ವಾರ ಭವಿಷ್ಯ: ಈ ವಾರ ಈ ರಾಶಿಯವರಿಗಿದೆ ಶುಭ ಸುದ್ದಿ


Team Udayavani, Jan 26, 2020, 9:46 AM IST

horo

26-1-2020 ರಿಂದ 1-2-2020ರ ವರೆಗೆ

ಮೇಷ: ಕಾರ್ಯಕ್ಷೇತ್ರದಲ್ಲಿ ಸ್ವಯಂಪರೀಕ್ಷೆ ಆರಂಭಗೊಂಡಿದೆ. ದೈವಾನುಗ್ರಹ ನಿಮ್ಮನ್ನು ಉತ್ತೇಜಿಸಲಿದೆ. ನಿಮ್ಮ ಅಗಾಧ ಅನುಭವ ಹಾಗೂ ಪ್ರಯತ್ನಬಲ, ಆತ್ಮವಿಶ್ವಾಸ ವೃತ್ತಿರಂಗದಲ್ಲಿ ಬೆಳಕಿಗೆ ಬರಲಿದೆ. ಸೂಕ್ತ ಸಮಯಕ್ಕಾಗಿ ಮಾತ್ರ ಕಾಯುವುದು ಅನಿವಾರ್ಯವಾದೀತು. ಸಾಮಾಜಿಕವಾಗಿ ಬುದ್ಧಿವಂತಿಕೆಯಲ್ಲಿ ಬದುಕುವ ಸನ್ನಿವೇಶವಿದು. ಕೌಟುಂಬಿಕವಾಗಿ ಹೆಚ್ಚಿನ ನಿರೀಕ್ಷೆ ನಿರಾಸೆ ತಂದೀತು. ಟೀಕೆಗಳನ್ನು ಎದುರಿಸಲು ನೀವು ಸಿದ್ಧರಾಗಬೇಕಾದೀತು. ಆರ್ಥಿಕವಾಗಿ ಪರಿಸ್ಥಿತಿಯು ಸುಧಾರಿಸುತ್ತ ಹೋಗಲಿದೆ.
ಶುಭವಾರ: ಸೋಮ, ಮಂಗಳ, ಬುಧವಾರ

ವೃಷಭ: ವೃತ್ತಿರಂಗದಲ್ಲಿ ಅನಾವಶ್ಯಕ ರೀತಿಯಲ್ಲಿ ಕೆಲಸಕ್ಕೆ ಬಾರದ ಗಾಸಿಪ್‌ಗ್ಳೇ ನಿಮ್ಮನ್ನು ಹತಾಶೆಗೊಳಿಸಲಿದೆ. ಧೈರ್ಯ, ಪ್ರಯತ್ನ ಬಲದಿಂದ ಮುಂದುವರಿಯಿರಿ. ಹಾಗೇ ನಿರ್ಧಾರಗಳಿಂದ ಹಿಂದೆ ಸರಿಯದಿರಿ. ಆರ್ಥಿಕ ಮಟ್ಟ ನಿರೀಕ್ಷಿಸಿದ ರೀತಿಯಲ್ಲಿ ಹೆಚ್ಚಿನ ಕೆಲಸಕಾರ್ಯಗಳಿಗೆ ಅನುಕೂಲವನ್ನು ತಂದುಕೊಡಲಿದೆ. ಈ ಮಧ್ಯೆ ಅನಿರೀಕ್ಷಿತ ಧನಾಗಮನ ಕೂಡ ಅಚ್ಚರಿ ತಂದುಕೊಡಲಿದೆ. ವೈಯಕ್ತಿಕವಾಗಿ ಕಳಕೊಂಡಿದ್ದ ಅಸ್ತಿತ್ವವನ್ನು ಪುನಃ ಸಂಪಾ ದಿಸಲಿದ್ದೀರಿ. ಹಾಗೇ ವ್ಯವಸ್ಥೆಯ ಬೆಂಬಲ ಸಿಗಲಿದೆ.
ಶುಭವಾರ: ಮಂಗಳ, ಬುಧ, ಗುರುವಾರ

