CONNECT WITH US  

ಇಂದ್ರನ ಮೋಸ ; ಆಕಾಶದಲ್ಲಿ ವಿಖ್ಯಾತರಾದ ಏಳು ವಾತಸ್ಕಂಧರ ಜನನ!

ಸಮುದ್ರ ಮಂಥನದ ನಂತರ ನಡೆದ ದೇವಾಸುರ ಸಂಗ್ರಾಮದಲ್ಲಿ ಅದಿತಿಯ ಪುತ್ರರಾದ ದೇವತೆಗಳಿಂದ ದಿತಿಯ ಪುತ್ರರಾದ ದಾನವರೆಲ್ಲರೂ ಮೃತರಾಗುತ್ತಾರೆ. ಯುದ್ಧದಲ್ಲಿ ಹತರಾದ ತನ್ನ ಪುತ್ರರನ್ನು ನೋಡಿ ದುಃಖಿತಳಾದ ದಿತಿಯು ಬಹಳ ಕೋಪೋದ್ರೇಕದಿಂದ ತನ್ನ ಪತಿ ಮರೀಚಿ ನಂದನ ಕಶ್ಯಪರ ಬಳಿಗೆ ಹೋಗಿ " ಸ್ವಾಮಿ ! ನಿಮ್ಮ ಮಹಾಬಲ ಪುತ್ರರಾದ ದೇವತೆಗಳು ನನ್ನ ಪುತ್ರರನ್ನು ಕೊಂದು ಹಾಕಿದರು. ಆದ್ದರಿಂದ ನನ್ನ ಗರ್ಭದಲ್ಲಿ  ಸರ್ವಕಾರ್ಯ ನಿಪುಣನೂ, ಸಮರ್ಥನೂ ಹಾಗೂ ಇಂದ್ರನನ್ನು ವಧಿಸುವಂತಹ ಪುತ್ರನನ್ನು ಕರುಣಿಸಿರಿ. ಅದಕ್ಕಾಗಿ ನಾನು ಧೀರ್ಘಕಾಲ ತಪಸ್ಸು ಮಾಡುವೆನು. ಇಂದ್ರನನ್ನು ಸಂಹರಿಸಲು ಸಮರ್ಥನಾದ ಪುತ್ರನನ್ನು ಬಯಸುತ್ತಿರುವೆನು. ನೀವು ನನಗೆ ಅಪ್ಪಣೆ ಕೊಡಿ" ಎಂದು ಕೇಳಿದಳು .

ವಾಯುದೇವನ ಕೋಪಕ್ಕೆ ನೂರು ಸುಂದರಿಯರು ಕುಬ್ಜರಾಗಿದ್ದೇಕೆ ಗೊತ್ತಾ?

ಹಿಂದೆ ಬ್ರಹ್ಮದೇವರ ಪುತ್ರನಾದ ಕುಶನೆಂಬ ಮಹಾತಪಸ್ವಿಯಾದ ಪ್ರಸಿದ್ಧ ರಾಜನೊಬ್ಬನಿದ್ದನು. ಅವನು ವ್ರತನಿಷ್ಠನೂ, ಧರ್ಮಜ್ಞನೂ ಆಗಿದ್ದನು. ಧರ್ಮಾತ್ಮರನ್ನೂ,ಮಹಾತ್ಮರನ್ನೂ ಸದಾ ಆಧರಿಸುತ್ತಾ ಸತ್ಕರಿಸುತ್ತಿದ್ದನು. ಸತ್ಕುಲ ಪ್ರಸೂತೆಯಾದ ವಿದರ್ಭ ರಾಜಕುಮಾರಿ ವೈದರ್ಭಿ ಎಂಬ ಭಾರ್ಯೆಯಲ್ಲಿ ಮಹಾತ್ಮನಾದ ನರೇಶನು ತನಗೆ ಅನುರೂಪರಾದ ಕುಶಾಂಬ, ಕುಶಾನಾಭ, ಅಮೂರ್ತರಜಸ ಹಾಗೂ ವಸ್ಸು ಎಂಬ ನಾಲ್ಕು ಪುತ್ರರನ್ನು ಪಡೆದನು.

ವಾಮನನ ಸಿದ್ದಾಶ್ರಮ ! ರಾಮನಿಂದ ವಿಶ್ವಾಮಿತ್ರರ ಯಜ್ಞದ ರಕ್ಷಣೆ...

