ಬಹುನಿರೀಕ್ಷಿತ ಚಿತ್ರ ಅವನೇಶ್ರೀಮನ್ನಾರಾಯಣ ಟ್ರೇಲರ್ ಕುರಿತು ನಿಮ್ಮ ಅಭಿಪ್ರಾಯವೇನು ?

Team Udayavani, Nov 30, 2019, 4:21 PM IST

ಕನ್ನಡ ಚಿತ್ರರಂಗ ಹೊಸ ಅಲೆಯ ಸಿನಿಮಾಗಳಿಗೆ ಹಲವಾರು ದಶಕಗಳಿಂದ ಮುನ್ನುಡಿ ಬರೆಯುತ್ತಿದ್ದು, ಪ್ರೇಕ್ಷಕರಿಗೂ ಕೂಡ ಮೆಚ್ಚುಗೆಯಾಗುತ್ತಿದೆ. ಒಂದು ಕಾಲದಲ್ಲಿ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಸಿನಿಮಾಗಳು ಇಂದು ಹಲವು ಭಾಷೆಗಳಲ್ಲಿ ತೆರೆಕಾಣುತ್ತಿವೆ.  ಕೆ.ಜಿ.ಎಫ್ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನೆ ಸೃಷ್ಟಿಸಿತ್ತು. ಅದರ ಹಾದಿಯಲ್ಲೇ ಸಾಗಿಬರುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯಯದ ಅವನೇ ಶ್ರೀಮನ್ನಾರಾಯಣ ಚಿತ್ರ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಆ ಹಿನ್ನಲೆಯಲ್ಲಿ ಉದಯವಾಣಿ ಬಹುನಿರೀಕ್ಷಿತ ಕನ್ನಡ ಚಿತ್ರ ಅವನೇಶ್ರೀಮನ್ನಾರಾಯಣ ಟ್ರೇಲರ್ ಕುರಿತು ನಿಮ್ಮ ಅಭಿಪ್ರಾಯವೇನು ? ಎಂಬ ಪ್ರೆಶ್ನೆಯನ್ನು ಕೇಳಿತ್ತು.

ಅದಕ್ಕೆ ನೂರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿದ್ದು ಹಲವಾರು ಮಂದಿ ಸಿನಿಮಾಸಕ್ತರು ಅತ್ಯಧ್ಬುತ ಚಿತ್ರ, ನೋಡಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಯ್ದ ಅಭಿಪ್ರಾಯ ಇಂತಿವೆ.

ರಾಜ್ ಪ್ರಸಾಗೊಂಡ್ :  ಕನ್ನಡ ಸಿನೆಮಾ ರಂಗಕ್ಕೆ ಮತ್ತೊಬ್ಬ”ಕ್ರಿಯೇಟಿವ್ ನಿರ್ದೇಶಕ ” ಸಿಕ್ಕಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಅತ್ಯದ್ಬುತ.

ಚೈತ್ರ ಶ್ರೀನಿವಾಸ್: ಈ ಚಿತ್ರ ಹೊಸ ದಾಖಲೆಯನ್ನು ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ. ಸಿನಿಮಾ ನೋಡಲೇಬೇಕು.

ಸಂತೋಷ್: ಜಗತ್ತನ್ನು ಸೆಳೆಯುವಂತಹ ಮತ್ತೊಂದು ಸಿನಿಮಾ ಕನ್ನಡದಲ್ಲಿ ಬರುತ್ತಿದೆ . ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ತಾನ್ವಿ ರೋಹಿತ್ ಸುವರ್ಣ: ಈ ಸಿನಿಮಾದ ಕಥೆ ತುಂಬಾ ವಿಭಿನ್ನ ಎನಿಸುತ್ತಿದೆ. ಮೇಕಿಂಗ್ , ಆ್ಯಕ್ಷನ್ , ಬಿಜಿ ತುಂಬಾ ಅದ್ಭುತವಾಗಿದೆ. ಒಟ್ಟಾರೆ ಸಿನಿಮಾ ನೋಡಲು ತುಂಬಾ ಕಾತುರಳಾಗಿದ್ದೇನೆ.

ಸಿದ್ದು: ಇಂತಹ ಕನ್ನಡ ಸಿನಿಮಾ ಬಂದಾಗ ಬೆಂಬಲ ನೀಡಲೇಬೇಕು. ಅದು ಕರ್ನಾಟಕಕ್ಕೆ ಹೆಮ್ಮೆ.

ಮಂಜುನಾಥ್ : ಕಥೆ- ಚಿತ್ರಕಥೆ ತುಂಬಾ ಹೊಸದಾಗಿದೆ. ವಿಭಿನ್ನತೆಯಿದೆ. ಸಿನಿಮಾನೋಡಲೇಬೇಕು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