CONNECT WITH US  

ಶೇ.10 ಮೀಸಲಾತಿ: ಅಗ್ನಿ ಪರೀಕ್ಷೆಯಲ್ಲಿ ಗೆದ್ದರೆ ಇತಿಹಾಸ ನಿರ್ಮಾಣ

ಭಾಗವಹಿಸಿದ್ದ ವಿದ್ಯಾರ್ಥಿನಿಯೋರ್ವಳು ಮಾತನಾಡುತ್ತಾ, ಕರ್ನಾಟಕದಲ್ಲಿರುವ ಕೇವಲ ಶೇ. 4ರಷ್ಟು ಮೇಲ್ವರ್ಗದ ಬ್ರಾಹ್ಮಣರಿಗೆ ಶೇ. 10 ಮೀಸಲಾತಿ ಸಿಗುತ್ತಿದೆ ಎಂದು ಆಕ್ಷೇಪಿಸಿದ್ದಳು. ಆದರೆ ಆಕೆಯ ಆ ಅಭಿಪ್ರಾಯ ತಪ್ಪಿನಿಂದ ಕೂಡಿದೆ. ಆಕೆ ಭಾವಿಸಿದಂತೆ ಇಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಮೇಲ್ವರ್ಗದವರಲ್ಲ. ಹಿಂದುಳಿದ ವರ್ಗದಲ್ಲಿರುವ ಕೆನೆಪದರಕ್ಕೆ ಸೇರುವ ವರ್ಗದವರು ಕೂಡ ಇದರಲ್ಲಿ ಸೇರುತ್ತಾರೆ. 

ಸಿನಿ ರಂಗದ ಮೇಲೆ ಐಟಿ ದಾಳಿ: ಇಷ್ಟೇಕೆ ಮಹತ್ವ?

ತಲೆಯ ಮೇಲೆ ಬಾಂಬು ಬಿದ್ದವರಂತೆ ಆಘಾತಗೊಂಡವರೆಂದರೆ, ಅತಿ ಪ್ರಶಂಸೆಯೊಂದಿಗೆ ಕೆಲ ಸಿನಿ ಕಲಾವಿದರುಗಳನ್ನು ದೇವತೆಗಳಂತೆ ಬಿಂಬಿಸಿರುವ ಕನ್ನಡ ಟಿ.ವಿ. ಪತ್ರಕರ್ತರುಗಳ ಪೈಕಿ ಕೆಲವರು ಮಾತ್ರ. ಇಂಥ ಪತ್ರಕರ್ತರು ಅಥವಾ ಟಿ.ವಿ. ವಾಹಿನಿಗಳ ಮಾಲೀಕರು ಇಂಥ ನಟ ನಟಿಯರ ಜನ್ಮ ದಿನ, ವಿವಾಹ ಸಮಾರಂಭಗಳನ್ನು ಮಾತ್ರವಲ್ಲ, ಈ ನಟನಟಿಯರ ಮನೆ ಜಗಳಗಳನ್ನು ದೊಡ್ಡ ರೀತಿಯಲ್ಲಿ ಪ್ರಸಾರಿಸುತ್ತಿದ್ದವರು. ನಮ್ಮ ವೀಕ್ಷಕರಿಗೆ ಇವೆಲ್ಲ ಇಷ್ಟ ಎಂಬ ರೀತಿಯಲ್ಲಿ ಅವರೆಲ್ಲ ಇಂಥ ಪ್ರಚಾರಾವೇಶವನ್ನು ತೋರುತ್ತ, ತೋರಿಸುತ್ತ ಬಂದಿದ್ದಾರೆ.

ಮುನ್ನೆಲೆಗೆ ಬರುತ್ತಿರುವ ದೇಶ ವಿಭಜನೆ ಹೊತ್ತಿನ ವಲಸಿಗರ ಆಸ್ತಿಗಳು

ಬೆಂಗಳೂರಿನಲ್ಲಿದ್ದ ಮೊಹಮ್ಮದ್‌ ಅಲಿ ಜಿನ್ನಾ ಅವರ ಆಸ್ತಿ ಏನಾಗಿದೆ ಮತ್ತು ಅದು ಕಟ್ಟಡವೋ ಅಥವಾ ಖಾಲಿ ಜಾಗವೋ ಎಂಬುದು ಕೂಡ ಯಾರಿಗೂ ಗೊತ್ತಿಲ್ಲ. ಇದು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿಯೇ ಇದ್ದಿರಬೇಕು. ಇದನ್ನು ಅಂದು ಮೈಸೂರು ಸರಕಾರವು ಸ್ಥಳಾಂತರ ಹೊಂದಿದ ಆಸ್ತಿ ಎಂದು ಘೋಷಿಸಿರಬಹುದು. 

ಐಎಎಸ್ಸೇತರ ಅಧಿಕಾರಿಗಳೆಂದರೆ ಕೇಂದ್ರಕ್ಕೇಕೆ ಅಲರ್ಜಿ? 

ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನರ್‌ ಸ್ಥಾನಕ್ಕೆ ಇದೀಗ ಇನ್ನೋರ್ವ ನಿವೃತ್ತ ಐಎಎಸ್‌ ಅಧಿಕಾರಿಯ ನೇಮಕವಾಗಿದೆ. ಸರಕಾರದ ಈ ಕ್ರಮ, ಉನ್ನತ ಹುದ್ದೆಗಳಿಗೆ ನೇಮಕ ಮಾಡುವ ವಿಷಯದಲ್ಲಿ ಅಧಿಕಾರ ಶಾಹಿಯೇತರ ವ್ಯಕ್ತಿಗಳ, (ಅಭ್ಯರ್ಥಿಗಳ) ಮೇಲಿನ ರಾಜಕಾರಣಿಗಳ ಅಪನಂಬಿಕೆ ಹಾಗೂ ಐಎಎಸ್‌ ಅಧಿಕಾರಿಗಳ ಆಯ್ಕೆ ಕುರಿತ ಅವರು ಹೊಂದಿರುವ ಒಲವಿನ ದ್ಯೋತಕವೇ ಆಗಿದೆ.