ಮಿಥುನ: ವೃತ್ತಿರಂಗದಲ್ಲಿ ಬದಲಾವಣೆಗೆ ನೀವು ಸಿದ್ಧರಾಗಬೇಕಾದೀತು. ಸಮಸ್ಯೆಗಳು ತಮ್ಮಿಂದ ತಾವೇ ಉಪಶಮನ ಆಗಲಿವೆ. ಕೌಟುಂಬಿಕವಾಗಿ ಸಣ್ಣ ಸಣ್ಣ ವಿಷಯಗಳಲ್ಲಿ ಅಸಮಾಧಾನ ತೋರಿಬರ ಬಹುದು. ನಿಮ್ಮ ವ್ಯಕ್ತಿತ್ವವನ್ನು ಸ್ವಾಭಿಮಾನದಿಂದ ಕಾಪಾಡಿಕೊಳ್ಳಿರಿ. ದೂರ ಸಂಚಾರ, ವಾಹನ ಚಾಲನೆಯಲ್ಲಿ ಮಿತಿ ಇರಲಿ. ವಾರಾಂತ್ಯದಲ್ಲಿ ಅನಿರೀಕ್ಷಿತ ಧನಾಗಮನ ಅಚ್ಚರಿ ತಂದೀತು. ಅವಿವಾಹಿತರು ಕ್ರಿಯಾಶೀಲರಾದಲ್ಲಿ ವೈಯಕ್ತಿಕ ಸಂಬಂಧಗಳ ಪ್ರಸ್ತಾವಗಳು ಬರಲಿವೆ.
ಶುಭವಾರ: ಬುಧ, ಗುರು, ಶನಿವಾರ

ಕರ್ಕಾ: ವ್ಯಾಪಾರ, ವ್ಯವಹಾರಗಳಲ್ಲಿ ನಾನಾ ರೀತಿಯ ಪೈಪೋಟಿಯ ವಾತಾವರಣ ತೋರಿ ಬರಲಿದೆ. ಕಠಿಣ ಪರಿಶ್ರಮ, ಪ್ರಯತ್ನ ಬಲದ ಕಾರ್ಯಶೀಲತೆ ನಿಮ್ಮ ವೃತ್ತಿ ಬದುಕಿನ ಮೇಲೆ ಭಾರೀ ಪರಿಣಾಮ ಬೀರಲಿದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಬಂದೀತು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಲಿವೆ. ಆದರೂ ಸಣ್ಣಸಣ್ಣ ವಿಷಯಗಳಲ್ಲಿ ಮನಸ್ಸನ್ನು ಕೆಡಿಸಿಕೊಳ್ಳುವಂತಾದೀತು. ತಾಳ್ಮೆ-ಸಮಾಧಾನವಿರಲಿ. ಗೋಚರದ ರಾಹು, ಕೇತುಗಳ ಪ್ರತಿಕೂಲತೆಯಿಂದ ಆರೋಗ್ಯ ಕೆಡಲಿದೆ.
ಶುಭವಾರ: ಶುಕ್ರ, ಶನಿ, ಭಾನುವಾರ

ಸಿಂಹ: ಸಾಮಾಜಿಕ ಪ್ರತಿಷ್ಠೆಗಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ನಾನಾ ರೀತಿಯಲ್ಲಿ ಧನವ್ಯಯ ಉಂಟಾಗಲಿದೆ. ವಾಸ್ತವದ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದಲ್ಲಿ ಉತ್ತಮ. ಭವಿಷ್ಯದ ಸಮಸ್ಯೆಗಳನ್ನು ಚೆನ್ನಾಗಿ ಅರಿತುಕೊಂಡು ಮುಂದುವರಿದಲ್ಲಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲು ಹೆಚ್ಚಿನ ಹೊಂದಾಣಿಕೆ ಮಾಡಿಕೊಳ್ಳಬೇಕಾದೀತು. ಯಾವುದೇ ಒತ್ತಡಕ್ಕೆ ತಲೆಬಾಗದಿರಿ.
ಶುಭವಾರ: ಬುಧ, ಶುಕ್ರ, ಭಾನುವಾರ

ಕನ್ಯಾ: ಕಾರ್ಯಕ್ಷೇತ್ರದಲ್ಲಿ ಬುದ್ಧಿವಂತಿಕೆಯ ಪ್ರಯೋಗಕ್ಕೆ ಇದೇ ಸಕಾಲ. ಯಾವುದೇ ವಾದ- ವಿವಾದಗಳಲ್ಲಿ ಸಿಕ್ಕಿಕೊಳ್ಳದಂತೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ಕೌಟುಂಬಿಕವಾಗಿ ಹೆಚ್ಚಿನ ಸಹಕಾರ ಹಾಗೂ ಉತ್ಸಾಹದ ಪ್ರತಿಕ್ರಿಯೆ ಸಮಾಧಾನ ತಂದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳನ್ನು ನಿಭಾಯಿಸಬಹುದಾಗಿದೆ. ಸಾಮಾಜಿಕವಾಗಿ ನಿಮ್ಮ ಗೌರವಕ್ಕೆ ಸಂಬಂಧಿಸಿದಂತೆ ಸ್ವಾಭಿಮಾನವನ್ನು ಕಾಪಾಡಿಕೊಳ್ಳಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಕಾಳಜಿ, ಜವಾಬ್ದಾರಿ ಎಲ್ಲ ರೀತಿಯಲ್ಲಿ ಅನುಕೂಲವಾಗಲಿದೆ.
ಶುಭವಾರ: ಬುಧ, ಗುರು, ಭಾನುವಾರ

