CONNECT WITH US  

“ಕೈ”ಗೆ ಸೆಡ್ಡು; ಸಿನಿಮಾ, ರಾಜಕೀಯ ರಂಗದಲ್ಲಿ ಜನಾನುರಾಗಿ ಸ್ಟಾರ್!

ಭಾರತದಲ್ಲಿ ಸಿನಿಮಾ ರಂಗಕ್ಕೂ, ರಾಜಕೀಯಕ್ಕೂ ಗಳಸ್ಯ, ಕಂಠಸ್ಯ ನಂಟು! ಭಾರತೀಯ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕ, ನಿರ್ದೇಶಕ, ಪತ್ರಕರ್ತನಾಗಿ, ಸ್ಟಾರ್ ಆಗಿ ಹೊರಹೊಮ್ಮಿದ್ದ ಕೃಷ್ಣ ಅಲಿಯಾಸ್ ನಂದಮೂರಿ ತಾರಕ ರಾಮಾರಾವ್ ಮುಖ್ಯಮಂತ್ರಿ ಪಟ್ಟವನ್ನೂ ಅಲಂಕರಿಸಿಬಿಟ್ಟಿದ್ದರು. ಇವರು ಬೇರಾರು ಅಲ್ಲ ಎನ್ ಟಿ ಆರ್!

ದೇಶಪ್ರೇಮಿ, ಭಿಕ್ಷಾಟನೆ ಕುಲುಮೆಯಲ್ಲಿ ಬೆಂದು ದಂತಕಥೆಯಾದ ಘಂಟಸಾಲ!

ಕನ್ನಡ ,ಬಾಲಿವುಡ್, ತಮಿಳು ಸೇರಿದಂತೆ ಚಿತ್ರರಂಗದಲ್ಲಿ ಅದೆಷ್ಟು ಅದ್ಭುತ ಕಂಠಸಿರಿಯ ಹಿನ್ನೆಲೆ ಗಾಯಕರನ್ನು ಕಂಡಿಲ್ಲ. ಮರೆಯಾದ ಅಂತಹ ಮಹಾನ್ ಗಾಯಕರೂ ಇಂದಿಗೂ ನಮ್ಮ ನಡುವೆ ಅವರ ಹಾಡುಗಳಿಂದಾಗಿ ಜೀವಂತವಾಗಿದ್ದಾರೆ. ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿ ಗಾನಗಂಧರ್ವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೆಂಕಟೇಶ್ವರ ರಾವ್ ಅಲಿಯಾಸ್ ಘಂಟಸಾಲ ಅವರ ಹಾಡನ್ನು ಕೇಳಿದ್ದೀರಾ? ಕೇಳಿದ್ದರೆ ಅವರನ್ನು ಮರೆಯಲು ಸಾಧ್ಯವೇ?

ರಿಯಲ್ ಬದುಕಿನಲ್ಲೂ ಪ್ರಣಯ ರಾಜನಾಗಿದ್ದ ಸ್ಟಾರ್ ನಟನ ಸೀಕ್ರೆಟ್ ಲೈಫ್!

ಭಾರತೀಯ ಚಿತ್ರರಂಗದಲ್ಲಿ ಈ ಸ್ಟಾರ್ ನಟ ತನ್ನದೇ ಛಾಪನ್ನು ಬೆಳ್ಳಿಪರದೆಯಲ್ಲಿ ಮೂಡಿಸಿದ್ದರು. ಸಿನಿಮಾರಂಗದಲ್ಲಿ ಪ್ರಣಯ ರಾಜ ಎಂದೇ ಖ್ಯಾತಿ ಪಡೆದಿದ್ದರು. ಅದೇ ರೀತಿ ವೈಯಕ್ತಿಕ ಬದುಕಿನಲ್ಲೂ ಪ್ರಣಯ ರಾಜ ಆಗಿದ್ದರು! ಸ್ಕೂಲ್ ಮಾಸ್ಟರ್, ಸಂದರ್ಭ ಸೇರಿದಂತೆ ಕೆಲವು ಕನ್ನಡ ಸಿನಿಮಾ, ತಮಿಳು, ಹಿಂದಿ, ಮಲಯಾಳಂ, ತೆಲುಗು ಭಾಷೆ ಚಿತ್ರಗಳಲ್ಲಿ ರಾಮಸ್ವಾಮಿ ಗಣೇಶನ್ ನಟಿಸಿದ್ದರು. ಪ್ರಣಯ ರಾಜ, ಕಾದಲ್ ಮನ್ನಾನ್ ಎಂದೇ ಖ್ಯಾತಿಯಾದ ಈ ನಟ ಬೇರಾರು ಅಲ್ಲ ಜೆಮಿನಿ ಗಣೇಶನ್!

