ಪಂಪ್‌ವೆಲ್‌-ಪಡೀಲ್‌ ಸ್ಮಾರ್ಟ್‌ ರಸ್ತೆ ಕಾಮಗಾರಿಗೆ ವೇಗ

ಸ್ಮಾರ್ಟ್‌ ರಸ್ತೆ ಪ್ಯಾಕೇಜ್‌- 5ರಡಿ ಕಾಮಗಾರಿ

Team Udayavani, Oct 18, 2022, 12:08 PM IST

9

ಮಹಾನಗರ: ನಗರದ ಬಹು ಮುಖ್ಯ ರಸ್ತೆಗಳಲ್ಲಿ ಒಂದಾಗಿರುವ, ಪಡೀಲ್‌ – ಪಂಪ್‌ವೆಲ್‌ ರಸ್ತೆಯ ಅಭಿವೃದ್ಧಿ ಕೆಲಸ ಭರದಿಂದ ಸಾಗಿದೆ. ಬೆಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದು ಮಂಗಳೂರು ನಗರ ಪ್ರವೇಶಿಸುವ ಮುಖ್ಯ ರಸ್ತೆಯಾಗಿರುವುದರಿಂದ ವಿಸ್ತ ರಣೆ ಅಗತ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿಯ ಸ್ಮಾರ್ಟ್‌ ರಸ್ತೆ ಪ್ಯಾಕೇಜ್‌- 5ರಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಪಡೀಲ್‌ನಿಂದ ಕಾಮಗಾರಿ ಆರಂಭವಾಗಿದ್ದು, ಒಂದು ಬದಿಯಲ್ಲಿ ಸುಮಾರು 200 ಮೀ.ನಷ್ಟು ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಉಳಿದಂತೆ ಕಪಿತಾನಿಯೋ ವರೆಗೆ ಅಲ್ಲಲ್ಲಿ ತಡೆ ಗೋಡೆ ನಿರ್ಮಿಸಿ ಮಣ್ಣ ಹಾಕಿ ಸಮತಟ್ಟುಗೊಳಿಸಲಾಗಿದೆ. ರಸ್ತೆ ಬದಿಯ ಕೆಲವು ಕಟ್ಟಡಗಳನ್ನೂ ತೆರವುಗೊಳಿಸಲಾಗಿದೆ. ಮಳೆ ನೀರು ಹರಿಯುವ ಚರಂಡಿ ನಿರ್ಮಾಣ ಕೆಲಸವೂ ಅಲ್ಲಲ್ಲಿ ನಡೆಯುತ್ತಿದೆ. ರಸ್ತೆ ಕಾಮಗಾರಿ ಉದ್ದೇಶ ದಕ್ಕೆ ಸ್ಥಳದಲ್ಲಿದ್ದ ಬೃಹತ್‌ ಮರ ಗಳನ್ನು ನೆಲಸಮಗೊಳಿಸಲಾಗಿದೆ. ಸಾಧ್ಯವಿರುವ ಮರಗಳನ್ನು ಸ್ಥಳಾಂತರಗೊಳಿಸುವ ಚಿಂತನೆಯಿದೆ. ಕಡಿಯಲಾದ ಮರಗಳ ಬದಲಿಗೆ ಬೇರೆ ಕಡೆಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಸ್ಮಾರ್ಟ್‌ ಸಿಟಿಯಿಂದ ಅರಣ್ಯ ಇಲಾಖೆಗೆ ಮೊತ್ತ ಪಾವತಿ ಸಲಾ ಗಿದೆ ಎನ್ನುತ್ತಾರೆ ಅಧಿಕಾರಿಗಳು.

24 ಮೀ. ಅಗಲದ ಕಾಂಕ್ರೀಟ್‌ ರಸ್ತೆ

ಪ್ರಸ್ತುತ 10 ಮೀ. ಅಗಲದ ಡಾಮರು ರಸ್ತೆಯಿದ್ದು, ಇದು 24 ಮೀ. ಅಗಲದ ಚತುಷ್ಪಥ ಕಾಂಕ್ರೀಟ್‌ ರಸ್ತೆ ಯಾಗಿ ಪರಿವರ್ತನೆಯಾಗಲಿದೆ. ಇದರಲ್ಲಿ 3.50 ಮೀ. ಅಗಲದ ನಾಲ್ಕು ಲೇನ್‌ ಕಾಂಕ್ರೀಟ್‌ ವೇ, 3 ಮೀ.ಅಗಲದ ಇಂಟರ್‌ಲಾಕ್‌ ಅಳವಡಿಸಲಾಗುತ್ತದೆ. ಎರಡೂ ಬದಿಗಳಲ್ಲಿ ಫುಟ್‌ಪಾತ್‌, ಚರಂಡಿ, ಯುಟಿಲಿಟಿ ಡಕ್ಟ್, ರಸ್ತೆಯ ಮಧ್ಯದಲ್ಲಿ ಡಿವೈಡರ್‌, ದಾರಿದೀಪ ಅಳವಡಿಕೆಯಾಗಲಿದೆ. ಪಂಪ್‌ವೆಲ್‌ ನಿಂದ ಪಡೀಲ್‌ವರೆಗೆ ಒಟ್ಟು 2.8 ಕಿ.ಮೀ. ಉದ್ದದ ರಸ್ತೆಯಾಗಿದ್ದು, 26 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿಯಿಂದ ಅಭಿವೃದ್ಧಿಯಾಗಲಿದೆ.