ತುಲಾ: ನಿಮ್ಮ ಕೌಶಲ್ಯವನ್ನು ಒರೆಗೆ ಹಚ್ಚಿ ಕಾರ್ಯಸಾಧನೆಗೆ ಇಳಿಯಿರಿ. ಯಶಸ್ಸು ನಿಮ್ಮದಾದೀತು. ಸಾಮಾಜಿಕವಾಗಿ ಹೆಚ್ಚಿನ ಅನುಕೂಲಕರ ವಾತಾವರಣ ತೋರಿಬರುವುದಿಲ್ಲವಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ರಾಜಕೀಯ ವರ್ಗದವರು ಭವಿಷ್ಯದ ಸಮಸ್ಯೆಗಳನ್ನು ತಾವೇ ನಿರ್ಧರಿಸಬೇಕಾಗುತ್ತದೆ. ಆತ್ಮವಿಮರ್ಶೆಗೆ ಸರಿಯಾದ ಕಾಲವಿದು. ಯೋಚಿಸಿ, ಚಿಂತಿಸಿ ಮುಂದುವರಿಯಿರಿ.
ಶುಭವಾರ: ಗುರು, ಶನಿ, ಭಾನುವಾರ

ವೃಶ್ಚಿಕ: ನಿಮ್ಮ ಮೇಲೆ ನೀವೇ ಹತೋಟಿಯನ್ನು ಕಾಯ್ದುಕೊಳ್ಳುವುದು ಅಗತ್ಯವಿದೆ. ದೈವಾನುಗ್ರಹ ಎಲ್ಲ ರೀತಿಯಲ್ಲಿ ನಿಮ್ಮ ಮುನ್ನಡೆಗೆ ಸಹಾಯವಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮೆದುರು ಭಾರೀ ಸವಾಲಿದೆ. ಎಚ್ಚರ. ಅನುಕೂಲ ಕಾರ್ಯಕ್ಷೇತ್ರದ ಆಯ್ಕೆ ಮಾಡಿ. ಬುದ್ಧಿವಂತಿಕೆಯ ಪ್ರಯೋಗಕ್ಕೆ ಇದು ಸಕಾಲವಾಗಲಿದೆ. ಕಳೆದುಕೊಂಡಿದ್ದ ಅವಕಾಶಗಳನ್ನು ಪೂರ್ಣ ಪಡೆಯಲಿದ್ದೀರಿ. ಆದರೂ ಕೆಲವೊಂದು ಸಮಸ್ಯೆಗಳನ್ನು ನೀವೇ ನಿಭಾಯಿಸಬೇಕಾದೀತು. ವಿದ್ಯಾರ್ಥಿಗಳಿಗೆ ಅನುಕೂಲವಾದ ವಾರವಿದು.
ಶುಭವಾರ: ಗುರು, ಶನಿ, ಭಾನುವಾರ

ಧನು: ಕಾರ್ಯರಂಗದಲ್ಲಿ ನಿಮ್ಮ ಸ್ವಾಭಿಮಾನಕ್ಕೆ ತೀರಾ ಚ್ಯುತಿಯೇನೂ ತೋರಿಬರಲಾರದು. ಸಿಡುಕುತನ, ಸಿಟ್ಟು-ಸೆಡವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿರಿ. ಕಾರ್ಯಸಾಧನೆಗೆ ಸುಲಭವಾದೀತು. ನಿರುದ್ಯೋಗಿಗಳಿಗೆ ವಿವಿಧ ರೀತಿಯ ಅವಕಾಶಗಳು ಒದಗಿಬಂದು ಭವಿಷ್ಯದ ಹಾದಿಯನ್ನು ಸುಗಮಗೊಳಿಸಲಿದೆ. ಈ ಬೆಳವಣಿಗೆಗಳಿಂದ ನಿಮ್ಮನ್ನು ಅವಲಂಬಿಸಿದವರು ಸಮಾಧಾನ, ಸಂತಸಗೊಂಡಾರು. ಅವಿವಾಹಿತರು ಖಚಿತ ನಿರ್ಧಾರವನ್ನು ತೆಗೆದುಕೊಳ್ಳುವಂತಾದೀತು. ಆರ್ಥಿಕವಾಗಿ ಖರ್ಚು- ವೆಚ್ಚಗಳನ್ನು ಹತೋಟಿಯಲ್ಲಿಡಿ.
ಶುಭವಾರ: ಸೋಮ, ಮಂಗಳ, ಶನಿವಾರ