1925ರಲ್ಲಿ ತಮಿಳುನಾಡು ಪುದುಕೋಟೈನಲ್ಲಿ ಗಣೇಶನ್ ಜನಿಸಿದ್ದರು. ಗಣೇಶನ್ ಅಜ್ಜ ನಾರಾಯಣಸ್ವಾಮಿ ಬ್ರಾಹ್ಮಣ ಯುವತಿಯನ್ನು ವಿವಾಹವಾಗಿದ್ದರು. ನಂತರ ದೇವದಾಸಿ ಜನಾಂಗದ ಚಂದ್ರಮ್ಮ ಎಂಬಾಕೆ ಜೊತೆ ಸಂಬಂಧ ಇಟ್ಟುಕೊಂಡಿದ್ದರು.

ಆ ಸ್ಟಾರ್ ನಟ CM ಹುದ್ದೆಗೇರಲು ಕಾರಣವಾಗಿದ್ದು ಖ್ಯಾತ ನಟ ಹೊಡೆದ ಗುಂಡು

ರಕ್ತ ಕಣ್ಣೀರು ಸಿನಿಮಾವನ್ನು ವೀಕ್ಷಿಸದವರ ಸಂಖ್ಯೆ ಬಹಳ ವಿರಳ ಇರಬಹುದು. 2003ರಲ್ಲಿ ಸಾಧು ಕೋಕಿಲ ನಿರ್ದೇಶನದಲ್ಲಿ ತೆರೆಕಂಡಿದ್ದ ಚಿತ್ರದಲ್ಲಿ ಉಪ್ಪಿ ಹಾಗೂ ರಮ್ಯಾ ಕೃಷ್ಣ ಮುಖ್ಯಭೂಮಿಕೆಯಲ್ಲಿದ್ದರು. ಚಿತ್ರದ ಡೈಲಾಗ್ ಗಳು ಭರ್ಜರಿ ಫೇಮಸ್ ಆಗಿದ್ದವು. ಆದರೆ ಈ ರಕ್ತ ಕಣ್ಣೀರು ಸಿನಿಮಾ 1954ರಲ್ಲಿಯೇ ತಮಿಳು ಭಾಷೆಯಲ್ಲಿ ತೆರೆಕಂಡಿತ್ತು. ಎಂಆರ್ ರಾಧಾ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ 50ರ ದಶಕದಲ್ಲಿ ಎಂಆರ್ ಜನಪ್ರಿಯ ಹಾಸ್ಯ ನಟರಾಗಲು ಕಾರಣವಾಗಿತ್ತು. ಎಂಆರ್ ಅವರ ಅದ್ಭುತ ನಟನೆಯೇ ಹೇಗಿದೆ ಎಂಬುದಕ್ಕೆ ಆ ಸಿನಿಮಾವೇ ಸಾಕ್ಷಿಯಾಗಿದೆ.

ಚಿತ್ರರಂಗದ 5ಭಾಷೆಗಳಲ್ಲಿ ಮನೆಮಾತಾಗಿ ಬಿಟ್ಟಿದ್ದ ಮನೆಕೆಲಸದ ಹುಡುಗಿ!

ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಹಾಸ್ಯ ನಟಿ ಎಂಬ ಹೆಗ್ಗಳಿಕೆ ಇವರದ್ದು...ಬರೋಬ್ಬರಿ 1,500ಕ್ಕೂ  ಹೆಚ್ಚು ಸಿನಿಮಾ,, 5000ಕ್ಕೂ ಮಿಕ್ಕಿ ರಂಗಭೂಮಿ ನಟನೆ, ಟಿವಿ ಸೀರಿಯಲ್ ಗಳಲ್ಲಿ ನಟಿಸಿದ್ದ ಗೋಪಿಶಾಂತಾ ಅವರ ಸಾಧನೆ ಗಿನ್ನೆಸ್ ದಾಖಲೆ ಬರೆದಿದೆ. ಅರೇ ಇದ್ಯಾರಪ್ಪಾ ಅಂತ ಹುಬ್ಬೇರಿಸಬೇಡಿ..ಆಚಿ ಅಲಿಯಾಸ್ ಮನೋರಮಾ!

ಕಾರ್ಖಾನೆಯಲ್ಲಿ ಕೂಲಿ, ಫೈಲ್ವಾನ್…ನಂತರ ಕನ್ನಡ ಚಿತ್ರರಂಗದಲ್ಲಿ ವಿಲನ್!

