CONNECT WITH US  

ಪಂಚರ್

ನನ್ನ ಜೀವನವೇ "ತ್ರಿ ಈಡಿಯಟ್ಸ್‌'ನ ರಾಂಚೋ ಪಾತ್ರ: ವಿನೋದ್‌ ಚೋಪ್ರಾ
ಮೂವರ ಪೈಕಿ ಒಬ್ಬ ಈಡಿಯಟ್‌ ಸಿಕ್ಕಾಕ್ಕೊಂಡ ನೋಡ್ರೀ!
ರಾಹುಲ್‌ ಜೋಕರ್‌ ಎಂದಿದ್ದ ಕಾಂಗ್ರೆಸ್‌ ನಾಯಕನ ಅಮಾನತು ರದ್ದು.
ಸತ್ಯಮೇವ ಜಯತೇ!
ಕಲ್ಲಿದ್ದಲು ಹಗರಣದಲ್ಲಿ ಮಾಜಿ ಪ್ರಧಾನಿಯನ್ನು ವಿಚಾರಣೆ ಮಾಡಲೇ ಇಲ್ಲವಂತೆ.
ಅಯ್ಯ, ಏನು ವಿಚಾರಿಸಿದರೆ ಏನು ಬಂತು. ಬಾಯಿಬಿಟ್ರೆ ತಾನೇ!
ಮೈಯಪ್ಪನ್‌ ಮಾಡಿದ್ದು "ಇನ್‌ಸೈಡರ್‌ ಟ್ರೇಡಿಂಗ್‌'
ಇನ್‌ ಸೈಡ್‌ ಸ್ವಿಂಗ್‌ ಬದಲಿಗೆ ಇನ್‌ಸೈಡ್‌ ಟ್ರೇಡ್‌ ಮಾಡಿದ್ದಾರಷ್ಟೇ..
ನೆಹರು ಪರಂಪರೆ, ಸಿದ್ಧಾಂತ ನಾಶಕ್ಕೆ ಕೆಲವರ ಯತ್ನ: ಸೋನಿಯಾ
ಮೊದಲು ಭ್ರಮನಿರಸನ, ಆಮೇಲೆ ಭ್ರಮೆ!
ಪ್ರಧಾನಿ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ.
ಜಸ್ಟ್‌ ಮಾತ್‌ ಮಾತಲ್ಲಿ
ಹಾರರ್‌ ಚಿತ್ರದಲ್ಲಿ ರಾಧಿಕಾ, ಪ್ರಿಯಾಂಕ ನಟಿಸ್ತಿದ್ದಾರಂತೆ.
ಮದುವೆಯಾದ ನಂತರ ನಟಿಸೋದೆಲ್ಲ ಹಾರರ್‌ ಸಿನಿಮಾಗಳೇ ತಾನೇ!
2021ಕ್ಕೆ ಇಸ್ರೋದ ಮೊದಲ ಮಾನವ ಸಹಿತ ಚಂದ್ರಯಾನ.
ಮೊದಲ ಅಭ್ಯರ್ಥಿಯಾಗಿ ಕೇಜ್ರಿವಾಲರನ್ನು ಕಳಿಸಬೇಡಿ, ಅರ್ಧಕ್ಕೇ ವಾಪಸ್‌ ಬರ್ತಾರೆ ಅಂದ್ರಂತೆ!
ರಾಮದಾಸ್‌ ಪ್ರೇಮಾಯಣದ ಪ್ರೇಮಕುಮಾರಿ ಸಿನಿಮಾದಲ್ಲಿ ನಟಿಸ್ತಾರಂತೆ.
ಆಕೆ ಅದ್ಭುತ ನಟಿ ಎಂದು ಅಂದೇ ಸಾಬೀತಾಗಿರೋದರಿಂದ ಆಗಬಹುದು... ಆಗಬಹುದು!
