ಮೀನು ವ್ಯಾಪಾರಕ್ಕೆ ರಸ್ತೆಯೇ ಮಾರುಕಟ್ಟೆ!


Team Udayavani, Dec 3, 2021, 3:31 PM IST

15fish-market

ವಾಡಿ: ಪೌಷ್ಟಿಕ ಆಹಾರದ ಬಿರುದು ಪಡೆದಿರುವ ಮೀನು ವ್ಯಾಪಾರ ಬೀದಿಗೆ ಬಿದ್ದಿದ್ದು, ಮುಖ್ಯ ರಸ್ತೆಯಲ್ಲೇ ಗ್ರಾಹಕರನ್ನು ಸೆಳೆಯುತ್ತಿರುವ ನಗರದ ಮೀನುಗಾರರು, ಭಾರಿ ವಾಹನ ಸಂಚಾರದ ಅಪಾಯ ಎದುರಿಸುತ್ತಿದ್ದು, ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದಂತಾಗಿದೆ.

ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಿಮೆಂಟ್‌ ಕಾಶಿ ವಾಡಿ ನಗರದಲ್ಲಿ ಪುರಸಭೆ ಆಡಳಿತ ಕೇಂದ್ರವಿದೆ. ಸುತ್ತಲ 30 ಹಳ್ಳಿಗಳಿಗೆ ವಾಡಿ ನಗರದ ಮಾರುಕಟ್ಟೆಯೇ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಗುರುವಾರ ಇಲ್ಲಿ ವಾರದ ಸಂತೆ ಸಾಗುತ್ತದೆ. ಕಟ್ಟಡ ಕಾರ್ಮಿಕರು, ಕಾರ್ಖಾನೆ ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮೀನು ಮತ್ತು ಮಟನ್‌ ವ್ಯಾಪಾರ ಲಾಭದಾಯಕವಾಗಿದೆ.

ಸಮೀಪದ ಕುಂದನೂರು, ಚಾಮನೂರು, ಇಂಗಳಗಿ ಹಾಗೂ ಸನ್ನತಿ ಭೀಮಾ ನದಿಯಿಂದ ತರಹೆವಾರಿ ಮೀನುಗಳು ನಗರದ ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಕುರಿ ಮತ್ತು ಕೋಳಿ ಮಾಂಸದಷ್ಟೇ ಮೀನು ಪ್ರಿಯರೂ ಕೂಡ ಇಲ್ಲಿದ್ದು, ಮೀನುಗಾರರು ಜಾಗಕ್ಕೆ ತಲುಪುವ ಮೊದಲೇ ಹಾಜರಿರುತ್ತಾರೆ. ವರ್ತಕರ ಸುತ್ತಲೂ ಮುಗಿಬಿದ್ದು ಮೀನು ಖರೀದಿಗೆ ಮುಂದಾಗುತ್ತಾರೆ. ಪುರಸಭೆ ಆಡಳಿತ ಈ ಮೀನು ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಮಾಡಿಕೊಟ್ಟಿಲ್ಲ. ಕಳೆದ ಹಲವು ವರ್ಷಗಳಿಂದ ಬೀದಿಯಲ್ಲೇ ಕುಳಿತು ವ್ಯವಹಾರ ನಡೆಸುತ್ತಿದ್ದರೂ ಯಾರೂ ಇವರ ಗೋಳು ಕೇಳಲು ಮುಂದಾಗಿಲ್ಲ.

ಕಂಬಳಿವಾಲೆ ದರ್ಗಾ ಹತ್ತಿರದ ಮುಖ್ಯ ರಸ್ತೆಯಲ್ಲಿ ಸಾಲಾಗಿ ಕುಳಿತು ಗ್ರಾಹಕರಿಗಾಗಿ ಕಾಯುತ್ತಿರುತ್ತಾರೆ. ಲಾರಿ, ಕಾರು, ಬಸ್‌, ಟೆಂಪೋ, ಬೈಕ್‌ಗಳ ಸಂಚಾರ ಅಧಿಕವಾಗಿರುವ ಈ ಅಪಾಯಕಾರಿ ರಸ್ತೆಯಲ್ಲಿ ಗ್ರಾಹಕರು ರಸ್ತೆಯನ್ನೇ ಕಬಳಿಸಿ ಅಸುರಕ್ಷತೆ ಎದುರಿಸುತ್ತಿದ್ದಾರೆ. ನಿರ್ದಿಷ್ಟವಾದ ಸ್ಥಳ ಗುರುತಿಸಿ ಕೊಡುವಲ್ಲಿ ಪುರಸಭೆ ಆಡಳಿತ ವಿಫಲವಾಗಿದೆ ಎಂದು ಜನರು ದೂರಿದ್ದಾರೆ.

ಶಾಸಕ ಪ್ರಿಯಾಂಕ್‌ ಖರ್ಗೆ ಅವರು ನಗರದ ವಿವಿಧ ವಾರ್ಡ್‌ಗಳ ಅಭಿವೃದ್ಧಿಗಾಗಿ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡಿಸಿದ್ದಾರೆ. 100 ಕೋಟಿ ರೂ. ವೆಚ್ಚದಲ್ಲಿ ಶೈಕ್ಷಣಿಕ ಸಂಕೀರ್ಣ ನಿರ್ಮಿಸಲಾಗುತ್ತಿದೆ. ವಸತಿ ಯೋಜನೆಗಾಗಿ 84 ಎಕರೆ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಮೀನು ಮಾರುಕಟ್ಟೆ ನಿರ್ಮಿಸಲು ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೀನು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪುರಸಭೆ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಇನ್ನಾದರೂ ಮೀನು ಮಾರುಕಟ್ಟೆ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13thefting

ಕಲಬುರಗಿ: ಅಂಗಡಿಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ಸೆರೆ

11karnataka

ಕ್ಷಯರೋಗ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಿ

10thefts

ಕಳ್ಳ ಸಹೋದರರ ಸೆರೆ: ಐದು ಬೈಕ್‌ ಜಪ್ತಿ

9sheeps

ಹಳ್ಳದ ನೀರು ಕುಡಿದು 10 ಕುರಿ ಸಾವು

8road

ಯಡ್ರಾಮಿ ತಾಲೂಕಾದ್ರೂ ಸುಧಾರಿಸಿಲ್ಲ ರಸ್ತೆ ಸ್ಥಿತಿ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಈ ಬಾರಿ 50 ಕೋಟಿ ರೂ.ಬಜೆಟ್‌

ಈ ಬಾರಿ 50 ಕೋಟಿ ರೂ.ಬಜೆಟ್‌

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ  ಶೇ. 65 ಸಾಧನೆ

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ ಶೇ. 65 ಸಾಧನೆ

ಬಿದ್ಕಲ್‌ಕಟ್ಟೆ: ರಾ.ಹೆ.ಯಲ್ಲಿ ವಿದ್ಯಾರ್ಥಿಗಳ ಪಯಣ; ಅಪಾಯ ಸಾಧ್ಯತೆ

ಬಿದ್ಕಲ್‌ಕಟ್ಟೆ: ರಾ.ಹೆ.ಯಲ್ಲಿ ವಿದ್ಯಾರ್ಥಿಗಳ ಪಯಣ; ಅಪಾಯ ಸಾಧ್ಯತೆ

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.