ಶ್ರೀರಾಮ ಲಕ್ಷ್ಮಣರು  ತಾಟಕಿಯನ್ನು ಸಂಹರಿಸಿದ ನಂತರ ಪ್ರಾತಃಕಾಲವನ್ನು ನಿರೀಕ್ಷಿಸುತ್ತಾ ವಿಶ್ವಾಮಿತ್ರರೊಂದಿಗೆ ಆ ರಾತ್ರಿ ತಾಟಕವನದಲ್ಲೇ ವಿಶ್ರಮಿಸಿದರು.  ಬೆಳ್ಳಿಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ,  ಮಹಾತಪಸ್ವಿ ವಿಶ್ವಾಮಿತ್ರರು ಶ್ರೀರಾಮನಲ್ಲಿ  ಬಹಳ ಸಂತೋಷದಿಂದ " ರಾಜಕುಮಾರ ನಿನಗೆ ಮಂಗಳವಾಗಲಿ. ತಾಟಕವಧೆಯಿಂದ ನಾನು ನಿನ್ನ ಮೇಲೆ ಬಹಳ ಸಂತುಷ್ಟನಾಗಿರುವೆನು.

ಅಗಸ್ತ್ಯಮುನಿ ಶಾಪಕ್ಕೆ ರಾಕ್ಷಸಿಯಾದ ತಾಟಕಿ,ಬಾಲಕ ಶ್ರೀರಾಮನಿಂದ ಸಂಹಾರ!

­­ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಾಗದಿಂದ ನಾಲ್ವರು ಸತ್ಪುತ್ರರನ್ನು ಪಡೆದ ನಂತರ ಯಥಾವಿಧಿಯಾಗಿ ಯೋಗ್ಯರೀತಿಯಿಂದ ರಾಜ್ಯಭಾರ ಮಾಡುತ್ತಿದ್ದನು. ಕೆಲವು ವರ್ಷಗಳು ಕಳೆದ ನಂತರ ಒಮ್ಮೆ ದಶರಥನ ಸಭೆಗೆ ಋಷಿ ವಿಶ್ವಾಮಿತ್ರರು ಆಗಮಿಸಿದರು. ರಾಜನು ಋಷಿಗಳನ್ನು ಬಹಳ ಆದರದಿಂದ ಸ್ವಾಗತಿಸಿ ಅದರಾಥಿತ್ಯದಿಂದ ಅವರನ್ನು ಸಂತುಷ್ಟಗೊಳಿಸಿ  ಬಂದ ಕಾರಣವನ್ನು ವಿಚಾರಿಸುತ್ತಾ "ತಮ್ಮ ಕೃಪೆಯಿಂದ ಅನುಗ್ರಹಿತರಾಗಿ, ನಿಮ್ಮ ಅಭೀಷ್ಟಮನೋರಥವನ್ನು ತಿಳಿದು, ನನ್ನ ಅಭ್ಯುದಯಕ್ಕಾಗಿ ಅದನ್ನು ಪೂರ್ಣಗೊಳಿಸಬೇಕೆಂದು ನಾನು ಬಯಸುತ್ತಿರುವೆನು. ಕಾರ್ಯಸಿದ್ಧವಾಗುವುದೋ ಇಲ್ಲವೋ ಇದರ ಕುರಿತು ಮನಸ್ಸಿನಲ್ಲಿ ಸಂಶಯ ಪಡಬೇಡಿರಿ. ತಾವು ಯಾವುದೇ ಅಪ್ಪಣೆ ಮಾಡಿದರೂ ನಾನು ಅದನ್ನು ಪೂರ್ಣವಾಗಿ ಪಾಲಿಸುವೆ" ಎಂದು ವಚನವಿತ್ತನು.

