ದತ್ತಿ ಸಂಸ್ಥೆಗಳಿಗೆ ದೇಣಿಗೆ: ತೆರಿಗೆ ಕಡಿತ


Team Udayavani, Feb 2, 2020, 6:18 AM IST

kat-49

ದತ್ತಿ ಸಂಸ್ಥೆ (ಚಾರಿಟೆಬಲ್‌ ಇನ್ಸ್ಟಿಟ್ಯೂಷನ್‌)ಗಳಿಗೆ ನೀಡುವ ದೇಣಿಗೆಯ ಮೂಲಕ ಕೂಡ ತೆರಿಗೆ ಕಡಿತ ಪ್ರಮಾಣ ಪಡೆದುಕೊಳ್ಳುವ ಅವಕಾಶ ಕೊಡಲಾಗಿದೆ. ಆದರೆ ಈ ಅಂಶವನ್ನು ರಿಟರ್ನ್ಸ್ ಸಲ್ಲಿಕೆ ಮಾಡುವ ವೇಳೆ ಮಾಹಿತಿ ನೀಡಬೇಕಾಗುತ್ತದೆ. ತೆರಿಗೆದಾರರು ದತ್ತಿ ಸಂಸ್ಥೆಗೆ ನೀಡಿದ ನಗದಿನಲ್ಲಿ ತೆರಿಗೆ ಕಡಿತವನ್ನು ಪಡೆಯಬಹುದಾಗಿದೆ. ದೇಣಿಗೆಯನ್ನು ಪಡೆದ ಸಂಸ್ಥೆಯೂ ಸಹ ತೆರಿಗೆಯಿಂದ ಮುಕ್ತವಾಗಿರುತ್ತದೆ. ಅದರೆ, ದೇಣಿಗೆ ನೀಡಿದ ವ್ಯಕ್ತಿ ತನ್ನ ಆದಾಯ ತೆರಿಗೆ ಪಾವತಿ ವೇಳೆ ಕಡ್ಡಾಯವಾಗಿ ದೇಣಿಗೆ ನೀಡಿದ ವಿಷಯ ವನ್ನು ನಮೂದಿಸಬೇಕು.

ನೂತನವಾಗಿ ದತ್ತಿ ಸಂಸ್ಥೆ ಸ್ಥಾಪನೆ ಮಾಡಲು ನೋಂದಣಿ ಪ್ರಕ್ರಿಯೆ ಯನ್ನು ಸಂಪೂರ್ಣ ಎಲೆ ಕ್ಟ್ರಾನಿಕ್‌ ವ್ಯವಸ್ಥೆಗೆ ಒಳಪಡಿ ಸಲಾಗಿದೆ. ನೂತನ ಸಂಸ್ಥೆ ಗಳಿಗೆ ವಿಶೇಷ ನೋಂದಣಿ ನಂಬರ್‌(ಯುಆರ್‌ಎನ್‌) ನೀಡಲಾಗುವುದು. ಚಟುವಟಿಕೆಗಳನ್ನು ಪ್ರಾರಂಭಿಸದ ಹೊಸ ಸಂಸ್ಥೆಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ನೋಂದಣಿಗೂ ಅನುಕೂಲ ಮಾಡಲಾಗಿದೆ.

ತೆರಿಗೆ ಪಾವತಿದಾರರಿಗೆ ಸನ್ನದು: ಆದಾಯ ತೆರಿಗೆ ಇಲಾಖೆಯ ವಿತರಣಾ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ತೆರಿಗೆದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ)ಯಲ್ಲಿ ತೆರಿಗೆದಾರರ ಸನ್ನದು ಸೇರ್ಪಡೆಗೊಳಿಸಲು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ತೆರಿಗೆ ವ್ಯವಸ್ಥೆಯಲ್ಲಿ ಪಾವತಿದಾರ ಮತ್ತು ಆಡಳಿತದ ನಡುವೆ ನಂಬಿಕೆ ಮುಖ್ಯ. ತೆರಿಗೆ ಪಾವತಿದಾರ ತಮ್ಮ ಹಕ್ಕುಗಳನ್ನು ಸ್ಪಷ್ಟವಾಗಿ ಪಾಲಿಸಿದಾಗ ವಿಶ್ವಾಸ ಉಳಿಯಲು ಸಾಧ್ಯ. ಮುಂದಿನ ದಿನಗಳಲ್ಲಿ ಯಾವ ರೀತಿ ಸನ್ನದು ಇರಲಿದೆ ಎನ್ನುವುದನ್ನು ಕೇಂದ್ರ ಸರಕಾರ ಪ್ರಕಟಿಸಲಿದೆ.