ವಾಹನ ದಟ್ಟಣೆ ನಿವಾರಣೆ

ಪಡೀಲ್‌- ಪಂಪ್‌ವೆಲ್‌ ರಸ್ತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಈ ಹಿಂದೆ ಹೆದ್ದಾರಿಯಾಗಿದ್ದ ಈ ರಸ್ತೆ ಪ್ರಸ್ತುತ ಪಾಲಿಕೆಗೆ ಸೇರಿದ್ದು, ಬಿ.ಸಿ.ರೋಡ್‌ ಕಡೆಯಿಂದ ಮಂಗಳೂರು ನಗರ ಪ್ರವೇಶಿಸಲು ಇರುವ ಪ್ರಮುಖ ರಸ್ತೆ. ಸದ್ಯ ಅಗಲ ಕಿರಿದಾದ ರಸ್ತೆಯಾದ ಕಾರಣ, ಪ್ರತಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಚತುಷ್ಪಥವಾದರೆ ವಾಹನಗಳ ಸುಗಮ ಸಂಚಾರ ಸಾಧ್ಯವಾಗಲಿದೆ. ಜತೆಗೆ ಪಡೀಲ್‌ನಲ್ಲಿ ನಿರ್ಮಾಣ ವಾಗಲಿರುವ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ ಮೊದಲಾದೆಡೆಗಳಿಗೆ ತೆರಳು ವವರಿಗೂ ಅನುಕೂಲವಾಗಲಿದೆ.

ರಸ್ತೆಗೆ ಡಾಮರು

ಪ್ರಸ್ತುತ ವಾಹನಗಳು ಸಂಚರಿಸುತ್ತಿರುವ ಈ ಹಿಂದಿನ ಡಾಮರು ರಸ್ತೆ ಮಳೆ, ಕಾಮಗಾರಿಯ ಕಾರಣ ದಿಂದಾಗಿ ಹದಗೆಟ್ಟಿತ್ತು. ಇದೀಗ ರಸ್ತೆಯನ್ನು ಪ್ಯಾಚ್‌ವರ್ಕ್‌ ಮೂಲಕ ದುರಸ್ತಿ ಪಡಿಸಲಾಗಿದೆ.ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅವ ಕಾಶವಾಗಿದೆ. ಕಾಮಗಾರಿಯ ಕಾರಣದಿಂದಾಗಿ ಧೂಳು ಸಾಮಾನ್ಯವಾಗಿಬಿಟ್ಟಿದೆ.

ಮಾರ್ಚ್‌ ಅಂತ್ಯದೊಳಗೆ ಪೂರ್ಣ: ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಪೂರಕವಾಗಿ ವಿದ್ಯುತ್‌ ಕಂಬಗಳ ತೆರವು, ತಡೆಗೋಡೆಗಳ ನಿರ್ಮಾಣ, ನೀರು, ಒಳಚರಂಡಿ ಪೈಪ್‌ಗ್ಳನ್ನು ಸಮರ್ಪಕವಾಗಿ ಅಳವಡಿಸುವ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಪಡೀಲ್‌ ಭಾಗದಲ್ಲಿ ಒಂದು ಕಡೆ ರಸ್ತೆ ನಿರ್ಮಾಣ ಮಾಡಲಾಗಿದೆ. 2023ರ ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. –ಅರುಣ್‌ ಪ್ರಭ ಕೆ.ಎಸ್‌., ಜನರಲ್‌ ಮ್ಯಾನೇಜರ್‌-ಟೆಕ್ನಿಕಲ್‌, ಮಂಗಳೂರು ಸ್ಮಾರ್ಟ್‌ ಸಿಟಿ ಲಿ.

ಟಾಪ್ ನ್ಯೂಸ್

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ

Praveen Nettar Case; Arrest of main accused Mustafa Paychar of Sulya

Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Fraud: ಕ್ರೈಂ ಬ್ರಾಂಚ್‌ ಹೆಸರಲ್ಲಿ 1.60 ಕೋ.ರೂ. ಪಡೆದು ವಂಚನೆ   

Fraud: ಕ್ರೈಂ ಬ್ರಾಂಚ್‌ ಹೆಸರಲ್ಲಿ 1.60 ಕೋ.ರೂ. ಪಡೆದು ವಂಚನೆ   

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ರೈಲು ನಿಲ್ದಾಣದ ಬಳಿ ಗಲಾಟೆ; ಪ್ರಕರಣ ದಾಖಲು

Mangaluru: ರೈಲು ನಿಲ್ದಾಣದ ಬಳಿ ಗಲಾಟೆ; ಪ್ರಕರಣ ದಾಖಲು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

7-kundapura

Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಶುಕ್ತಿಜಾ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

6-sslc

Rank: ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದ ಪ್ರತ್ವಿತಾ ಪಿ.ಶೆಟ್ಟಿ; ಐ.ಎ.ಎಸ್ ಅಧಿಕಾರಿಯಾಗುವ ಆಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.