Udayavni Special

ಥರಾವರಿ ಪೂರಿ…

Team Udayavani, Jul 1, 2020, 5:02 AM IST

haravari-puri

ಇದು ಮನೆಯಲ್ಲಿಯೇ ವೆರೈಟಿ ತಿನಿಸು ಮಾಡುವ ಸಮಯ. ಹೋಟೆಲಿನ ರುಚಿಯನ್ನು ಅಡುಗೆ ಮನೆಗೆ ತಂದು, ಮನೆ ಮಂದಿಯ ಬಾಯಿ ರುಚಿ ತಣಿಸುವ ಕಾಲ. ಪೂರಿ ಅಂದಾಕ್ಷಣವೇ ಅದರ ಆಕಾರ ಕಣ್ಮುಂದೆ ಬಂದು ನಿಲ್ಲುತ್ತದೆ.  ಬೀಟ್‌ರೂಟ್‌, ಉದ್ದಿನ ಬೇಳೆ, ಆಲೂ ಪೂರಿಯ ಬಗ್ಗೆ ಗೊತ್ತಿದೆಯಾ? ಇಲ್ಲಿದೆ, ಬಹುಬಗೆ ಪೂರಿ ತಯಾರಿಯ ಪರಿಚಯ.

ಬೀಟ್‌ರೂಟ್‌
ಬೇಕಾಗುವ ಸಾಮಗ್ರಿ: ಬೀಟ್‌ ರೂಟ್-1, ಗೋಧಿ ಹಿಟ್ಟು- 2 ಕಪ್‌, ಉಪ್ಪು ರುಚಿಗೆ, ಅಜವಾನ/ ಓಂ ಕಾಳು- 1/4 ಚಮಚ, ಅಚ್ಚ ಖಾರದ ಪುಡಿ, ಗರಂಮಸಾಲೆ- 1/4 ಚಮಚ, ತುಪ್ಪ- 1 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಬೀಟ್‌ ರೂಟ್‌ನ ಸಿಪ್ಪೆ ತೆಗೆದು ತುರಿದು, ಒಂದು ಲೋಟ ನೀರು ಹಾಕಿ ಬೇಯಿಸಿ. ಅದು ಬೆಂದ ನಂತರ ನೀರನ್ನು ಬೇರೆಯಾಗಿ ಇಟ್ಟು, ಬೀಟ್ರೂಟ್‌ ಅನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಗೋಧಿ ಹಿಟ್ಟನ್ನು ಹಾಕಿ ಅದರದಲ್ಲಿ ಅಜವಾನ, ಅಚ್ಚಖಾರದ ಪುಡಿ, ಗರಂಮಸಾಲೆ, ಉಪ್ಪು, ತುಪ್ಪ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಬಿಟ್‌ರೂಟ್‌ ಬೇಯಿಸಿದ ನೀರನ್ನು ಮತ್ತು ರುಬ್ಬಿದ ಮಿಶ್ರಣವನ್ನು ಹಾಕಿ, ಕಲಸಿ. ಹತ್ತು  ನಿಮಿಷ ಬಿಟ್ಟು ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ, ಪೂರಿ ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ.

ಉದ್ದಿನ ಪೂರಿ
ಬೇಕಾಗುವ ಸಾಮಗ್ರಿ: ಉದ್ದಿನ ಬೇಳೆ- 100 ಗ್ರಾಂ, ಗೋಧಿ ಹಿಟ್ಟು ಅಥವಾ ಮೈದಾ- 250 ಗ್ರಾಂ, ಜೀರಿಗೆ- 1/4 ಚಮಚ, ಸಕ್ಕರೆ ಪುಡಿ- 1 ಚಮಚ, ಉಪ್ಪು, ಎಣ್ಣೆ.

ಮಾಡುವ ವಿಧಾನ: ಉದ್ದಿನ ಬೇಳೆಯನ್ನು 7-8 ಗಂಟೆ ನೀರಿನಲ್ಲಿ ನೆನೆಸಿ, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ, ಗೋಧಿ ಹಿಟ್ಟು/ ಮೈದಾ ಹಿಟ್ಟು, ಜೀರಿಗೆ, ಉಪ್ಪು, ಎರಡು ಚಮಚ ಎಣ್ಣೆ, ಸಕ್ಕರೆ ಹಾಕಿ ಮಿಶ್ರಣ ಮಾಡಿ.  ರುಬ್ಬಿದ ಉದ್ದಿನ ಬೇಳೆಯನ್ನು ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೂರಿ ಹಿಟ್ಟಿನ ಹದಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಹಾಕಿ ಗಟ್ಟಿಯಾಗಿ ಕಲಸಿ. ಇಪ್ಪತ್ತು ನಿಮಿಷದ ನಂತರ ಪೂರಿ ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ.

