಬುದು ಸಿಗುತ್ತಿದ್ದುದು ರಾಮೋತ್ಸವ ಮತ್ತು ಸಾರ್ವಜನಿಕ ಗಣೇಶೋತ್ಸವಗಳಲ್ಲಿ. ಶಾಸ್ತ್ರೀಯ ಸಂಗೀತಗಾರರೂ ಅಲ್ಲಿ ಬಂದು ಹಾಡುತ್ತಿದ್ದರು. ಹಲವು ವಿನಾಯಕ ಸೇವಾ ಮಂಡಳಿಗಳು ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಸಂಗೀತ ಕಛೇರಿಗಳನ್ನು ಏರ್ಪಡಿಸುತ್ತಿದ್ದರು. ಅದರೊಂದಿಗೆ ಆರ್ಕೆಸ್ಟ್ರಾಗಳಿಗೂ ಅವಕಾಶವಿರುತ್ತಿತ್ತು. ಹಾಗೆ ನೋಡುವುದಾದರೆ ಗಣೇಶ ಎಲ್ಲ ಬಗೆಯ ಸಂಗೀತ ಪ್ರಿಯರ ಮನವನ್ನೂ ತಣಿಸುತ್ತಿದ್ದ ಎಂದೇ ಹೇಳಬೇಕು.

ಲಲಿತಕಲೆಗಳ ಆರಾಧನೆಯಲ್ಲಿ ಗಣೇಶನಿಗೆ ಆದ್ಯತಾ ಸ್ಥಾನ ಇರುವುದು ಎಲ್ಲರಿಗೂ ತಿಳಿದದ್ದೇ. ಅದು ಚಿತ್ರಕಲೆ ಇರಬಹುದು, ನೃತ್ಯವಿರುವುದು, ಸಂಗೀತವಿರಬಹುದು-ಮಿಕ್ಕಾವುದೇ ಕಲೆ ಇರಬಹುದು. ಅಲ್ಲೆಲ್ಲವೂ ಗಣೇಶನನ್ನು ಮರೆಯುವುದು ಕಡಿಮೆ. ವಿಶಿಷ್ಟವೆನ್ನಬಹುದಾದರೆ ಗಣೇಶನೂ ಎಲ್ಲದಕ್ಕೂ ಒಪ್ಪಬಲ್ಲವನು. ಸಂಗೀತದ ನೆಲೆಯಲ್ಲೇ ಹೇಳುವುದಾದರೆ ಸಾಕಷ್ಟು ಗೀತೆಗಳು ಪುಂಖಾನುಪುಂಖವಾಗಿ ಹರಿದು ಬಂದಿವೆ.

ಶಾಸ್ತ್ರೀಯ ಸಂಗೀತದಲ್ಲಂತೂ ಲೆಕ್ಕಕ್ಕೇ ಸಿಗದು. ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು ಹಂಸಧ್ವನಿ ರಾಗವನ್ನೇ ಗಣೇಶನಿಗೆ ಅರ್ಪಿಸಿದರು. ಅತ್ಯಂತ ಪ್ರಸಿದ್ಧಿಯಾದ ಕೃತಿ ವಾತಾಪಿ ಗಣಪತಿಂ ಭಜೇಯಲ್ಲಿ ಹಂಸಧ್ವನಿ ರಾಗದಿಂದ ಭೂಷಿತನಾದ ಹೇರಂಬನೇ ಎಂದು ವ್ಯಾಖ್ಯಾನಿಸುತ್ತಾರೆ. ಆ ಗೀತೆಯಂತೂ ನಿತ್ಯ ಹರಿದ್ವರ್ಣ ಕಾಡುಗಳಂತೆ ಜನಪ್ರಿಯವಾದುದು. ಅದನ್ನು ಹಾಡದವರು ಇಲ್ಲ. ಅಷ್ಟೇ ಏಕೆ? ವಿವಿಧ ಸಂಗೀತ ಪ್ರಕಾರಗಳಲ್ಲೂ ಪ್ರಯೋಗಕ್ಕೆ ಒಳಗಾದ ಕೃತಿ. ಗಣೇಶನನ್ನು ಕುರಿತಾದ ಮುದ್ಗಲ ಪುರಾಣದಲ್ಲಿ 32 ಬಗೆಯ ಗಣೇಶನನ್ನು ಉಲ್ಲೇಖಿಸಲಾಗುತ್ತದೆ. ಹದಿನಾರು ಗಣಪತಿಗಳ ಕುರಿತು ದೀಕ್ಷಿತರು ಕೃತಿಗಳನ್ನು ರಚಿಸಿದ್ದಾರೆ.