ದೇಶಕ್ಕೆ ಅಂಕಿಅಂಶಗಳ ಅಭಿವೃದ್ಧಿಗಿಂತ ಜನರ ಸಂತೋಷವೇ ಮುಖ್ಯವಾಗಿರಬೇಕು

ಜಿಡಿಪಿಗೆ ಸಂಬಂಧಿಸಿ ಏನೇ ವಾದ - ವಿವಾದ ಇದ್ದರೂ, ಮೂಲ ಪ್ರಶ್ನೆ ಏನೆಂದರೆ - "ದೇಶದ ಸಾಮಾನ್ಯ ನಾಗರಿಕರು ಹಿಂದಿಗಿಂತ ಸಂತೋಷವಾಗಿದ್ದಾರೆಯೇ ಅಥವಾ ಅವರ ಸ್ಥಿತಿ ಮತ್ತಷ್ಟು ಕೆಟ್ಟಿದೆಯೇ? ' ಎಂಬುದು. ದೇಶ ನಿಜವಾಗಿಯೂ ಪ್ರಕಾಶಿಸುತ್ತಿದೆಯೇ? ಭಾರತವು ನಿಜವಾಗಿಯೂ ಏಷ್ಯಾದ ಹುಲಿಯೇ ಅಥವಾ ಜಾಗತಿಕ ಶಕ್ತಿಯೇ.

ಸಿನಿ ವರ್ಚಸ್ಸಿನೆದುರು ಕಳೆಗುಂದಿತೇ ರಾಜಕೀಯ ವರ್ಚಸ್ಸು?

ನಿಸ್ಸಂದೇಹವಾಗಿ ಸಿ.ಕೆ. ಜಾಫ‌ರ್‌ ಷರೀಫ್ ರಾಜ್ಯವು ದೇಶಕ್ಕೆ ನೀಡಿದ ಖ್ಯಾತ ರೈಲ್ವೇ ಸಚಿವರಲ್ಲೊಬ್ಬರು. ಪಿ.ವಿ. ನರಸಿಂಹ ರಾವ್‌ ಅವರ ಬೆಂಬಲದೊಂದಿಗೆ ಷರೀಫ್ ಮಾಡಿರುವ ಸಾಧನೆ ಗಣನೀಯವಾದುದು. ಅನೇಕ ರೈಲ್ವೇ ಸೇವೆಗಳನ್ನು ಜಾರಿಗೊಳಿಸಿದ ಸಾಧನೆಗಾಗಿಯೂ ಅವರ ಸಚಿವಾವಧಿ ಗಮನಯೋಗ್ಯವಾಗಿದೆ.

ನಗರಗಳ ಪುನರ್‌ನಾಮಕರಣ - ಅಂತಃಕರಣವೋ, ರಾಜಕಾರಣವೋ? 

ಸಾಂದರ್ಭಿಕ ಚಿತ್ರ.

ಒಂದು ಪ್ರೇಮ ಭಾವನೆ, ಧರ್ಮ - ಭಾಷೆ ಕುರಿತ ಅಭಿಮಾನ ಹಾಗೂ ನಿರ್ದಿಷ್ಟ ತಾಣವೊಂದರ ಬಗೆಗಿನ ಪ್ರಭಾವ ಅಥವಾ ಬಾಂಧವ್ಯ ಸೂಸುವ ಹೆಸರಿಗೆ ತುಂಬಾ ಅರ್ಥವಿದೆ. ನಮ್ಮ ರಾಜ್ಯದ ಹೆಸರನ್ನು "ಮೈಸೂರು' ಎಂಬುದರಿಂದ "ಕರ್ನಾಟಕ' ವೆಂದು
ಬದಲಾಯಿಸಲಾಗಿದ್ದರೆ, ಇದಕ್ಕೆ ಕಾರಣ ಹಿಂದಿನ ಹೆಸರು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸಂಬಂಧಿಸಿತ್ತೆಂಬುದೇ ಆಗಿತ್ತು. 

ಪ್ರಥಮ ವಿಶ್ವ ಸಮರದ ಕೆಲವು ನೆನಪುಗಳು

ಬಳ್ಳಾರಿಯಲ್ಲಿ ಮೃತಪಟ್ಟ ಅತ್ಯುನ್ನತ ಶ್ರೇಣಿಯ ಟರ್ಕಿಶ್‌ ಸೇನಾನಿಯೆಂದರೆ ಜ| ಆಘಾ ಪಾಶ ಅಬ್ದುಲ್‌ ಸಲಾಮ್‌. ಬಳ್ಳಾರಿಯಲ್ಲಿ ಕಂಟೋನ್ಮೆಂಟ್‌ (ಸೇನಾ ವಸತಿ) ಯಾಕಿದೆ ಎಂದು ಅನೇಕರು ಇಂದು ಕೂಡ ಅಚ್ಚರಿ ಪಡುತ್ತಾರೆ. ಬಳ್ಳಾರಿ ಕಂಟೋನ್ಮೆಂಟ್‌ (ಕನಾಟ್‌ ಬರಾಕು) ಬ್ರಿಟಿಷ್‌ ಭೂ ಸೇನೆಯ ಮದ್ರಾಸ್‌ ತುಕಡಿಯ ಕೇಂದ್ರ ಕಚೇರಿಯಾಗಿತ್ತು.

Pages

Back to Top