ಆಲೂ ಪೂರಿ
ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು- 2 ಕಪ್‌, ಆಲೂಗಡ್ಡೆ ಬೇಯಿಸಿದ್ದು 2, ಚಿರೋಟಿ ರವೆ- 2 ಚಮಚ, ಹಸಿ ಮೆಣಸು-1, ಕೊತ್ತಂಬರಿ ಸೊಪ್ಪು, ಜೀರಿಗೆ- 1 ಚಮಚ, ಎಳ್ಳು- 1 ಚಮಚ, ಉಪ್ಪು, ಖಾರದ ಪುಡಿ- 1/2 ಚಮಚ, ಅರಿಶಿನ,  ಅಜವಾನ- 1/2 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಹಾಕಿ, ಬೇಯಿಸಿದ ಆಲೂಗಡ್ಡೆಯನ್ನು ತುರಿದು ಅದಕ್ಕೆ ಸೇರಿಸಿ. ಈ ಹಿಟ್ಟಿನ ಜೊತೆಗೆ ಉಪ್ಪು, ಖಾರದಪುಡಿ, ಎಳ್ಳು, ಅರಿಶಿನ, ಜೀರಿಗೆ, ಅಜವಾನ, ಹೆಚ್ಚಿದ ಹಸಿ ಮೆಣಸು,  ಚಿರೋಟಿ ರವೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ. (ಆಲೂಗಡ್ಡೆಯಲ್ಲಿ ನೀರಿನಾಂಶ ಇರುವುದರಿಂದ ಜಾಸ್ತಿ ನೀರು ಬೇಡ) ನಂತರ ಎರಡು ಚಮಚ ಎಣ್ಣೆ ಹಾಕಿ ಮಿಶ್ರಣ ಮಾಡಿ. ಕಲಸಿದ ಹಿಟ್ಟಿನ  ಮೇಲೆ ಒದ್ದೆ ಬಟ್ಟೆಯನ್ನು ಹದಿನೈದು ನಿಮಿಷ ಹಾಕಿ ಮುಚ್ಚಿಡಿ. ನಂತರ ಆ ಹಿಟ್ಟಿನಿಂದ ಉಂಡೆ ಮಾಡಿ, ಪೂರಿಗಳನ್ನು ಲಟ್ಟಿಸಿ, ಕರಿಯಿರಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಸಂದರ್ಭ ಕೆಲಸ ಮಾಡಿದ ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್

ಕೋವಿಡ್ ಸಂದರ್ಭ ಕೆಲಸ ಮಾಡಿದ 3397 ಮಂದಿ ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 238 ಪಾಸಿಟಿವ್ ಪ್ರಕರಣ! ಆರು ಮಂದಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 238 ಪಾಸಿಟಿವ್ ಪ್ರಕರಣ! ಆರು ಮಂದಿ ಸಾವು

ಕೋವಿಡ್ ಕಳವಳ ಜು.16: 4169 ಸೋಂಕಿತರು ; 1263 ಚೇತರಿಕೆ ಮತ್ತು 104 ಸಾವು

ಕೋವಿಡ್ ಕಳವಳ ಜು.16: 4169 ಸೋಂಕಿತರು ; 1263 ಚೇತರಿಕೆ ಮತ್ತು 104 ಸಾವು

ಪ್ರಕರಣ ಸಿಬಿಐಗೆ ಒಪ್ಪಿಸಿ ಸರ್….ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಸುಶಾಂತ್ ಪ್ರೇಯಸಿ

ಪ್ರಕರಣ ಸಿಬಿಐಗೆ ಒಪ್ಪಿಸಿ ಸರ್….ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಸುಶಾಂತ್ ಪ್ರೇಯಸಿ

264 ಕೋಟಿ ರೂ. ವೆಚ್ಚ, 8 ವರ್ಷದಲ್ಲಿ ನಿರ್ಮಾಣಗೊಂಡ ಸೇತುವೆ 29 ದಿನದಲ್ಲೇ ಕೊಚ್ಚಿ ಹೋಯ್ತು

264 ಕೋಟಿ ರೂ. ವೆಚ್ಚ, 8 ವರ್ಷದಲ್ಲಿ ನಿರ್ಮಾಣಗೊಂಡ ಸೇತುವೆ 29 ದಿನದಲ್ಲೇ ಕೊಚ್ಚಿ ಹೋಯ್ತು!

