CONNECT WITH US  

ಶುಭನುಡಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ನಾವು ಭಾವನಾ ಜೀವಿಗಳಾಗಿರಬಹುದು, ಆದರೆ ತರ್ಕ ಮತ್ತು ಭಾವನೆ ಸಮಾನವಾಗಿದ್ದರೆ ಮಾತ್ರ ಸುಖದಿಂದಿರುತ್ತೇವೆ.
 

ಎಲ್ಲರೂ ಕನಸು ಕಾಣುತ್ತಾರೆ, ಆದರೆ ಕನಸನ್ನು ನನಸು ಮಾಡಿಕೊಳ್ಳುವ ಪರಿಶ್ರಮ ಕೆಲವರಿಂದಲೇ ಸಾಧ್ಯ.

ನನಗೆಲ್ಲ ಗೊತ್ತು ಎಂದು ನಿಮಗನಿಸಿದ ದಿನವೇ ನಿಮ್ಮ ದಡ್ಡತನ ಆರಂಭವಾಗುತ್ತದೆ.

ಗುರಿಯನ್ನು ತಲುಪುವ ನಿಖರ ಮಾರ್ಗವೆಂದರೆ ನಿರಂತರತೆ. ನಿರಂತರ ಪ್ರಯತ್ನವೇ ಗೆಲುವಿನ ಗುಟ್ಟು.

ನೀವು ಯಶಸ್ಸಿಗಿಂತ ವೈಫ‌ಲ್ಯಗಳಿಂದಲೇ ಹೆಚ್ಚು ಪಾಠ ಕಲಿಯುತ್ತೀರಿ. ಸೋಲಿಗೆ ಹೆದರಬೇಡಿ.

ಕಠಿಣ ಪರಿಶ್ರಮವು ಯಶಸ್ಸನ್ನು ಖಾತ್ರಿಪಡಿಸುವುದಿಲ್ಲ. ಆದರೆ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ದಯಾಪರರಾಗಿ. ದಯೆಯಷ್ಟು ದೊಡ್ಡ ಗುಣ ಜೀವನದಲ್ಲಿ ಮತ್ತೂಂದಿಲ್ಲ.

ನೀವು ತಯಾರಿ ನಡೆಸಲು ವಿಫ‌ಲರಾದರೆ, ವಿಫ‌ಲರಾಗಲು ತಯಾರಿ ನಡೆಸುತ್ತಿದ್ದೀರಿ ಎಂದರ್ಥ.

ಗುರಿಯನ್ನು ಬೆನ್ನತ್ತುವವನು ಸೋಲು ಗೆಲುವಿನ ವಿಚಾರ ಮಾಡಲೇಬಾರದು. 

ನಮ್ಮ ಆಲೋಚನೆಗಳು ಉತ್ತಮವಾಗಿರಬೇಕು. ದೃಷ್ಟಿಗಿಂತಲೂ ದೃಷ್ಟಿಕೋನ ಸ್ಪಷ್ಟವಾಗಿರುವುದು ಮುಖ್ಯ.

ಜೀವನದಲ್ಲಿ ನೀವು ಏನು ಪಡೆಯುತ್ತೀರಿ ಎನ್ನುವುದಕ್ಕಿಂತ, ಏನಾಗುತ್ತೀರಿ ಎನ್ನುವುದು ಮುಖ್ಯ.

ನಗುನಗುತ್ತಾ ಬದುಕಲು ಕಾರಣಗಳನ್ನು ಹುಡುಕುತ್ತಲೇ ಇರಿ. ನಗು ನಿಮ್ಮ ಜೀವನಕ್ಕೆ ಜೀವ ತುಂಬುತ್ತದೆ.

ನಿಮ್ಮ ಸಂತೋಷದ ಕೀಲಿಕೈಯನ್ನು ಎಂದಿಗೂ ಇನ್ನೊಬ್ಬರ ಕಿಸೆಯಲ್ಲಿ ಹಾಕಬೇಡಿ!

ನಿಮಗೆ ಸಾಧ್ಯವಾದದ್ದನ್ನು ಮಾಡಿ. ಇರುವುದನ್ನೇ ಬಳಸಿಕೊಳ್ಳಿ.ಇದ್ದಲ್ಲಿಂದಲೇ ಆರಂಭಿಸಿ!

ಒಂದು ಪುಸ್ತಕಕ್ಕೆ, ಒಬ್ಬ ಶಿಕ್ಷಕನಿಗೆ ಇಡೀ ಜಗತ್ತನ್ನೇ ಬದಲಿಸುವ ಶಕ್ತಿಯಿರುತ್ತದೆ ಎನ್ನುವುದನ್ನು ಮರೆಯುವುದು ಬೇಡ.

ನೀವು ನೀವಾಗಿರಲು ನಿರ್ಧರಿಸಿದ ದಿನವೇ ನಿಮ್ಮ ಬದುಕು ಬದಲಾಗಲಾರಂಭಿಸುತ್ತದೆ. 

ನಿಮಗೆ ನೀವು ಸತ್ಯಹೇಳಿಕೊಳ್ಳುವುದನ್ನು ಕಲಿಯಿರಿ.ಸುಳ್ಳಿನಿಂದ ಬೆಳವಣಿಗೆ ಸಾಧ್ಯವಿಲ್ಲ. 

ಮಾತುಗಳು ಎಷ್ಟೇ ದೊಡ್ಡವಾಗಿದ್ದರೂ ಕೊನೆಗೆ ವ್ಯಕ್ತಿಯೊಬ್ಬನನ್ನು ಸಮಾಜ ಅಳೆಯುವುದು ಅವನ ಕೃತಿಯಿಂದ.

ಇಂದು ನೀವು ಅನುಭವಿಸುತ್ತಿರುವ ನೋವು ನಾಳೆ ನಿಮ್ಮ ಶಕ್ತಿಯಾಗಿ ಬದಲಾಗುತ್ತದೆ.

ಸಾಧನೆಗೆ ಸಣ್ಣ ಸಣ್ಣ ಪ್ರಯತ್ನಗಳೇ ಮೆಟ್ಟಿಲುಗಳು ಎನ್ನುವುದು ಸ್ಪಷ್ಟವಿದ್ದಾಗ ಮಾತ್ರ ಬೃಹತ್‌ ಒತ್ತಡದಿಂದ ಮುಕ್ತರಾಗುತ್ತೇವೆ.

Back to Top