ಉತ್ತರಾಯಣ ಪುಣ್ಯಕಾಲದ ವಿಶೇಷ… ಸಂಕ್ರಾಂತಿಯ ಸುಗ್ಗಿ ಸಂಭ್ರಮ

ಸನಾತನ ಭಾರತೀಯರ ಮಹಾಪರ್ವಕಾಲಗಳಲ್ಲಿ ಅತ್ಯಂತ ಮುಖ್ಯವಾದ ಒಂದು ಕಾಲ ಉತ್ತರಾಯಣ ಪರ್ವ ಪುಣ್ಯಕಾಲ. ಮಕರ ಸಂಕ್ರಮಣ ದಿಂದ ಆರಂಭವಾಗಿ ಕರ್ಕಾಟಕ ಸಂಕ್ರಮಣದವರೆಗಿನ ಕಾಲವನ್ನು ಉತ್ತರಾಯಣ, ಕರ್ಕಾಟಕದಿಂದ ಮಕರ ಸಂಕ್ರಮಣದವರೆಗಿನ ಕಾಲವನ್ನು ದಕ್ಷಿಣಾಯಣ ಕಾಲ. ಹೀಗೆ ಆರು ತಿಂಗಳು ಉತ್ತರಾಯಣ, ಆರು ತಿಂಗಳು ದಕ್ಷಿಣಾಯಣವೆಂದು ಹೇಳುತ್ತಾರೆ.

ರಾಜನಾಗಿದ್ದ ಚಿತ್ರಕೇತು ವೃತ್ರಾಸುರನಾಗಿದ್ದರ ಹಿಂದಿನ ರಹಸ್ಯ ಏನು?!

ಪುತ್ರ ಶೋಕದಿಂದ ಗಾಢವಾದ ಅಜ್ಞಾನಾಂಧಕಾರದಲ್ಲಿ ಮುಳುಗಿದ ಚಿತ್ರಕೇತು ರಾಜನು  ದೇವರ್ಷಿ ನಾರದರಲ್ಲಿ ಶರಣಾಗತನಾಗಲು, ಭಕ್ತನಾದ ಚಿತ್ರಕೇತು ರಾಜನಿಗೆ ದೇವರ್ಷಿ ನಾರದರು ಪರಮಜ್ಞಾನವನ್ನು ಉಪದೇಶಿಸಿ ಆಂಗೀರಸ ಮಹರ್ಷಿಗಳೊಂದಿಗೆ ಬ್ರಹ್ಮಲೋಕಕ್ಕೆ ತೆರಳಿದರು. ಚಿತ್ರಕೇತು ರಾಜನು ನಾರದರ ಆದೇಶದಂತೆ ಏಳು ದಿನಗಳ ಕಾಲ ಕೇವಲ ಜಲಾಹಾರಿಯಾಗಿದ್ದು , ಅವರಿಂದ ಉಪದೇಶಿಸಲ್ಪಟ್ಟ ವಿದ್ಯೆಯನ್ನು ಏಕಾಗ್ರತೆಯಿಂದ ಅನುಷ್ಠಾನ ಮಾಡಿದನು. ಏಳು ರಾತ್ರಿಯ  ಬಳಿಕ ಅವನಿಗೆ ವಿದ್ಯಾಧರರ ಅಖಂಡಾಧಿಪತ್ಯ ಪ್ರಾಪ್ತವಾಯಿತು. ಮತ್ತೆ ಕೆಲವೇ ದಿನಗಳಲ್ಲಿ ಆ ವಿದ್ಯೆಯ ಪ್ರಭಾವದಿಂದ ಅವನ ಮನಸು ಇನ್ನಷ್ಟು ಶುದ್ಧವಾಯಿತು. ಅದರ ಪುಣ್ಯವಿಶೇಷದಿಂದಾಗಿ  ಅವನು ಭಗವಾನ್ ಆದಿಶೇಷನ ಲೋಕವನ್ನು ತಲುಪಿದನು.