ಮಕರ: ಎಲ್ಲ ವಿಚಾರಗಳಲ್ಲಿ ಹೊಸ ಹೊಸ ಆಸೆಗಳು ಚಿಗುರಲಿವೆ. ಸಾಮಾಜಿಕವಾಗಿ ಪರಿವರ್ತನೆಯು ಸದ್ಯದಲ್ಲೇ ತೋರಿಬರಲಿದೆ. ಲೆಕ್ಕಾಚಾರದಿಂದ ಆರ್ಥಿಕ ಸಮಸ್ಯೆಯು ನಿವಾರಣೆಯಾಗಿ ಲಾಭದಾಯಕ ಆದಾಯ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭವಿದೆ. ವೈವಾಹಿಕ ಸಂಬಂಧಗಳು ಆಗಾಗ ಹಿನ್ನಡೆಗೆ ಸರಿದರೂ ಕ್ರಿಯಾಶೀಲರಾಗಿ ಮುಂದುವರಿದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶುಭ ಸೂಚನೆ ತೋರಿ ಬರಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಲಿವೆ.
ಶುಭವಾರ: ಬುಧ, ಶುಕ್ರ, ಭಾನುವಾರ

ಕುಂಭ: ಕಾರ್ಯರಂಗದಲ್ಲಿ ಆಗಾಗ ಎಡರುತೊಡರುಗಳಿದ್ದರೂ ನಿಮ್ಮ ಶ್ರಮಕ್ಕೆ ಯಶೋಭಾಗ್ಯ ಅಭಿವೃದ್ಧಿಯನ್ನು ತಂದು ಕೊಟ್ಟಾನು. ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಆಗಾಗ ಧನಾಗಮನದಿಂದ ಅನುಕೂಲವಾಗಲಿದೆ. ವೃತ್ತಿರಂಗದಲ್ಲಿ ಗುಣಮಟ್ಟ ಅನುಷ್ಠಾನ ಪಡೆಯದಿರುವುದಕ್ಕೆ ಹಿರಿಯ ಅಧಿಕಾರಿ ವರ್ಗದವರ ನಿರ್ಲಕ್ಷ್ಯ ಕಾರಣವಾದೀತು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳು. ಮಿತ್ರಬಾಂಧವರ ಆಗಮನ ಹಾಗೂ ಸಾಮಾಜಿಕವಾಗಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿರಿ.
ಶುಭವಾರ: ಗುರು, ಶುಕ್ರ, ಶನಿವಾರ.

ಮೀನ: ವ್ಯಾಪಾರ- ವ್ಯವಹಾರಗಳಲ್ಲಿ ವಿಲೀನತೆ, ಹೊಂದಾಣಿಕೆ, ಸ್ವಾಧೀನ ಪ್ರಕ್ರಿಯೆಗಳು ನಡೆಯಲಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಯತ್ನಬಲ, ಕೆಲಸಕಾರ್ಯಗಳಿಗೆ ಪ್ರತಿಫ‌ಲ ಲಭಿಸುವುದು. ಆದರೂ ಹಿತಶತ್ರುಗಳು ಕ್ರೂರ ರೂಪದಿಂದ ಶೋಷಣೆ ಮಾಡುವರು. ಜಾಗ್ರತೆ ಇರಲಿ. ರಾಜಕೀಯ ವರ್ಗದವರಿಗಂತೂ ರಾಜಕಾರಣಿಗಳನ್ನು ಓಲೈಸುವ ಪ್ರಸಂಗ ಬಂದೀತು. ಸಾಂಸಾರಿಕವಾಗಿ ಉದಾರ ದೃಷ್ಟಿಯಲ್ಲಿ ಎಲ್ಲರನ್ನೂ ಪ್ರೀತಿಸಿ, ಪೋಷಿಸಿ, ರಕ್ಷಿಸಿ ಸಂಭಾಳಿಸಿರಿ.
ಶುಭವಾರ: ಗುರು, ಶುಕ್ರ, ಶನಿವಾರ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.