ಸಂಗೀತ ಕಲಿಯುವವರಾಗಲೀ, ಸಾಮಾನ್ಯ ಜನರಿಗಾಗಲೀ ಪುರಂದರ ದಾಸರ ಲಂಬೋದರ..ಲಕುಮಿಕರ ಗೊತ್ತಿರದಿರಲು ಸಾಧ್ಯವೇ? ಖಂಡಿತಾ ಇಲ್ಲ. ಮತ್ತೊಬ್ಬ ವಾಗ್ಗೇಯಕಾರ ತ್ಯಾಗರಾಜರು ಅಭೀಷ್ಟ ವರದ ಶ್ರೀ ಮಹಾಗಣಪತಿ ಎಂದು ಕರೆದರು. ಈ ಕೃತಿಯೂ ಸಾಕಷ್ಟು ಪ್ರಸಿದ್ಧವಾದುದೇ. ಮೈಸೂರು ವಾಸುದೇವಾಚಾರ್ಯರೂ ಸಹ ‘ವಂದೆ ಅನಿಶಂ ಅಹಂ ವಾರಣ ವದನಂ’ ಎಂದು ಕೃತಿ ರಚಿಸಿದ್ದಾರೆ. ಒಂದು ಲೆಕ್ಕದ ಪ್ರಕಾರ ಮುತ್ತುಸ್ವಾಮಿ ದೀಕ್ಷಿತರೇ ಸುಮಾರು 27 ಕ್ಕೂ ಹೆಚ್ಚು ಕೃತಿಗಳನ್ನು ವಿನಾಯಕನ ಕುರಿತು ಬರೆದಿದ್ದಾರೆ. ವಿವಿಧ ವಾಗ್ಗೇಯಕಾರರೂ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಪುರಂದರದಾಸರೂ ಸೇರಿದಂತೆ ವಿವಿಧ ದಾಸವರೇಣ್ಯರೂ ಗಜವದನನ್ನು ಆರಾಧಿಸಿದ್ದಾರೆ.

ರಂಗ ಸಂಗೀತದಲ್ಲಂತೂ ಅವನಿಗೆ ಸ್ಥಾನ ಇದ್ದೇ ಇದೆ. ರಂಗಶೈಲಿಗೆ ಒಪ್ಪುವಂತೆ ಗಣೇಶನ ಕೃತಿಗಳನ್ನು ಮಾರ್ಪಡಿಸಿಕೊಂಡ ಸಂದರ್ಭಗಳೂ ಇವೆ. ಸಿನಿಮಾಗಳಲ್ಲಿ ಕೇಳಲೇಬೇಡಿ. ಅವನ ಕುರಿತಾಗಿ ಸಾಕಷ್ಟು ಗೀತೆಗಳು ಜನಪ್ರಿಯವಾಗಿವೆ. ಭಕ್ತಿಗೀತೆಗಳ ಲೆಕ್ಕದಲ್ಲಿ ಹೇಳುವುದಾದರೆ ಲೆಕ್ಕಕ್ಕೆ ಸಿಗದು.

ಇದೇ ಕಾರಣಕ್ಕಾಗಿ ನೃತ್ಯದೊಂದಿಗೆ ಗಣಪತಿಯ ಸಂಬಂಧ ಹೇಗಿದೆಯೋ ಅಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚಿನ ಸಂಬಂಧ ಸಂಗೀತದೊಂದಿಗೆ ಇದೆ ಎಂದರೆ ತಪ್ಪೇನೂ ಇಲ್ಲ.

– ವೇಣು, ಬೆಂಗಳೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ: ಸಚಿವಾಲಯ

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡಲಿ:ಸಿದ್ದರಾಮಯ್ಯ

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡಲಿ:ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anegudda-Ganapa-726

ಆನೆಗುಡ್ಡೆ ವಿನಾಯಕನ ಸನ್ನಿಧಾನಕ್ಕೆ ಹರಿದು ಬಂದ ಭಕ್ತ ಜನ ಸಾಗರ

010919ASTRO08-SYNDGANAPAA

ಇಂದು ಕರಾವಳಿಯಾದ್ಯಂತ ಗಣೇಶ ಹಬ್ಬದ ಸಂಭ್ರಮ

UDUPI-CHOWTHI-2

ಗಣೇಶೋತ್ಸವ ಸಂಭ್ರಮ : ನಿರಂತರ ಮಳೆಗೆ ನಿರಾಸೆ ಮೂಡಿಸಿದ ಹೂವಿನ ವ್ಯಾಪಾರ

parisara-ganapa

ಇಂದು ಗಣೇಶನ ಹಬ್ಬ; ಪರಿಸರ ಸ್ನೇಹಿಯಾಗಿರಲಿ ಆಚರಣೆ

jivadaraka

ಜೀವಧಾರಕ ಮಣ್ಣಿನ ಗಣೇಶನೇ ಶ್ರೇಷ್ಠ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