ಬಾಗಲಕೋಟೆ : ಕೋವಿಡ್ ಸೋಂಕಿಗೆ 55 ವರ್ಷದ ವ್ಯಕ್ತಿ ಬಲಿ!  ಮೃತರ ಸಂಖ್ಯೆ ೨೧ಕ್ಕೆ ಏರಿಕೆ

ಬಾಗಲಕೋಟೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ಬಲಿ! ನಾಲ್ಕು ಪೊಲೀಸ್ ಠಾಣೆ ಸೀಲ್ ಡೌನ್

ಚಿಕಿತ್ಸೆಗೆ ಸ್ಪಂದಿಸಿದ ಒಂದೂವರೆ ತಿಂಗಳ ಮಗು ಕೋವಿಡ್ ಸೋಂಕಿನಿಂದ ಗುಣಮುಖ

ಚಿಕಿತ್ಸೆಗೆ ಸ್ಪಂದಿಸಿದ ಒಂದೂವರೆ ತಿಂಗಳ ಮಗು ಕೋವಿಡ್ ಸೋಂಕಿನಿಂದ ಗುಣಮುಖಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾವ ಶಬರಿಗೆ ಕಡಿಮೆ ಈ ತಾಯಿಯ ತಾಳ್ಮೆ?

ಯಾವ ಶಬರಿಗೆ ಕಡಿಮೆ ಈ ತಾಯಿಯ ತಾಳ್ಮೆ?

ಮಗಳು ಪರೀಕ್ಷೆ ಬರೆದಳು : ಅಬ್ಟಾ, ಸದ್ಯ ಎಕ್ಸಾಂ ಮುಗೀತು!

ಮಗಳು ಪರೀಕ್ಷೆ ಬರೆದಳು : ಅಬ್ಟಾ, ಸದ್ಯ ಎಕ್ಸಾಂ ಮುಗೀತು!

ಸುಗಂಧ ಸೌಂದರ್ಯ : ಸೀಸನ್‌ ಗೆ ತಕ್ಕಂತೆ ಪರ್ಫ್ಯೂಮ್‌

ಸುಗಂಧ ಸೌಂದರ್ಯ : ಸೀಸನ್‌ ಗೆ ತಕ್ಕಂತೆ ಪರ್ಫ್ಯೂಮ್‌

ಸಾತ್ವಿಕತೆಯೇ ಜೀವನದ ಬೆಳಕು

ಸಾತ್ವಿಕತೆಯೇ ಜೀವನದ ಬೆಳಕು

bng-husharagu

ಬೆಂಗಳೂರೇ ಬೇಗ ಹುಷಾರಾಗು…

MUST WATCH

udayavani youtube

Rajasthan: ಬಿಕ್ಕಟ್ಟಿಗೆ ಕಾರಣ Sachin Pilot ಅಲ್ಲ,Gehlot?!| Udayavani Straight Talk

udayavani youtube

COVID-19 ಸಮಯದಲ್ಲಿ ಪುಟಾಣಿಗಳಿಗೆ Video ಪಾಠ ಮಾಡಿ Famous ಆದ ಶಿಕ್ಷಕಿ Vandana Rai

udayavani youtube

ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಮೂರ್ತೆದಾರ – ಆ ಎರಡು ಗಂಟೆಗಳು!

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

ಹೊಸ ಸೇರ್ಪಡೆ

ಕೋವಿಡ್ ಸಂದರ್ಭ ಕೆಲಸ ಮಾಡಿದ ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್

ಕೋವಿಡ್ ಸಂದರ್ಭ ಕೆಲಸ ಮಾಡಿದ 3397 ಮಂದಿ ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್

ಚಿಕ್ಕಬಳ್ಳಾಪುರದಲ್ಲಿ 77 ಹೊಸ ಕೋವಿಡ್ ಪ್ರಕರಣ! ಜಿಲ್ಲೆಯಲ್ಲಿ 577ಕ್ಕೆ ಏರಿದ ಸೋಂಕಿತರ ಸಂಖ್ಯೆ

ಚಿಕ್ಕಬಳ್ಳಾಪುರದಲ್ಲಿ 77 ಹೊಸ ಕೋವಿಡ್ ಪ್ರಕರಣ! 577ಕ್ಕೆ ಏರಿದ ಜಿಲ್ಲೆಯ ಸೋಂಕಿತರ ಸಂಖ್ಯೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 238 ಪಾಸಿಟಿವ್ ಪ್ರಕರಣ! ಆರು ಮಂದಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 238 ಪಾಸಿಟಿವ್ ಪ್ರಕರಣ! ಆರು ಮಂದಿ ಸಾವು

ಕೋವಿಡ್ ಕಳವಳ ಜು.16: 4169 ಸೋಂಕಿತರು ; 1263 ಚೇತರಿಕೆ ಮತ್ತು 104 ಸಾವು

ಕೋವಿಡ್ ಕಳವಳ ಜು.16: 4169 ಸೋಂಕಿತರು ; 1263 ಚೇತರಿಕೆ ಮತ್ತು 104 ಸಾವು

ಪ್ರಕರಣ ಸಿಬಿಐಗೆ ಒಪ್ಪಿಸಿ ಸರ್….ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಸುಶಾಂತ್ ಪ್ರೇಯಸಿ

ಪ್ರಕರಣ ಸಿಬಿಐಗೆ ಒಪ್ಪಿಸಿ ಸರ್….ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಸುಶಾಂತ್ ಪ್ರೇಯಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.