ಇಂದ್ರನ ವಜ್ರಾಯುಧದ ಹಿಂದಿನ ರಹಸ್ಯ… ವೃತ್ರಾಸುರನ ಸಂಹಾರ

ವಿಶ್ವರೂಪನ ತಂದೆಯಾದ ತ್ವಷ್ಟನಿಗೆ ಪುತ್ರನ ಮರಣದಿಂದಾಗಿ ಮಿತಿಮೀರಿದ ಕ್ರೋಧವು ಉಂಟಾಯಿತು. ಆಗ ಅವನು ಇಂದ್ರನನ್ನು ಸಂಹರಿಸಬೇಕೆಂಬ ಉದ್ದೇಶದಿಂದ, ಇಂದ್ರನ ಶತ್ರುವಾಗಿ ಒಬ್ಬ ಮಗನನ್ನು ಪಡೆಯಲು “ಎಲೈ ಇಂದ್ರಶತ್ರುವೇ! ನಿನ್ನ ಅಭಿವೃದ್ಧಿ ಉಂಟಾಗಿ, ಶೀಘ್ರಾತಿಶೀಘ್ರವಾಗಿ ಶತ್ರುವನ್ನು ಸಂಹರಿಸು ಎಂದು ಉಚ್ಚರಿಸಿ ಮಂತ್ರದಿಂದ ಅಗ್ನಿಯಲ್ಲಿ ಹೋಮ ಮಾಡಿದನು. ಯಜ್ಞವು ಸಮಾಪ್ತವಾಗುತ್ತಿದ್ದಂತೆ ಅನ್ವಹಾರ್ಯಪಚನವೆಂಬ ಅಗ್ನಿ (ದಕ್ಷಿಣಾಗ್ನಿ) ಯಿಂದ ಅತಿಭಯಂಕರ ರೂಪದ “ವೃತ್ರಾಸುರ” ಎಂಬ ದೈತ್ಯನು ಮೇಲೆದ್ದು ಬಂದನು. ಎಲ್ಲಾ ಲೋಕಗಳನ್ನು ನಾಶ ಪಡಿಸಲಿಕ್ಕಾಗಿ ಪ್ರಕಟಗೊಂಡಿರುವ ಕಾಲಮೃತ್ಯುವಿನಂತೆಯೇ ಅವನು ಕಾಣುತ್ತಿದ್ದನು.

ಹತ್ಯೆಯಾದ ವಿಶ್ವರೂಪನ 3 ತಲೆಗಳು 3 ಜಾತಿಯ ಪಕ್ಷಿಗಳಾಗಿ ರೂಪ ತಳೆದವು!

 ಒಂದಾನೊಂದು ಕಾಲದಲ್ಲಿ ಇಂದ್ರನು ಐಶ್ವರ್ಯದ ಮದದಿಂದ ಗರ್ವಿತನಾಗಿ ಅಹಂಕಾರದಿಂದ ಧರ್ಮ,ಮರ್ಯಾದೆ,  ಸದಾಚಾರಗಳನ್ನು ಮೀರಿ ನಡೆಯತೊಡಗಿದನು. ಒಂದು ದಿನ ತುಂಬಿದ ಸಭೆಯಲ್ಲಿ ಶಚೀಸಹಿತನಾದ ದೇವೇಂದ್ರನು ನಲವತ್ತೊಂಭತ್ತು ಮರುದ್ದೇವತೆಗಳು, ಅಷ್ಟವಸುಗಳು, ಏಕಾದಶರುದ್ರರು, ದ್ವಾದಶಾದಿತ್ಯರು, ಋಭು ಸಾಧ್ಯ ಗಣಗಳು, ವಿಶ್ವೇದೇವತೆಗಳು, ಅಶ್ವಿನೀದೇವತೆಗಳು, ಸಿದ್ಧ, ಚಾರಣ, ಗಂಧರ್ವ, ಕಿನ್ನರ, ಅಪ್ಸರೆಯರೊಡಗೂಡಿ ಉನ್ನತವಾದ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದನು. ಅದೇ ಸಮಯಕ್ಕೆ ದೇವಗುರುಗಳಾದ ಬೃಹಸ್ಪತಿಗಳ ಆಗಮನವಾಯಿತು. ಎಲ್ಲರೂ ಗುರುಗಳಿಗೆ ಗೌರವವನ್ನು ಸೂಚಿಸಿದರೂ ಶ್ರೀಮದಾಂಧನಾದ ಮಹೇಂದ್ರನು ಗುರುಗಳಿಗೆ ಗೌರವವನ್ನು ಕೊಡದೆ ಅವಮಾನಿಸಿದನು. ಐಶ್ವರ್ಯಮದವೇ ಈ ಅಸಭ್ಯತೆಗೆ ಕಾರಣವೆಂದು ತಿಳಿದ ಬೃಹಸ್ಪತಿಗಳು ಸಭಾತ್ಯಾಗ ಮಾಡಿ ಮನೆಗೆ ಹೋದರು.

Pages

Back to Top