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ, ಮತದಲ್ಲಿ ಮೇಲ್ಯಾವುದೋ ಹುಟ್ಟಿ ಸಾಯುವ ಹಾಳು ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು ಮೇಲ್ಯಾವುದೋ…ಇದು 1965ರಲ್ಲಿ ತೆರೆಕಂಡಿದ್ದ ಸತ್ಯಹರಿಶ್ಚಂದ್ರ ಚಿತ್ರದ ಗೀತೆ…ಇದನ್ನು ರಚಿಸಿದ್ದು ಹುಣಸೂರು ಕೃಷ್ಣಮೂರ್ತಿ…ಈ ಹಾಡನ್ನು ಗೊಣಗುತ್ತಿದ್ದರೆ ನಮ್ಮ ಕಣ್ಣ ಮುಂದೆ ಹಾದು ಹೋಗುವುದು ಅಜಾನುಬಾಹು “ವೀರಬಾಹು”! ಹೌದು ಅವರು ಬೇರಾರು ಅಲ್ಲ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಎಂಪಿ ಶಂಕರ್.

ಬಡತನದ ಬೇಗೆ…ದಿನಗೂಲಿ ಕೆಲಸ…

ಬೆಂಕಿಯಲ್ಲಿ ಅರಳಿದ ಹೂ ಖಳ ನಟ "ತೂಗುದೀಪ & ಮೀನಾ ತೂಗುದೀಪ್"

ಕನ್ನಡ ಚಿತ್ರರಂಗ ಇಂತಹ ನೂರಾರು ಕಲಾವಿದರು, ತಂತ್ರಜ್ಞರು, ನಿರ್ದೇಶಕರುಗಳಿಂದ ಎಷ್ಟು ಶ್ರೀಮಂತವಾಗಿತ್ತು ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಮೂಲಕ ಇಂದಿಗೂ ಆ ನಟ, ನಟಿಯರು ಜೀವಂತವಾಗಿ ಉಳಿದಿದ್ದಾರೆ. ಮೂಲತಃ ಮೈಸೂರಿನವರಾದ ಶ್ರೀನಿವಾಸ್ ಕೂಡಾ ಕನ್ನಡ ಚಿತ್ರರಂಗ ಕಂಡ ಅದ್ಭುತ ಖಳನಟ ಹಾಗೂ ಪೋಷಕ ನಟ. ಅರೇ ಇದ್ಯಾರಪ್ಪ ಶ್ರೀನಿವಾಸ್ ಅಂತ ಯೋಚಿಸುತ್ತಿದ್ದೀರಾ?ಇವರು ಬೇರೆ ಯಾರೂ ಅಲ್ಲ ತೂಗುದೀಪ ಶ್ರೀನಿವಾಸ್. ಕನ್ನಡ ಚಿತ್ರರಂಗದಲ್ಲಿ ಇಂದು ಚಾಲೆಂಜಿಂಗ್ ಸ್ಟಾರ್ ಆಗಿರುವ ದರ್ಶನ್ ಅವರ ತಂದೆ.

ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

1970ರ ದಶಕದಲ್ಲಿ ನಟನಾಗಿ, ಡಿಸ್ಕೋ ಡ್ಯಾನ್ಸರ್ ಆಗಿ ಈ ನಟ ಜನಪ್ರಿಯನಾಗತೊಡಗಿದ್ದ. ತನ್ನ ಕಷ್ಟದ ದಿನದಲ್ಲಿ ಡ್ಯಾನ್ಸರ್ ಹೆಲೆನ್ ರಿಚರ್ಡ್ಸನ್  ಖಾನ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. 90ರ ದಶಕದವರೆಗೆ ಈತ ಬಹು ಬೇಡಿಕೆಯ ಸ್ಟಾರ್ ನಟನಾಗಿ ಬೆಳೆದು ಬಿಟ್ಟಿದ್ದರು. ಹಿಂದಿ, ಬೆಂಗಾಲಿ, ಒರಿಯಾ ಮತ್ತು ಭೋಜ್ ಪುರಿ, ಪಂಜಾಬಿ, ತೆಲುಗು ಭಾಷೆ ಸೇರಿದಂತೆ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ನಟ ಬೇರೆ ಯಾರು ಅಲ್ಲ ಅದು ಗೌರಂಗ್ ಚಕ್ರವರ್ತಿ ಅಲಿಯಾಸ್ ಮಿಥುನ್ ಚಕ್ರವರ್ತಿ!

Pages

Back to Top