ವಿವಾದಗಳಿಗೆ ತೆರೆ, ನಂಬಿಕೆಗೆ ಮಾನ್ಯತೆ
ಹಿಂದಿನ ಕೇಂದ್ರ ಬಜೆಟ್‌ನಲ್ಲಿ “ಸಬ್‌ ಕಾ ವಿಶ್ವಾಸ್‌’ ಯೋಜನೆ ಪರಿಚಯಿಸಿದ್ದ ಕೇಂದ್ರ ಸರಕಾರ. ಈ ಬಾರಿಯ ಬಜೆಟ್‌ನಲ್ಲಿ “ವಿವಿಧ್‌ ಸೇ ವಿಶ್ವಾಸ್‌’ ಅನ್ನು ಪರಿಚಯಿಸಿದೆ. ಈ ಮೂಲಕ ವಿವಾದಗಳಿಗೆ ಎಡೆಮಾಡಿಕೊಡದೆ ನಂಬಿಕೆಗೆ ಮಾತ್ರ ಅವಕಾಶ ಎಂಬುದನ್ನು ನೇರ ತೆರಿಗೆಯಲ್ಲಿ ಸಾಬೀತುಪಡಿಸಲು ಮುಂದಾಗಿದೆ.

ನೇರ ತೆರಿಗೆ ಪಾವತಿ ಸಂಬಂಧಿಸಿದ ದಾವೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಸರಕಾರ, ಯಾವುದೇ ಹಂತದಲ್ಲಿ ಉಳಿದಿರುವ ಮೇಲ್ಮನವಿಗಳಿಂದ ತೆರಿಗೆದಾರರಿಗೆ ಲಾಭವನ್ನುಂಟು ಮಾಡಲು ಈ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ದಾವೆ ಅಥವಾ ವಿವಾದದಿಂದಾಗಿ ಪಾವತಿ ಮಾಡಬೇಕಾದ ತೆರಿಗೆಯನ್ನು 2020 ಮಾ.31ರೊಳಗೆ ಪಾವತಿಸಿದರೆ ನೀಡಬೇಕಾದ ಬಡ್ಡಿ ಮತ್ತು ಹೇರಲಾಗಿದ್ದ ದಂಡವನ್ನು ಮನ್ನಾ ಮಾಡಲಾಗುವುದು. ಮಾ. 31 ರ ಬಳಿಕ ಪಾವತಿ ಮಾಡಿದವರು ಸ್ವಲ್ಪ ಅಧಿಕ ಪ್ರಮಾಣದ ಮೊತ್ತ ಪಾವತಿಸಬೇಕಾಗುತ್ತದೆ. ಅಲ್ಲದೆ ಈ ಯೋಜನೆಯು ಜೂ. 30 ವರೆಗೆ ಮಾತ್ರ ತೆರೆದಿರುತ್ತದೆ

 ಪರೋಕ್ಷ ತೆರಿಗೆ ನಿಯಂತ್ರಣಕ್ಕೆ ತರಲಾದ ಸಬ್‌ ಕಾ ವಿಕಾಸ್‌ ಯೋಜನೆಯಲ್ಲಿ 1,89,000 ಪ್ರಕರಣಗಳು ಇತ್ಯರ್ಥ

 ಮಾಹಿತಿ ಪ್ರಕಾರ 4,83,000 ನೇರ ತೆರಿಗೆ ಪ್ರಕರಣಗಳು ಬಾಕಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

Budget  2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

MONEY GONI

Expert’s Opinion: ಗ್ಯಾರಂಟಿ ಭಾರ ಇಲ್ಲದಿದ್ದರೆ ಇನ್ನೂ ಉತ್ತಮ ಆಗಿರುತ್ತಿತ್ತು

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.