ಹಣವಷ್ಟೇ ಅಲ್ಲ; ತಾಳ್ಮೆ, ತೃಪ್ತಿಯೂ ಮುಖ್ಯ

Team Udayavani, May 6, 2020, 8:08 AM IST

ಹಣವಷ್ಟೇ ಅಲ್ಲ; ತಾಳ್ಮೆ, ತೃಪ್ತಿಯೂ ಮುಖ್ಯ

ಸಾಂದರ್ಭಿಕ ಚಿತ್ರ

ಗಿರೀಶ್‌ ಹಾಗೂ ಗಿರಿಜಾ ಒಂದೇ ಆಫೀಸಿನಲ್ಲಿ ಉದ್ಯೋಗಿಗಳು. ಇಬ್ಬರೂ ಪರಸ್ಪರ ಮೆಚ್ಚಿಕೊಂಡು ಮದುವೆಯಾಗಿ ಎರಡು ವರ್ಷಗಳಾಗಿವೆ. 2020ರಲ್ಲಿ ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಅವರು ನಿರ್ಧರಿಸಿದ್ದರು. ಜನವರಿಯಲ್ಲಿ ಗಿರಿಜಾ ಚೆಕಪ್‌ ಮಾಡಿಸಿಕೊಂಡರು. ಆಗ ವೈದ್ಯರು, ಮಕ್ಕಳಾಗಲು ಸಮಸ್ಯೆಯಿಲ್ಲ ಎಂದು ಹೇಳಿದಾಗ ಇಬ್ಬರೂ ಖುಷಿಪಟ್ಟಿದ್ದರು.
ಅದೇ ಸಮಯಕ್ಕೆ, ಕೋವಿಡ್ ಭಾರತಕ್ಕೆ ಕಾಲಿಟ್ಟಾಗ, ಗಿರಿಜಾಗೆ ಹೆದರಿಕೆ ಶುರುವಾಯ್ತು. ಲಾಕ್‌ಡೌನ್‌ ಘೋಷಣೆಯಾದಾಗ, ಕೆಲಸ ಹೋಗಬಹುದೆಂಬ ಗಾಳಿಸುದ್ದಿ
ವಾಟ್ಸಾಪ್‌ನಲ್ಲಿ ಹರಡ ತೊಡಗಿದಾಗ, ಗಿರೀಶ್‌ ಕೂಡಾ ಖನ್ನತೆಗೆ ಜಾರಿದರು.

ಉದ್ಯೋಗದ ಅನಿಶ್ಚಿತತೆ ಇದ್ದರೂ, ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಗಿರಿಜಾ ಹೇಳಿದಾಗ, ಗಿರೀಶ್‌ ಸಿಕ್ಕಾಪಟ್ಟೆ ರೇಗಾಡಿದ್ದಾರೆ. ಮನೆಯ ಬಾಡಿಗೆ, ಕಾರಿನ ಕಂತು, ಊರಿಗೆ ಕಳಿಸುವ ಹಣ ಮತ್ತು ದಿನನಿತ್ಯದ ಖರ್ಚು, ಇದರ ನಡುವೆ ಬಸಿರು-ಬಾಣಂ ತನಕ್ಕೆ ಹಣವಿಲ್ಲ ಎಂದಿದ್ದಾರೆ. ಈ ಮಾತು ಕೇಳಿ, ಗಿರಿಜಾಗೆ ಸಿಟ್ಟು-ಸಿಡಿಮಿಡಿ ಜಾಸ್ತಿಯಾಗಿದೆ. ಅದೇ ಕಾರಣಕ್ಕೆ ನಿದ್ದೆ ಹತ್ತದೆ ಹದಿನೈದು ದಿನಗಳಾಗಿವೆ.

ಮನೆಕೆಲಸ, ಆಫೀಸ್‌ ಕೆಲಸವನ್ನು ಯಾಂತ್ರಿಕವಾಗಿ ಮಾಡುತ್ತಿದ್ದಾರೆ. ಗಿರೀಶ್‌ ಬಳಿಯೂ ಮಾತನಾಡುತ್ತಿಲ್ಲ. ಹೀಗಾಗಿ, ನನ್ನ ಬಳಿ ಆನ್‌ಲೈನ್‌ ಕೌನ್ಸೆಲಿಂಗ್‌ಗೆ ಬಂದರು. ಸಮಸ್ಯೆ ಗಿರಿಜಾರದ್ದು ಅಂತ ಮೇಲ್ನೋಟಕ್ಕೆ ಕಂಡು ಬಂದರೂ, ಸಮಾಧಾನ ಮೊದಲು ಗಿರೀಶ್‌ಗೇ ಬೇಕಾಗಿತ್ತು. ನಿಧಾನವಾಗಿ ಇಬ್ಬರಿಗೂ ಧೈರ್ಯ ತುಂಬಿದೆ. “ತಾಯಿಯಾಗುವುದು, ಹೆಣ್ಣಿಗೆ ಭಾವನಾತ್ಮಕ ಪ್ರಕ್ರಿಯೆ. ವಯಸ್ಸು ಕಳೆದು ಹೋದಮೇಲೆ ಮಕ್ಕಳಾಗಲು ತೊಂದರೆಯಾದರೆ, ಪಶ್ಚಾತ್ತಾಪವಾಗುತ್ತದೆ. ಮಗು ಹುಟ್ಟಿದ ನಂತರ ಮೂರು ವರ್ಷಗಳು, ಇತರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ, ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಬಹುದು. ಮನೆಯಿಂದಲೇ ಕೆಲಸ ಮಾಡುವ ಪರಿಸ್ಥಿತಿ ಮುಂದುವರಿದರೆ, ಹುಟ್ಟೂರಿಗೆ ಮರಳಬಹುದು. ಆಗ ಬಾಡಿಗೆ ಉಳಿಯುತ್ತದೆ. ಮನೆಯವರ ಪ್ರೀತಿ, ಸಹಾಯವೂ ದೊರೆಯುತ್ತದೆ.’ ಅಂದೆ. ಇದನ್ನೆಲ್ಲ ಕೇಳಿದ ಮೇಲೆ, ಗಿರೀಶ್‌, ಕೂಲ್‌ ಆದರು. ವಿಪತ್ತಿನಲ್ಲಿ, ಸಾಂದರ್ಭಿಕ ಖಿನ್ನತೆ ಕೆಲವರನ್ನು ಕಾಡುತ್ತದೆ. ಭಯದ ಜಾಗದಲ್ಲಿ ದೇಶಪ್ರೇಮವನ್ನು ಬೆಳೆಸಿಕೊಂಡರೆ ಆತ್ಮಸ್ಥೈರ್ಯ ತಂತಾನೇ ಬರುತ್ತದೆ.

ಕೊನೆ ಮಾತು: ಅಗತ್ಯಗಳಿಗೆ ಹಣವಿದ್ದರೆ ಸಾಕು, ಬಾಕಿ ಜೀವನ ನಡೆಸಲು ತಾಳ್ಮೆ ಮತ್ತು ತೃಪ್ತಿ ಬೇಕು.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.