ವಿಶಾಖಪಟ್ಟಣ- ಬೆಂಗಳೂರು ಬಸ್‌ ಟಿಕೆಟ್‌ ದರ 5500 ರೂ.ಗೆ ಜಿಗಿತ: ಬಸ್‌ಮಾಲಿಕರಿಂದ ಸುಲಿಗೆ.
ಹುಡ್‌ ಹುಡ್‌ ಚಂಡಮಾರುತವೇ ಇಂಥ ರಾಬಿನ್‌ಹುಡ್‌ಗಳಿಗಿಂತ ವಾಸಿ!
ಸ್ವಚ್ಚ ಭಾರತ ಅಭಿಯಾನಕ್ಕೆ ಈಗ ಸಾನಿಯಾ ಮಿರ್ಜಾ: ಪೊರಕೆ ಹಿಡಿದು ಕಸ ಕುಡಿಸಿದ ಟೆನ್ನಿಸ್‌ ಆಟಗಾರ್ತಿ.
ತುಂಬಾ ಹುಡುಗರು ಹಾಜರಿದ್ದರು ಎಂಬ ವರ್ತಮಾನವಿದೆ.
ಜಯಾ ವಿರುದ್ಧ ತೀರ್ಪು: ನ್ಯಾಯಾಧೀಶರ ವಿರುದ್ಧ ತಮಿಳುನಾಡಿನಲ್ಲಿ ಪೋಸ್ಟರ್‌!
ಇಂಪೋಸ್ಟರ್‌ ಸಿಂಡ್ರೋಮ್‌ ಅಂದ್ರೆ ಇದೇರೀ!
ಚಹಾ ಮಾರುವವರು ಪಿಎಂ ಆಗಬಹುದಾದರೆ ನಾನೇಕೆ ಸಿಎಂ ಆಗಬಾರದು?: ಉದ್ಧವ್‌ ಪ್ರಶ್ನೆ
ಉದ್ಧವ್‌ ಥರದವರು ಮಾತ್ರ ಕೇಳಬಹುದಾದ ಪ್ರಶ್ನೆ!
ಮೂತ್ರ ವಿಸರ್ಜನೆ ಮಾಡಿದ್ರೂ ದೇವರು ಕಾಡೋಲ್ಲ: ಎಂ.ಎಂ.ಕಲುºರ್ಗಿ
ಮೊದಲು ಭಕ್ತರಿಂದ ಬಚಾವಾಗಿ ಸ್ವಾಮೀ, ಆಮೇಲೆ ದೇವರ ವಿಸ್ಯ!
ಎಸ್ಸೆಮ್‌ ಕೃಷ್ಣ ಕೊನೆ ಬಸ್ಸೂ ಮಿಸ್ಸಾಯಿತು.
ಕೃಷ್ಣಾ ನೀ ಬೇಗನೆ ಬಾರೋ ಅಂತ ಕರಿಯೋರೇ ಇಲ್ಲವೇ ಪಕ್ಷದಲ್ಲಿ!
ಡಬಲ್ಸ್‌ನಲ್ಲಿ ಜೀವನಶ್ರೇಷ್ಠ 6ನೇ ಶ್ರೇಯಾಂಕ ಗಳಿಸಿದ ಸಾನಿಯಾ ಮಿರ್ಜಾ.
ಡಬಲ್‌ ಆದ ಮೇಲೇ ಜೀವನಶ್ರೇಷ್ಠ ಶ್ರೇಯಾಂಕ ಬಂದಿದ್ದರಲ್ಲಿ ಶೋಯೆಬ್‌ ಮಲಿಕ್‌ ಪಾತ್ರವೇನಿರಬಹುದು?
ವಿಶ್ವಕಪ್‌ ನೋಡಲೆಂದೇ ಕೆಲಸಬಿಟ್ಟು ಬೈಕ್‌ನಲ್ಲಿ 4 ತಿಂಗಳು ಯಾನ ಮಾಡಿ ಬ್ರೆಜಿಲ್‌ ತಲುಪಿದ ಫ‌ುಟ್‌ ಬಾಲ್‌ ಅಭಿಮಾನಿ.
ಹೀಗೆ ಕೆಲಸ ಬಿಡುವವರ ಸಂತತಿ ಸಾವಿರವಾಗಲಿ: ನಿರುದ್ಯೋಗಿಗಳ ಹಾರೈಕೆ.

Pages

Back to Top