ಮಡಚುವ ಫ್ಯಾನ್‌!


Team Udayavani, May 25, 2020, 5:16 AM IST

lat fan

ಶಿಯೋಮಿ ಕಂಪನಿ, ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವಲ್ಲ, ಹಲವು ಗೃಹ ಬಳಕೆಯ ಉಪಕರಣಗಳನ್ನೂ ತಯಾರಿಸುತ್ತದೆ. ಟಿ.ವಿ., ಇಯರ್‌ಫೋನ್‌, ಟ್ರಿಮ್ಮರ್‌, ಶೂ, ಕ್ಯಾಮೆರಾ ಇತ್ಯಾದಿ ಉಪಕರಣಗಳು, ಶಿಯೋಮಿಯಿಂ ದ  ತಯಾರಾಗುತ್ತವೆ. ಇತ್ತೀಚೆಗಷ್ಟೆ, ತನ್ನ ಹೊಸ ಆವಿಷ್ಕಾರ ವಾದ ಫೋಲ್ಡೆಬಲ್‌ ಫ್ಯಾನ್‌ ಅನ್ನು ಶಿಯೋಮಿ ಸಂಸ್ಥೆ, ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಇದನ್ನು ಪೆಟ್ಟಿಗೆಯಂತೆ ಮಡಚಿ, ಬೇಕೆಂದಲ್ಲಿಗೆ ಕೊಂಡೊಯ್ಯ ಬಹುದಾಗಿದೆ. ಇದರ  ಡಿಸೈನ್‌ ತುಂಬಾ ಸ್ಮಾರ್ಟ್‌ ಆಗಿದೆ. ಇದರಲ್ಲಿ ಒಂದೇ ಒಂದು ಸ್ಕ್ರೂ ಕಾಣುವುದಿಲ್ಲ. ಇದನ್ನು “ಒನ್‌ ಪೀಸ್‌ ಡಿಸೈನ್‌’ ಎಂದು ಸಂಸ್ಥೆ ಕರೆದಿದೆ. ಈ ಫೋಲ್ಡೆಬಲ್‌ ಫ್ಯಾನನ್ನು ಮಡಚಲು, ಯಾವುದೇ ಸ್ಕೃೂ ಅನ್ನು ಬಿಚ್ಚಿ ಜೋಡಿಸಬೇಕಿಲ್ಲ. ಫ್ಯಾನನ್ನು 120 ಡಿಗ್ರಿ ಎಡದಿಂದ  ಬಲಕ್ಕೆ ತಿರುಗಿಸಬಹುದು ಮತ್ತು ಮೇಲಿನಿಂದ ಕೆಳಕ್ಕೆ, ಪೂರ್ತಿ 360 ಡಿಗ್ರಿ ತಿರುಗಿಸಬಹುದಾಗಿದೆ.

ಇದು ಮಲ್ಟಿಪರ್ಪಸ್‌ ಫ್ಯಾನ್‌ ಕೂಡಾ ಆಗಿದೆ. ಅಂದರೆ, ಈ ಉಪಕರಣ ಫ್ಯಾನ್‌  ಮಾತ್ರವೇ ಅಲ್ಲ, ಪ್ಯೂರಿಫೈಯರ್‌ ಕೂಡಾ ಇದರಲ್ಲಿ ಅಡಕವಾಗಿದೆ. ಕೆಳಗಿನ ಭಾಗ ಪ್ಯೂರಿಫೈಯರ್‌/ ಹ್ಯುಮಿಡಿಫೈಯರ್‌ ಆಗಿ ಕಾರ್ಯ ನಿರ್ವಹಿ ಸುತ್ತದೆ. ಫ್ಯಾನನ್ನು ನಿಯಂತ್ರಿಸಲು, ರಿಮೋಟ್‌ ಕಂಟ್ರೋಲರ್‌ ಅನ್ನು ನೀಡಲಾಗಿದೆ. ಇದು, 80 ಮೀಟರ್‌  ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತದೆ. ಅದರಿಂದ ಪ್ಯೂರಿಫೈಯರ್‌ ಮತ್ತು ಫ್ಯಾನ್‌ ವೇಗವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ. ರಿಮೋಟ್‌ ಹೊರತಾಗಿ, ಟಚ್‌ ಪ್ಯಾನೆಲ್‌ ಬಳಸಿಯೂ ಫ್ಯಾನನ್ನು ನಿಯಂತ್ರಿಸ ಬಹು ದಾಗಿದೆ.

ಈ  ಉಪಕರಣ, ಒಂದೂವರೆ ಕೆ.ಜಿ. ತೂಗುತ್ತದೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ, ಇದನ್ನು ಟೇಬಲ್‌ ಫ್ಯಾನ್‌ ಆಗಿಯೂ, ಸ್ಟ್ಯಾಂಡ್‌ ಫ್ಯಾನ್‌ ಆಗಿಯೂ ಬಳಸಬಹುದಾಗಿದೆ. ಏರಿಯಲ್‌ ಆಂಟೆನಾ ಮಾದರಿಯಲ್ಲಿ, ಈ ಫ್ಯಾನಿನ ಕತ್ತನ್ನು  ವಿನ್ಯಾಸಗೊಳಿಸಲಾಗಿದೆ. ಏರಿಯಲ್‌ ಅನ್ನು ಯಾವ ರೀತಿ ಎಳೆದು ಉದ್ದ ಮಾಡಲಾಗುತ್ತದೆಯೋ, ಅದೇ ರೀತಿ ಈ ಫ್ಯಾನಿನ ಕತ್ತನ್ನು, ನಮಗೆ ಬೇಕಾದ ಎತ್ತರಕ್ಕೆ ಎಳೆದುಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.